ಬೆಂಗಳೂರಿನಲ್ಲಿ ತೆರೆಯಲಿದೆ ಫೇಸ್‌ಬುಕ್ ಕಚೇರಿ!..ಕನ್ನಡಿಗರಿಗೂ ಉದ್ಯೋಗ ಗ್ಯಾರಂಟಿ!!

|

ಸಿಲಿಕಾನ್ ಸಿಟಿ ಎಂದೇ ಖ್ಯಾತನಾಮವಾಗಿರುವ ನಮ್ಮ ಬೆಂಗಳೂರಿನಲ್ಲಿ ವಿಶ್ವದ ನಂಬರ್ ಒನ್ ಸಾಮಾಜಿಕ ಜಾಲತಾಣ ಕಂಪನಿ ಫೇಸ್‌ಬುಕ್ ಕಚೇರಿ ತೆರೆಯುವುದು ಪಕ್ಕಾ ಆಗಿದೆ. ದೇಶದ ಐಟಿ ರಾಜಧಾನಿ ಬೆಂಗಳೂರಿಗೆ ಇದೇ ಮೊದಲ ಬಾರಿ ಜನಪ್ರಿಯ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಕಾಲಿರಿಸುತ್ತಿದ್ದು, ಒಟ್ಟು 2,200 ಜನರಿಗೆ ಉದ್ಯೋಗ ನೀಡಲು ತಯಾರಿ ನಡೆದಿದೆ.

ಹೌದು, 2010ರಲ್ಲಿ ಹೈದರಾಬಾದಿನಲ್ಲಿ ಕಚೇರಿ ಆರಂಭಿಸಿದ ಫೇಸ್‌ಬುಕ್, ಮೂರು ವರ್ಷದ ಹಿಂದೆ ಮುಂಬೈನಲ್ಲಿ ಹಾಗೂ ಕಳೆದ ವರ್ಷ ದೆಹಲಿಯಲ್ಲೂ ಕಚೇರಿ ಆರಂಭಿಸಿತ್ತು. ಇದೀಗ ಉದ್ಯಾನ ನಗರಿ ಬೆಂಗಳೂರಿನಲ್ಲಿಯೂ ಫೇಸ್‌ಬುಕ್ ಕಚೇರಿ ಸ್ಥಾಪನೆಯಾಗುತ್ತಿದ್ದು, ಕನ್ನಡಿಗರೂ ಸೇರಿದಂತೆ ಸುಮಾರು 2,200 ಜನರಿಗೆ ಬೆಂಗಳೂರು ನಗರದಲ್ಲಿ ಉದ್ಯೋಗ ಸ್ಥಾಪನೆಯಾಗಲಿದೆ.

ಬೆಂಗಳೂರಿನಲ್ಲಿ ತೆರೆಯಲಿದೆ ಫೇಸ್‌ಬುಕ್ ಕಚೇರಿ!..ಕನ್ನಡಿಗರಿಗೂ ಉದ್ಯೋಗ ಗ್ಯಾರಂಟಿ!

ಈಗ ಫೇಸ್‌ಬುಕ್ ಆಗಮನದೊಂದಿಗೆ ಜಗತ್ತಿನ ಐದು ಅತೀ ದೊಡ್ಡ ಸಾಫ್ಟ್‌ವೇರ್ ತಂತ್ರಜ್ಞಾನ ಕಂಪನಿಗಳನ್ನು ಬೆಂಗಳೂರು ನಗರ ಹೊಂದಿದಂತಾಗಲಿದೆ. ಹಾಗಾದರೆ, ಬೆಂಗಳೂರಿನಲ್ಲಿ ಫೇಸ್‌ಬುಕ್ ಕಚೇರಿ ಸ್ಥಾಪನೆಯಾಗುತ್ತಿರುವುದು ಎಲ್ಲಿ? ಕನ್ನಡಿಗರ ಜೊತೆ ವ್ಯವಹಾರ ಭಾಷೆಯಾಗಿ ಕನ್ನಡಕ್ಕೂ ಸ್ಥಾನಮಾನ ದೊರೆಯುತ್ತಿರುವುದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬೆಂಗಳೂರಿನಲ್ಲಿ ಕಚೇರಿ ಏಕೆ?

ಬೆಂಗಳೂರಿನಲ್ಲಿ ಕಚೇರಿ ಏಕೆ?

ಈಗಾಗಲೇ ಭಾರತದಲ್ಲಿ ಪ್ರಮುಖ ಮೂರು ಕಚೇರಿಗಳನ್ನು ಹೊಂದಿರುವ ಫೇಸ್‌ಬುಕ್ ದಕ್ಷಿಣ ಭಾರತದಲ್ಲಿ ಬೆಂಗಳೂರನ್ನು ನೆಚ್ಚಿಕೊಳ್ಳಲು ಮುಂದಾಗಿದೆ. ಹೈದರಾಬಾದ್‌ಗಿಂತಲೂ ಬೆಂಗಳೂರು ಈಗ ಫೇಸ್‌ಬುಕ್‌ಗೆ ಲಾಭದಾಯಕವಾಗಲಿದೆ ಎಂದು ಕಚೇರಿ ಮೂಲಗಳು ತಿಳಿಸಿವೆ. ಫೇಸ್‌ಬುಕ್ ಮಾರುಕಟ್ಟೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಸಹ ಇದಕ್ಕೆ ಕಾರಣವಾಗಿದೆ.

ಫೇಸ್‌ಬುಕ್ ಕಚೇರಿ ಎಲ್ಲಿ !

ಫೇಸ್‌ಬುಕ್ ಕಚೇರಿ ಎಲ್ಲಿ !

ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡ ಚಲ್ಲಘಟ್ಟದ ಬಳಿಯ ಎಂಬೆಸಿ ಗಾಲ್ಫ್ ಲಿಂಕ್ಸ್ ಐಟಿ ಪಾರ್ಕ್ ಇದ್ದು, ಅಲ್ಲಿಯೇ ಫೇಸ್‌ಬುಕ್ ಕಚೇರಿ ಸ್ಥಾಪನೆಯಾಗಲಿದೆ ಎಂದು ಹೇಳಲಾಗಿದೆ. ಸುಮಾರು 2.2 ಲಕ್ಷ ಚದರ ಅಡಿಗಳಷ್ಟು ಜಾಗವನ್ನು ಹೊಂದಿರುವ ಕಟ್ಟಡದಲ್ಲಿ ಫೇಸ್‌ಬುಕ್‌ನ ಬೆಂಗಳೂರು ಮುಖ್ಯ ಕಚೇರಿ ಆರಂಭವಾಗುತ್ತಿದೆ ಎಂದು ವರದಿಯಾಗಿದೆ.

34 ಕೋಟಿ ರೂ. ಬಾಡಿಗೆ

34 ಕೋಟಿ ರೂ. ಬಾಡಿಗೆ

ಫೇಸ್‌ಬುಕ್ ಕಂಪನಿಯ ಕಚೇರಿ ಆರಂಭವಾಗಲಿರುವ ಕಟ್ಟಡಕ್ಕೆ ಚದರ ಅಡಿಗೆ 130 ರೂ.ನಂತೆ ವರ್ಷಕ್ಕೆ 34 ಕೋಟಿ ರೂ. ಬಾಡಿಗೆಯನ್ನು ಫೇಸ್‌ಬುಕ್ ನೀಡಲಿದೆ ಎಂದುವರದಿಗಳು ತಿಳಿಸಿವೆ. ಈ ಕಟ್ಟಡದಲ್ಲಿ ಈಗಾಗಲೇ ಐಬಿಎಂ, ಮೈಕ್ರೋಸಾಫ್ಟ್, ಗೋಲ್ಟ್ ಮ್ಯಾನ್ ಸ್ಯಾಚ್ಸ್ ಸೇರಿದಂತೆ ಅನೇಕ ಘಟಾನುಘಟಿ ಕಂಪನಿಗಳಿದ್ದು, ಇವುಗಳ ಜೊತೆ ಫೇಸ್‌ಬುಕ್ ಕೂಡ ಕೂಡಿಕೊಂಡಿದೆ.

ಕನ್ನಡಿಗರಿಗೂ ಉದ್ಯೋಗ!

ಕನ್ನಡಿಗರಿಗೂ ಉದ್ಯೋಗ!

ಹೊಸದಾಗಿ ಪ್ರಾರಂಭವಾಗುತ್ತಿರುವ ಫೇಸ್‌ಬುಕ್ ಕಚೇರಿಯಲ್ಲಿ ಸುಮಾರು 2,200 ಜನರಿಗೆ ನೌಕರಿ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ರಾಜಕೀಯ ಆಧಾರಿತ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಫೇಸ್‌ಬುಕ್ ಈಗಾಗಲೇ ಪ್ರಾದೇಶಿಕವಾಗಿ ಉದ್ಯೋಗ ನೀಡಲಿರುವ ಬಗ್ಗೆ ತಿಳಿಸಿದೆ. ಹಾಗಾಗಿ, ಕನ್ನಡಿಗರಿಗೂ ಫೇಸ್‌ಬುಕ್‌ನಲ್ಲಿ ಕೆಲಸ ಸಿಗುವುದು ಈಗ ಗ್ಯಾರಂಟಿ.

ಮತ್ತೊಂದು ಗರಿ ಸೇರಿದಂತೆ

ಮತ್ತೊಂದು ಗರಿ ಸೇರಿದಂತೆ

ಬೆಂಗಳೂರಿಗೆ ಫೇಸ್‌ಬುಕ್ ಆಗಮನದೊಂದಿಗೆ ಜಗತ್ತಿನ ಐದು ಟೆಕ್ ಕಂಪನಿಗಳನ್ನು ಒಳಗೊಂಡ ಭಾರತದ ನಗರ ಎನ್ನುವ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ. ಈಗಾಗಲೇ ಬೆಂಗಳೂರಿನಲ್ಲಿ ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್, ಆಪಲ್ ಕಂಪನಿಗಳಿದ್ದು, ಇವುಗಳ ಸಾಲಿಗೆ ಫೇಸ್‌ಬುಕ್ ಕೂಡ ಸೇರಿಕೊಳ್ಳುತ್ತಿರುವುದು ಬೆಂಗಳೂರಿಗೆ ಮತ್ತೊಂದು ಗರಿ ಸೇರಿದಂತೆ.!

ಈ ಶಾಕಿಂಗ್ ಫೇಸ್‌ಬುಕ್ 'ರಹಸ್ಯಗಳ' ಬಗ್ಗೆ ಖಂಡಿತ ನೀವು ತಿಳಿದಿಲ್ಲ.!!

ಈ ಶಾಕಿಂಗ್ ಫೇಸ್‌ಬುಕ್ 'ರಹಸ್ಯಗಳ' ಬಗ್ಗೆ ಖಂಡಿತ ನೀವು ತಿಳಿದಿಲ್ಲ.!!

ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ 'ಫೇಸ್‌ಬುಕ್' ಬಗ್ಗೆ ನಿಮಗೆಷ್ಟು ಗೊತ್ತು ಎಂದು ಕೇಳಿದರೆ ಉತ್ತರಿಸದಿರುವರ ಸಂಖ್ಯೆ ಕಡಿಮೆಯೇ. ಏಕೆಂದರೆ, ಇಡೀ ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ಅದಕ್ಕಿಂತಲೂ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ ಎಂದರೆ ಆಶ್ಚರ್ಯವೇನಿಲ್ಲ.

ಆದರೆ, ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಿಗಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಫೇಸ್‌ಬುಕ್‌ ತನ್ನಲ್ಲಿ ಕೆಲವೊಂದು ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಫೇಸ್‌ಬುಕ್ ಒಳಗೆ ನಿಮಗೆ ತಿಳಿಯದ ಮಾಹಿತಿಗಳು ಅಡಗಿರುತ್ತದೆ. ಇಂತಹ ರಹಸ್ಯ ಅಥವಾ ವಿಶೇಷ ಮಾಹಿತಿಗಳು ಖಂಡಿತವಾಗಿಯೂ ನಿಮ್ಮ ಕುತೋಹಲವನ್ನು ಸಹ ಪರಿಹರಿಸುತ್ತದೆ ಎನ್ನಬಹುದು.

ಹಾಗಾಗಿ, ಇಂದಿನ ಲೇಖನದಲ್ಲಿ ಬೃಹತ್ ಗಾತ್ರದ ಫೇಸ್‌ಬುಕ್ ತನ್ನಲ್ಲಿ ಬಚ್ಚಿಟ್ಟುಕೊಂಡಿರುವ ಕೆಲವೊಂದು ರಹಸ್ಯಗಳು ಯಾವುವು ಎಂಬುದನ್ನು ತಿಳಿಯಿರಿ. ಮೊದಲೇ ಹೇಳಿದಂತೆ, ಫೇಸ್‌ಬುಕ್‌ನಲ್ಲಿನ ಈ ಅಂಶಗಳು ಹೆಚ್ಚು ಪ್ರಸಿದ್ಧವಾಗಿದ್ದು ನಿಮ್ಮನ್ನು ದಿಗ್ಮೂಢಗೊಳಿಸುವುದು ನಿಜ. ಹಾಗಿದ್ದರೆ ಆ ಅಂಶಗಳೇನು ಎಂಬುದನ್ನು ಮುಂದೆ ತಿಳಿಯೋಣ.

#1 ಹ್ಯಾಕಿಂಗ್

#1 ಹ್ಯಾಕಿಂಗ್

ಪ್ರತೀ ದಿನ ಫೇಸ್‌ಬುಕ್‌ನಲ್ಲಿ 600,000 ಹ್ಯಾಕಿಂಗ್ ದಾಳಿಗಳು ನಡೆಯುತ್ತಿರುತ್ತವೆಯಂತೆ.

#2 ಫೇಸ್‌ಬುಕ್ ಭಾಷೆ

#2 ಫೇಸ್‌ಬುಕ್ ಭಾಷೆ

ನಿಮ್ಮ ಫೇಸ್‌ಬುಕ್ ಭಾಷೆಯನ್ನು "ಪೈರೇಟ್‌ಗೆ" ನೀವು ಬದಲಾಯಿಸಬಹುದಾಗಿದೆ.

#3 ಫೇಸ್‌ಬುಕ್ ಬಳಕೆ

#3 ಫೇಸ್‌ಬುಕ್ ಬಳಕೆ

ಫೇಸ್‌ಬುಕ್‌ನ ಸರಾಸರಿ ಯುಎಸ್ ಬಳಕೆದಾರರು ಸೈಟ್‌ನಲ್ಲಿ 40 ನಿಮಿಷಗಳ ಕಾಲ ಕಳೆಯುತ್ತಾರೆ.

#4 ಫೇಸ್‌ಬುಕ್ ಫೇಸ್

#4 ಫೇಸ್‌ಬುಕ್ ಫೇಸ್

ಅಲ್ ಪೆಸಿನೊ ಫೇಸ್‌ಬುಕ್‌ನ ಪ್ರಥಮ ಫೇಸ್‌ ಆಗಿದೆ.

#5 ಸ್ಮಾರ್ಟ್‌ಫೋನ್ ಬಳಕೆದಾರರು

#5 ಸ್ಮಾರ್ಟ್‌ಫೋನ್ ಬಳಕೆದಾರರು

ದಿನವೊಂದಕ್ಕೆ 14 ಬಾರಿ ಫೇಸ್‌ಬುಕ್ ಅನ್ನು ಸ್ಮಾರ್ಟ್‌ಫೋನ್ ಬಳಕೆದಾರರು ನೋಡುತ್ತಾರೆ.

#6 ಫೇಸ್‌ಬುಕ್ ಕೊಲೆ

#6 ಫೇಸ್‌ಬುಕ್ ಕೊಲೆ

ಫೇಸ್‌ಬುಕ್‌ನಲ್ಲಿ ಕೆಲವರನ್ನು ಅನ್‌ಫ್ರೆಂಡ್ ಮಾಡಲಾಗಿದೆ ಎಂಬ ಕಾರಣಕ್ಕೆ ಹೆಚ್ಚಿನ ಜನರನ್ನು ಕೊಲೆ ಮಾಡಲಾಗಿದೆಯಂತೆ.

#7 ಬೇರ್ಪಡಿಸುವಿಕೆ

#7 ಬೇರ್ಪಡಿಸುವಿಕೆ

ಯಾವುದೇ ಒಬ್ಬ ಫೇಸ್‌ಬುಕ್ ಬಳಕೆದಾರರು ಮತ್ತು ಇನ್ನೊಬ್ಬರೊಂದಿಗೆ ಸರಾಸರಿ 3.74 ಡಿಗ್ರಿಗಳ ಬೇರ್ಪಡಿಸುವಿಕೆ ಇದೆ.

#8 ಫೇಸ್‌ಬುಕ್ ಹದ್ದಿನ ಕಣ್ಣು

#8 ಫೇಸ್‌ಬುಕ್ ಹದ್ದಿನ ಕಣ್ಣು

ನೀವು ಭೇಟಿ ಮಾಡಿರುವ ಸೈಟ್ ಅನ್ನು ನೀವು ಸೈನ್ ಔಟ್ ಮಾಡಿದ್ದರೂ ಆ ಸೈಟ್ ಅನ್ನು ಫೇಸ್‌ಬುಕ್ ಟ್ರ್ಯಾಕ್ ಮಾಡುತ್ತದೆ.

#9 ಅಧ್ಯಯನ ಏನು ಹೇಳುತ್ತದೆ

#9 ಅಧ್ಯಯನ ಏನು ಹೇಳುತ್ತದೆ

ಒಂದು ಅಧ್ಯಯನದ ಪ್ರಕಾರ 3 ಜನರಲ್ಲಿ 1 ವ್ಯಕ್ತಿ ಫೇಸ್‌ಬುಕ್‌ಗೆ ಭೇಟಿ ನೀಡಿದ ನಂತರ ತಮ್ಮ ಜೀವನದ ಬಗ್ಗೆ ಜಿಗುಪ್ಸೆ ಹೊಂದುತ್ತಾರಂತೆ.

#10 ಫೇಸ್‌ಬುಕ್ ಬಣ್ಣ

#10 ಫೇಸ್‌ಬುಕ್ ಬಣ್ಣ

ಮಾರ್ಕ್ ಜುಕರ್‌ಬರ್ಗ್ ರೆಡ್ - ಗ್ರೀನ್ ಬಣ್ಣದ ಅಂಧತ್ವದಿಂದ ಬಳಲುತ್ತಿರುವುದರಿಂದ ಫೇಸ್‌ಬುಕ್ ಬಣ್ಣ ನೀಲಿಯಾಗಿದೆ.

#11 ಫೇಸ್‌ಬುಕ್‌ನಲ್ಲಿ ಮೃತ ವ್ಯಕ್ತಿಗಳು

#11 ಫೇಸ್‌ಬುಕ್‌ನಲ್ಲಿ ಮೃತ ವ್ಯಕ್ತಿಗಳು

ಫೇಸ್‌ಬುಕ್‌ನಲ್ಲಿ 50 ಮಿಲಿಯನ್ ಮೃತ ವ್ಯಕ್ತಿಗಳಿದ್ದಾರಂತೆ.

#12 ಚೀನಾದಲ್ಲಿ ನಿಷೇಧ

#12 ಚೀನಾದಲ್ಲಿ ನಿಷೇಧ

2009 ರಿಂದೀಚೆಗೆ ಫೇಸ್‌ಬುಕ್, ಟ್ವಿಟ್ಟರ್ ಮತ್ತು ನ್ಯೂ ಯಾರ್ಕ್ ಟೈಮ್ಸ್ ಅನ್ನು ಚೀನಾದಲ್ಲಿ ನಿಷೇಧಿಸಲಾಗಿದೆ.

#13 ವಿಚ್ಛೇನದಕ್ಕೂ ಫೇಸ್‌ಬುಕ್ ಕಾರಣ

#13 ವಿಚ್ಛೇನದಕ್ಕೂ ಫೇಸ್‌ಬುಕ್ ಕಾರಣ

ಯುಎಸ್‌ನಲ್ಲಿ ಬಹುತೇಕ ವಿಚ್ಛೇದನ ಪ್ರಕರಣಗಳಲ್ಲಿ ಫೇಸ್‌ಬುಕ್‌ ಪದ ಎದ್ದುಕಾಣುತ್ತಿದೆ.

#14 ಮಾರ್ಕ್ ಜುಕರ್ ಬರ್ಗ್ ನಿಷೇಧಿಸುವಂತಿಲ್ಲ

#14 ಮಾರ್ಕ್ ಜುಕರ್ ಬರ್ಗ್ ನಿಷೇಧಿಸುವಂತಿಲ್ಲ

ನೀವು ಫೇಸ್‌ಬುಕ್‌ನಲ್ಲಿ ಮಾರ್ಕ್ ಜುಕರ್ ಬರ್ಗ್ ಅನ್ನು ಬ್ಲಾಕ್ ಮಾಡುವಂತಿಲ್ಲ.

#15 ಫೇಸ್‌ಬುಕ್ ಆದಾಯ

#15 ಫೇಸ್‌ಬುಕ್ ಆದಾಯ

ಫೇಸ್‌ಬುಕ್ ಪ್ರತೀ ಯುಎಸ್ ಬಳಕೆದಾರರಿಂದ ಸರಾಸರಿ US$6.85 ಅನ್ನು ಗಳಿಸುತ್ತಿದೆಯಂತೆ.

#16 ಫೇಸ್‌ಬುಕ್ ಬಳಕೆದಾರರು

#16 ಫೇಸ್‌ಬುಕ್ ಬಳಕೆದಾರರು

ಅಮೆರಿಕಾದಲ್ಲಿ ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಿದನಾಗರೀಕರಿಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಫೇಸ್‌ಬುಕ್ ಹೊಂದಿದೆ.

#17 ಮಹಿಳೆ ನೇಮಕಾತಿ

#17 ಮಹಿಳೆ ನೇಮಕಾತಿ

ಆತ ಫೇಸ್‌ಬುಕ್‌ನಲ್ಲಿದ್ದಾಗಲೆಲ್ಲಾ ಆತನಿಗೆ ಕಪಾಳ ಮೋಕ್ಷ ಮಾಡಲು ಬ್ಲಾಗರ್ ಮಹಿಳೆಯನ್ನು ನೇಮಿಸಿತ್ತಂತೆ.

#18 ಮಹಿಳೆಯ ಬಂಧನ

#18 ಮಹಿಳೆಯ ಬಂಧನ

ಬ್ರಿಟನ್‌ನಲ್ಲಿ ತನಗೆ ತಾನೇ ಅಸಭ್ಯ ಸಂದೇಶಗಳನ್ನು ಕಳುಹಿಸಲು ಫೇಕ್ ಫೇಸ್‌ಬುಕ್ ಖಾತೆಯನ್ನು ರಚಿಸಿಕೊಂಡಿದ್ದ ಮಹಿಳೆಗೆ 20 ತಿಂಗಳುಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.

#19 ಫೇಸ್‌ಬುಕ್ ಅಪ್‌ಲೋಡ್ಸ್

#19 ಫೇಸ್‌ಬುಕ್ ಅಪ್‌ಲೋಡ್ಸ್

ಮೊಬೈಲ್‌ನಲ್ಲೇ ಹೆಚ್ಚಿನ ಫೇಸ್‌ಬುಕ್ ಫೋಟೋಗಳು ಮತ್ತು ವೀಡಿಯೊಗಳು ಅಪ್‌ಲೋಡ್ ಆಗುವುದರಿಂದ ಇದು 27% ದಷ್ಟು ಅಪ್‌ಸ್ಟ್ರೀಮ್ ವೆಬ್ ಟ್ರಾಫಿಕ್ ಅನ್ನು ಬಳಸುತ್ತದೆ.

#20 ದಾನಶೂರ ಕರ್ಣ

#20 ದಾನಶೂರ ಕರ್ಣ

ಫೇಸ್‌ಬುಕ್ ಸ್ಥಾಪಕರಾದ ಮಾರ್ಕ್ ಜುಕರ್ ಬರ್ಗ್ ಚಾರಿಟಿಗೆ ದಾನ ಮಾಡುವ ವ್ಯಕ್ತಿಗಳ ಸಾಲಿನಲ್ಲಿದ್ದಾರೆ. ವಿಶ್ವದ ಅತಿ ದೊಡ್ಡ ಚ್ಯಾರಿಟೇಬಲ್ ದಾನಿಗಳಲ್ಲಿ ಇವರು ಕೂಡ ಓರ್ವರಾಗಿದ್ದಾರೆ.

Best Mobiles in India

English summary
The new office is located in Embassy GolfLinks in Bengaluru. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X