287 ರೂ.ಕೊಟ್ಟರೆ ನಿಮ್ಮ ಫೇಸ್‌ಬುಕ್ ಪಾಸ್‌ವರ್ಡ್‌ನ ನಿಮಗೇ ಕೊಡ್ತಾರಂತೆ!!

|

ಫೇಸ್‌ಬುಕ್ ನಲ್ಲಿ ಭದ್ರತಾ ಉಲ್ಲಂಘನೆಯಾಗಿರುವುದು ಕಂಡುಬಂದಿದ್ದು, 50 ಮಿಲಿಯನ್‌ಗೂ ಹೆಚ್ಚು ಬಳಕೆದಾರರ ಖಾತೆಗಳ ಮೇಲೆ ಪರಿಣಾಮ ಬೀರಿದೆ ಎಂದು ಫೇಸ್‌ಬುಕ್ ಸಂಸ್ಥೆಯೇ ಹೇಳಿದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ನಿಮ್ಮ ಯುಸರ್​ನೇಮ್ ಮತ್ತು ಪಾಸ್​ವರ್ಡ್ ಕೇವಲ 287 ರೂ.ಗೆ ಮಾರಾಟವಾಗುತ್ತಿರುವ ಶಾಕಿಂಗ್ ಮಾಹಿತಿ ಸಿಕ್ಕಿದೆ.

ಹೌದು, ನಿಮ್ಮ ಫೇಸ್‌ಬುಕ್ ಲಾಗಿನ್ ಐಡಿ ಮತ್ತು ಪಾಸ್​ವರ್ಡ್​ ನಿಮ್ಮ ಬಳಿ ಇರುವುದರಿಂದ ಸುರಕ್ಷಿತ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು. ಏಕೆಂದರೆ, ನಿಮ್ಮ ಯುಸರ್​ನೇಮ್ ಮತ್ತು ಪಾಸ್​ವರ್ಡ್​ನ್ನು​ ಕೇವಲ 287 ರೂ.ಗೆ ( 3.9 ಡಾಲರ್) ಡಾರ್ಕ್​ ವೆಬ್​ ಎಂಬ ಅಂತರ್ಜಾಲ ​ಸೈಟ್​ ಫೇಸ್​ಬುಕ್ ಬಳಕೆದಾರರ ಲಾಗಿನ್ ಐಡಿ ಮತ್ತು ಪಾಸ್​ವರ್ಡ್​ನ್ನು ಮಾರಾಟ ಮಾಡುತ್ತಿದೆ.

287 ರೂ.ಕೊಟ್ಟರೆ ನಿಮ್ಮ ಫೇಸ್‌ಬುಕ್ ಪಾಸ್‌ವರ್ಡ್‌ನ ನಿಮಗೇ ಕೊಡ್ತಾರಂತೆ!!

ಈ ಶಾಕಿಂಗ್ ಮಾಹಿತಿಯನ್ನು ತನಿಖಾ ವರದಿಯೊಂದು ಪ್ರಕಟಿಸಿದ್ದು, ಫೇಸ್​​ಬುಕ್​ ಐಡಿಗಳನ್ನು 3.9 ಡಾಲರ್​ಗೆ ಮಾರಾಟ ಮಾಡಿದರೆ ಇ-ಮೇಲ್​ ಲಾಗಿನ್​, ಪಾಸ್​ವರ್ಡ್​ನ್ನು ಕೇವಲ 195 ರೂ.ಗೆ (2.7 ಡಾಲರ್​) ನೀಡಲಾಗುತ್ತಿದೆ ಎಂದು ಈ ವರದಿಯಲ್ಲಿ ತಿಳಿಸಿದೆ. ಹಾಗಾದರೆ, ಏನಿದು ಶಾಕಿಂಗ್ ಸ್ಟೋರಿ? ನೀವು ಎಚ್ಚರವಾಗಿರುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಶಾಕಿಂಗ್ ನ್ಯೂಸ್?

ಏನಿದು ಶಾಕಿಂಗ್ ನ್ಯೂಸ್?

ಡಾರ್ಕ್​ ವೆಬ್​ ಎಂಬ ಅಂತರ್ಜಾಲ ​ಸೈಟ್​ ಫೇಸ್​ಬುಕ್ ಬಳಕೆದಾರರ ಲಾಗಿನ್ ಐಡಿ ಮತ್ತು ಪಾಸ್​ವರ್ಡ್​ಗಳನ್ನು ಕೇವಲ 287 ರೂ.( 3.9 ಡಾಲರ್)ಗೆ ಮಾರಾಟ ಮಾಡುತತ್ತಿದ್ದಾರೆ. ಈ ಮಾಹಿತಿಗಳನ್ನು ಡಾರ್ಕ್ವೆಬ್ ಪ್ರತಿಷ್ಠಿತ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಈ ಡೇಟಾ ವ್ಯವಹಾರವು ಬಿಟ್ ಕಾಯಿನ್ ಮೂಲಕ ನಡೆಯುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

70 ಸಾವಿರಕ್ಕೆ ಸಂಪೂರ್ಣ ವಿವರ!

70 ಸಾವಿರಕ್ಕೆ ಸಂಪೂರ್ಣ ವಿವರ!

ಫೇಸ್‌ಬುಕ್ ಕಥೆ ಹೀಗಾದರೆ, ವ್ಯಕ್ತಿಯೊಬ್ಬರ ಅಂತರ್ಜಾಲ ಖಾತೆಗಳ ಸಂಪೂರ್ಣ ವಿವರ ಮತ್ತು ಚಟುವಟಿಕೆಗಳ ಕುರಿತಾದ ಮಾಹಿತಿಗಳನ್ನು ಇಲ್ಲಿ ಕೇವಲ 968 ಡಾಲರ್​​(70 ಸಾವಿರ) ನೀಡಿ ಖರೀದಿಸಬಹುದು. ಇದರಲ್ಲಿ ಇಂಟರ್​ನೆಟ್​ ಬಳಕೆದಾರನ ಹೆಸರು, ಪಾಸ್​ವರ್ಡ್​, ಇ-ಮೇಲ್ ವಿಳಾಸ ಮತ್ತು ಖಾತೆಗಳ ಮಾಹಿತಿ, ಫೋನ್​ ನಂಬರ್​ಗಳನ್ನು ಸಹ ಅವರು ನೀಡಲಿದ್ದಾರಂತೆ.

ಇಮೇಲ್​ ವಿವರಕ್ಕೆ 3 ಡಾಲರ್!

ಇಮೇಲ್​ ವಿವರಕ್ಕೆ 3 ಡಾಲರ್!

ಇಲ್ಲಿ ಕೇವಲ ಫೇಸ್​ಬುಕ್​ ಡೇಟಾಗಳನ್ನು ಮಾತ್ರ ಮಾರಾಟ ಮಾಡಲಾಗುತ್ತಿಲ್ಲ. ರೆಡಿಟ್​ ಲಾಗಿನ್ ವಿವರಗಳನ್ನು 2.9 ಡಾಲರ್, ಇನ್​ಸ್ಟಾಗ್ರಾಂ ಪ್ರೊಫೈಲ್​ ವಿವರ 6.3 ಡಾಲರ್( 455 ರೂ), ಟ್ವಿಟರ್ ಖಾತೆ 3.26 ( 235 ರೂ)ಗೆ ಮಾರಾಟವಾಗುತ್ತಿವೆ. ಡಾರ್ಕ್​ ವೆಬ್​​ನಲ್ಲಿ ಬಹುಮುಖ್ಯವಾದ ಇಮೇಲ್​ ವಿವರಗಳನ್ನು ಕೇವಲ 3 ಡಾಲರ್ಗಳನ್ನು​ ಪಾವತಿಸಿ ಖರೀದಿಸಬಹುದಂತೆ.

ಎಷ್ಟು ಸುರಕ್ಷಿತ ಆನ್‌ಲೈನ್?

ಎಷ್ಟು ಸುರಕ್ಷಿತ ಆನ್‌ಲೈನ್?

ಫೇಸ್‌ಬುಕ್‌ನಲ್ಲಿ 50 ಮಿಲಿಯನ್‌ ಖಾತೆಗಳ ಮಾಹಿತಿ ಸೋರಿಕೆಯಾಗಿದ್ದು ಭಯ ಮುಡಿಸಿದೆ. ಇದಕ್ಕಿಂತಲೂ ಇನ್​ಸ್ಟಾಗ್ರಾಂ ,ಇಮೇಲ್ ಸೇರಿದಂತೆ ಎಲ್ಲಾ ಆನ್‌ಲೈನ್ ಖಾತೆಗಳ ವಿವರ ಡಾರ್ಕ್​ ವೆಬ್​ನಲ್ಲಿ ಮಾರಾಟವಾಗುತ್ತಿರುವ ಸುದ್ದಿ ಎಚ್ಚರಿಕೆ ಗಂಟೆಯಾಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ಆನ್‌ಲೈನ್ ಪ್ರಪಂಚ ಎಷ್ಟು ಸುರಕ್ಷಿತ ಎಂಬ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದೆ.

ಖಾತೆಯನ್ನು ಸುರಕ್ಷಿತಗೊಳಿಸಿ!

ಖಾತೆಯನ್ನು ಸುರಕ್ಷಿತಗೊಳಿಸಿ!

ಸಾಮಾಜಿಕ ಜಾಲತಾಣಗಳೇ ಇರಬಹುದು ಅತವಾ ಇನ್ನಾವುದೇ ಆನ್‌ಲೈನ್ ತಾಣಗಳಿರಬಹುದು ಅವುಗಳ ಖಾತೆಯನ್ನು ನೀವು ಸುರಕ್ಷಿತವಾಗಿ ಇಡಬೇಕಿದೆ. ಬಲವಾದ ಪಾಸ್‌ವರ್ಡ್, ಎರಡು ಹಂತರ ರಕ್ಷಣೆ ಸೇರಿದಂತೆ ಹಲವು ಮಾರ್ಗಗಳಿಂದ ನಿಮ್ಮ ಖಾತೆ ಸುರಕ್ಷಿತವಾಗಲಿದೆ. ಆದರೆ, ಇವು ಕೂಡ ನಿಮ್ಮನ್ನು ಸೇಫ್ ಮಾಡುತ್ತವೆ ಎಂಬ ನಂಬಿಕೆಯತೂ ಈಗ ಇಲ್ಲ.!

Best Mobiles in India

English summary
Facebook was recently in the headlines as it suffered a major data breach. It was revealed that 50 million users were affected due to this data breach. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X