ಇನ್‌ಸ್ಟಾಗ್ರಾಮ್‌ ಡೈರೆಕ್ಟ್‌ ಮೆಸೇಜ್‌ ಜೊತೆ ಮೆಸೆಂಜರ್‌ ವಿಲೀನ ಮಾಡಿದ ಫೇಸ್‌ಬುಕ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಒಂದಾಗಿರುವ ಫೇಸ್‌ಬುಕ್‌ ತನ್ನ ಮೆಸೆಂಜರ್‌ ಅಪ್ಲಿಕೇಶನ್‌ ಅನ್ನು ಇನ್‌ಸ್ಟಾಗ್ರಾಮ್‌ನ ಜೊತೆ ವಿಲೀನ‌ ಮಾಡಿದೆ. ಇದು ಇನ್‌ಸ್ಟಾಗ್ರಾಮ್‌ ಸಂದೇಶಗಳನ್ನ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಡೈರೆಕ್ಟ್‌ ಆಗಿ ಶೇರ್‌ಮಾಡುವ ಅವಕಾಶವನ್ನು ನೀಡಿದೆ. ಇದರಿಂದ ಇನ್‌ಸ್ಟಾಗ್ರಾಮ್‌ನ ಡೈರೆಕ್ಟ್‌ ಮೆಸೇಜ್‌ಗಳನ್ನು ಮೆಸೆಂಜರ್‌ನೊಂದಿಗೆ ಕನೆಕ್ಟ್‌ ಮಾಡಬಹುದಾಗಿದೆ. ಅಂದರೆ ಇದೀಗ ಇನ್‌ಸ್ಟಾಗ್ರಾಮ್‌ನಿಂದ ಮೆಸೆಂಜರ್ ಜನರಿಗೆ ಸಂದೇಶಗಳನ್ನು ಕಳುಹಿಸಬಹುದಾಗಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ತನ್ನ ಮೆಸೆಂಜರ್‌ ಸಂದೇಶಗಳನ್ನ ನೇರವಾಗಿ ಇನ್‌ಸ್ಟಾಗ್ರಾಮ್‌ನಲ್ಲಿಯೂ ಹಂಚಿಕೊಳ್ಳಬಹುದಾದ ಅವಕಾಶವನ್ನು ಕಲ್ಪಿಸಿದೆ. ಇದರ ಬಗ್ಗೆ ಫೇಸ್‌ಬುಕ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಪ್ರಕಟಿಸಿದೆ. ಕೆಲವು ಬಳಕೆದಾರರು ಅಪ್ಲಿಕೇಶನ್ ತೆರೆದಾಗ ಈ ಫೀಚರ್ಸ್‌ ಲಭ್ಯವಾಗಲಿದೆ. ಅಲ್ಲದೆ ಬಳಕೆದಾರರು ಬಯಸಿದಲ್ಲಿ ತಮ್ಮ ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಮ್ ಡಿಎಂಗಳನ್ನು ಪ್ರತ್ಯೇಕವಾಗಿರಿಸಿಕೊಳ್ಳಬಹುದು. ಇನ್ನುಳಿದಂತೆ ಈ ಫೀಚರ್ಸ್‌ನ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ಮೆಸೆಂಜರ್‌ ಮತ್ತು ಇನ್‌ಸ್ಟಾಗ್ರಾಮ್‌ ವಿಲೀನ್‌ ಆಗಿರುವುದರಿಂದ ಬಳಕೆದಾರರು ಫೇಸ್‌ಬುಕ್‌ ಮೆಸೆಂಜರ್‌ ನಲ್ಲಿ ಸಂದೇಶಗಳನ್ನ ಅಪ್‌ಡೇಟ್‌ ಮಾಡಿದರೆ, ಇನ್‌ಸ್ಟಾಗ್ರಾಮ್‌ನಲ್ಲಿಯೂ ಈ ಸಂದೇಶವನ್ನ ಕಾಣಬಹುದಾಗಿದೆ. ಅಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜಿಂಗ್ ಅನುಭವವು ಮೆಸೆಂಜರ್‌ ನಂತೆಯೆ ಲಭ್ಯವಾಗಲಿದೆ. ಇದರರ್ಥ Instagram ಬಳಕೆದಾರರು ಸಂದೇಶ ರವಾನೆ ಮತ್ತು ಕಸ್ಟಮ್ ಬಣ್ಣಗಳು ಮತ್ತು ಅಡ್ಡಹೆಸರುಗಳೊಂದಿಗೆ ಚಾಟ್ ಥ್ರೆಡ್‌ಗಳನ್ನು ಕಸ್ಟಮೈಸ್ ಮಾಡುವಂತಹ ಫೀಚರ್ಸ್‌ಗಳನ್ನು ಪಡೆಯಲಿದ್ದಾರೆ.

ಫೇಸ್‌ಬುಕ್‌

ಇದಲ್ಲದೆ ಫೇಸ್‌ಬುಕ್‌ ಮೆಸೆಂಜರ್‌ನಲ್ಲಿ ಲಭ್ಯವಾಗುವ ಸೆಲ್ಫಿ ಸ್ಟಿಕ್ಕರ್‌ಗಳು, ವಾಚ್ ಟುಗೆದರ್ ಮತ್ತು ಕಣ್ಮರೆಯಾಗುವ ಮೋಡ್ ಸೇರಿದಂತೆ ಹೊಸ ಫೀಚರ್ಸ್‌ಗಳ ಒಂದು ಗುಂಪು, ನಿರ್ದಿಷ್ಟ ಸಮಯವನ್ನು ಸೇರಿಸಿದ ನಂತರ ಸ್ವಯಂಚಾಲಿತವಾಗಿ ಕಣ್ಮರೆಯಾಗುವಂತೆ ಸಂದೇಶಗಳನ್ನು ಹೊಂದಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಎಲ್ಲಾ ಫೀಚರ್ಸ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿಯೂ ಲಭ್ಯವಾಗಲಿದೆ. ಇನ್ನು ಫೇಸ್‌ಬುಕ್‌ನ ಈ ಹೊಸ ಫಿಚರ್ಸ್‌ನಿಂದಾಗಿ ಫೇಸ್‌ಬುಕ್‌ ಮೆಸೆಂಜರ್‌ ಬಳಕೆದಾರರ ಮತ್ತೆ ಇನ್‌ಸ್ಟಾಗ್ರಾಮ್‌ ಅನ್ನು ಡೌನ್‌ಲೋಡ್‌ ಮಾಡುವ ಅಗತ್ಯವಿರುವುದಿಲ್ಲ. ಒಮದೇ ಅಪ್ಲಿಕೇಶನ್‌ ಅಲ್ಲಿಯೇ ಎರಡು ಪ್ಲಾಟ್‌ಫಾರ್ಮ್‌ಗಳನ್ನು ಬಳಸಬಹುದಾಗಿದೆ.

Instagram

ಇನ್ನು Instagram ನಿಂದ Instagram ಬಳಕೆದಾರರಿಗೆ ಸಂದೇಶಗಳು ಮತ್ತು ಕರೆಗಳು ಬಂದರೆ ಅದು Instagram ಅಪ್ಲಿಕೇಶನ್‌ನಲ್ಲಿಯೇ ಉಳಿಯಲಿದೆ. ಸದ್ಯ ಈ ಹೊಸ ಹೆಜ್ಜೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಫೇಸ್‌ಬುಕ್‌ನ ಎಲ್ಲಾ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಒಟ್ಟಿಗೆ ವಿಲೀನಗೊಳಿಸುವ ಪ್ರಮುಖ ಪ್ರಯೋಜನಗಳಲ್ಲಿ ಒಂದೆಂದು ಹೇಳಲಾಗಿದೆ. ಆದಾಗ್ಯೂ, ಫೇಸ್‌ಬುಕ್‌ ಕಂಪನಿಯು ಭವಿಷ್ಯದಲ್ಲಿ ಇನ್‌ಸ್ಟಾಗ್ರಾಮ್‌ಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಸೇರಿಸಲು ಯೋಜಿಸಿದೆ ಎಂದು ಹೇಳಲಾಗಿದೆ.

Best Mobiles in India

English summary
Photo-sharing platform Instagram on Wednesday started rolling out the option to connect Instagram direct messages with Messenger.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X