ಜಿಯೋ ಧನ್ ಧನಾ ಧನ್ ಆಫರ್ ಸಹ ಕೊನೆಯಾಗಲಿದೆ!!

Written By:

ಟ್ರಾಯ್ ಸೂಚನೆ ನಂತರ ಜಿಯೊ ಸಮ್ಮರ್ ಪ್ರೈಸ್ ಆಫರ್ ಕೊನೆಗೊಂಡು ನೂತನ ಜಿಯೋ ಧನ್‌ಧನಾ ಧನ್ ಆಫರ್ ಬಿಡುಗಡೆಗೊಂಡಿದ್ದು ಈಗಾಗಲೇ ಎಲ್ಲರಿಗೂ ಗೊತ್ತಿರುವ ವಿಷಯ.! ಆದರೆ, ಈಗ ಜಿಯೋ ಧನ್ ಧನಾ ಧನ್ ಆಫರ್‌ಗೂ ಕಂಟಕ ಶುರುವಾಗಿದ್ದು ಜಿಯೋವಿನ ಧನ್ ಧನಾ ಧನ್ ಆಫರ್ ಸೇವೆ ಕೂಡ ಕೊನೆಗೊಳ್ಳವ ಸೂಚನೆ ಸಿಕ್ಕಿದೆ.!!

ಹೌದು!! ಯಾವುದೇ ಟೆಲಿಕಾಂ ಹೊಸ ಆಫರ್ ಪ್ರಕಟಿಸಿದ ನಂತರದ ಏಳು ದಿವಸಗಳಲ್ಲಿ ಭಾರತೀಯ ಟೆಲಿಕಾಂ ನಿಯಂತ್ರಣ ಇಲಾಖೆ ಟ್ರಾಯ್‌ಗೆ ಮಾಹಿತಿಸಲ್ಲಿಸಬೇಕು. ಅದರಂತೆ ಜಿಯೋ ಕೂಡ ಧನ್ ಧನಾ ಧನ್ ಆಫರ್ ಬಗ್ಗೆ ಟ್ರಾಯ್‌ಗೆ ಮಾಹಿತಿ ನೀಡಿದ್ದು, ನೂತನ ಆಫರ್ ಇದೀಗ ಪರೀಕ್ಷೆಗೆ ಒಳಪಟ್ಟಿದೆ.!!

ಓದಿರಿ: ಬೆಂಗಳೂರಿನಲ್ಲಿ ಭರ್ಜರಿ ಜಾಬ್ ಆಫರ್ ನೀಡಿದ ಆಪಲ್ !!

ಹಾಗಾದರೆ, ಸಮ್ಮರ್ ಆಫರ್‌ನಂತೆ ಜಿಯೋ ಧನ್ ಧನಾ ಧನ್ ಆಫರ್ ಸಹ ಕೊನೆಯಾಗಲಿದೆಯೇ? ಟ್ರಾಯ್ ಮುಂದೆ ತೆಗೆದುಕೊಳ್ಳಬಹುದಾದ ನಿರ್ಧಾರಗಳೇನು? ನೂತನ ಆಫರ್‌ ಬಗ್ಗೆ ಏರ್‌ಟೆಲ್ ಹೇಳಿದ್ದೇನು? ಎಂಬ ಪ್ರಶ್ನೆಗಳಿಗೆ ಕೆಳಗಿನ ಸ್ಲೈಡರ್‌ಗಳಲ್ಲಿ ಉತ್ತರ ನೋಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ರಾಯ್‌ಗೆ ಮಾಹಿತಿ ಸಲ್ಲಿಕೆ.!!

ಟ್ರಾಯ್‌ಗೆ ಮಾಹಿತಿ ಸಲ್ಲಿಕೆ.!!

ಮೊದಲೇ ಹೇಳಿದಂತೆ ಯಾವುದೇ ಟೆಲಿಕಾಂ ಹೊಸ ಆಫರ್ ಪ್ರಕಟಿಸಿದ ನಂತರದ ಏಳು ದಿವಸಗಳಲ್ಲಿ ಭಾರತೀಯ ಟೆಲಿಕಾಂ ನಿಯಂತ್ರಣ ಇಲಾಖೆ ಟ್ರಾಯ್‌ಗೆ ಮಾಹಿತಿಸಲ್ಲಿಸಬೇಕು ಅದರಂತೆ ಜಿಯೋ ಟ್ರಾಯ್‌ಗೆ ಧನ್ ಧನಾ ಧನ್ ಆಫರ್ ಆಫರ್‌ ಬಗ್ಗೆ ಮಾಹಿತಿ ಸಲ್ಲಿಸಿದೆ.!

ಧನ್ ಧನಾ ಧನ್ ಬಗ್ಗೆ ಏರ್‌ಟೆಲ್ ಹೇಳುತ್ತಿರುವುದು ಏನು?

ಧನ್ ಧನಾ ಧನ್ ಬಗ್ಗೆ ಏರ್‌ಟೆಲ್ ಹೇಳುತ್ತಿರುವುದು ಏನು?

ಟೆಲಿಕಾಂ ನಿಯಮಗಳನ್ನು ಉಲ್ಲಂಗಿಸುತ್ತಿರುವ ಜಿಯೋಗೆ ಟ್ರಾಯ್ ಸಹಕಾರಿಯಾಗಿದೆ. ಅದೂ ಅಲ್ಲದೇ ಜಿಯೋ ಸಮ್ಮರ್ ಆಫರ್ ನಿಲ್ಲಿಸಿದ ನಂತರ ಮತ್ತೆ ಅದೇ ರೀತಿಯ ಧನ್ ಧನಾ ಧನ್ ಆಫರ್ ಹಳೆ ಬಾಟಲಿಗೆ ಹೊಸ ಮಧ್ಯ ತುಂಬಿದಂತೆ ಎಂದು ಹೇಳಿದೆ. ಹಾಗಾಗಿ, ಇದನ್ನು ಟ್ರಾಯ್‌ನಲ್ಲಿ ಪ್ರಶ್ನಿಸಿದೆ.!!

ಟ್ರಾಯ್ ಮುಂದಿನ ನಿರ್ಧರವೇನು?

ಟ್ರಾಯ್ ಮುಂದಿನ ನಿರ್ಧರವೇನು?

ಆರು ತಿಂಗಳ ಉಚಿತ ಆಫರ್ ಮುಗಿದ ನಂತರ ಜಿಯೋ ಮತ್ತೆ ಆಫರ್ ನೀಡುವುದು ಉತ್ತಮವಲ್ಲ ಎಂದು ಜಿಯೋಗೆ ಟ್ರಾಯ್ ಈ ಮೊದಲೇ ಸಲಹೆ ನೀಡಿತ್ತು. ಅದರಂತೆ ಸಮ್ಮರ್ ಆಫರ್ ಸಹ ಕೊನೆಗೊಂಡಿತ್ತು. ಇದೀಗ ಜಿಯೋ ಧನ್ ಧನಾ ಧನ್ ಆಫರ್ ಬಗ್ಗೆ ಟ್ರಾಯ್ ಯಾವ ನಿಲುವನ್ನು ತಾಳುತ್ತದೆ ಎಂದು ಎಲ್ಲರಿಗೂ ಕುತೋಹಲ ಶುರುವಾಗಿದೆ.!!

ಧನ್ ಧನಾ ಧನ್ ಆಫರ್ ಕೊನೆಯಾಗಲಿದೆಯೇ?

ಧನ್ ಧನಾ ಧನ್ ಆಫರ್ ಕೊನೆಯಾಗಲಿದೆಯೇ?

ಟ್ರಾಯ್ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಜಿಯೋ ಜಿಯೋ ಧನ್ ಧನಾ ಧನ್ ಆಫರ್ ನಿಂತಿದೆ. ಸಮ್ಮರ್ ಆಫರ್‌ನಂತೆ ಬಹುತೇಕ ಒಂದೇ ರೀತಿಯಲ್ಲಿ ಧನ್ ಧನಾ ಧನ್ ಆಫರ್ ಇದ್ದು, ಮುಂದೆ ಜಿಯೋವಿನ ಭವಿಷ್ಯ ಡೋಲಾಯಮಾನವಾಗಿದೆ. ಆದರೆ, ಅಂಬಾನಿ ಧನ್ ಧನಾ ಧನ್ ಆಫರ್‌ಗೆ ತೊಂದರೆಯಾಗದಂತೆ ಪೂರ್ವ ಆಲೋಚಿಸಿ ಆಫರ್ ನೀಡಿದ್ದಾರೆ ಎಂದು ಹೇಳಲಾಗಿದೆ.!!

ಓದಿರಿ: 3 ತಿಂಗಳು ಸಂಪೂರ್ಣ ಉಚಿತ ಡೇಟಾ ಘೊಷಿಸಿದ ಏರ್‌ಟೆಲ್.! ಟೆಲಿಕಾಂಗೆ ಶಾಕ್..!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Jio Dhan Dhana Dhan plan similar to the ​Summer Surprise, calling it “old wine in a new bottle.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot