ಆಂಡ್ರಾಯ್ಡ್‌ ಬಳಕೆದಾರರೇ ಎಚ್ಚರ; ಈ ನಾಲ್ಕು ಆಪ್‌ಗಳು ನಿಮ್ಮ ಡಾಟಾಗೆ ಕನ್ನ ಹಾಕುತ್ತವೆ

|

ಸ್ಮಾರ್ಟ್‌ಫೋನ್ ಇರುವ ಯಾರೇ ಆದರು ಕೆಲವು ಅಗತ್ಯ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅದರಲ್ಲೂ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಅಧಿಕೃತವಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಆಪ್‌ಗಳನ್ನ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದು. ಆದರೆ ಕೆಲವು ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ಗೆ ಎಂಟ್ರಿಯಾದ ಮೇಲೆ ತಮ್ಮ ವರಸೆಯನ್ನೇ ಬದಲಿಸಿರುತ್ತವೆ.

ಬ್ಲೂಟೂತ್‌

ಹೌದು, ಇಲ್ಲಿ ಪಟ್ಟಿ ಮಾಡಲಾದ ಬ್ಲೂಟೂತ್‌ ಸಂಬಂಧಿತ ನಾಲ್ಕು ಆಪ್‌ಗಳು ಒಟ್ಟಾಗಿ ಒಂದು ಮಿಲಿಯನ್ ಇನ್‌ಸ್ಟಾಲ್‌ ಆಗಿವೆ. ಈ ಎಲ್ಲಾ ಆಪ್‌ಗಳನ್ನು ಒಬ್ಬರೇ ಅಭಿವೃದ್ಧಿಪಡಿಸಿದ್ದಾರೆ. ಇನ್ನು ಗೂಗಲ್ ಪ್ಲೇ ಸ್ಟೋರ್‌ ಲಕ್ಷಾಂತರ ಆಪ್‌ಗಳಿಗೆ ವೇದಿಕೆ ಒದಗಿಸುತ್ತದೆ. ಹಾಗೆಯೇ ಈ ಎಲ್ಲಾ ಆಪ್‌ಗಳ ಪ್ರತಿ ಅಪ್‌ಡೇಟ್‌ಗಳನ್ನು ಗೂಗಲ್‌ ಪರಿಶೀಲಿಸಿದರೂ, ಡೆವಲಪರ್‌ಗಳು ಪ್ಲಾಟ್‌ಫಾರ್ಮ್‌ನಲ್ಲಿ ದುರುದ್ದೇಶಪೂರಿತವಾಗಿ ನಡೆದುಕೊಳ್ಳುತ್ತಿದ್ದಾರೆ.

ಆಂಡ್ರಾಯ್ಡ್‌

ಈ ಆಪ್‌ಗಳ ಮೂಲಕ ಆಂಡ್ರಾಯ್ಡ್‌ ಡಿವೈಸ್‌ಗಳಿಂದ ನಿಮ್ಮ ಮಾಹಿತಿ ಕಳ್ಳತನ ಮಾಡಿ ಡೆವಲಪರ್ಸ್‌ಗಳು ಹಣ ಮಾಡುತ್ತಿದ್ದಾರೆ. ಇದರ ನಡುವೆ ಆಪ್‌ಗಳ ಪಟ್ಟಿಯನ್ನು ಭದ್ರತಾ ಸಂಶೋಧಕರು ಹೈಲೈಟ್ ಮಾಡಿ ಕೆಲವು ಎಚ್ಚರಿಕೆಗಳನ್ನೂ ಸಹ ನೀಡಿದ್ದಾರೆ. ಹಾಗೆಯೇ ಆಪ್‌ಗಳು ಹೇಗೆಲ್ಲಾ ಕೆಲಸ ಮಾಡುತ್ತವೆ ಎಂಬುದನ್ನು ಅವರು ವಿವರಿಸಿದ್ದಾರೆ.

ಸಂಶೋಧಕರು ಹೇಳಿದ್ದೇನು?

ಸಂಶೋಧಕರು ಹೇಳಿದ್ದೇನು?

ಮಾಲ್‌ವೇರ್‌ಬೈಟ್ಸ್‌ ಲ್ಯಾಬ್ಸ್‌ನ ಭದ್ರತಾ ಸಂಶೋಧಕರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಬಳಕೆದಾರರ ಡಾಟಾ ಕದಿಯುವ ನಾಲ್ಕು ಆಪ್‌ಗಳ ಪಟ್ಟಿ ನೀಡಿದ್ದು, ಈ ಆಪ್‌ಗಳು 'Android/Trojan.HiddenAds.BTGTHB' ಎಂದು ಕರೆಯುವ ಮಾಲ್‌ವೇರ್‌ ಅನ್ನು ಹೊಂದಿರಲಿವೆ. ಹಾಗೆಯೇ ಇದಕ್ಕೆ ಆಂಡ್ರಾಯ್ಡ್‌ ಟ್ರೋಜನ್‌ ಸೋಂಕು ಎಂದು ಸಹ ಹೆಸರಿಸಲಾಗಿದೆ. ಈ ಆಪ್‌ಗಳು ಈವರೆಗೆ ಒಂದು ಮಿಲಿಯನ್ ಇನ್‌ಸ್ಟಾಲ್‌ ಆಗಿದ್ದು, ಒಬ್ಬರೇ ಡೆವಲಪರ್‌ನಿಂದ ಅಭಿವೃದ್ಧಿ ಆಗಿವೆ ಎಂದಿದ್ದಾರೆ.

ಆಪ್‌ಗಳ ಪಟ್ಟಿ ಇಲ್ಲಿದೆ

ಆಪ್‌ಗಳ ಪಟ್ಟಿ ಇಲ್ಲಿದೆ

  • ಬ್ಲೂಟೂತ್ ಆಟೋ ಕನೆಕ್ಟ್
  • ಡ್ರೈವರ್: ಬ್ಲೂಟೂತ್, ವೈ-ಫೈ, ಯುಎಸ್‌ಬಿ
  • ಬ್ಲೂಟೂತ್ ಆಪ್‌ ಸೆಂಡರ್
  • ಮೊಬೈಲ್ ಟ್ರಾನ್ಸಫರ್: ಸ್ಮಾರ್ಟ್ ಸ್ವಿಚ್
  •  ಇನ್‌ಸ್ಟಾಲ್‌

    ಇನ್ನು ಬಳಕೆದಾರರು ಈ ಆಪ್‌ಗಳನ್ನು ಮೊದಲು ಇನ್‌ಸ್ಟಾಲ್‌ ಮಾಡಿಕೊಂಡಾಗ ಆರಂಭದಲ್ಲಿ ಏನೂ ಸಮಸ್ಯೆ ಇರುವುದಿಲ್ಲ. ತದನಂತರ ಆಪ್‌ಗಳು ತಮ್ಮ ದುರುದ್ದೇಶಪೂರಿತ ಕೆಲಸವನ್ನು ಮಾಡಲು ಮುಂದಾಗುತ್ತವೆ. ಈ ಆಪ್‌ಗಳು ಗೂಗಲ್‌ ಕ್ರೋಮ್ ತೆರೆದು ವೆಬ್‌ ಬ್ರೌಸರ್‌ನಲ್ಲಿ ಫಿಶಿಂಗ್ ಸೈಟ್‌ಗಳನ್ನು ಓಪನ್‌ ಮಾಡಲಿವೆ ಅದರಲ್ಲೂ 'ಪೇ ಪರ್‌ ಕ್ಲಿಕ್‌' ಸೈಟ್‌ಗಳನ್ನು ಇವು ಓಪನ್‌ ಮಾಡುತ್ತವೆ. ಪ್ರಮುಖ ವಿಷಯ ಎಂದರೆ ಈ ಆಪ್‌ಗಳು ತರೆಯುವ ಎಲ್ಲಾ ಫಿಶಿಂಗ್ ಸೈಟ್‌ ತುಂಬಾ ಅಪಾಯಕಾರಿಯಾಗಿವೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

    ಮೊಬೈಲ್ ಲಾಕ್‌ ಆಗಿದ್ದರೂ ಕೆಲಸ ಮಾಡುತ್ತವೆ

    ಮೊಬೈಲ್ ಲಾಕ್‌ ಆಗಿದ್ದರೂ ಕೆಲಸ ಮಾಡುತ್ತವೆ

    ಈ ಆಪ್‌ಗಳು ನಿಮ್ಮ ಸ್ಮಾರ್ಟ್ ಡಿವೈಸ್‌ ಲಾಕ್ ಆಗಿದ್ದರೂ ಸಹ ಬ್ಯಾಗ್ರೌಂಡ್‌ನಲ್ಲಿ ಕ್ರೋಮ್‌ ಟ್ಯಾಬ್‌ಗಳನ್ನು ಓಪನ್‌ ಮಾಡಿ ತಮ್ಮ ದುಷ್ಕೃತ್ಯವನ್ನು ಮಾಡುತ್ತಲೇ ಇರುತ್ತವೆ. ನಿಮಗೆ ಇದು ಅರಿವಾಗಬಾರದು ಎಂದು ಇತ್ತೀಚಿನ ಸೈಟ್‌ನೊಂದಿಗೆ ಕ್ರೋಮ್‌ ತೆರೆದುಕೊಳ್ಳುತ್ತದೆ. ಇದರ ಜೊತೆಗೆ ಆಪ್‌ಗಳಿಗೆ ಬೇಕಾದ ಹೊಸ ಸೈಟ್‌ಗಳೂ ಸಹ ಓಪನ್ ಆಗುತ್ತವೆ. ನೀವು ಲಾಕ್‌ ಓಪನ್ ಮಾಡಿ ಆ ಸೈಟ್‌ಗಳ ಮೇಲೆ ಟ್ಯಾಪ್‌ ಮಾಡಿದರೆ ನಿಮ್ಮ ಡಾಟಾವನ್ನು ಕದಿಯಲು ಆರಂಭ ಮಾಡುತ್ತವೆ.

    ದುರುದ್ದೇಶಪೂರಿತ

    ದುರುದ್ದೇಶಪೂರಿತ ನಡವಳಿಕೆಗಳ ಎಲ್ಲಾ ಪುರಾವೆಗಳ ಆಧಾರದ ಮೇಲೆ ಇವು ಆಯ್ಡ್‌ವೇರ್‌ಗಿಂತ ಹೆಚ್ಚಿನದು ಎಂದು ಊಹಿಸಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಹಾಗೆಯೇ ಗೂಗಲ್‌ ಪ್ಲೇ ಪ್ರೊಟೆಕ್ಟ್‌ ಅನ್ನು ಸಹ ಮೀರಿ ಇವು ವಂಚನೆ ಕೆಲಸ ಮಾಡಲು ಮುಂದಾಗಿವೆ. ಹೆಚ್ಚಿನ ಪ್ರಮಾಣದ ಅಸ್ಪಷ್ಟತೆ ಮತ್ತು ಹಾನಿಕಾರಕ ಫಿಶಿಂಗ್ ಸೈಟ್‌ ಓಪನ್‌ ಮಾಡುತ್ತಿರುವ ಹಿನ್ನೆಲೆ ಇದು ಸ್ಪಷ್ಟವಾಗಿ ಟ್ರೋಜನ್ ಹಿಡನ್ ಆಡ್ಸ್ ಮಾಲ್‌ವೇರ್ ಆಗಿದೆ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಬಳಕೆದಾರರು ಆದಷ್ಟು ಬೇಗ ಸ್ಮಾರ್ಟ್‌ ಡಿವೈಸ್‌ಗಳಿಂದ ಈ ಆಪ್‌ಗಳನ್ನು ಅನ್‌ಇನ್‌ಸ್ಟಾಲ್‌ ಮಾಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

Best Mobiles in India

English summary
Anyone with a smartphone has some essential apps installed. But beware these four apps steal your data.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X