ಶಾಕಿಂಗ್ ನ್ಯೂಸ್!..ಫೇಸ್‌ಬುಕ್​​ನಲ್ಲಿ ಖಾಸಗಿ ಮೆಸೇಜ್ ಕಳಿಸುವ ಮೊದಲು ಹುಷಾರ್​​!

|

ನಿಮ್ಮ ಫೇಸ್‌ಬುಕ್ ಖಾತೆಯನ್ನು ನೀವು ಸರಿಯಾಗಿ ನಿರ್ವಹಣೆ ಮಾಡದಿದ್ದ ಪಕ್ಷದಲ್ಲಿ ನಿಮ್ಮ ಖಾತೆ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುವ ಸಂಭವ ಇದೀಗ ಹೆಚ್ಚಿದೆ. ಏಕೆಂದರೆ, ಪ್ರತಿದಿನ 10 ಲಕ್ಷಕ್ಕೂ ಅಧಿಕ ಫೇಸ್​ಬುಕ್ ಖಾತೆಗಳು ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತಿದ್ದು, ಅನ್ಯರಿಗೆ ಫೇಸ್‌ಬುಕ್‌ನಲ್ಲಿ ಖಾಸಗಿ ಮೆಸೇಜ್ ಕಳಿಸುವುದು ಸೇರಿದಂತೆ, ಈ ರೀತಿಯ ಹಲವು ತಪ್ಪುಗಳು ನಿಮ್ಮನ್ನು ಬ್ಲಾಕ್ ಮಾಡುವಂತೆ ಮಾಡಬಹುದು.

ಹೌದು, ಇತ್ತೀಚಿನ ದಿನಗಳಲ್ಲಿ ಫೇಸ್​ಬುಕ್ ನಕಲಿ ಖಾತೆಗಳು ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ಫೇಸ್‌ಬುಕ್ ಇಂತಹ ಖಾತೆಗಳನ್ನು ಗುರುತಿಸಿ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದೆ. ಈ ವೇಳೆಯಲ್ಲಿ ನಿಮ್ಮ ಅಧಿಕೃತ ಖಾತೆಯಿಂದಲೂ ಕೆಲವೊಂದು ತಪ್ಪುಗಳ ನಡೆದರೆ, ಇಂತಹ ಖಾತೆಗಳನ್ನು ಸಹ ಫೇಸ್‌ಬುಕ್ ನಕಲಿ ಖಾತೆಯೆಂದು ಪರಿಗಣಿಸಿ ಅದನ್ನು ಡಿಲೀಟ್ ಮಾಡಲಿದೆ. ಇದಕ್ಕೆ ಕೃತಕ ಬುದ್ದಿಮತ್ತೆ ಸಹಾಯ ಪಡೆಯಲಾಗುತ್ತಿದೆ.

ಶಾಕಿಂಗ್ ನ್ಯೂಸ್!..ಫೇಸ್‌ಬುಕ್​​ನಲ್ಲಿ ಖಾಸಗಿ ಮೆಸೇಜ್ ಕಳಿಸುವ ಮೊದಲು ಹುಷಾರ್​​!

ಹಾಗಾಗಿ, ಫೇಸ್‌ಬುಕ್‌ನಲ್ಲಿ ನಿರ್ಬಂಧಿತವಾಗಿರುವ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ನಿಮ್ಮ ಖಾತೆಯನ್ನು ಡಿಲೀಟ್ ಮಾಡಬಹುದು ಅಥವಾ ಕೆಲ ಕಾಲದವರೆಗೆ ನಿರ್ಬಂಧಿಸಬಹುದು ಎಂದು ತಿಳಿಸಲಾಗಿದೆ. ಹಾಗಾದರೆ, ಫೇಸ್‌ಬುಕ್‌ನಲ್ಲಿ ನಿರ್ಬಂಧಿತವಾಗಿರುವ ಚಟುವಟಿಕೆಗಳು ಯಾವುವು?, ಫೇಸ್​ಬುಕ್ ಆರಂಭಿಸಿರುವ ಪಾರದರ್ಶಕತೆ ಪಟ್ಟಿಯಲ್ಲಿರುವಂತೆ ನಿಮ್ಮ ಅಧಿಕೃತ ಖಾತೆಯಿಂದಲೂ ಆಗಲೇಬಾರದ ತಪ್ಪುಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ನಕಲಿ ಫೇಸ್​ಬುಕ್ ಖಾತೆ ಪತ್ತೆ ಹೇಗೆ?

ನಕಲಿ ಫೇಸ್​ಬುಕ್ ಖಾತೆ ಪತ್ತೆ ಹೇಗೆ?

ಅರ್ಟಿಫಿಶಿಯಲ್ ಮತ್ತು ಮೆಶಿನ್ ಲರ್ನಿಂಗ್ ಸಹಾಯದಿಂದ ನಕಲಿ ಫೇಸ್​ಬುಕ್ ಖಾತೆಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಫೇಸ್‌ಬುಕ್ ತಿಳಿಸಿದ್ದು, AI ಮತ್ತು MI ತಂತ್ರಜ್ಞಾನ ತಂಡಗಳ ಸಹಾಯದೊಂದಿಗೆ ನಕಲಿ ಸುದ್ದಿ, ಸುಳ್ಳು ಸುದ್ದಿ ಮತ್ತು ದ್ವೇಷ ಪೂರಿತ ಸುದ್ದಿ ಹರಡುವಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಫೇಸ್‌ಬುಕ್ ಅಧಿಕಾರಿಗಳು ಹೇಳಿದ್ದಾರೆ.

ನಕಲಿ ಸುದ್ದಿ ಅಥವಾ ದ್ವೇಷ ಭಾಷಣ ನಿಯಮಗಳು

ನಕಲಿ ಸುದ್ದಿ ಅಥವಾ ದ್ವೇಷ ಭಾಷಣ ನಿಯಮಗಳು

ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುವ ಪ್ರತಿಯೊಂದು ಫೋಟೊ, ವಿಡಿಯೋ ಅಥವಾ ಬರಹವನ್ನೂ ಪರಿಶೀಲಿಸಿ, ಅದು ನಕಲಿ ಸುದ್ದಿ ಅಥವಾ ದ್ವೇಷ ಭಾಷಣ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂದು ನೋಡಲಾಗುತ್ತದೆ. ಇದಕ್ಕಾಗಿಯೇ ವಿಶ್ವಾದ್ಯಂತ 30,000 ಸಿಬ್ಬಂದಿ 40 ತಂಡಗಳಲ್ಲಿ ಹಗಲಿರುಳು ಕಾರ್ಯನಿರತರಾಗಿದ್ದಾರೆ. ನುರಿತ ತಜ್ಞರನ್ನು ಈ ತಂಡಗಳು ಒಳಗೊಂಡಿವೆ.

ಅನ್ಯರಿಗೆ ಖಾಸಗಿ ಮೆಸೇಜ್ ಕಳಿಸುವಂತಿಲ್ಲ!

ಅನ್ಯರಿಗೆ ಖಾಸಗಿ ಮೆಸೇಜ್ ಕಳಿಸುವಂತಿಲ್ಲ!

ಸಾಮಾಜಿಕ ಜಾಲತಾಣದ ದೈತ್ಯ ಫೇಸ್​ಬುಕ್​ ತನ್ನ ಬಳಕೆದಾರರ ನಿಯಂತ್ರಣಕ್ಕೆ ಮುಂದಾಗಿದ್ದು, ಅನ್ಯರಿಗೆ ಖಾಸಗಿ ಮೆಸೇಜ್ ಕಳಿಸುವಂತಹ ಖಾತೆಗಳಿಗೆ ಬೀಗ ಹಾಕಲು ಮುಂದಾಗಿದೆ. ಈಗಿನ ಚುನಾವಣಾ ಪ್ರಚಾರಕ್ಕಾಗಿ ಅಥವಾ ಇತರೆ ಯಾವುದೇ ಉದ್ದೇಶದಿಂದ ಅನ್ಯರಿಗೆ ಅನಿಯಂತ್ರಿತ ಖಾಸಾಗಿ ಮೆಸೇಜ್‌ಗಳನ್ನು ಕಳುಹಿಸುವ ಫೇಸ್‌ಬುಕ್ ಖಾತೆಗಳು ಡಿಲೀಟ್ ಆಗಲಿವೆ.

ಖಾತೆದಾರರ 'ವರ್ತನೆ' ಗಮನಕ್ಕೆ!

ಖಾತೆದಾರರ 'ವರ್ತನೆ' ಗಮನಕ್ಕೆ!

ಫೇಸ್‌ಬುಕ್ ಖಾತೆ ಮತ್ತು ಪುಟಗಳನ್ನು ಡಿಲೀಟ್‌ ಮಾಡುವಾಗ ವಿಷಯಕ್ಕಿಂತಲೂ ಖಾತೆದಾರರ 'ವರ್ತನೆ'ಯನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಫೇಸ್‌ಬುಕ್‌ ಹೇಳಿದೆ. ರಾಜಕೀಯ ಟೀಕೆಗೆ ನಕಲಿ ಖಾತೆಗಳನ್ನು ಬಳಸಿದ್ದನ್ನು ಎಫ್‌ಬಿ ಆಕ್ಷೇಪಿಸಿದೆ. ಕೃತಕ ಬುದ್ದಿಮತ್ತೆಯಿಂದ ಖಾತೆದಾರರ 'ವರ್ತನೆ' ಗಮನಕ್ಕೆ ತೆಡಗೆದುಕೊಂಡು ಆ ಖಾತೆಯನ್ನು ಡಿಲೀಟ್ ಮಾಡಲಿದೆ.

ಚುನಾವಣೆ ಪಾರದರ್ಶಕತೆಗೆ ತೊಡಕಾದ ಖಾತೆಗಳು!

ಚುನಾವಣೆ ಪಾರದರ್ಶಕತೆಗೆ ತೊಡಕಾದ ಖಾತೆಗಳು!

ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗುವ 18 ತಿಂಗಳ ಮೊದಲೇ ಸರ್ಕಾರ ಫೇಸ್​ಬುಕ್ ಅನ್ನು ನಿಯಂತ್ರಿಸಲು ಮುಂದಾಗಿದ್ದರಿಂದ, ಫೇಸ್‌ಬುಕ್ ಸಂಸ್ಥೆ ಇದೀಗ ಮತ್ತಷ್ಟು ಭದ್ರತಾ ಕ್ರಮಗಳನ್ನು ಅನುಸರಿದೆ. ದೇಶದ ಚುನಾವಣೆ ಪಾರದರ್ಶಕತೆಯಿಂದ ನಡೆಯುವಂತಹ ಚುನಾವಣಾ ಸಂಸ್ಥೆಯ ಕಾರ್ಯಕ್ಕೆ ತೊಡಕಾದ ಫೇಸ್‌ಬುಕ್ ಖಾತೆಗಳಿಗೆ ಗೇಟ್‌ಪಾಸ್ ನೀಡಲಾಗುತ್ತಿದೆ.

Best Mobiles in India

English summary
Facebook is removing 1 million abusive accounts a day as it gears up for Indian elections . to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X