ಅಮೆರಿಕಾದಲ್ಲಿ ಹೊಸ ಟೆಲಿಕಾಂ ನಿಯಮ!..ಇದು ಭಾರತಕ್ಕೆ ಯಾವಾಗ!?

Written By:

ಆನ್‌ಲೈನ್‌ ಬಳಕೆದಾರರ ಖಾಸಗಿ ಮಾಹಿತಿ ಗೌಪ್ಯತೆಯ ನಿಬಂಧನೆಗಳನ್ನು ರದ್ದುಪಡಿಸಿ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ಮುಂದಾಗಿದೆ.!! ಇಂಟರ್‌ನೆಟ್‌ ಪೂರೈಕೆ ಮಾಡುವ ಸಂಸ್ಥೆಗಳು ಬಳಕೆದಾರರ ಅನುಮತಿ ಇಲ್ಲದೆ ಅವರ ವೈಯಕ್ತಿಕ ಹಾಗೂ ಬ್ರೌಸಿಂಗ್ ಚಟುವಟಿಕೆಯ ಮಾಹಿತಿಯನ್ನು ಸಂಗ್ರಹಿಸುವಂತಿಲ್ಲ ಎನ್ನಲಾಗಿರುವ ನಿಯಮ ಇನ್ನೇನು ಜಾರಿಗೆ ಬರಲಿದೆ.!!

ಅಮೆರಿಕ ಸಂಸತ್‌ ಹೊಸ ನಿಯಮಾವಳಿಗಳಿಗೆ ಆಂಗೀಕಾರ ನೀಡಿದ್ದು, ಅಮೆರಿಕದ ಸಮೂಹ ಮಾಧ್ಯಮ ಆಯೋಗ ರೂಪಿಸಿದ್ದ ನಿಯಮಾಳಿಗಳನ್ನು ಅಮೆರಿಕ ಸಂಸತ್‌ ಅಂಗೀಕರಿಸಿದೆ. ಬಳಕೆದಾರ ಖಾಸಗಿ ಮಾಹಿತಿಯನ್ನು ಸಂಗ್ರಹಿಸುವ ಮೊದಲು ಗ್ರಾಹಕರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಟೆಲಿಕಾಂ( ಇಂಟರ್‌ನೆಟ್) ಕಂಪೆನಿಗಳಿಗೆ ಆದೇಶ ನೀಡಲಿದೆ.!!

ಅಮೆರಿಕಾದಲ್ಲಿ ಹೊಸ ಟೆಲಿಕಾಂ ನಿಯಮ!..ಇದು ಭಾರತಕ್ಕೆ ಯಾವಾಗ!?

ಇಷ್ಟೇ ಅಲ್ಲದೆ, ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಜಾಹೀರಾತು ಕಂಪೆನಿಗಳಿಗೆ ಮಾರಾಟ ಮಾಡುವಂತಿಲ್ಲ. ಜಾಹೀರಾತುದಾರರಿಗೆ ಮಾರಾಟ ಮಾಡುವ ಮೊದಲು ಗ್ರಾಹಕರ ಅನುಮತಿಯನ್ನು ಪಡೆದಿರಬೇಕು ಎಂದು ಹೊಸ ನಿಯಾಮಾವಳಿಗಳಲ್ಲಿ ಹೇಳಲಾಗಿದೆ.!!

ಕಂಪ್ಯೂಟರ್‌ನಲ್ಲಿರುವ ಐಪಿ ವಿಳಾಸದ ಮೂಲಕ ಇಂಟರ್‌ನೆಟ್‌ ಪೂರೈಕೆದಾರರು ಬಳಕೆದಾರನ ಮಾಹಿತಿಯನ್ನು ಸುಲಭವಾಗಿ ಸಂಗ್ರಹಿಸಬಹುದು ಎಂದು ತಂತ್ರಜ್ಞರು ಅಭಿಪ್ರಾಯಪಟ್ಟಿದ್ದು, ಈ ಹೊಸ ನಿಯಮ ಬಳಕೆದಾರರನ ಖಾಸಗಿ ಮಾಹಿತಿ ಸೋರಿಕೆಯಾಗದಂತೆ ತಡೆಯುತ್ತದೆ ಎನ್ನಲಾಗಿದೆ.

ಅಮೆರಿಕಾದಲ್ಲಿ ಹೊಸ ಟೆಲಿಕಾಂ ನಿಯಮ!..ಇದು ಭಾರತಕ್ಕೆ ಯಾವಾಗ!?

ಗ್ರಾಹಕರ ಅಥವಾ ಬಳಕೆದಾರನ ಅನುಮತಿ ಇಲ್ಲದೆ ಅವರ ಸಾಮಾಜಿಕ ಜಾಲತಾಣ ಖಾತೆ ಅಥವಾ ಇ-ಮೇಲ್ ಖಾತೆಗಳಲ್ಲಿ ಜಾಹೀರಾತುಗಳು ಹೇಗೆ ಕಾಣಿಸಿಕೊಳ್ಳುತ್ತವೆ? ಗ್ರಾಹಕರು ಯಾರೂ ಸಹ ತಮ್ಮ ಖಾತೆಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಸಿ ಎಂದು ಇಂಟರ್‌ನೆಟ್‌ ಸೇವಾ ಕಂಪೆನಿಗಳನ್ನು ಕೇಳಿಕೊಳ್ಳುವುದಿಲ್ಲ ಎಂದು ಅಮೆರಿಕ ಸರ್ಕಾರ ಹೇಳಿದೆ.

English summary
False and misleading advertisements.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot