ಫೇಸ್‌ಬುಕ್‌ನಿಂದ ಎರಡು ಹೊಸ ವಿಡಿಯೋ ಕಾಲಿಂಗ್‌ ಡಿವೈಸ್‌ ಲಾಂಚ್‌!

|

ಫೇಸ್‌ಬುಕ್‌ ಬಳಕೆದಾರರ ನೆಚ್ಚಿನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಸಿಕೊಂಡಿದೆ. ಈಗಾಗಲೇ ಬಳಕೆದಾರರಿಗೆ ಹಲವು ಮಾದರಿಯ ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದೀಗ ಫೇಸ್‌ಬುಕ್ ಎರಡು ಹೊಸ ವಿಡಿಯೋ-ಕಾಲಿಂಗ್‌ ಡಿವೈಸ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಫೇಸ್‌ಬುಕ್ ಪೋರ್ಟಲ್ ಗೋ ಮತ್ತು ಪೋರ್ಟಲ್+ ಎಂದು ಹೇಳಲಾಗಿದೆ. ಇನ್ನು ಈ ಪೋರ್ಟಲ್ ಡಿವೈಸ್‌ಗಳು 10 ಇಂಚಿನ ಮತ್ತು 14 ಇಂಚಿನ ಡಿಸ್‌ಪ್ಲೇ ಗಾತ್ರದಲ್ಲಿ ಪರಿಚಯಿಸಲಾಗಿದೆ. ಈ ಡಿವೈಸ್‌ಗಳನ್ನು ಪೋರ್ಟಲ್‌ ಸ್ಪೀಕರ್‌ಗಳಾಗಿ ಕೂಡ ಬಳಸಬಹುದಾಗಿದೆ.

ಫೇಸ್‌ಬುಕ್

ಹೌದು, ಫೇಸ್‌ಬುಕ್ ಹೊಸ ವಿಡಿಯೋ ಕಾಲಿಂಗ್ ಡಿವೈಸ್‌ಗಳನ್ನು ಪರಿಚಯಿಸಿದೆ. ಇನ್ನು ಈ ಡಿವೈಸ್‌ಗಳ ಬಗ್ಗೆ ಫೇಸ್‌ಬುಕ್ ತನ್ನ ಬ್ಲಾಗ್‌ನಲ್ಲಿ ವಿಡಿಯೊ ಕರೆ ಮಾಡುವ ಡಿವೈಸ್‌ಗಳ ಪೋರ್ಟಲ್ ಕುಟುಂಬಕ್ಕೆ ನಾವು ಎರಡು ಹೊಸ ಸೇರ್ಪಡೆಗಳನ್ನು ಸ್ವಾಗತಿಸುತ್ತಿದ್ದೇವೆ ಎಂದು ಹೇಳಿದೆ. ಇಂದಿನ ದಿನಗಳಲ್ಲಿ ವೀಡಿಯೋ ಕಾಲಿಂಗ್‌ ಅನ್ನೊದು ಸಾಮಾನ್ಯವಾಗಿ ಬಿಟ್ಟಿದೆ. ನಿಮ್ಮ ಆತ್ಮೀಯರನ್ನು, ನಿಮ್ಮ ಕಚೇರಿಯ ಸಿಬ್ಬಂದಿಯ ಜೊತೆ ಮಾತನಾಡುವುದಕ್ಕೇ ವೀಡಿಯೊ ಕಾಲಿಂಗ್‌ ಅತ್ಯಗತ್ಯವಾಗಿದೆ. ಹಾಗಾದ್ರೆ ಫೇಸ್‌ಬುಕ್‌ ಪರಿಚಯಿಸಿರುವ ಹೊಸ ವಿಡಿಯೋ ಕಾಲಿಂಗ್‌ ಡಿವೈಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೋರ್ಟಲ್ ಗೋ

ಪೋರ್ಟಲ್ ಗೋ

ಪೋರ್ಟಲ್ ಗೋ ಡಿವೈಸ್‌ 10 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಪೋರ್ಟಲ್ ಗೋ 12-ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸ್ಮಾರ್ಟ್ ಕ್ಯಾಮೆರಾ ಹೊಂದಿದೆ. ಇದು ವಿಡಿಯೋ ಕಾಲಿಂಗ್ ನಲ್ಲಿ ಹೊಸ ಅನುಭವವನ್ನು ನೀಡಲಿದೆ. ಇದಲ್ಲದೆ ಈ ಪೋರ್ಟಲ್ ಡಿವೈಸ್‌ಗಳು ಪೋರ್ಟಬಿಲಿಟಿಯನ್ನು ಸುಲಭಗೊಳಿಸಲು ದೀರ್ಘಾವಧಿಯ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಈ ಡಿವೈಸ್‌ನಲ್ಲಿ ವೀಡಿಯೋ ಕರೆಗಳಿಗಾಗಿ ಅಲ್ಟ್ರಾ ವೈಡ್ ಫೀಲ್ಡ್ ಆಫ್ ವ್ಯೂ ಫೀಚರ್ಸ್‌ ಅನ್ನು ಸೇರಿಸಲಾಗಿದೆ. ಇದರಿಂದ ನೀವು ನಿಮ್ಮ ವೀಡಿಯೊ ಕಾಲಿಂಗ್‌ ನಲ್ಲಿ ಉತ್ತಮವಾದ ಅನುಭವವನ್ನು ಪಡದುಕೊಳ್ಳಬಹುದಾಗಿದೆ. ಇನ್ನು ಈ ಪೋರ್ಟಬಲ್‌ ಡಿವೈಸ್‌ ಅನ್ನು ಪೋರ್ಟಬಲ್ ಸ್ಪೀಕರ್ ಆಗಿ ಕೂಡ ಬಳಸಬಹುದಾಗಿದೆ.

ಪೋರ್ಟಲ್ ಗೋ+

ಪೋರ್ಟಲ್ ಗೋ+

ಪೋರ್ಟಲ್ ಗೋ+ ಡಿವೈಸ್‌ 14 ಇಂಚಿನ ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಈ ಡಿವೈಸ್‌ ಕೂಡ 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ಅಲ್ಟ್ರಾ-ವೈಡ್ ಫೀಲ್ಡ್ ಆಫ್ ವ್ಯೂ ಹೊಂದಿದೆ. ಇನ್ನು ಈ ಪೋರ್ಟಲ್‌ ಗೋ+ ಸ್ಟೀರಿಯೋ ಸ್ಪೀಕರ್‌ಗಳು ಸ್ಫಟಿಕ-ಸ್ಪಷ್ಟವಾದ ಆಡಿಯೋಗೆ ಉತ್ತಮ ಸೌಂಡ್‌ ಸಿಸ್ಟಂ ನೀಡಲಿದೆ. ಇದು ರಿಮೋಟ್ ಮತ್ತು ಹೈಬ್ರಿಡ್ ವರ್ಕ್ ಮಾಡೆಲ್‌ಗಳ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಪೋರ್ಟಲ್ ಕೆಲಸಕ್ಕೆ ಸಂಬಂಧಿಸದ ಕರೆಗಳಿಗಾಗಿ ಪರಿಪೂರ್ಣ ಮೀಸಲಾದ ಸ್ಕ್ರೀನ್ ನೀಡಲಿದೆ. ಜೊತೆಗೆ ನಿಮ್ಮ ಕಂಪ್ಯೂಟರ್ ನಲ್ಲಿ ನೋಟ್ಸ್ ತೆಗೆದುಕೊಳ್ಳಲು, ಪ್ರಸ್ತುತ ಏನು ನಡೆಯುತ್ತಿದೆ ಅನ್ನೊದನ್ನ ವೀಕ್ಷಿಸಲು ಇದರಿಂದ ಸಾಧ್ಯವಾಗಲಿದೆ. ಅಂದರೆ ಇದು ಮಲ್ಟಿಟಾಸ್ಕ್ ಆಗಿ ಕಾರ್ಯನಿರ್ವಹಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಫೇಸ್‌ಬುಕ್‌ ಪರಿಚಯಿಸಿರುವ ಪೋರ್ಟಲ್ ಗೋ US ನಲ್ಲಿ $ 199 (14,737ರೂ,) ಬೆಲೆ ಹೊಂದಿದೆ. ಇದಲ್ಲದೆ ಪೋರ್ಟಲ್+ ಅನ್ನು $ 349 (ರೂ. 25,000 ಅಂದಾಜು) ಬೆಲೆ ಹೊಂದಿದೆ ಎನ್ನಲಾಗಿದೆ. ಇನ್ನು ಪೋರ್ಟಲ್ ಗೋ ಮತ್ತು ಪೋರ್ಟಲ್+ ಅಕ್ಟೋಬರ್ 19 ರಂದು ಮಾರಾಟಕ್ಕೆ ಬರಲಿದೆ. ಇದು ಪೋರ್ಟಲ್.ಫೇಸ್‌ಬುಕ್.ಕಾಮ್‌ನಲ್ಲಿ ಪೂರ್ವ-ಆರ್ಡರ್‌ಗಳನ್ನು ಈಗಾಗಲೇ ತೆರೆಯಲಾಗಿದೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಈ ಡಿವೈಸ್‌ ಯಾವಾಗ ಲಾಂಚ್‌ ಆಗಲಿದೆ ಅನ್ನೊದು ಇನ್ನು ಬಹಿರಂಗವಾಗಿಲ್ಲ.

Most Read Articles
Best Mobiles in India

English summary
Expanding its portfolio of video calling devices, Facebook has unveiled the Portal Go and Portal+.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X