ಫ್ಲಿಪ್‌ಕಾರ್ಟ್‌ನಲ್ಲಿ ಕೋವಿಸೆಲ್ಫ್ ಕಿಟ್‌ ಸೇಲ್‌! 15 ನಿಮಿಷಗಳಲ್ಲಿ ಕೋವಿಡ್‌ ರಿಸಲ್ಟ್‌ ಲಭ್ಯ!

|

ಪ್ರಸ್ತುತ ದೇಶದಲ್ಲಿ ಕೊರೊನಾ ಎರಡನೇ ಅಲೆ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಇದರ ನಡುವೆ ಮನೆಯಲ್ಲಿಯೇ ಕೊರೊನಾ ಸೊಂಕು ಪರೀಕ್ಷೆ ನಡೆಸುವ ಕಿಟ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇದರಲ್ಲಿ ಕೋವಿಸೆಲ್ಫ ಕೂಡ ಒಂದಾಗಿದೆ. ಕೋವಿಸೆಲ್ಫ ಬಳಸಿ ಮನೆಯಲ್ಲಿಯೇ ಕೊರೊನಾ ಸೊಂಕಿನ ರಿಸಲ್ಟ್‌ ಪಡೆದುಕೊಳ್ಳಬಹುದಾಗಿದೆ. ಸದ್ಯ ಇದೀಗ ಇ-ಕಾಮರ್ಸ್‌ ದಿಗ್ಗಜ ಫ್ಲಿಪ್‌ಕಾರ್ಟ್, ಇ-ಕಾಮರ್ಸ್ ತನ್ನ ವೆಬ್‌ಸೈಟ್‌ನಲ್ಲಿ ಕೋವಿಸೆಲ್ಫ್ ಅನ್ನು ಮಾರಾಟ ಮಾಡುತ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಇಂದಿನಿಂದ ಫ್ಲಿಪ್‌ಕಾರ್ಟ್‌ ತನ್ನ ವೆಬ್‌ಸೈಟ್‌ನಲ್ಲಿ ಕೋವಿಸೆಲ್ಫ ಕಿಟ್‌ ಅನ್ನು ಮಾರಾಟ ಮಾಡುತ್ತಿದೆ. ಇದು ಕೋವಿಡ್ 19 ಆಂಟಿಜೆನ್‌ಗಾಗಿ ಸ್ವಯಂ-ಪರೀಕ್ಷಾ ಕಿಟ್ ಆಗಿದೆ. ಈ ಕಿಟ್‌ ಮೂಲಕ ನೀವು ಕೇವಲ 15 ನಿಮಿಷಗಳಲ್ಲಿ ಫಲಿತಾಂಶ ಪಡೆದುಕೊಳ್ಳಬಹುದಾಗಿದೆ. ಕೋವಿಸೆಲ್ಫ್‌ನ ವಿವರಣೆಯು ಸ್ವಯಂ-ಸಂಗ್ರಹಿಸಿದ ಮೂಗಿನ ಸ್ವ್ಯಾಬ್‌ ಮೂಲಕ ರಿಸ್ಲಡ್‌ ತಿಳಿದುಕೊಳ್ಳಬಹುದಾಗಿದೆ. ಹಾಗಾದ್ರೆ ಕೋವಿಸೆಲ್ಫ ವಿಶೇಷತೆ ಏನು, ಫ್ಲಿಪ್‌ಕಾರ್ಟ್‌ ವೆಬ್‌ಸೈಟ್‌ನಲ್ಲಿ ಕೋವಿಸೆಲ್ಫ ಕಿಟ್‌ ಖರೀದಿಸುವುದು ಹೇಗೆ ಅನ್ನೊದನ್ನ ಹೇಗೆ ಅಂತಾ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕೋವಿಸೆಲ್ಪ

ಕೋವಿಸೆಲ್ಪ ಅನ್ನು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಅಥವಾ 2 ರಿಂದ 18 ವರ್ಷದೊಳಗಿನ ವ್ಯಕ್ತಿಗಳಿಗೆ ವಯಸ್ಕರು ಬಳಸಬಹುದು. ಫಲಿತಾಂಶಗಳನ್ನು ನೋಂದಾಯಿಸಲು ಮತ್ತು ವರದಿ ಮಾಡಲು ಕೋವಿಸೆಲ್ಫ್ ಅಪ್ಲಿಕೇಶನ್‌ನೊಂದಿಗೆ ಪರೀಕ್ಷೆಗಳನ್ನು ನಡೆಸಬೇಕು. ಆಂಟಿಜೆನ್ ಕಿಟ್‌ನಲ್ಲಿ ಸುರಕ್ಷಿತ ಸ್ವ್ಯಾಬ್, ಟೆಸ್ಟ್ ಕಾರ್ಡ್, ಪ್ರಿಫಿಲ್ ಎಕ್ಸ್‌ಟ್ರಾಕ್ಷನ್ ಟ್ಯೂಬ್, ಡಿಸ್ಪೋಸಲ್ ಬ್ಯಾಗ್, ಯೂಸರ್ ಮ್ಯಾನ್ಯುವಲ್ ಇದೆ. ಇದು 24 ತಿಂಗಳ ಗರಿಷ್ಠ ಶೆಲ್ಫ್ ಜೀವಿತಾವಧಿಯನ್ನು ಹೊಂದಿದೆ.

ಕಿಟ್

ಇನ್ನು ಈ ಕಿಟ್ ಅನ್ನು ಬಳಸಲು, ಬಳಕೆದಾರರು ಮೊದಲು ಅಪ್ಲಿಕೇಶನ್‌ಗೆ ನೋಂದಾಯಿಸಿಕೊಳ್ಳಬೇಕು. ನಂತರ ಸ್ವ್ಯಾಬ್‌ನೊಂದಿಗೆ ಮಾದರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಮುಂದಿನ ಹಂತಗಳಲ್ಲಿ, ಬಳಕೆದಾರರು ಟ್ಯೂಬ್‌ನಲ್ಲಿ ಮಾದರಿಯನ್ನು ಹಾಕಬೇಕು, ಸ್ವ್ಯಾಬ್ ಅನ್ನು ಮುರಿಯಬೇಕು ಮತ್ತು ನಳಿಕೆಯ ಕ್ಯಾಪ್ ಅನ್ನು ಮುಚ್ಚಬೇಕು. ಈ ಹಂತವನ್ನು ಅನುಸರಿಸಿ, ಬಳಕೆದಾರರು ಎರಡು ಹನಿಗಳನ್ನು ಹಾಕಬೇಕು ಮತ್ತು ಫಲಿತಾಂಶಗಳನ್ನು ಪಡೆಯಲು 15 ನಿಮಿಷಗಳ ಕಾಲ ಕಾಯಬೇಕು. ಕಿಟ್ ಅನ್ನು ಬಿಸಾಡಬಹುದಾದ ಚೀಲದಲ್ಲಿ ವಿಲೇವಾರಿ ಮಾಡುವುದು ಅಂತಿಮ ಹಂತವಾಗಿದೆ.

ಕೋವಿಸೆಲ್ಫ

ಕೋವಿಸೆಲ್ಫ ಕಿಟ್‌ನಲ್ಲಿ ಬಳಕೆದಾರರು ಐದು ಕಿಟ್‌ಗಳನ್ನು ಖರೀದಿಸಿದರೆ ಶೇಕಡಾ 10 ರಷ್ಟು ಉಳಿಸಬಹುದು. ಬಳಕೆದಾರರು ಮೂರು ಅಥವಾ ನಾಲ್ಕು ಕಿಟ್‌ಗಳನ್ನು ಖರೀದಿಸಿದರೆ ಶೇ 5 ಮತ್ತು ಶೇ 7 ರಷ್ಟು ರಿಯಾಯಿತಿ ಇರುತ್ತದೆ. ಇದು ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಶೇ 5 ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಮತ್ತು ಐಸಿಐಸಿಐ ಬ್ಯಾಂಕ್, ಇಂಡಸ್ಇಂಡ್ ಬ್ಯಾಂಕ್, ಎಸ್‌ಬಿಐ ಕಾರ್ಡ್‌ಗಳು ಮತ್ತು ಮೊಬಿಕ್ವಿಕ್ ನೀಡುವ ಅಮೆಕ್ಸ್ ನೆಟ್‌ವರ್ಕ್ ಕಾರ್ಡ್‌ಗಳೊಂದಿಗೆ ಶೇ 20 ರಷ್ಟು ರಿಯಾಯಿತಿ ನೀಡುತ್ತದೆ. ಇನ್ನು ನಿಯಂತ್ರಕ ಅವಶ್ಯಕತೆಗಳ ಪ್ರಕಾರ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಮೈಲ್ಯಾಬ್, ಐಸಿಎಂಆರ್, ಅಥವಾ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

Best Mobiles in India

English summary
Flipkart, the e-commerce website is selling Coviself, a self-testing kit for Covid 19 antigen that gives results in 15 minutes.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X