ಎಲ್ಲಾ ಓಟಿಟಿ ಪ್ಲಾಟ್‌ಫಾರ್ಮ್ ಒಂದುಗೂಡಿಸಲಿದೆ ವಾಚ್ಹೋ; ಡಿಶ್‌ಟಿವಿಯಿಂದ ಪ್ಲ್ಯಾನ್‌ ಘೋಷಣೆ!

|

ಡಿಶ್‌ಟಿವಿ ಭಾರತೀಯ ಉಪಗ್ರಹ ಟೆಲಿವಿಷನ್ ಪೂರೈಕೆದಾರ ಕಂಪೆನಿಯಾಗಿದ್ದು, ಇದೀಗ ಹೊಸ ಪ್ಲ್ಯಾನ್‌ ಮೂಲಕ ಹೆಚ್ಚಿನ ಗ್ರಾಹಕರನ್ನು ಪಡೆಯಲು ಮುಂದಾಗಿದೆ. ಭಾರತದಲ್ಲಿ ಡಿಶ್‌ ಟಿವಿ ವಾಚ್ಹೋ (Watcho) ಓಟಿಟಿ ಪ್ಲಾಟ್‌ಫಾರ್ಮ್‌ ಮೂಲಕ ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಈ ವಾಚ್ಹೋ ಎಲ್ಲಾ ರೀತಿಯ ಓಟಿಟಿ ಆಪ್‌ಗಳನ್ನು ಒಂದೇ ವೇದಿಕೆಯಲ್ಲಿ ತರುವ ಕೆಲಸ ಮಾಡಿದೆ. ಇದರಿಂದ ನೀವು ಬೇಕಾದಷ್ಟು ಮಾಹಿತಿ ಮನರಂಜನೆ ಪಡೆಯಬಹುದಾಗಿದೆ.

ಡಿಶ್ ಟಿವಿ

ಹೌದು, ಡಿಶ್ ಟಿವಿಯ ಓಟಿಟಿ ಪ್ಲಾಟ್‌ಫಾರ್ಮ್ ವಾಚ್ಹೋ ಭಾರತದಲ್ಲಿ ಓಟಿಟಿ ಆಪ್‌ಗಳನ್ನು ಅನ್ನು ಒಟ್ಟುಗೂಡಿಸುತ್ತಿದೆ. ವಾಚ್ಹೋ ಪರಿಚಯಾತ್ಮಕ ಒಟಿಟಿ ಪ್ಲ್ಯಾನ್‌ಗಳನ್ನು ನೀಡಿದ್ದು, ಬಳಕೆದಾರರು ಒಂದೇ ಚಂದಾದಾರಿಕೆಯ ಮೂಲಕ ಇತರ ಓಟಿಟಿ ಪ್ಲಾಟ್‌ಫಾರ್ಮ್‌ಗಳಿಂದಲೂ ಸೇವೆ ಪಡೆದುಕೊಳ್ಳಬಹುದು ಎಂದು ಕಂಪೆನಿ ಘೋಷಿಸಿದೆ. ಇನ್ನು ಈ ವಾಚ್ಹೋ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ಝೀ5, ಸೋನಿ ಲೈವ್, ಲಯನ್ಸ್‌ಗೇಟ್‌ ಪ್ಲೇ, ಹಂಗಾಮಾ ಪ್ಲೇ, ಹೋಯ್‌ಚೋಯ್‌, ಕ್ಲಿಕ್‌, ಎಪಿಕ್‌ಆನ್, ಚೌಪಾಲ್ ಹಾಗೂ ಒಹೋ ಗುಜರಾತಿ ಆಪ್‌ಗಳು ಸೇರಿದಂತೆ ಇನ್ನಿತರೆ ಆಪ್‌ಗಳಿಗೆ ಪ್ರತ್ಯೇಕ ಪಾವತಿ ಮಾಡದೆ ನೇರವಾಗಿ ಈ ಆಪ್‌ ಮೂಲಕವೇ ಸ್ಟ್ರೀಮಿಂಗ್‌ ಮಾಡಬಹುದಾಗಿದೆ.

ವಾಚ್ಹೋ

ಇದರ ಜೊತೆಗೆ ಈ ವಾಚ್ಹೋ ಓಟಿಟಿ ಪ್ಲಾಟ್‌ಫಾರ್ಮ್‌ ತನ್ನ ಕಂಟೆಂಟ್‌ ಪೂಲ್‌ನಲ್ಲಿ 35 ಕ್ಕೂ ಹೆಚ್ಚ ವೆಬ್ ಸೀರೀಸ್ ಹೊಂದಿದ್ದು, ಅದರಲ್ಲಿ, ಸ್ವಾಗ್ (ಯುಜಿಸಿ ಕಂಟೆಂಟ್), ಅಡುಗೆ ಸಂಬಂಧಿತ ಶೋ, ಲೈವ್ ಟಿವಿ ಸೇರದಂತೆ ವಾಚ್ಹೋ ಎಕ್ಸ್‌ಕ್ಲೂಸಿವ್‌ ವಿಡಿಯೋ ಆಯ್ಕೆಯನ್ನು ನೀಡಲಿದೆ.

ಚಂದಾದಾರಿಕೆ ಹೇಗೆ?

ಚಂದಾದಾರಿಕೆ ಹೇಗೆ?

ಈ ಪ್ಲಾಟ್‌ಫಾರ್ಮ್‌ನಲ್ಲಿ ಚಂದಾದಾರಿಗೆ ತುಂಬಾ ಸುಲಭವಾದ ಪ್ರಕ್ರಿಯೆಯಾಗಿದೆ. ಈ ವಾಚ್ಹೋ ಪ್ಲ್ಯಾನ್‌ಗಳನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್ ಸೇರಿದಂತೆ ಸ್ಮಾರ್ಟ್‌ಟಿವಿ ಮೂಲಕ ಖರೀದಿ ಮಾಡಬಹುದು. ಇದರಲ್ಲಿ ನಾಲ್ಕು ರೀತಿಯ ಪ್ಲ್ಯಾನ್‌ಗಳಿದ್ದು, ಮಿರ್ಚಿ ಪ್ಲ್ಯಾನ್‌ಗೆ ತಿಂಗಳಿಗೆ 49 ರೂ.ಗಳನ್ನು ಪಾವತಿ ಮಾಡಬೇಕಿದೆ. ಇದರಲ್ಲಿ ನೀವು ಹಂಗಾಮಾ ಪ್ಲೇ, ಎಪಿಕ್ ಆನ್, ಓಹೋ ಗುಜರಾತಿ ಮತ್ತು ಕ್ಲಿಕ್‌ ಆಪ್‌ಗಳಿಗೆ ಪ್ರವೇಶ ಪಡೆಯಬಹುದು. ಹಾಗೆಯೇ ಮಸ್ತಿ ಪ್ಲ್ಯಾನ್‌ಗೆ 99ರೂ. ಗಳನ್ನು ಪಾವತಿ ಮಾಡಬೇಕಿದ್ದು, ಇದರಲ್ಲಿ ಝೀ5, ಹೋಯ್‌ಚೋಯ್, ಚೌಪಾಲ್ ಆಪ್‌ಗಳಿಗೆ ಪಾವತಿ ಮಾಡದೆ ಪ್ರವೇಶ ಪಡೆಯಬಹುದಾಗಿದೆ.

ಧಮಾಲ್ ಪ್ಲ್ಯಾನ್‌

ಇನ್ನು ಧಮಾಲ್ ಪ್ಲ್ಯಾನ್‌ ಗೆ ನೀವು ತಿಂಗಳಿಗೆ 199ರೂ. ಗಳನ್ನು ಪಾವತಿ ಮಾಡಬೇಕಿದ್ದು, ಇದರಲ್ಲಿ ಡಿಸ್ನಿ+ ಹಾಟ್‌ಸ್ಟಾರ್, ಝೀ5, ಲಯನ್ಸ್‌ಗೇಟ್‌ ಪ್ಲೇ, ಹಂಗಾಮಾ ಪ್ಲೇ, ಕ್ಲಿಕ್‌ ಹಾಗೂ ಒಹೋ ಗುಜರಾತಿ ಆಪ್‌ಗಳ ಮೂಲಕ ಮನರಂಜನೆ ಪಡೆಯಬಹುದಾಗಿದೆ. ಹಾಗೆಯೇ ಮ್ಯಾಕ್ಸ್ ಪ್ಲ್ಯಾನ್‌ ಗೆ 299ರೂ. ಗಳ ಚಂದಾದಾರಿಕೆ ಇದ್ದು, ಇದರಲ್ಲಿ ವಾಚ್ಹೋದಲ್ಲಿರುವ ಎಲ್ಲಾ ವಿಡಿಯೋ ಸ್ಟ್ರೀಮಿಂಗ್‌ ಆಪ್‌ಗಳನ್ನು ಬಳಕೆ ಮಾಡಬಹುದಾಗಿದೆ.

ಉಚಿತ ಸೇವೆ

ಉಚಿತ ಸೇವೆ

ವಾಚ್ಹೋ ತನ್ನ ಪರಿಚಯಾತ್ಮಕ ಕೊಡುಗೆಯಾಗಿ, ಡಿಶ್‌ ಟಿವಿ, D2H ಮತ್ತು ಸಿಟಿ ಕೇಬಲ್ ಬಳಕೆದಾರರು ಒಂದು ತಿಂಗಳವರೆಗೆ ಈ ಸೇವೆಯನ್ನು ಉಚಿತವಾಗಿ ಬಳಸಬಹುದು ಎಂದು ತಿಳಿಸಿದೆ. ಆದರೆ, ಇದು ಸೀಮಿತ ಅವಧಿಯ ಕೊಡುಗೆಯಾಗಿದೆ. ಇದೆಲ್ಲದರ ಜೊತೆ ಡಿಶ್‌ಟಿವಿಯು ಜಿಯೋ ಟಿವಿ+ ಮತ್ತು ಟಾಟಾ ಪ್ಲೇ ಬಿಂಗ್‌ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಸ್ಪರ್ಧೆಗೆ ಇಳಿದಿದೆ.

ಡಿಶ್ ಟಿವಿ ಇಂಡಿಯಾ ಲಿಮಿಟೆಡ್‌

ಈ ಬಗ್ಗೆ ಮಾತನಾಡಿದ ಡಿಶ್ ಟಿವಿ ಇಂಡಿಯಾ ಲಿಮಿಟೆಡ್‌ನ ಗ್ರೂಪ್ ಸಿಇಒ ಶ್ರೀ ಅನಿಲ್ ದುವಾ, 'ಡಿಟಿಎಚ್ ತಂತ್ರಜ್ಞಾನದ ಪ್ರವರ್ತಕರಾಗಿ, ಡಿಶ್ ಟಿವಿ ಇಂಡಿಯಾ ಭಾರತೀಯ ದೂರದರ್ಶನದ ಭೂದೃಶ್ಯವನ್ನು ಬದಲಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದರಂತೆ ನಾವು ವಿಡಿಯೋ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳನ್ನು ಒಟ್ಟುಗೂಡಿಸುವ ಮೂಲಕ ವಾಚ್ಹೋದಲ್ಲಿ ಆರಂಭಿಕ ಕೊಡುಗೆಗಳ ಪ್ಲ್ಯಾನ್‌ ಪರಿಚಯಿಸಲಾಗುತ್ತಿದೆ. ಈ ಮೂಲಕ ಓಟಿಟಿ ವೇದಿಕೆಯನ್ನು ಬಲಪಡಿಸಿದ್ದೇವೆ. ಈ ಹೊಸ ಸೇವೆಗಳ ಮೂಲಕ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮತ್ತು ಯಾವುದೇ ಡಿಸ್‌ಪ್ಲೇ ಮೇಲೆ ವೈವಿಧ್ಯಮಯ ಮನರಂಜನೆ ಪಡೆಯಬಹುದು, ಈ ಮೂಲಕ ವಾಚ್ಹೋವನ್ನು ಒಂದು ದೊಡ್ಡ ಮನರಂಜನಾ ತಾಣವನ್ನಾಗಿ ಮಾಡಲು ನಾವು ಉದ್ದೇಶಿಸಿದ್ದೇವೆ ಎಂದು ತಿಳಿಸಿದ್ದಾರೆ.

Best Mobiles in India

Read more about:
English summary
Dish TV, an Indian satellite television provider company, is planning to gain more customers through a new plan. In this article we have explained about Watcho.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X