ಭಾರತೀಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್ ಎಲಿಮೆಂಟ್ಸ್ ಬಿಡುಗಡೆ!

|

ಚೀನಾ ಮೂಲದ 59 ಆಪ್‌ಗಳನ್ನ ಭಾರತ ಸರ್ಕಾರ ಬ್ಯಾನ್‌ ಮಾಡಿದ್ದೆ ತಡೆ ಸ್ವದೇಶಿ ಆಪ್‌ಗಳಿಗೆ ಮಹತ್ವ ಬಂದಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಭಾರತ ಸರ್ಕಾರ ಆತ್ಮನಿರ್ಭರ್‌ ಭಾರತ್‌ ಯೋಜನೆಯಡಿ ಸ್ವದೇಶಿ ಆಪ್‌ ಕ್ರಿಯೆಟ್‌ ಮಾಡಲು ಪ್ರೋತ್ಸಾಹ ನೀಡಿತ್ತು. ಸದ್ಯ ಇದೀಗ ಭಾರತದಲ್ಲಿ ಪಕ್ಕಾ ಸ್ವದೇಶಿಯಾದ ತನ್ನದೇ ಆದ ಹೊಸ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದು ಸಂಪೂರ್ಣ ಸ್ವದೇಶಿ ಆಗಿದ್ದು ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.

ಎಲಿಮೆಂಟ್ಸ್‌

ಹೌದು, ಭಾರತದಲ್ಲಿ ಹೊಸದೊಂದು ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಅನ್ನು ಪರಿಚಯಿಸಲಾಗಿದೆ. ಇದನ್ನ ಎಲಿಮೆಂಟ್ಸ್‌ ಸೊಶೀಯಲ್‌ ಮೀಡಿಯಾ ಸೂಪರ್ ಆಪ್ ಎಂದು ಹೆಸರಿಸಲಾಗಿದೆ. ಇನ್ನು ಈ ಅಪ್ಲಿಕೇಶನ್‌ ಅನ್ನು ಭಾರತದಲ್ಲಿ 100% ಸ್ವದೇಶಿ ಮತ್ತು 1,000 ಕ್ಕೂ ಹೆಚ್ಚು ಐಟಿ ವೃತ್ತಿಪರರಿಂದ ಡೆವಲಪ್‌ ಮಾಡಲಾಗಿದೆ. ಸದ್ಯ ಈ ಅಪ್ಲಿಕೇಶನ್‌ ಅನ್ನು ಭಾರತದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಸದ್ಯ ಇದು ಈಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಲ್ಲಿ ಲಭ್ಯವಿದೆ. ಇನ್ನು ಈ ಆಪ್‌ ವಿನ್ಯಾಸ ಹಾಗೂ ವಿಶೇಷತೆ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಲಿಮೆಂಟ್ಸ್‌

ಇನ್ನು ಎಲಿಮೆಂಟ್ಸ್‌ ಆಪ್‌ನಲ್ಲಿ ಅನೇಕ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳ ಫೀಚರ್ಸ್‌ಗಳನ್ನು ಒಂದೇ ಪ್ಲಾಟ್‌ಫಾರ್ಮ್‌ಗೆ ಸಂಯೋಜಿಸಿ, ಮಾಡಲಾಗಿದೆ. ಇದೇ ಕಾರಣಕ್ಕೆ ಎಲಿಮೆಂಟ್ಸ್ ಆಪ್‌ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್, ಇನ್ಸಟಂಟ್‌ ಮೆಸೇಜಿಂಗ್‌ ಅಪ್ಲಿಕೇಶನ್ ಆಗಿಯೂ ಕೂಡ ಕಾರ್ಯನಿರ್ವಹಿಸಲಿದೆ. ಅಲ್ಲದೆ ಇದು ವಾಯ್ಸ್‌ ಮತ್ತು ವೀಡಿಯೊ ಕರೆಗಳ ಡಿವಯಸ್‌ ಆಗಿ ಕೂಡ ಕಾರ್ಯನಿರ್ವಹಿಸಲಿದೆ. ಇನ್ನು ಈ ಆಪ್‌ನಲ್ಲಿ ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳ ಫೀಚರ್ಸ್‌ಗಳನ್ನು ಒಂದೇ ಕಡೆ ಸಂಯೋಜಿಸಿ ಅದನ್ನು ಏಕೀಕೃತ ಅಪ್ಲಿಕೇಶನ್‌ನಲ್ಲಿ ಪ್ರಸ್ತುತಪಡಿಸುವುದು ಎಲಿಮೆಂಟ್ಸ್‌ನ ಉದ್ದೇಶವಾಗಿದೆ.

ಎಲಿಮೆಂಟ್‌

ಇದಲ್ಲದೆ ಈ ಆಪ್‌ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಎರಡನೆಯ ಸ್ವಭಾವವಾಗಿ ಮಾರ್ಪಸಡಿಸಲಾಗಿದೆ. ಸಂಪರ್ಕಗಳು, ಸ್ನೇಹಿತರು, ಅನುಯಾಯಿಗಳು, ಎಲ್ಲವನ್ನು ಎಲಿಮೆಂಟ್ಸ್‌ನಲ್ಲಿ ಒಟ್ಟುಗೂಡಿಸಲಾಗಿದೆ. ಜೊತೆಗೆ ಎಲಿಮೆಂಟ್‌ನಲ್ಲಿ ಬಳಕೆದಾರರ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ರಾಷ್ಟ್ರದ ಉನ್ನತ ಗೌಪ್ಯತೆ ವೃತ್ತಿಪರರು ಉತ್ಪನ್ನದ ವಿನ್ಯಾಸಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇದ್ದರಿಂದ, ಬಳಕೆದಾರರ ಡೇಟಾವನ್ನು ಭಾರತದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಬಳಕೆದಾರರ ಡೇಟಾವನ್ನು ಬಳಕೆದಾರರ ಸ್ಪಷ್ಟ ಒಪ್ಪಿಗೆಯಿಲ್ಲದೆ ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗ್ತಿದೆ.

ಸೊಶೀಯಲ್‌ ಮೀಡಿಯಾ ಆಪ್

ಈಗಾಗಲೇ ಎಲ್ಲಾ ಕಡೆ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಗೌಪತ್ಯೆಯ ಭದ್ರತಾ ವಿಚಾರದಲ್ಲಿ ಲೋಪದೋಷಗಳ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಎಲಿಮೆಂಟ್ಸ್‌ನಲ್ಲಿ ಸಾಕಷ್ಟು ಸುರಕ್ಷತೆಯ ಬಗ್ಗೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಈ ಅಪ್ಲಿಕೇಶನ್ ಎಂಟು ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತದೆ. ಸದ್ಯ ಎಲಿಮೆಂಟ್ಸ್ ಅನ್ನು ಹಲವಾರು ತಿಂಗಳುಗಳಿಂದ 1000 ಕ್ಕೂ ಹೆಚ್ಚು ಜನರು ವ್ಯಾಪಕವಾಗಿ ಗುಂಪು-ಪರೀಕ್ಷಿಸಿದ್ದಾರೆ. ಬಿಡುಗಡೆ ಆದ ನಂತರ ಸುಮಾರು 200,000 ಜನರು ಈಗಾಗಲೇ ಡೌನ್‌ಲೋಡ್ ಮಾಡಿಕೊಂಡಿದ್ದು, ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ.

Most Read Articles
Best Mobiles in India

English summary
Combining the features of many social media applications into one platform, Elyments is a social media app, an instant messaging app, and a tool for voice and video calls, all clubbed into one.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X