8 ಗಂಟೆಗಳ ಕಾಲ ಫೇಸ್‌ಬುಕ್, ಇನ್‌ಸ್ಟಾ ಡೌನ್‌ ಆಗಲು ಕಾರಣ ಏನು ಗೊತ್ತಾ?

|

ಜಗತ್ತಿನಾದ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂಗಳ ಬಳಕೆದಾರರು ಲಾಗಿನ್ ಮತ್ತು ಇನ್ನಿತರ ಸಮಸ್ಯೆಗಳನ್ನು ಅನುಭವಿಸಿದ್ದಕ್ಕೆ ಫೇಸ್‌ಬುಕ್ ಸಂಸ್ಥೆ ವಿಷಾದ ವ್ಯಕ್ತಪಡಿಸಿದೆ. ಇಡೀ ಜಗತ್ತಿನೆಲ್ಲೆಡೆ ಈ ಎರಡೂ ಜಾಲತಾಣಗಳ ಕಾರ್ಯ ನಿಧಾನಗೊಂಡಿದ್ದು, 'ಫೇಸ್​ಬುಕ್ ವಿಲ್ ಬಿ ಬ್ಯಾಕ್​ ಸೂನ್​' ಎಂಬ ಮೆಸೇಜ್ ಮೊಬೈಲ್ ಅಥವಾ ಕಂಪ್ಯೂಟರ್​ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನು ಎಂಬುದು ಇದೀಗ ತಿಳಿದುಬಂದಿದೆ.

ಫೇಸ್‌ಬುಕ್ ಮತ್ತು ಇನ್​ಸ್ಟಾಗ್ರಾಂ ಖಾತೆಗಳಿಗೆ ಲಾಗಿನ್ ಆಗದಂತಹ ಸಮಸ್ಯೆ ಬಗ್ಗೆ ಮಾತನಾಡಿರುವ ಸಂಸ್ಥೆ, ನಮಗೆ ಸಮಸ್ಯೆ ಬಗ್ಗೆ ಅರಿವಿದ್ದು, ಕೆಲ ನಿರ್ವಹಣಾ ಕಾರ್ಯಗಳಿಗಾಗಿ ಫೇಸ್‌ಬುಕ್ ಸಂಪರ್ಕವನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ. ಆದರೆ, ಕೆಲವೇ ಕ್ಷಣಗಳಲ್ಲಿ ಫೇಸ್​ಬುಕ್ ತಾಣದಲ್ಲಿನ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ನಿಮ್ಮ ತಾಳ್ಮೆಗೆ ಧನ್ಯವಾದ ಎಂದು ಕಂಪೆನಿ ತನ್ನ ಅಧಿಕೃತ ವೆಬ್​ಸೈಟ್​ನ ಸಂದೇಶದಲ್ಲಿ ಹೇಳಿಕೊಂಡಿದೆ.

 8 ಗಂಟೆಗಳ ಕಾಲ ಫೇಸ್‌ಬುಕ್, ಇನ್‌ಸ್ಟಾ ಡೌನ್‌ ಆಗಲು ಕಾರಣ ಏನು ಗೊತ್ತಾ?

ಇದೇ ಮೊದಲ ಬಾರಿಗೆ ಜನಪ್ರಿಯ ಸಾಮಾಜಿಕ ಮಾಧ್ಯಮ ದೀರ್ಘಕಾಲದ ವರೆಗೂ ಸ್ಥಗಿತಗೊಂಡಿದ್ದು, ಬುಧವಾರ ರಾತ್ರಿಯಿಂದ ಕಾಣಿಸಿಕೊಂಡಿರುವ ಈ ಸಮಸ್ಯೆ ಎಂಟು ಗಂಟಗಳನ್ನು ಮೀರಿರುವುದು ಆಶ್ಚರ್ಯವಾಗಿದೆ. ಹೀಗೆ ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂಗಳು ಹೆಚ್ಚು ಸಮಯ ಡೌನ್ ಆಗಿರುವ ಬಗ್ಗೆ ಮತ್ತೊಂದು ಸ್ಪಷ್ಟನೆ ನೀಡಿರುವ ಸಂಸ್ಥೆ, 'ಇದು ಸಂಪರ್ಕ ಸೇವೆಯನ್ನು ಸ್ಥಗಿತಗೊಳಿಸಲು ನಡೆದಿರುವ ದಾಳಿಗೆ ಸಂಬಂಧಿಸಿಲ್ಲ' ಎಂಬುದನ್ನು ಸಹ ಸ್ಪಷ್ಟಪಡಿಸಿದೆ.

ಫೇಸ್​ಬುಕ್ ಮತ್ತು ಇನ್​ಸ್ಟಾಗ್ರಾಂ ಪೇಜ್​ ಓಪನ್​ ಆಗುತ್ತಿದೆ. ಆದರೆ, ಕಳೆದ 8 ಗಂಟೆಗಳಿಂದ ಫೋಟೋ ಅಪ್​ಲೋಡ್​ ಮಾಡಲು, ಸ್ಟೇಟಸ್ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ. ವಾಟ್ಸ್ಆಪ್‌ನಲ್ಲಿಯೂ ಕೂಡ ವಾಯ್ಸ್‌ನೋಟ್‌ನಂತಹ ಕೆಲವು ಆಯ್ಕೆಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹಲವು ಬಳಕೆದಾರರು ಹೇಳಿದ್ದಾರೆ. ಹೀಗೆ ಫೇಸ್‌ಬುಕ್ ತನ್ನ ಕಾರ್ಯ ನಿರ್ವಹಿಸದೇ ಇರುವುದಕ್ಕೆ ಟ್ವಿಟ್ಟರ್‌ನಲ್ಲಂತೂ ಬಾರೀ ಟ್ರೋಲ್ ಮಾಡಲಾಗಿದೆ.

 8 ಗಂಟೆಗಳ ಕಾಲ ಫೇಸ್‌ಬುಕ್, ಇನ್‌ಸ್ಟಾ ಡೌನ್‌ ಆಗಲು ಕಾರಣ ಏನು ಗೊತ್ತಾ?

ಈ ಮೊದಲು ಜಿ-ಮೇಲ್ ಮತ್ತು ಗೂಗಲ್​ ಮ್ಯಾಪ್ ಸೇರಿದಂತೆ ಇತರೆ ಅಪ್ಲಿಕೇಷನ್​ಗಳು ಸಹ ಇದೇರೀತಿ ತಾಂತ್ರಿಕ ತೊಂದರೆಯನ್ನು ಎದುರಿಸಿದ್ದವು. ಲಾಗಿನ್, ಲಾಗೌಟ್​ನಂತಹ ಸಮಸ್ಯೆ ಜಗತ್ತಿನ ಅತಿಹೆಚ್ಚು ಬಳಕೆದಾರರಿರುವ ಜಿ-ಮೇಲ್​ನಲ್ಲಿ ಕಾಣಿಸಿಕೊಂಡಿತ್ತು. ಇದರಿಂದಾಗಿ ಜಿ-ಮೇಲ್ ಬಳಕೆದಾರರು ಈ ಬಗ್ಗೆ ದೂರನ್ನೂ ನೀಡಿದ್ದರು. ಆದರೆ, ಫೇಸ್‌ಬುಕ್ ಡೌನ್ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಕೂಡ ಇದೇ ರೀತಿಯ ಸಮಸ್ಯೆಯನ್ನು ಫೇಸ್‌ಬುಕ್ ಎದುರಿಸಿದ್ದನ್ನು ನೀವು ನೋಡಬಹುದು.

Best Mobiles in India

English summary
Facebook has been down for hours, Instagram and WhatsApp also affected.Facebook users worldwide reported issues loading its family of apps Wednesday, according to the website Downdetector. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X