ಹಿಟ್ ಆಯ್ತು ಬೆಂಗಳೂರು ಟ್ರಾಫಿಕ್ ಪೊಲೀಸರ ಶ್ರಮ: ಭೇಷ್ ಅಂತೂ ಫೇಸ್‌ಬುಕ್..!

|

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರಿಗೆ ಫೇಸ್‌ಬುಕ್ ಕಡೆಯಿಂದಲೇ ಮೆಚ್ಚುಗೆ ದೊರೆತಿದೆ. ದಿನೇ ದಿನೇ ಸೋಶಿಯಲ್ ಮೀಡಿಯಾ ಬಳಕೆದಾರರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಫೇಸ್‌ಬುಕ್ ಮೂಲಕವೇ ಸಂಚಾರಿ ನಿಯಮಗಳನ್ನು ಜನರಿಗೆ ತಿಳಿಸುವುದರೊಂದಿಗೆ ಟ್ರಾಫಿಕ್ ಬಗ್ಗೆ ಮಾಹಿತಿಯನ್ನು ಆಪ್‌ಡೇಟ್ ಮಾಡಲು ಮುಂದಾಗಿದ್ದಾರೆ. ಈ ಹಿನ್ನಲೆಯ ಜನ ಸಾಮಾನ್ಯರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ಇಂದಿನ ದಿನದಲ್ಲಿ ಸರ್ಕಾರಿ ಇಲಾಖೆಗಳು ಸೇರಿದಂತೆ ರಾಜಕೀಯ ಪಕ್ಷಗಳು ಹೆಚ್ಚು ಫೇಸ್‌ಬುಕ್‌ನಲ್ಲಿ ಆಕ್ಟೀವ್ ಆಗಿವೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಉತ್ತಮವಾಗಿ ತಮ್ಮ ಪೇಜ್ ನಿರ್ವಹಿಸುತ್ತಿರುವ ದೇಶದ ಸರ್ಕಾರಿ ಇಲಾಖೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರ ಪೇಜ್ ಸಹ ಸ್ಥಾನವನ್ನು ಪಡೆದುಕೊಂಡಿದೆ.

ಫೇಸ್‌ಬುಕ್‌ನಿಂದಲೇ ಮೆಚ್ಚುಗೆ:

ಫೇಸ್‌ಬುಕ್‌ನಿಂದಲೇ ಮೆಚ್ಚುಗೆ:

ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಉತ್ತಮ ರೀತಿಯಲ್ಲಿ ಪೇಜ್ ಅನ್ನು ನಿರ್ವಹಣೆಯನ್ನು ಮಾಡುವುದರೊಂದಿಗೆ ಟ್ರಾಫಿಕ್ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕೆಲವು ಹೊಸ ಮಾದರಿಯ ಕ್ರಮಗಳು, ಫೋಸ್ಟ್‌ ಗಳು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದು, ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಫೇಸ್‌ಬುಕ್ ಬೆಂಗಳೂರು ಟ್ರಾಫಿಕ್‌ ಪೊಲೀಸರಿಗೆ ಶುಭಾಶಯಗಳನ್ನು ತಿಳಿಸಿದೆ.

ಹೆಚ್ಚು ರಿಯಕ್ಷನ್:

ಹೆಚ್ಚು ರಿಯಕ್ಷನ್:

ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಹೆಚ್ಚಿನ ಪ್ರಮಾಣದಲ್ಲಿ ಪೋಸ್ಟ್ ಗಳನ್ನು ಮಾಡುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ಜನರು ಲೈಕ್ ಮಾಡಿದ್ದಾರೆ. ಇದಲ್ಲದೇ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರು ಮಾಡುವ ಫೋಸ್ಟ್ ಗಳು ಹೆಚ್ಚಿನ ಶೇರ್ ಮತ್ತು ಲೈಕ್ ಗಳನ್ನು ಪಡೆದುಕೊಳ್ಳುತ್ತಿದೆ. ಇದನ್ನು ಅದ್ದರಿಂದ ಫೇಸ್‌ಬುಕ್ ಸ್ಥಾನವನ್ನು ನೀಡಿದೆ ಎನ್ನಲಾಗಿದೆ.

ಜನರೊಂದಿಗೆ ಸಂಪರ್ಕ:

ಜನರೊಂದಿಗೆ ಸಂಪರ್ಕ:

ಬೆಂಗಳೂರು ನಗರ ಪೊಲೀಸ್ ಮತ್ತು ಟ್ರಾಫಿಕ್ ಪೊಲೀಸರು ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ತಾಣದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಈ ಮಾಧ್ಯಮದ ಮೂಲಕವೇ ಜನತೆಯೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಮಂದಿ ಬಳಕೆದಾರರು ಫೇಸ್‌ಬುಕ್ ಪೇಜ್‌ಗಳನ್ನು ಲೈಕ್ ಮಾಡುತ್ತಿದ್ದಾರೆ ಎನ್ನಲಾಗಿದೆ.

Best Mobiles in India

English summary
Facebook Award Bengaluru Traffic Police. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X