ಭಾರತದಲ್ಲಿ ಸೇವೆ ಕೊನೆಗೊಳಿಸಿದ 'ಇಬೇ'!..ಇಬೇ ವೆಬ್‌ಸೈಟ್ ಈಗ ಖಾಲಿ ಖಾಲಿ!!

|

ಭಾರತದ ಇ ಕಾಮರ್ಸ್ ಮಾರುಕಟ್ಟೆಯ ವೇಗಕ್ಕೆ ಸಿಲುಕಿ ಫ್ಲಿಪ್‌ಕಾರ್ಟ್ ಪಾಲಾಗಿದ್ದ ಇಬೇ ಇಕಾಮರ್ಸ್ ಜಾಲತಾಣ ತನ್ನ ಆನ್‌ಲೈನ್ ಸೇವೆಯನ್ನು ಇದೀಗ ನಿಲ್ಲಿಸಿದೆ. ಆಗಸ್ಟ್ 14 ರಿಂದ ಇಬೇ ಜಾಲತಾಣದ ಕಾರ್ಯನಿರ್ವಹಣೆ ಮುಗಿದಿದ್ದು, ತನ್ನ ಸಹಭಾಗಿತ್ವ ಕಂಪೆನಿ ಫ್ಲಿಪ್‌ಕಾರ್ಟ್ ಜಾಲತಾಣಕ್ಕೆ ಭೇಟಿ ನೀಡಿ ವ್ಯವಹರಿಸಲು ಇಬೇ ತನ್ನ ಗ್ರಾಹಕರಲ್ಲಿ ವಿನಂತಿ ಮಾಡಿಕೊಂಡಿದೆ.

ಭಾರತದಲ್ಲಿ ಸೇವೆ ಕೊನೆಗೊಳಿಸಿದ 'ಇಬೇ'!..ಇಬೇ ವೆಬ್‌ಸೈಟ್ ಈಗ ಖಾಲಿ ಖಾಲಿ!!

'ಚೇಂಜ್ ಇಸ್ ಗುಡ್' ಎಂಬ ಟ್ಯಾಗ್‌ಲೈನ್ ಅಡಿಯಲ್ಲಿ ತನ್ನ ಗ್ರಾಹಕರಲ್ಲಿ ಇಬೇ.ಇನ್ ಮೂಲಕ ವ್ಯವಹರಿಸಲು ಸಾಧ್ಯವಿಲ್ಲದಿರುವ ಬಗ್ಗೆ ಇಬೇ ಸಂಸ್ಥೆ ತಿಳಿಸಿದ್ದು, ಫ್ಲಿಪ್‌ಕಾರ್ಟ್ ಮೂಲಕ ಆನ್‌ಲೈನ್ ವ್ಯವಹಾರ ನಡೆಸುವಂತೆ ಹೇಳಿದೆ. ಇನ್ನು ಇಬೇ ಇಂಡಿಯಾ (ebay.in) ಖಾತೆಗೆ ರಿಜಿಸ್ಟರ್ ಆಗಿದ್ದವರ ಖಾತೆಯನ್ನು ಇಬೇ(ebay.com)ಗೆ ವರ್ಗಾವಣೆ ಮಾಡಿದ್ದಾಗಿ ಸಂಸ್ಥೆ ತಿಳಿಸಿದೆ.

ಭಾರತದಲ್ಲಿ ಸೇವೆ ಕೊನೆಗೊಳಿಸಿದ 'ಇಬೇ'!..ಇಬೇ ವೆಬ್‌ಸೈಟ್ ಈಗ ಖಾಲಿ ಖಾಲಿ!!

ವಿಶ್ವದ ಇ ಕಾಮರ್ಸ್ ದಿಗ್ಗಜ ಕಂಪೆನಿಯಾಗಿ ಮೆರೆದಿದ್ದ ಇಬೇ ಇದೀಗ ಭಾರತದಲ್ಲಿ ಇತಿಹಾಸದ ಪುಟಗಳನ್ನು ಸೇರಿಕೊಳ್ಳುತ್ತಿರುವುದರಿಂದ ತನ್ನ ನೆಚ್ಚಿನ ಗ್ರಾಹಕರಿಗೆ ಇಬೇ ವ್ಯವಹಾರದ ಬಗ್ಗೆ ಇರುವ ಕೆಲವು ಆತಂಕಗಳನ್ನು ಸಹ ಪರಿಹರಿಸಿದೆ. ನೀವು ಕೂಡ ಇಬೇಯಲ್ಲಿ ವ್ಯವಹಾರ ಗ್ರಾಹಕರಾಗಿದ್ದರೆ ನೀವು ಇಬೇ ವ್ಯವಹಾರದ ಆತಂಕಗಳನ್ನು ಈ ಕೆಳಗೆ ಪರಿಹರಿಸಿಕೊಳ್ಳಬಹುದು.

ಇಬೇ ವ್ಯವಹಾರ ಮುಗಿದದ್ದು ಯಾವಾಗ?

ಇಬೇ ವ್ಯವಹಾರ ಮುಗಿದದ್ದು ಯಾವಾಗ?

ಆಗಸ್ಟ್ 14ರ ನಂತರ ಇಬೇ ಜಾಲತಾಣದಲ್ಲಿ ವ್ಯವಹಾರ ಕೊನೆಗೊಂಡಿದೆ.

ಇಬೇ ಖಾತೆಯಿಂದ ಫ್ಲಿಪ್‌ಕಾರ್ಟ್ ವ್ಯವಹಾರ ಸಾಧ್ಯವೇ.?

ಇಬೇ ಖಾತೆಯಿಂದ ಫ್ಲಿಪ್‌ಕಾರ್ಟ್ ವ್ಯವಹಾರ ಸಾಧ್ಯವೇ.?

ಇಲ್ಲ. ನೀವು ಫ್ಲಿಪ್‌ಕಾರ್ಟ್ ವ್ಯವಹಾರ ನಡೆಸಲು ಹೊಸ ಖಾತೆಯನ್ನು ತೆರೆಯಬೇಕಿದೆ.

ಇಬೇ ರೀಫಂಡ್ ಹಣ ಪಡೆಯುವುದು ಹೇಗೆ?

ಇಬೇ ರೀಫಂಡ್ ಹಣ ಪಡೆಯುವುದು ಹೇಗೆ?

ಆಗಸ್ಟ್ 30 ನೇ ತಾರೀಖಿನ ವರೆಗೂ ಇಬೇ ಗ್ಯಾರಂಟಿ ಪ್ರೊಟೆಕ್ಷನ್ ಇರಲಿದೆ. ಈ ಸಮಯದ ಒಳಗಾಗಿ ನೀವು ರೀಫಂಡ್ ಹಣ ಪಡೆಯಬಹುದಾಗಿದೆ.

ಇಬೇ ಖರೀದಿ ಹಿಸ್ಟರಿ ಎಲ್ಲಿ ಸಿಗುತ್ತದೆ.

ಇಬೇ ಖರೀದಿ ಹಿಸ್ಟರಿ ಎಲ್ಲಿ ಸಿಗುತ್ತದೆ.

ಇಬೇ.ಇನ್ ಖಾತೆಯಲ್ಲಿನ ಖರೀದಿ ಹಿಸ್ಟರಿಯನ್ನು ಮೈಪೈಸಾಪೇ ಮತ್ತು ಮೈ ಇಬೇ ಯುನಿಟ್‌ನಲ್ಲಿ ಪಡೆಬಹುದಾಗಿದೆ.

ಸೆಲ್ಲರ್ ಪ್ರಾಡೆಕ್ಟ್ ವಾರೆಂಟಿ

ಸೆಲ್ಲರ್ ಪ್ರಾಡೆಕ್ಟ್ ವಾರೆಂಟಿ

ಇಬೇಯಲ್ಲಿ ಖರೀದಿಸಿದ ಎಲ್ಲಾ ವಸ್ತುಗಳ ಮೇಲೆ ನಮೂದಿಸಿದ ದಿನದವರೆಗೂ ವಾರೆಂಟಿ ಇರಲಿದೆ. ಈ ಬಗ್ಗೆ ತೊಂದರೆ ಎದುರಾದರೆ ಇಬೇ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು.

Best Mobiles in India

English summary
eBay India shuts down; Flipkart to launch marketplace for refurbished goods. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X