ಫೇಸ್‌ಬುಕ್‌ ಗೇಮಿಂಗ್‌ ಅಪ್ಲಿಕೇಶನ್‌ ಪರಿಚಯಿಸಿದ ಫೇಸ್‌ಬುಕ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿರುವ ಫೇಸ್‌ಬುಕ್‌ ಐಓಎಸ್‌ನಲ್ಲಿ ಫೇಸ್‌ಬುಕ್‌ ಗೇಮಿಂಗ್‌ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಆದರೆ ಗೇಮ್‌ಗಳೇ ಇಲ್ಲ ಅಪ್‌ ಸ್ಟೋರ್‌ನಲ್ಲಿ ಫೇಸ್‌ಬುಕ್‌ ತನ್ನ ಗೇಮಿಂಗ್‌ ಅಪ್ಲಿಕೇಶನ್‌ ಪರಿಚಯಿಸಿರೋದು ವಿಶೇಷವಾಗಿದೆ. ಈ ಅಪ್ಲಿಕೇಶನ್ ಮುಖ್ಯವಾಗಿ ಸ್ಟ್ರೀಮರ್‌ಗಳು ವೀಡಿಯೊ ಗೇಮ್‌ಗಳನ್ನು ವೀಕ್ಷಿಸಲು ಉಪಯುಕ್ತವಾಗಲಿದೆ ಎಂದು ಹೇಳಲಾಗಿದೆ. ಅಲ್ಲದೆ ಇದು ಕೆಲವು ಮಿನಿ ಗೇಮ್‌ಗಳನ್ನ ಒಳಗೊಂಡಿರುವ ಸಾಧ್ಯತೆ ಇದೆ ಎಂದು ಸಹ ಹೇಳಲಾಗ್ತಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಐಓಎಸ್‌ನಲ್ಲಿ ಗೇಮಿಂಗ್‌ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಆದರೆ ಅಪಲ್‌ ಆಪ್ ನೀತಿ ಫೇಸ್‌ಬುಕ್‌ನ ಗೇಮಿಂಗ್‌ ಅಪ್ಲಿಕೇಶನ್‌ಗೆ ತೊಡಕಾಗಿದೆ. ಅಪಲ್‌ ಸ್ಟೋರ್ನಲ್ಲಿ ಅನುಮೋದನೆ ಪ್ರಕ್ರಿಯೆ ಪಡೆಯದೆ ಯಾವುದೇ ಅಪ್ಲಿಕೇಶನ್‌ ಅನ್ನು ಪರಿಚಯಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಅಪಲ್‌ ಫೇಸ್‌ಬುಕ್‌ನ ಗೇಮಿಂಗ್‌ ಅಪ್ಲಿಕೇಶನ್‌ ಅನ್ನು ತಿರಸ್ಕಾರ ಮಾಡಿದೆ. ಆದರೆ ಇದಕ್ಕೆ ಬದಲಾಗಿ ಫೇಸ್‌ಬುಕ್‌ ಸ್ವತಂತ್ರವಾದ ಫೇಸ್‌ಬುಕ್ ಗೇಮಿಂಗ್ ಅಪ್ಲಿಕೇಶನ್‌ ಅನ್ನು ಪ್ರಾರಂಭಿಸಿದೆ. ಇದು ಆಪಲ್‌ನ ಅನುಮೋದನೆ ಪಡೆಯಲು ಮತ್ತೊಮ್ಮೆ ಕಾತುರದಿಂದ ಕಾಯುತ್ತಿದೆ ಎನ್ನಲಾಗ್ತಿದೆ. ಫೇಸ್‌ಬುಕ್‌ ಗೇಮಿಂಗ್‌ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಪ್ಲಿಕೇಶನ್‌

ಸದ್ಯ ಆಪಲ್ ಈ ಸ್ವತಂತ್ರ ಅಪ್ಲಿಕೇಶನ್‌ ಅನ್ನು ಅನುಮತಿಸುತ್ತದೆಯೋ ಇಲ್ಲವೋ ಎನ್ನುವ ಪ್ರಶ್ನೆಗಳ ಹೊರತಾಗಿಯೂ, ಪ್ರತಿ ತಿಂಗಳು ಫೇಸ್‌ಬುಕ್‌ನಲ್ಲಿ ಗೇಮ್‌ಗಳನ್ನು ಆಡುವ ಸುಮಾರು 380 ಮಿಲಿಯನ್ ಜನರಿಗೆ ಒಂದು ಗೇಮಿಂಗ್‌ ಕಮ್ಯೂನಿಟಿ ನಿರ್ಮಿಸುವತ್ತ ಗಮನ ಹರಿಸಲಿದ್ದೇವೆ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ. ಅಲ್ಲದೆ ಈಗಾಗಲೇ ಕಳೆದ ಕೆಲವು ತಿಂಗಳುಗಳಿಂದ ಫೇಸ್‌ಬುಕ್ ಗೇಮಿಂಗ್ ಅಪ್ಲಿಕೇಶನ್ ಅನ್ನು ಆಪ್ ಸ್ಟೋರ್‌ನಿಂದ ಹಲವು ಬಾರಿ ತಿರಸ್ಕರಿಸಲಾಗಿದೆ. ಅಲ್ಲದೆ ಈ ರೀತಿ ತಿರಸ್ಕರಿಸಲು ಆಪಲ್ ಆಪ್ ಸ್ಟೋರ್ ಮಾರ್ಗಸೂಚಿ 4.7 ಅನ್ನು ಉಲ್ಲೇಖಿಸಿದೆ.

ಫೇಸ್‌ಬುಕ್

ಇನ್ನು ಫೇಸ್‌ಬುಕ್ ಗೇಮಿಂಗ್ ಅಪ್ಲಿಕೇಶನ್‌ನ ಪ್ರಾಥಮಿಕ ಉದ್ದೇಶವೆಂದರೆ ಗೇಮ್‌ಗಳನ್ನು ಆಡುವುದು, ಅವುಗಳನ್ನು ಉತ್ತೇಜಿಸುವುದು ಆಗಿದೆ. ಅಲ್ಲದೆ ಆಂಡ್ರಾಯ್ಡ್ ಫೇಸ್‌ಬುಕ್ ಗೇಮಿಂಗ್ ಅಪ್ಲಿಕೇಶನ್‌ನಿಂದ ಬಳಕೆಯ ಡೇಟಾವನ್ನು ಹಂಚಿಕೊಂಡಿದೆ ಎಂದು ಫೇಸ್‌ಬುಕ್ ಹೇಳಿದೆ. ಅದು ಅಪ್ಲಿಕೇಶನ್‌ನಲ್ಲಿ 95% ಚಟುವಟಿಕೆಗಳು ಸ್ಟ್ರೀಮ್‌ಗಳನ್ನು ವೀಕ್ಷಿಸುತ್ತಿದೆ ಎಂದು ತೋರಿಸಿದೆ. ಆದರೂ ಇದನ್ನ ಅಪಲ್‌ ಸಂಸ್ಥೆ ಒಪ್ಪುವುದಕ್ಕೆ ತಯಾರಿಲ್ಲ ಎನ್ನಲಾಗ್ತಿದೆ. ಇದಕ್ಕಾಗಿ ಈ ವರ್ಷ ಜೂನ್‌ನಲ್ಲಿ ನಡೆದ ವರ್ಲ್ಡ್ ವೈಡ್ ಡೆವಲಪರ್ಸ್ ಕಾನ್ಫರೆನ್ಸ್ ನಲ್ಲಿ ಆಪಲ್ ಮೇಲ್ಮನವಿ ಪ್ರಕ್ರಿಯೆಯನ್ನು ಅನಾವರಣಗೊಳಿಸಿತ್ತು ಆದರೆ ಫೇಸ್‌ಬುಕ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ ತನ್ನ ನಿಲುವನ್ನು ಬದಲಾಯಿಸಲು ಆಪಲ್‌ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ ಎನ್ನಲಾಗಿತ್ತು. ಆದರೆ ಇದರಲ್ಲಿ ವಿಫಲವಾಗಿದ್ದೇವೆ ಎಂದು ಫೇಸ್‌ಬುಕ್ ಹೇಳಿದೆ.

ಗೇಮಿಂಗ್‌

ಸದ್ಯ ಇದೀಗ ಐಒಎಸ್‌ನಲ್ಲಿ ಹಲವಾರು ವರ್ಷಗಳಿಂದ ಮುಖ್ಯ ಫೇಸ್ಬುಕ್ ಅಪ್ಲಿಕೇಶನ್ ಮತ್ತು ಮೆಸೆಂಜರ್‌ನಿಂದ ಇನ್ಸಟಂಟ್‌ ಗೇಮ್‌ಗಳನ್ನು ಹೂಳಲಾಗಿತ್ತು ಎಂದು ಫೇಸ್ಬುಕ್ ಗೇಮಿಂಗ್ ಮುಖ್ಯಸ್ಥ ವಿವೇಕ್ ಶರ್ಮಾ ಹೇಳಿದ್ದಾರೆ. ಆಪ್ ಸ್ಟೋರ್ ನೀತಿಗಳೊಂದಿಗಿನ ಈ ಸಮಸ್ಯೆಯು ಗೇಮಿಂಗ್‌ ಉದ್ಯಮಕ್ಕೆ ತೊಂದರೆ ನೀಡಲಿದೆ. ಅಲ್ಲದೆ ಬಳಕೆದಾರರ ಗೇಮಿಂಗ್‌ ಆಸಕ್ತಿಗೆ ಕೊಡಲಿ ಪೆಟ್ಟು ನೀಡುವ ಸಾದ್ಯತೆ ಇದೆ ಎನ್ನಲಾಗ್ತಿದೆ. ಅಲ್ಲದೆ ಕ್ಲೌಡ್ ಗೇಮಿಂಗ್‌ನಂತಹ ಇತರ ಸ್ವರೂಪಗಳಿಗೆ ಮೊಬೈಲ್‌ನಲ್ಲಿ ಹೊಸತನದ ಮೇಲೆ ಪರಿಣಾಮ ಬೀರುತ್ತದೆ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ.

Best Mobiles in India

English summary
Facebook is supremely unhappy with the months of rejection it has faced from the Apple App Store with the Facebook Gaming app and has had to give in and launch it without the mini games.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X