ಹಬ್ಬಗಳ ಸರಣಿಯಲ್ಲಿ ಆನ್‌ಲೈನ್ ಮಾರಾಟ ದುಪ್ಪಟ್ಟು..!

By GizBot Bureau
|

ಹಬ್ಬಕ್ಕಾಗಿ ಹೊಸತನ್ನು ಖರೀದಿಸುವುದು ನಮ್ಮ ಸಂಪ್ರದಾಯ. ಇದನ್ನೇ ಗುರಿಯಾಗಿಸಿಕೊಂಡಿರುವ ಮಾರಾಟ ಸಂಸ್ಥೆಗಳು ಆ ಸಂದರ್ಬದಲ್ಲಿ ವಿಶೇಷ ರಿಯಾಯಿತಿ ಮತ್ತು ಆಫರ್ ಗಳನ್ನು ನೀಡಿ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುವ ಪರಿಪಾಠವನ್ನು ರೂಢಿಸಿಕೊಂಡವು. ಆದರೆ ಇತ್ತೀಚಿನ ದಿನಗಳಲ್ಲಿ ಅಂಗಡಿಗಳಲ್ಲಿನ ಇಂತಹ ಆಫರ್ ಗಳಿಗಿಂತ ಆನ್ ಲೈನ್ ಮಳಿಗೆಗಳಲ್ಲಿನ ಇಂತಹ ಆಫರ್ ಹೆಚ್ಚು ಪ್ರಚಲಿತದಲ್ಲಿದೆ.

ಹಬ್ಬಗಳ ಸರಣಿಯಲ್ಲಿ ಆನ್‌ಲೈನ್ ಮಾರಾಟ ದುಪ್ಪಟ್ಟು..!

ಹೌದು ಅಮೇರಿಕಾ ಮೂಲಕ ಅಮೇಜಾನ್ ಮತ್ತು ವಾಲ್ ಮಾರ್ಟ್ ಮಾಲೀಕತ್ವದ ಫ್ಲಿಫ್ ಕಾರ್ಟ್ ಈ ಬಾರಿಯ ಭಾರತೀಯ ಹಬ್ಬದ ಸೀಸನ್ ಗಾಗಿ ಭಾರೀ ತಯಾರಿ ಮಾಡಿಕೊಂಡಂತೆ ಕಾಣುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಆನ್ ಲೈನ್ ಮಾರಾಟ ಮಳಿಗೆಗಳಲ್ಲಿ ಅತೀ ಹೆಚ್ಚು ಮಾರಾಟ ನಡೆದು ಈ ಹಿಂದಿನ ಮಾರಾಟದ ಎಲ್ಲಾ ರೆಕಾರ್ಡ್ ಗಳನ್ನು ಬ್ರೇಕ್ ಮಾಡುವ ಸಾಧ್ಯತೆ ಇದೆ ಎಂದು ಇಂಡಸ್ಟ್ರಿ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಮಾರಾಟ ಸಾಧ್ಯತೆ ಎಷ್ಟು? 

ಮಾರಾಟ ಸಾಧ್ಯತೆ ಎಷ್ಟು? 

ಹಬ್ಬದ ಸೀಸನ್ ನಲ್ಲಿ ಕಳೆದ ವರ್ಷ 2 ಮಿಲಿಯನ್ ನಷ್ಟು ಶಿಪ್ ಮೆಂಟ್ ನಡೆದಿದ್ದು ಈ ವರ್ಷ ಅದು ದುಪ್ಪಟ್ಟು ಆಗುವ ಸಾಧ್ಯತೆ ಇದೆ. 3 ಮಿಲಿಯನ್ ಶಿಪ್ ಮೆಂಟ್ ಖಂಡಿತವಾಗಲೂ ನಡೆಯಲಿದೆ ಎಂದು ಊಹಿಸುತ್ತಿದ್ದಾರೆ ತಜ್ಞರು. ಫ್ಲಿಫ್ ಕಾರ್ಟ್ ಮತ್ತು ಅಮೇಜಾನ್ ಈ ಸಂದರ್ಬದಲ್ಲಿ ಅಧಿಕ ಆಫರ್ ಗಳನ್ನು ಮತ್ತು ರಿಯಾಯಿತಿ ಮಾರಾಟವನ್ನು ನಡೆಸುತ್ತದೆ. ಫ್ಲಾಗ್ ಶಿಪ್ ನಲ್ಲಿ ಡಬಲ್ ಆಫರ್ ನೀಡಲು ಇವುಗಳು ನಿರ್ಧರಿಸಿವೆ.

ಯಾವಾಗ ಆರಂಭವಾಗಲಿದೆ ಆನ್ ಲೈನ್ ನಲ್ಲಿ ಹಬ್ಬದ ಮಾರಾಟ?

ಯಾವಾಗ ಆರಂಭವಾಗಲಿದೆ ಆನ್ ಲೈನ್ ನಲ್ಲಿ ಹಬ್ಬದ ಮಾರಾಟ?

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಸೇಲ್ ನಡೆಯುವ ನಿರೀಕ್ಷೆಯನ್ನು ಕಂಪೆನಿಗಳು ಇಟ್ಟುಕೊಂಡಿವೆ. ಪ್ರೀ-ಜಿಎಸ್ ಟಿ ಸೇಲ್ ಇರುವುದರಿಂದಾಗಿ ಒಂದು ದಿನಕ್ಕೆ ಕಡಿಮೆ ಎಂದರೂ 2.8 ಮಿಲಿಯನ್ ಮಾರಾಟ ನಡೆಯುವ ಅಂದಾಜನ್ನು ಕೂಡ ತಜ್ಞರು ಹಾಕುತ್ತಿದ್ದಾರೆ. ಗ್ರಾಹಕರು ಅತೀ ಹೆಚ್ಚು ಶಾಪ್ ಮಾಡುತ್ತಾರೆ ಎಂದು ನಿರೀಕ್ಷಿಸುತ್ತಿದ್ದೇವೆ.
ಇಎಂಐ ಮತ್ತು ಕಡಿಮೆ ಬೆಲೆಯ ಮಾರಾಟವನ್ನು ಕಂಪೆನಿಗಳು ನಡೆಸಲಿವೆ. ಅಕ್ಟೋಬರ್ ಎರಡನೇ ವಾರದಲ್ಲಿ ಈ ಫೇಸ್ಟೀವ್ ಸೀಸನ್ ಆರಂಭವಾಗುವ ಸಾಧ್ಯತೆ ಇದೆ. ದೀಪಾವಳಿ ತಿಂಗಳಾಗಿರುವುದರಿಂದ ಹಲವು ಇಂಡಸ್ಟ್ರಿ ಎಕ್ಸ್ ಪರ್ಟ್ ಗಳು ಈ ಸಂದರ್ಬದಲ್ಲಿ ಅತೀ ಹೆಚ್ಚು ಮಾರಾಟ ಇಕಾಮರ್ಸ್ ಕಂಪೆನಿಗಳಲ್ಲಿ ನಡೆಯಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮಾರಾಟದ ದರದಲ್ಲಿ ಶೇ. 70 ಇಳಿಕೆ

ಮಾರಾಟದ ದರದಲ್ಲಿ ಶೇ. 70 ಇಳಿಕೆ

ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್ ಮತ್ತು ಅಮೇಜಾನ್ ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇವೆಂಟ್ ನ್ನು ಹೊರತು ಪಡಿಸಿ ಆನ್ ಲೈನ್ ಮಾರಾಟವು ಒಂದು ದಿನಕ್ಕೆ ಈ ಹಬ್ಬದ ಸೀಸನ್ ನ ಆಫರ್ ಗಳಲ್ಲಿ 4.5 ಮಿಲಿಯನ್ ಶಿಪ್ ಮೆಂಟ್ ಗೆ ಅಧಿಕಗೊಳ್ಳುವ ಸಾಧ್ಯತೆ ಇದೆ. ಸಾಮಾನ್ಯ ದಿನಗಳಲ್ಲಿ ಇವುಗಳಲ್ಲಿ 1.2ರಿಂದ 1.3 ಮಿಲಿಯನ್ ಮಾರಾಟ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಆಫರ್ ಗಳು ಅಧಿಕವಾಗಿದ್ದಾಗ ಅದರ ಮಾರಾಟ ಪ್ರಕ್ರಿಯೆಯು ದ್ವಿಗುಣವಾಗುತ್ತದೆ. ಅದೂ ಈ ಹಬ್ಬದ ಸೀಸನ್ ನಲ್ಲಿ ನಡೆಯಲಿದ್ದು ಗ್ರಾಹಕರಿಗೆ 70 ಶೇಕಡಾದವರೆಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ.

ಈಗ ಗ್ರಾಹಕರು ಡಿಜಿಟಲ್ ಪೇಮೆಂಟ್ ನ್ನು ಹೆಚ್ಚು ಮಾಡುತ್ತಿರುವ ಕಾರಣದಿಂದಾಗಿ ಈ ಬಾರಿಯ ಹಬ್ಬದ ಸೀಸನ್ ನಲ್ಲಿ ಮಾರಾಟ ಪ್ರಕ್ರಿಯೆಯಲ್ಲಿನ ಟ್ರಾಫಿಕ್ ಅಧಿಕವಾಗಿರುತ್ತದೆ ಎಂದು ಅಮೇಜಾನ್ ಇಂಡಿಯಾದ ವಕ್ತಾರರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲ ಗ್ರಾಹಕರು ನೋ ಕಾಸ್ಟ್ ಇಎಂಐ ಮತ್ತು ಎಕ್ಸ್ ಚೇಂಜ್ ಗಳ ಮೂಲಕ ಇನ್ನಷ್ಟು ಲಾಭವನ್ನು ಪಡೆಯಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.

ಪೇಟಿಎಂ ಮಾಲ್ ನಲ್ಲಿ ಹಬ್ಬದ ಸೀಸನ್ ಯಾವಾಗ?

ಪೇಟಿಎಂ ಮಾಲ್ ನಲ್ಲಿ ಹಬ್ಬದ ಸೀಸನ್ ಯಾವಾಗ?

ಪೇಟಿಎಂ ಮಾಲ್ ನಲ್ಲಿ ಫೇಸ್ಟೀವ್ ಸೀಸನ್ ಅಕ್ಟೋಬರ್ ಮೊದಲ ವಾರದಲ್ಲಿ ಆರಂಭವಾಗಲಿದೆ ಮತ್ತು ವರ್ಷಾಂತ್ಯದವರೆಗೆ ಇರಲಿದೆಯಂತೆ. ಬೇರೆಬೇರೆ ಹಂತದಲ್ಲಿ ಮತ್ತು ಬೇರೆಬೇರೆ ಹಬ್ಬಗಳಿಗೆ ವಿಶೇಷ ದಿನಾಂಕದಲ್ಲಿ ಮಾರಾಟ ನಡೆಸಲು ಪೇಟಿಎಂ ಪ್ಲಾನ್ ಮಾಡಿಕೊಂಡಿದೆ ಎಂಬುದನ್ನು ಪೇಟಿಎಂ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ. ಕಳೆದ ವರ್ಷಕ್ಕಿಂತ 3 ಪಟ್ಟು ಹೆಚ್ಚಿನ ಮಾರಾಟವನ್ನು ಪೇಟಿಎಂ ಕೂಡ ನಿರೀಕ್ಷೆ ಮಾಡುತ್ತಿದೆ.

ಅಕ್ಟೋಬರ್ 10 ಸುಮಾರಿಗೆ ಫ್ಲಿಪ್ ಕಾರ್ಟ್ ಫ್ಲಾಗ್ ಶಿಪ್ ಬಿಗ್ ಬಿಲಿಯನ್ ಡೇ ಸೇಲ್ ಮತ್ತು ಅಮೇಜಾನ್ ಗ್ರೇಟ್ ಇಂಡಿಯನ್ ಫೇಸ್ಟೀವ್ ಸೇಲ್ ಗಳು ಆರಂಭವಾಗಲಿದೆ ಮತ್ತು 4.5 ಮಿಲಿಯನ್ ಮಾರಾಟವನ್ನು ಒಂದು ದಿನಕ್ಕೆ ನಿರೀಕ್ಷೆ ಮಾಡಲಾಗುತ್ತಿದೆ.

ಯಾವುದು ರಿಯಾಯಿತಿಯಲ್ಲಿ ಲಭ್ಯ?

ಯಾವುದು ರಿಯಾಯಿತಿಯಲ್ಲಿ ಲಭ್ಯ?

ಸ್ಮಾರ್ಟ್ ಫೋನ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಫ್ಯಾಷನ್ ಪ್ರೊಡಕ್ಟ್ ಗಳು ಶಿಪ್ ಮೆಂಟ್ ನ ನಿರೀಕ್ಷೆಯ ಮೇಲ್ದರ್ಜೆಯಲ್ಲಿವೆ. ಅಂದರೆ ತಜ್ಞರ ಪ್ರಕಾರ ಇವುಗಳು ಅತೀ ಹೆಚ್ಚು ಆಫರ್ ಗಳೊಂದಿಗೆ ಇರುತ್ತದೆ ಮತ್ತು ಮಾರಾಟವನ್ನೂ ಕಾಣಲಿವೆ. 50 ರಿಂದ 60 ಸಿಟಿಗಳಲ್ಲಿ ಹೆಚ್ಚಿನ ಆರ್ಡರ್ ಗಳನ್ನು ನಿರೀಕ್ಷೆ ಮಾಡಬಹುದು ಎಂದು ತಜ್ಞರ ಅಭಿಪ್ರಾಯ. ಅಂದರೆ ಒಟ್ಟಾರೆ ಮಾರಾಟದ ಶೇಕಡಾ 70 ರಷ್ಟು ಹೆಚ್ಚಳವನ್ನು ಕಾಣಬಹುದು ಎಂಬುದಾಗಿ ಪೇಮೆಂಟ್ ಗೇಟ್ ವೇ ಗಳು ನಿರೀಕ್ಷೆ ಇಟ್ಟುಕೊಂಡಿವೆ. ಕಳೆದ ವರ್ಷ ಒಟ್ಟಾರೆ ಹಬ್ಬದ ಸೀಸನ್ ಸೇಲ್ ನ ಗ್ರಾಸ್ ವ್ಯಾಲ್ಯೂ 2.25 -2.8 ಬಿಲಿಯನ್ ಡಾಲರ್ ಆಗಿತ್ತು ಎಂಬುದನ್ನು ಇಂಡಸ್ಟ್ರಿ ಎಕ್ಸ್ ಪರ್ಟ್ ಗಳು ತಿಳಿಸಿದ್ದಾರೆ.

ಫ್ಲಿಪ್ ಕಾರ್ಟ್ ಜೊತೆಗೆ ಮಿಂತ್ರಾ, ಜಬಾಂಗ್ ಮತ್ತು ಅಮೇಜಾನ್ ಒಟ್ಟಾರೆಯಾಗಿ ಹಬ್ಬದ ಸೀಸನ್ ನಲ್ಲಿ ಮಾರ್ಕೆಟ್ ನ ಶೇಕಡಾ 80 ರಷ್ಟು ಮಾರಾಟವನ್ನು ವೃದ್ಧಿಸುವ ಸಾಧ್ಯತೆ ಇದೆ.

ಇಕಾಮ್ ಎಕ್ಸ್ ಪ್ರೆಸ್ ನ ಮುಖ್ಯ ಎಕ್ಸಿಕ್ಯೂಟೀವ್ ಆಗಿರುವ ಟಿಎ ಕ್ರಿಷ್ಣನ್ ಅವರ ಅಭಿಪ್ರಾಯದಂತೆ ಒಂದು ದಿನಕ್ಕೆ 4.2 ರಿಂದ 4.5 ಮಿಲಿಯನ್ ಶಿಪ್ ಮೆಂಟ್ ಹೆಚ್ಚಳವಾಗುತ್ತದೆ ಎಂದಿದ್ದಾರೆ.

ದೊಡ್ಡ ಆರ್ಡರ್ ಗಳ ಡೆಲಿವರಿ ಹೇಗೆ?

ದೊಡ್ಡ ಆರ್ಡರ್ ಗಳ ಡೆಲಿವರಿ ಹೇಗೆ?

ಹಬ್ಬದ ಸೀಸನ್ ನಲ್ಲಿ ಆನ್ ಲೈನ್ ನಲ್ಲಿ ಖರೀದಿಸುವಿಕೆ ಹೆಚ್ಚಳವಾಗುವುದರ ಪರಿಣಾಮದಿಂದಾಗಿ ಆ ವಸ್ತುಗಳನ್ನು ಡೆಲಿವರಿ ಮಾಡುವುದು ಒಂದು ಸವಾಲಿನ ಕೆಲಸ. ಹಾಗಾಗಿ ಈಗಾಗಲೇ ಡೆಲಿವರಿಗಾಗಿ ಹೆಚ್ಚಿನ ಮಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆಯಂತೆ. ಟೀಂಲೀಸ್ ಹೇಳುವಂತೆ ಸುಮಾರು 50,000 ಮಂದಿಯನ್ನು ಇದಕ್ಕಾಗಿ ಈಗಾಗಲೇ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆಯಂತೆ.

ಕಳೆದ ವರ್ಷ ಇದೇ ಸೀಸನ್ ನಲ್ಲಿ ಆಫ್ ಲೈನ್ ರೀಟೈಲ್ ಗಳಿಂದ ಮತ್ತು ಇಕಾಮರ್ಸ್ ಲಾಜಿಸ್ಟಿಕ್ ಮತ್ತು ವೇರ್ ಹೌಸ್ ಗಳಿಂದ ಒಟ್ಟು ಹೊಸದಾಗಿ ಕೆಲಸಕ್ಕೆ ಸೇರಿಸಿಕೊಂಡವರ ಸಂಖ್ಯೆ 28000 ಆಗಿತ್ತು ಎಂಬುದನ್ನು ಏಜೆನ್ಸಿಯೊಂದು ತಿಳಿಸಿದೆ. ಆದರೆ ಈ ವರ್ಷ ಅದರ ಸಂಖ್ಯೆ ದುಪ್ಪಟ್ಟಾಗಿದೆ. ಫ್ಲಿಪ್ ಕಾರ್ಟ್ 70,000 ಮಂದಿಯನ್ನು ಸೇರಿಸಿಕೊಳ್ಳಲಿದೆ ಎಂದು ತಿಳಿಸಿದೆ. ಒಟ್ಟಾರೆ ವಸ್ತುಗಳ ಡೆಲಿವರಿಗಾಗಿ ಒಂದು ಲಕ್ಷ ಮಂದಿಯ ಅಗತ್ಯವಿದೆ ಎಂಬುದಾಗಿಯೂ ಫ್ಲಿಪ್ ಕಾರ್ಟ್ ಹೇಳುತ್ತಿದೆ.

ಪೇಟಿಎಂ ಮಾಲ್ ದೇಶಾದ್ಯಂತ 60,000 ಮಂದಿಯನ್ನು ಡೆಲಿವರಿಗಾಗಿ ನಿಯೋಜಿಸಿದೆ. ಇಕಾಮ್ ಎಕ್ಸ್ ಪ್ರೆಸ್ 16,000 ದಿಂದ 25,000 ಕ್ಕೆ ತಮ್ಮ ಡೆಲಿವರಿ ಮಾಡುವ ಮಂದಿಯನ್ನು ಹೆಚ್ಚಿಸಬೇಕು ಎಂದು ಆಲೋಚಿಸುತ್ತಿದೆ.

Best Mobiles in India

English summary
Diwali sale on Amazon and Flipkart this year may be biggest ever. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X