ಇನ್ಮುಂದೆ ಗೂಗಲ್, ಫೇಸ್‌ಬುಕ್‌ನಲ್ಲಿ ಇದನ್ನು ಸರ್ಚ್ ಮಾಡುದ್ರೆ ಜೈಲು ಖಚಿತ!!

|

ಮಕ್ಕಳ ಮೇಲಿನ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ತಡೆಗೆ ತಂತ್ರಜ್ಞಾನ ದಿಗ್ಗಜ ಕಂಪೆನಿಗಳಾದ ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್ ಮತ್ತು ಯಾಹೂ ಸಂಸ್ಥೆಗಳು ಹೋರಾಟಕ್ಕಿಳಿದಿವೆ. ಇನ್ಮುಂದೆ ಸಾಮಾಜಿಕ ತಾಣ ಅಥವಾ ಸರ್ಚ್ ಇಂಜಿನ್‌ಗಳಲ್ಲಿ ಚೈಲ್ಡ್ ಪೋರ್ನ್ ಕುರಿತಾದ ಕೀವರ್ಡ್‌ಗಳನ್ನು ಸರ್ಚ್ ಮಾಡಿದರೆ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ಕಾಣಿಸಿಕೊಳ್ಳುತ್ತದೆ.

ಹೌದು, ಫೇಸ್‌ಬುಕ್, ಗೂಗಲ್, ಮೈಕ್ರೋಸಾಫ್ಟ್ ಮತ್ತು ಯಾಹೂ ಸಂಸ್ಥೆಗಳು ಸಾಮಾಜಿಕ ತಾಣ ಮತ್ತು ಸರ್ಚ್ ಇಂಜಿನ್‌ಗಳಲ್ಲಿ ಚೈಲ್ಡ್‌ ಪೋರ್ನ್‌ ಕುರಿತಾದ ಕೀವರ್ಡ್‌ಗಳನ್ನು ಬ್ಲಾಕ್ ಮಾಡಿವೆ. ಈ ಬ್ಲಾಕ್ ಮಾಡಿದ ಕೀವರ್ಡ್‌ಗಳ ಮೂಲಕ ಚೈಲ್ಡ್ ಪೋರ್ನ್ ಕುರಿತು ಬಳಕೆದಾರರು ಏನಾದರೂ ಸರ್ಚ್ ಮಾಡಿದರೆ, ಪೇಜ್‌ನಲ್ಲಿ ಎಚ್ಚರಿಕೆಯ ಸಂದೇಶ ಕಾಣಿಸಿಕೊಳ್ಳುತ್ತದೆ.

ಇನ್ಮುಂದೆ ಗೂಗಲ್, ಫೇಸ್‌ಬುಕ್‌ನಲ್ಲಿ ಇದನ್ನು ಸರ್ಚ್ ಮಾಡುದ್ರೆ ಜೈಲು ಖಚಿತ!!

ಸರ್ಚ್ ಮಾಡಿದಾಗ ಕಾಣಿಸಿಕೊಳ್ಳುವ ಎಚ್ಚರಿಕೆಯ ಸಂದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧದ ಕಾನೂನು, ಕಾಯ್ದೆ ಮತ್ತು ಸೂಕ್ತ ಕ್ರಮದ ಕುರಿತು ಕೂಡ ಹೋಮ್ ಪೇಜಿನಲ್ಲೇ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಚೈಲ್ಡ್ ಪೋರ್ನ್ ಕುರಿತು ಮುಂದುವರೆದು ಯಾವುದೇ ರೀತಿಯಲ್ಲಿ ಸರ್ಚ್ ಮಾಡುತ್ತಿದ್ದರೆ ಅದು ಕಾನೂನು ರೀತಿ ಅಪರಾಧವಾಗಲಿದೆ.

ಬಳಕೆದಾರರು ವಿವಿಧ ರೀತಿಯ ಸರ್ಚ್ ಕೀ ವರ್ಡ್ ಬಳಸಿ ಚೈಲ್ಡ್ ಪೋರ್ನ್ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ. ಈವರೆಗೆ 100 ಅಂತಹ ಕೀವರ್ಡ್‌ಗಳನ್ನು ಪಟ್ಟಿ ಮಾಡಿರುವ ಸಚಿವಾಲಯ ಅವುಗಳನ್ನು ಇಂಟರ್‌ನೆಟ್ ಸಂಸ್ಥೆಗಳಿಗೆ ಒದಗಿಸಿದೆ. ಅದರ ಶಿಫಾರಸಿನ ಅನ್ವಯ ಟೆಕ್ ದೈತ್ಯಗಳು ಪೋರ್ನ್ ಕುರಿತ ಮಾಹಿತಿಯನ್ನು ಬ್ಲಾಕ್ ಮಾಡಿ, ಹಂತಹಂತವಾಗಿ ತೆಗೆದುಹಾಕುತ್ತಿವೆ.

ಇನ್ಮುಂದೆ ಗೂಗಲ್, ಫೇಸ್‌ಬುಕ್‌ನಲ್ಲಿ ಇದನ್ನು ಸರ್ಚ್ ಮಾಡುದ್ರೆ ಜೈಲು ಖಚಿತ!!

ಈಗಾಗಲೇ ಪಟ್ಟಿ ಮಾಡಿರುವ ಕೀವರ್ಡ್ ಹೊರತಾಗಿ ಮತ್ತೆ ಹೊಸ ಕೀವರ್ಡ್ ಮೂಲಕ ಬಳಕೆದಾರರು ಚೈಲ್ಡ್‌ ಪೋರ್ನ್ ಕುರಿತು ಹುಡುಕಾಟ ನಡೆಸಿದರೆ, ಅದನ್ನು ಪತ್ತೆಹಚ್ಚಿ ಬ್ಲಾಕ್ ಮಾಡಲು ಸರಕಾರದ ಸೂಚನೆಯಂತೆ ಸಂಸ್ಥೆಗಳು ಈಗಾಗಲೇ ಕಾರ್ಯಪ್ರವೃತ್ತವಾಗಿವೆ. ಹಾಗಾಗಿ, ಇನ್ಮುಂದೆ ಗೂಗಲ್, ಫೇಸ್‌ಬುಕ್‌ ಸೇರಿದಂತೆ ಎಲ್ಲಿಯೂ ಈ ಬಗ್ಗೆ ಎಚ್ಚರಿಕೆ ಇದ್ದರೆ ಒಳಿತು.

Best Mobiles in India

English summary
Internet giants Facebook, Google, Microsoft, and Yahoo have just started blocking “hundreds” of search keywords on their search engines that are related to child porn and sexual violence in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X