ವೀಡಿಯೋ ಡೇಟಿಂಗ್‌ ಅಪ್ಲಿಕೇಶನ್‌ ಪರಿಚಯಿಸಲು ಫೇಸ್‌ಬುಕ್‌ ಸಿದ್ಧತೆ!

|

ಇತ್ತೀಚಿನ ದಿನಗಳಲ್ಲಿ ಚಾಟಿಂಗ್ ಆಪ್ಸ್‌ಗಳ ಮಾದರಿಯಲ್ಲಿಯೇ ಡೇಟಿಂಗ್‌ ಅಪ್ಲಿಕೇಶನ್‌ಗಳು ಕೂಡ ಸಾಕಷ್ಟು ಮುಂಚೂಣಿಯಲ್ಲಿವೆ. ಬಳಕೆದಾರರು ತಮ್ಮ ಭಾವನೆ ಮತ್ತು ಅಭಿರುಚಿಗಳಿಗೆ ಸರಿ ಹೊಂದುವಂತಹ ಆಪ್ತರನ್ನು ಹುಡಕಲು ಡೇಟಿಂಗ್ ಆಪ್‌ಗಳ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಅನೇಕ ಡೇಟಿಂಗ್ ಆಪ್‌ಗಳು ಲಭ್ಯವಿದ್ದು, ಯುವಜನತೆ ಡೇಟಿಂಗ್ ಆಪ್‌ಗಳತ್ತ ಹೆಚ್ಚು ವಾಲುತ್ತಿದೆ. ಇದೀಗ ಸೊಶೀಯಲ್‌ ಮೀಡಿಯಾ ದೈತ್ಯ ಫೇಸ್‌ಬುಕ್‌ ಕೂಡ ಹೊಸ ಡೇಟಿಂಗ್‌ ಅಪ್ಲಿಕೇಶನ್‌ ಪರಿಚಯಿಸಲು ಮುಂದಾಗಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಜನರ ಡೇಟಿಂಗ್‌ ಅಭಿರುಚಿಯನ್ನು ಇನ್ನಷ್ಟು ಇಮ್ಮಡಿಗೊಳಿಸಲು ಹೊಸ ಮಾದರಿಯಲ್ಲಿ ಡೇಟಿಂಗ್‌ ಅಪ್ಲಿಕೇಶನ್‌ ಪರಿಚಯಿಸಲು ಮುಂದಾಗಿದೆ. ಸದ್ಯ ಫೇಸ್‌ಬುಕ್‌ ಸ್ಪಾರ್ಕ್ಡ್‌ ಎಂಬ ಹೊಸ ಡೇಟಿಂಗ್‌ ಅಪ್ಲಿಕೇಶನ್‌ ಅನ್ನು ಪರೀಕ್ಷಿಸುತ್ತಿದೆ. ಇದನ್ನು ಅದರ ಎನ್‌ಪಿಇ ತಂಡ ಅಭಿವೃದ್ಧಿಪಡಿಸಿದೆ. ತಂಡವು ಫೇಸ್‌ಬುಕ್‌ನ ಪ್ರಾಯೋಗಿಕ ಅಪ್ಲಿಕೇಶನ್‌ಗಳನ್ನು ನೋಡಿಕೊಳ್ಳುತ್ತಿದೆ. ಹಾಗಾದ್ರೆ ಫೇಸ್‌ಬುಕ್‌ನ ಸ್ಪಾರ್ಕ್ಡ್‌ ಅಪ್ಲಿಕೇಶನ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡೇಟಿಂಗ್

ಮಾರ್ಕ್ ಜುಕರ್‌ಬರ್ಗ್ ಒಡೆತನದ ಪ್ಲಾಟ್‌ಫಾರ್ಮ್ 2019 ರಲ್ಲಿಯೇ ಫೇಸ್‌ಬುಕ್ ಡೇಟಿಂಗ್ ಅಪ್ಲಿಕೇಶನ್‌ ಅನ್ನು ಪ್ರಾರಂಭಿಸಿತ್ತು. ಇದೀಗ ಎರಡೇ ಡೇಟಿಂಗ್‌ ಅಪ್ಲಿಕೇಶನ್‌ ಪರಿಚಯಿಸುತ್ತಿದ್ದು, ಇದು ವೀಡಿಯೊ ಡೇಟಿಂಗ್‌ ನಡೆಸಲು ಅವಕಾಶ ನೀಡಲಿದೆ. ಈಗಗಲೇ ಪರಿಚಯಿಸಿರುವ ಫೆಸ್‌ಬುಕ್‌ ಡೇಟಿಂಗ್‌ ಅಪ್ಲಿಕೇಶಸನ್‌ ಯುಎಸ್‌ನಲ್ಲಿ ಲಭ್ಯವಿದೆ. ದರೆ ಭಾರತದಲ್ಲಿ ಇನ್ನೂ ಲಭ್ಯವಾಗಿಲ್ಲ. ಈಗ ಪರಿಚಯಿಸಿರುವ ವೀಡಿಯೊ ಡೇಟಿಂಗ್‌ ಅಪ್ಲಿಕೇಶನ್‌ ಭಾರತಕ್ಕೆ ಯಾವಾಗ ಲಬ್ಯವಾಗಲಿದೆ ಎಂಬುದು ಕೂಡ ಇನ್ನು ತಿಳಿದುಬಂದಿಲ್ಲ. ಇತ್ತೀಚಿನ ಸ್ಪಾರ್ಕ್ಡ್ ಅಪ್ಲಿಕೇಶನ್ ಜನಪ್ರಿಯ ಡೇಟಿಂಗ್ ಅಪ್ಲಿಕೇಶನ್‌ಗಳಾದ ಟಿಂಡರ್, ಹಿಂಜ್ ಮತ್ತು ದಿ ಲೀಗ್‌ನ ಪ್ರತಿಸ್ಪರ್ಧಿಯನ್ನು ಗುರಿಯಾಗಿಸಿಕೊಂಡಿದೆ.

ಫೇಸ್‌ಬುಕ್

ಸದ್ಯ ಫೇಸ್‌ಬುಕ್ ಹೊಸದಾಗಿ ಪರಿಚಯಿಸಿರುವ ಸ್ಪಾರ್ಕ್ಡ್ ಅಪ್ಲಿಕೇಶನ್ ವೀಡಿಯೊ ಡೇಟಿಂಗ್‌ಗೆ ಅವಕಾಶ ನೀಡಲಿದೆ. ಇನ್ನು ಸ್ಪಾರ್ಕ್ಡ್ ಅಪ್ಲಿಕೇಶನ್‌ಗೆ ಬಳಕೆದಾರರು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನೊಂದಿಗೆ ಸೈನ್ ಅಪ್ ಮಾಡುವ ಅಗತ್ಯವಿದೆ. ವೀಡಿಯೊ ಡೇಟಿಂಗ್‌ ಇದು ನಿಮಗೆ ಅನುಮತಿಸುತ್ತದೆ, ಅದು ನಾಲ್ಕು ನಿಮಿಷಗಳವರೆಗೆ ಇರುತ್ತದೆ. ಎರಡೂ ಕಡೆಯೂ ಮೊದಲ ಡೇಟಿಂಗ್‌ ಅನ್ನು ಆನಂದಿಸಿದರೆ, 10 ನಿಮಿಷಗಳ ಎರಡನೇ ಡೇಟಿಂಗ್‌ಗೆ ಹೋಗಲು ಅವಕಾಶವನ್ನು ಪಡೆಯಬಹುದಾಗಿದೆ. ಇದಾದ ನಂತರ ಡೇಟಿಂಗ್‌ ಮಾಡುವವರು ಪರಸ್ಪರ ಸಂಪರ್ಕ ವಿವರಗಳನ್ನು ವಿನಿಮಯ ಮಾಡಿಕೊಳ್ಳಬಹುದು ಮತ್ತು ಮತ್ತಷ್ಟು ಸಂಪರ್ಕದಲ್ಲಿರಬಹುದು.

ಫೇಸ್‌ಬುಕ್

ಇದು ಪಬ್ಲಿಕ್‌ ಪ್ರೊಫೈಲ್‌ಗಳು, ಡಿಎಂಗಳು ಅಥವಾ ಸ್ವೈಪಿಂಗ್ ಅನ್ನು ಒಳಗೊಂಡಿರುವುದಿಲ್ಲ ಎಂದು ಫೇಸ್‌ಬುಕ್ ಹೇಳಿದೆ. ಇನ್ನು ಈ ಅಪ್ಲಿಕೇಶನ್ ಕೈಂಡ್‌ನೆಸ್‌ ಅನ್ನು ಆಧರಿಸಿದೆ ಎಂದು ಸೂಚಿಸಲಾಗಿದೆ. ಫೇಸ್‌ಬುಕ್ ಅಪ್ಲಿಕೇಶನ್ ''ವಿಡಿಯೋ ಡೇಟಿಂಗ್ ವಿಥ್ ಕಿಂಡ ಪೀಪಲ್" ಗಾಗಿ ವಿವರಿಸುತ್ತದೆ ಮತ್ತು ಅದರ ಸೈನ್ ಅಪ್ ಪ್ರಕ್ರಿಯೆಯು ಸಹ ಅದೇ ರೀತಿ ಹೇಳುತ್ತದೆ. ದಿ ವರ್ಜ್‌ನ ವರದಿಯ ಪ್ರಕಾರ, ಜನರು ಅಪ್ಲಿಕೇಶನ್‌ನಲ್ಲಿ ಸಾಕಷ್ಟು ಕೈಂಡ್‌ನೆಸ್‌ ಅನ್ನು ತೋರುವ ಅಗತ್ಯವಿದೆ. ಇದಲ್ಲದೆ ಹೆಚ್ಚುವರಿಯಾಗಿ, ಜನರು ತಾವು ಯಾರನ್ನು ಡೇಟ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಲು ಸಹ ಸಾಧ್ಯವಾಗುತ್ತದೆ.

Best Mobiles in India

English summary
Facebook is testing a new dating app, called Sparked.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X