ಇನ್ಮುಂದೆ ನಿಮ್ಮ ಪೋಸ್ಟ್‌ಗಳ ಮೇಲೆ ಕಣ್ಣಿಡಲಿದೆ ಫೇಸ್‌ಬುಕ್!..ಕಾರಣ ಸೂಪರ್!!

|

ಕೇವಲ ಯುವ ಸಮುದಾಯವಷ್ಟೇ ಅಲ್ಲ, ಎಲ್ಲ ವಯೋಮಾನದವರೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಬಾಹ್ಯ ಪ್ರಪಂಚಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳನ್ನೇ ಉತ್ತಮ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಫೇಸ್‌ಬುಕ್‌ ಅನ್ನೇ ಹೆಚ್ಚಾಗಿ ಬಳಸುತ್ತಿರುವ ಜನರು ಅಳು, ನೋವು, ಸಂತೋಷ, ವಿಷಾದ ಹೀಗೆ ಎಲ್ಲ ಭಾವನೆಗಳನ್ನೂ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದು ಪ್ರಪಂಚಕ್ಕೆ ಗೊತ್ತಾಗುವ ಹಾಗೆ ತಿಳಿಸುತ್ತಿದ್ದಾರೆ.

ತಮ್ಮ ಖಾಸಗಿತನವನ್ನೂ ಬದಿಗಿಟ್ಟು ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಇದರಿಂದಾಗಿಯೇ ಬಳಕೆದಾರರ ಈ ವರ್ತನೆಗಳನ್ನು ದುರುಪಯೋಗ ಮಾಡಿಕೊಳ್ಳಲು ಹವಣಿಸುತ್ತಿರುವವರೂ ಅವರ ಪ್ರಯತ್ನದಲ್ಲಿ ಮಗ್ನರಾಗಿದ್ದಾರೆ. ಹೀಗಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿರುವವರ ಮತ್ತು ಮಾನಸಿಕವಾಗಿ ಕುಗ್ಗಿರುವವರ ವರ್ತನೆಯನ್ನು ಪತ್ತೆಹಚ್ಚಲು ಫೇಸ್‌ಬುಕ್ ಇದೀಗ ಮುಂದಾಗಿದೆ.

ಇನ್ಮುಂದೆ ನಿಮ್ಮ ಪೋಸ್ಟ್‌ಗಳ ಮೇಲೆ ಕಣ್ಣಿಡಲಿದೆ ಫೇಸ್‌ಬುಕ್!..ಕಾರಣ ಸೂಪರ್!!

ಹೌದು, ಫೇಸ್‌ಬುಕ್‌ ಸಂಸ್ಥೆ ಅಳವಡಿಸಿಕೊಂಡಿರುವ 'ಎಐ (Artificial Intelligence) ಆಲ್ಗಾರಿದಮ್' ತಂತ್ರಾಂಶವನ್ನು ಮೇಲ್ದರ್ಜೆಗೆ ಏರಿಸುತ್ತಿದ್ದು, ಒತ್ತಡಕ್ಕೆ ಒಳಗಾಗಿರುವ ಫೇಸ್‌ಬುಕ್‌ ಬಳಕೆದಾರರ ಮನಸ್ಥಿತಿ, ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿರುವ ಸಂಭಾಷಣೆ, ಸಂದೇಶಗಳನ್ನು ಪತ್ತೆ ಮಾಡುವಂತಹ ಕೆಲಸಗಳನ್ನು ಕೃತಕ ಬುದ್ಧಿಮತ್ತೆಗೆ ವಹಿಸಲು ಪ್ರಯತ್ನಗಳನ್ನು ನಡೆಸುತ್ತಿದೆ. ಹಾಗಾದರೆ, ಏನಿದು ಕುತೋಹಲ ಸ್ಟೋರಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಪ್ರೊಫೈಲ್ ಮೇಲೆ ನಿಗಾ ಇಡಲಿದೆ ಫೇಸ್‌ಬುಕ್!

ಪ್ರೊಫೈಲ್ ಮೇಲೆ ನಿಗಾ ಇಡಲಿದೆ ಫೇಸ್‌ಬುಕ್!

ಎಫ್‌ಬಿ ಫೋಸ್ಟ್‌ನಲ್ಲಿ ಯಾರಾದರೂ ಫೀಲಿಂಗ್ ಸ್ಯಾಡ್, ವಾಂಟ್ ಟು ಡೈ, ಸೆಲ್ಫ್ ಹಾರ್ಮ್, ಫೀಲಿಂಗ್ ಲೋನ್ಲಿ ಅಂತಹ ಬರಹಗಳನ್ನು ಬರೆದಿದ್ದರೆ ಅವರನ್ನು ಗುರುತಿಸಿ ಅವರ ಪ್ರೊಫೈಲ್ ಮೇಲೆ ನಿಗಾ ಇಡಲು ಈ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಂತಹ ವ್ಯಕ್ತಿಗಳ ಪ್ರೊಫೈಲ್‌ಗಳನ್ನು ಜಾಲಾಡಿ, ಸಂಬಂಧಿತ ವಿಭಾಗವನ್ನು ಎಚ್ಚರಿಸಿ, ಸ್ನೇಹಿತರಿಗೆ, ಆಪ್ತರಿಗೆ ಸಂದೇಶ ರವಾನಿಸುವಂತಹ ಕೆಲಸವನ್ನು ಈ ತಂತ್ರಜ್ಞಾನ ಮಾಡುವಂತೆ ಫೇಸ್‌ಬುಕ್ ಪ್ರಯತ್ನಿಸುತ್ತಿದೆ.

ಮೊಬೈಲ್‌ ಮೇಲೂ ನಿಗಾ ಇರಿಸಲಿದೆ

ಮೊಬೈಲ್‌ ಮೇಲೂ ನಿಗಾ ಇರಿಸಲಿದೆ

ಇನ್ಮುಂದೆ ಫೇಸ್‌ಬುಕ್‌ ಫೋಸ್ಟ್‌ನಲ್ಲಿ ನಾವು ಬರಹಗಳನ್ನು ಪ್ರಕಟಿಸುವಾಗ, ‘ಎಐ' ಕಣ್ಣು ನಿಮ್ಮ ಮೇಲೆ ನೆಟ್ಟಿರುತ್ತದೆ. ಇಂತಹ ಸಾಧ್ಯತೆಗಳನ್ನು ಹಗುರವಾಗಿ ನೋಡುವ ಅಗತ್ಯ ಇಲ್ಲ ಎಂದು ಫೇಸ್‌ಬುಕ್‌ ಹೇಳುತ್ತಿದೆ. ಕೆಲವು ವಿಶೇಷ ಸಾಧನಗಳು ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ನಾವು ಬಳಸುತ್ತಿರುವ ಮೊಬೈಲ್‌ ಮೇಲೂ ನಿಗಾ ಇರಿಸಲಿದೆ ಎಂದು ಸೈಬರ್ ತಜ್ಞರು ಹೇಳುತ್ತಿದ್ದಾರೆ.

ಕಾರಣಗಳನ್ನು ಹುಡುಕುತ್ತದೆ ಬುದ್ದಿಮತ್ತೆ!

ಕಾರಣಗಳನ್ನು ಹುಡುಕುತ್ತದೆ ಬುದ್ದಿಮತ್ತೆ!

ನಿತ್ಯ ಕ್ರಿಯಾಶೀಲನಾಗಿರುವ ಬಳಕೆದಾರ ಇದ್ದಕ್ಕಿದ್ದಂತೇ ಬಳಕೆ ನಿಲ್ಲಿಸಿದರೆ, ಖಾತೆಯನ್ನು ನಿಷ್ಕ್ರಿಯಗೊಳಿಸಿದರೆ ಈ ತಂತ್ರಜ್ಞಾನ ಕೂಡಲೇ ಪತ್ತೆಹಚ್ಚಿ ಅದಕ್ಕೆ ಕಾರಣಗಳನ್ನು ಹುಡುಕುವ ಪ್ರಯತ್ನಗಳನ್ನು ‘ಎಐ' ಮಾಡುತ್ತದೆ. ಬಳಕೆದಾರನ ಮಾನಸಿಕ ಸ್ಥಿತಿ ಕೆಟ್ಟದಾಗಿದೆ ಎಂದೆನಿಸಿದರೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ರವಾನಿಸುವಂತೆಯೂ ಮಾಡಲಾಗುತ್ತಿದೆ. ಈಗಾಗಲೇ ಇದರ ಪ್ರಾಯೋಗಿಕ ಪರೀಕ್ಷೆಗಳನ್ನೂ ಅಮೆರಿಕದ ಕೆಲವು ಪ್ರಾಂತ್ಯಗಳಲ್ಲಿ ಫೇಸ್‌ಬುಕ್ ನಡೆಸಿದೆ.

ಭಾವನೆಗಳನ್ನು ಪತ್ತೆಹಚ್ಚುವ ಶಕ್ತಿ

ಭಾವನೆಗಳನ್ನು ಪತ್ತೆಹಚ್ಚುವ ಶಕ್ತಿ

ತಂತ್ರಜ್ಞಾನ ಈಗ ಮನುಷ್ಯನ ವರ್ತನೆಯನ್ನೂ ವಿಶ್ಲೇಷಿಸುವ ಮಟ್ಟಕ್ಕೆ ಬೆಳೆದಿದೆ. ಕೇವಲ ಸಂದೇಶಗಳಷ್ಟೇ ಅಲ್ಲ, ಮಾತಾಡುವಾಗ ಧ್ವನಿಯಲ್ಲಿನ ವ್ಯತ್ಯಾಸ, ಚಹರೆಯಲ್ಲಾಗುವ ಬದಲಾವಣೆಗಳು, ಕುಳಿತುಕೊಂಡಿರುವ, ನಿಂತಿರುವ ಭಂಗಿಯನ್ನೂ ಆಧರಿಸಿ ಮನುಷ್ಯನ ಭಾವನೆಗಳನ್ನು ಪತ್ತೆಹಚ್ಚುವ ಶಕ್ತಿ ಅದಕ್ಕೆ ಬಂದಿದೆ. ವ್ಯಕ್ತಿ ಅಗತ್ಯಕ್ಕೆ ತಕ್ಕಂತೆ ಹೇಗೆ ಕೆಲಸ ಮಾಡುವರೋ ಹಾಗೆಯೇ ಇದು ಕೆಲಸ ಮಾಡುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದೊಂದು ಸಾಧನವಷ್ಟೇ

ಇದೊಂದು ಸಾಧನವಷ್ಟೇ

ಕೃತಿಕ ಬುದ್ಧಿಮತ್ತೆ ಎಂಬುದು ಒಂದು ಸಾಧನವಾಗಿ ಬಳಕೆಯಾಗುವ ತಂತ್ರಜ್ಞಾನವಷ್ಟೇ ಎಂದು ತಜ್ಞರು ಹೇಳುತ್ತಿದ್ದಾರೆ. ಆನ್‌ಲೈನ್‌ ವಂಚನೆ, ಅಪರಾಧ ಪ್ರಕರಣಗಳು ಈಚೆಗೆ ಹೆಚ್ಚಾಗುತ್ತಿರುವುದರಿಂದ ಈ ತಂತ್ರಜ್ಞಾನವು ಜನರಿಗೆ ಸಹಾಯ ಮಾಡಲಿದೆ ಎನ್ನುವ ವಿಶ್ವಾಸ ಮೂಡಿದೆ. ಆದರೆ, ಫೇಸ್‌ಬುಕ್ ಇದನ್ನುಸಹ ಆದಾಯದ ದೃಷ್ಟಿಯಲ್ಲಿ ನೀಡಿದರೆ ಕಷ್ಟ ಎನ್ನುತ್ತಿದ್ದಾರೆ ತಜ್ಞರು.

Most Read Articles
Best Mobiles in India

English summary
The number of Facebook users who see support content for suicide prevention has doubled since the company switched on a detection system.to know more visit to kannada.gizbot.com. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more