ಟಿಕ್‌ಟಾಕ್ ಹೋಲುವ ಫೇಸ್‌ಬುಕ್ ಕೊಲಾಬ್ ಮ್ಯೂಸಿಕ್ ವಿಡಿಯೋ ಅಪ್ಲಿಕೇಶನ್ ಬಿಡುಗಡೆ!

|

ಬಹು ನಿರೀಕ್ಷಿತ ಫೇಸ್‌ಬುಕ್‌ ಕೊಲಾಬ್‌ ಮ್ಯೂಸಿಕ್‌ನ ಪ್ರಯೋಗಿಕ ಅಪ್ಲಿಕೇಶನ್‌ ಅನ್ನು ಆಪಲ್‌ನ ಆಪ್‌ ಸ್ಟೋರ್‌ನಲ್ಲಿ ಪ್ರಾರಂಭಿಸಲಾಗಿದೆ. ಇನ್ನು ಈ ಸಹಯೋಗಿ ಐಒಎಸ್ ಅಪ್ಲಿಕೇಶನ್ ಅನ್ನು ಫೇಸ್‌ಬುಕ್‌ನ ಹೊಸ ಉತ್ಪನ್ನ ಪ್ರಯೋಗ (ಎನ್‌ಪಿಇ) ತಂಡವು ಮೇ ತಿಂಗಳಲ್ಲಿ invite-only ಬೀಟಾ ಆಗಿ ಪ್ರಾರಂಭಿಸಲಾಗಿತ್ತು. ಸದ್ಯ ಇದೀಗ ಈ ಅಪ್ಲಿಕೇಶನ್‌ ಯುಎಸ್‌ನಲ್ಲಿರುವ ಎಲ್ಲಾ ಐಒಎಸ್ ಬಳಕೆದಾರರಿಗೆ ಲಭ್ಯವಿದೆ. ಬೀಟಾ ಟೆಸ್ಟ್‌ ಕಮ್ಯೂನಿಟಿ ಬೇಸ್ಡ್‌ ಮೇಲೆ ತಂಡವು ಅಪ್ಲಿಕೇಶನ್‌ಗೆ ನವೀಕರಣಗಳನ್ನು ಸಹ ಮಾಡಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಕೊಲಾಬ್‌ ಪ್ರಾಯೋಗಿಕ ಮ್ಯೂಸಿಕ್‌ ಅಪ್ಲಿಕೇಶನ್‌ ಅನ್ನು ಐಫೋನ್‌ನಲ್ಲಿ ಪರಿಚಯಿಸಿದೆ. ಇನ್ನು ಈ ಅಪ್ಲಿಕೇಶನ್‌ ಮ್ಯೂಸಿಕ್‌ ಅನ್ನು ಕೇಂದ್ರೀಕರಿಸಿ ಮೂಲ ವೀಡಿಯೊಗಳನ್ನು ರಚಿಸಲು, ವೀಕ್ಷಿಸಲು ಮತ್ತು ಮಿಕ್ಸ್‌ ಮಾಡಲು ಮತ್ತು ಸೆಟ್‌ ಮಾಡಲು ಕೊಲಾಬ್ ಬಳಕೆದಾರರನ್ನು ಅನುಮತಿಸುತ್ತದೆ. ಇದಲ್ಲದೆ ‘ಕೊಲಾಬ್' ಸಿಂಕ್‌ನಲ್ಲಿ ಪ್ಲೇ ಮಾಡುವ ಮೂರು 15 ಸೆಕೆಂಡುಗಳ ಸ್ವತಂತ್ರ ವೀಡಿಯೊಗಳನ್ನು ಒಳಗೊಂಡಿದೆ. ಭೌತಿಕವಾಗಿ ಒಟ್ಟಿಗೆ ಇಲ್ಲದಿದ್ದರೂ ಸಹ ಬಳಕೆದಾರರು ಒಟ್ಟಿಗೆ ಮ್ಯೂಸಿಕ್‌ ಸೆಟ್‌ ಮಾಡಲು ಈ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇನ್ನುಳಿದಂತೆ ಈ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ನ ಕೊಲಾಬ್‌ ಮ್ಯೂಸಿಕ್‌ ಅಪ್ಲಿಕೇಶನ್‌ ಸದ್ಯ ಐಫೋನ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಕೊಲಾಬ್ ಆಡಿಯೋ ಮತ್ತು ವಿಡಿಯೋ ಸಿಂಕ್ ಮಾಡುವಿಕೆಯ ಸಂಕೀರ್ಣತೆಯನ್ನು ಸ್ವಯಂಚಾಲಿತಗೊಳಿಸುತ್ತದೆ. ಇದರಿಂದ ನೀವು ಇಷ್ಟಪಡುವ ಅಂತಿಮ ಸಂಯೋಜನೆಯನ್ನು ಸುಲಭವಾಗಿ ಉತ್ಪಾದಿಸಬಹುದು ಎಂದು ಫೇಸ್‌ಬುಕ್ ಎನ್‌ಪಿಇ ತಂಡ ಹೇಳಿದೆ. ಇನ್ನು ಈ ಆಪ್‌ ಬಳಸಲು ಯಾವುದೇ ಮ್ಯೂಸಿಕ್‌ ಟ್ರೆನಿಂಗ್‌ ಅಥವಾ ಅನುಭವದ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಇದಲ್ಲದೆ ಈ ಕೊಲಾಬ್ ರಚಿಸಲು, ನಿಮ್ಮ ಸಂಯೋಜನೆಯೊಂದಿಗೆ ಉತ್ತಮವಾಗಿ ಧ್ವನಿಸಬಹುದಾದ ಹೊಸ ವೀಡಿಯೊ ಕ್ಲಿಪ್ ಅನ್ನು ತರಲು ನೀವು ಯಾವುದೇ ಸಾಲಿನಲ್ಲಿ ಸ್ವೈಪ್ ಮಾಡಬೇಕಾಗುತ್ತದೆ.

ಕೊಲಾಬ್

ಇನ್ನು ಕೊಲಾಬ್ ಟಿಕ್‌ಟಾಕ್‌ನಂತೆಯೇ ಇದ್ದರೂ, ಇಲ್ಲಿ ಬಳಕೆದಾರರು ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ಮೂರು ವೀಡಿಯೊಗಳನ್ನು ಏಕಕಾಲದಲ್ಲಿ ಸಿಂಕ್ ಮಾಡಬಹುದು, ಇದರ ಪರಿಣಾಮವಾಗಿ ಅಂತಿಮ, ಲಂಬವಾಗಿ ಆಧಾರಿತ ವೀಡಿಯೊವನ್ನು ಹಂಚಿಕೊಳ್ಳಬಹುದು. ಮೇ ತಿಂಗಳಿನಿಂದ ಡಜನ್‌ ಗಟ್ಟಲೆ ಹೆಡ್‌ಸೆಟ್‌ಗಳು ಮತ್ತು ಹಾರ್ಡ್‌ವೇರ್ ಕಾನ್ಫಿಗರೇಶನ್‌ಗಳೊಂದಿಗೆ ಪರೀಕ್ಷಿಸಿದ ನಂತರ ಲೋಡ್ ಸೆಟಪ್‌ಗಳ ಅನುಭವವನ್ನು ಇದು ಅತ್ಯುತ್ತಮವಾಗಿಸಿದೆ ಎಂದು ಫೇಸ್‌ಬುಕ್ ಹೇಳಿದೆ.

ಅಪ್ಲಿಕೇಶನ್‌

ಟಿಕ್‌ಟಾಕ್‌ ಮಾದರಿಯ ಈ ಅಪ್ಲಿಕೇಶನ್‌ ಟಿಕ್‌ಟಾಕ್‌ಗಿಂತಲೂ ಉತ್ತಮವಾದ ಅನುಭವವನ್ನು ನೀಡಲಿದೆ. ಇನ್ನು ಈ ಅಪ್ಲಿಕೇಶನ್‌ನಲ್ಲಿ ಕೀಬೋರ್ಡ್‌ಗಳು, ಗಿಟಾರ್‌ಗಳು ಮತ್ತು ಡ್ರಮ್ ಕಿಟ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳಿಂದ ಮ್ಯೂಸಿಕ್‌ ಅನ್ನು ತಮ್ಮ ರೆಕಾರ್ಡಿಂಗ್‌ಗೆ ತರಲು ಬಳಕೆದಾರರು ಈಗ ಬಾಹ್ಯ ಆಡಿಯೊ ಇಂಟರ್ಫೇಸ್‌ಗಳನ್ನು ಸಹ ಬಳಸಬಹುದಾಗಿದೆ.

Most Read Articles
Best Mobiles in India

English summary
Collab’s public release includes improvements to the app, including audio syncing and the use of external audio interfaces.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X