ಫೇಸ್‌ಬುಕ್ ಮಾಲಿಕನ ರಾಜಿನಾಮೆಗೆ ಒತ್ತಾಯ!..ಮಾರ್ಕ್ ಆಳ್ವಿಕೆ ಬಹುತೇಕ ಅಂತ್ಯ?

|

ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣವನ್ನು ಸ್ಥಾಪಸಿ ಅದನ್ನು ಇಲ್ಲಿಯವರೆಗೂ ಯಶಸ್ವಿಯಾಗಿ ಮುನ್ನೆಡಿಸಿಕೊಂಡು ಬಂದಿರುವ ಮಾರ್ಕ್‌ ಝುಕರ್‌ಬರ್ಗ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಫೇಸ್‌ಬುಕ್ ಮುಖ್ಯಸ್ಥ ಸ್ಥಾನದಿಂದ ಮಾರ್ಕ್ ಝುಕರ್‌ಬರ್ಗ್ ಕೆಳಗಿಳಿಯಬೇಕು ಎಂದು ಕಂಪನಿಯ ಷೇರುದಾರರು ಒತ್ತಾಯಿಸಿದ್ದಾರೆ ಎಂಬ ಶಾಕಿಂಗ್ ಸುದ್ದಿ ಹೊರಬಿದ್ದಿದೆ.

ಕೇಂಬ್ರಿಜ್ ಅನಲಿಟಿಕಾ ಹಗರಣದಲ್ಲಿ ಫೇಸ್‌ಬುಕ್ ಮೇಲಿನ ಅಪಖ್ಯಾತಿ ಹೋಗಲಾಡಿಸಲು ಮತ್ತು ಪ್ರತಿಸ್ಪರ್ಧಿಗಳ ವಿರುದ್ಧ ಜನಾಭಿಪ್ರಾಯ ಮೂಡಿಸಲು ಮಾರ್ಕ್ ಅವರು ಸಾರ್ವಜನಿಕ ಸಂಪರ್ಕ ಸಂಸ್ಥೆಗಳ ಜತೆ ಕೈಜೋಡಿಸಿದ್ದಾರೆ ಎಂದು ಕೆಲವು ಪತ್ರಿಕೆಗಳು ವರದಿ ಪ್ರಕಟಿಸಿದ ಬೆನ್ನಲ್ಲೇ ಈ ಒತ್ತಾಯ ಕೇಳಿಬಂದಿದೆ. ಇದು ಮಾರ್ಕ್‌ಗೆ ನುಂಗಲಾರದ ತುತ್ತಾಗಿದೆ ಎಂದು ಹೇಳಲಾಗಿದೆ.

ಫೇಸ್‌ಬುಕ್ ಮಾಲಿಕನ ರಾಜಿನಾಮೆಗೆ ಒತ್ತಾಯ!..ಮಾರ್ಕ್ ಆಳ್ವಿಕೆ ಬಹುತೇಕ ಅಂತ್ಯ?

ತನ್ನನ್ನು ಬಿಟ್ಟರೆ ಮತ್ಯಾರೂ ಇಲ್ಲ ಎಂಬಂತೆ ಫೇಸ್‌ಬುಕ್‌ ವರ್ತಿಸುತ್ತಿದೆ. ಅದು ನಿಜವಲ್ಲ. ಸಿಇಒ ಮತ್ತು ಮುಖ್ಯಸ್ಥನ ಹುದ್ದೆಯಲ್ಲಿ ಒಬ್ಬರೇ ಇರಬಾರದು' ಎಂದು ಫೇಸ್‌ಬುಕ್‌ನಲ್ಲಿನ ಎರಡನೇ ಅತ್ಯಂತ ದೊಡ್ಡ ಷೇರುದಾರರಾಗಿರುವ ಜೋನಸ್ ಕ್ರೋನ್ ಆಗ್ರಹಿಸಿದ್ದಾರೆ. ಇನ್ನುಳಿದ ಬಹುಪಾಲು ದೊಡ್ಡ ಷೇರುದಾರರು ಕೂಡ ಮಾರ್ಕ್ ತಲೆದಂಡಕ್ಕೆ ಸಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚಿನ ಕೇಂಬ್ರಿಡ್ಜ್ ಅನಾಲಿಟಿಕ ಹಗರಣದಲ್ಲಿ ಫೇಸ್‌ಬುಕ್‌ ವಿರುದ್ಧದ ಟೀಕೆಗಳನ್ನು ಸುಳ್ಳೆಂದು ಸಮರ್ಥಿಸಿಕೊಳ್ಳಲು ಮತ್ತು ಪ್ರತಿಸ್ಪರ್ಧಿ ಉದ್ಯಮಿ ಜಾರ್ಜ್ ಸೋರೋಸ್ ಈ ಟೀಕೆಗಳನ್ನು ಮಾಡಿಸುತ್ತಿದ್ದಾರೆ ಎಂದು ಬಿಂಬಿಸಲು ಮಾರ್ಕ್‌ ಝುಕರ್‌ಬರ್ಗ್ ಸಾರ್ವಜನಿಕ ಸಂಪರ್ಕ ಕಂಪನಿಗಳನ್ನು ನೇಮಿಸಿಕೊಂಡಿದ್ದಾರೆ' ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿತ್ತು.

ಫೇಸ್‌ಬುಕ್ ಮಾಲಿಕನ ರಾಜಿನಾಮೆಗೆ ಒತ್ತಾಯ!..ಮಾರ್ಕ್ ಆಳ್ವಿಕೆ ಬಹುತೇಕ ಅಂತ್ಯ?

ಇನ್ನು ಇಂತಹ ಹಲವು ದುರ್ಘಟನೆಗಳು ನಡೆದ ನಂತರವೂ ಫೇಸ್‌ಬುಕ್‌ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಜನರು ಈಗಲೂ ಫೇಸ್‌ಬುಕ್‌ ಮೇಲೆ ಶ್ವಾಸವನ್ನು ಹೊಂದಿದ್ದಾರೆ ಎಂದು ವರದಿಯೊಂದು ಹೇಳುತ್ತಿದೆ. ತನ್ನ ಬಳಕೆದಾರರಿಗೆ ಫೇಸ್‌ಬುಕ್ ಹಲವು ನಂಬಿಕೆ ದ್ರೋಹಗಳನ್ನು ಎಸಗಿದರೂ ಜನರು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಈ ವರದಿ ಅಭಿಪ್ರಾಯಪಟ್ಟಿದೆ.

Most Read Articles
Best Mobiles in India

English summary
Facebook investors have increased pressure on Chairman and CEO Mark Zuckerberg to step down after a New York Times investigation suggested that the social network hired a Republican-owned political consulting and PR firm that "dug up dirt on its competitors".to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more