ಫೇಸ್‌ಬುಕ್‌ ಮೆಸೆಂಜರ್‌ನಿಂದ ಹೊಸ ವೀಡಿಯೋ ಕಾಲ್‌ ಫೀಚರ್ಸ್‌ ಬಿಡುಗಡೆ!

|

ನಿಮಗೆಲ್ಲಾ ತಿಳಿದಿರುವಂತೆ ಇಡೀ ಜಗತ್ತೇ ಕೊರೋನಾ ವೈರಸ್‌ನಿಂದಾಗಿ ತತ್ತರಿಸಿ ಹೋಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯಂತೆ ಬಹುತೇಕ ರಾಷ್ಟ್ರಗಳು ತಮ್ಮ ತಮ್ಮಲ್ಲಿ ಲಾಕ್‌ಡೌನ್‌ ಆದೇಶವನ್ನ ಘೊಷಣೆ ಮಾಡಿಕೊಂಡಿವೆ. ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ, ಇನ್ನು ಲಾಕ್‌ಡೌನ್‌ ಆದೇಶ ಜಾರಿಯಲ್ಲಿ ಇರೊದ್ರಿಂದ ಬಹುತೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಂದಲೇ ಕಾರ್ಯನಿರ್ವಹಿಸುವುದಕ್ಕೆ ಹೇಳಿವೆ. ಅಲ್ಲದೆ ಲಬ್ಯವಿರುವ ವೀಡಿಯೋ ಕಾಲ್‌ ಆಪ್‌ಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡುತ್ತಿವೆ. ಇದೆಲ್ಲವನ್ನ ಗಮನದಲ್ಲಿಟ್ಟುಕೊಂಡು ಹಲವು ಕಂಪೆನಿಗಳು ಗ್ರೂಪ್‌ ವೀಡಿಯೋ ಕಾಲ್‌ ಆಪ್‌ಗಳನ್ನ ಪರಿಚಯಿಸುತ್ತಿವೆ. ಇನ್ನು ಕೆಲ ಆಪ್‌ಗಳು ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಿವೆ. ಸದ್ಯ ಇದೀಗ ಫೇಸ್‌ಬುಕ್‌ ಕೂಡ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಜನಪ್ರಿಯ

ಹೌದು, ಜನಪ್ರಿಯ ಸಾಮಾಜಿಕ ಜಾಲತಾಣವಾಗಿ ಗುರುತಿಸಿಕೊಂಡಿರುವ ಫೇಸ್‌ಬುಕ್‌ ತನ್ನ ಮೆಸೆಂಜರ್‌ ಅಪ್ಲಿಕೇಶನ್‌ ಅಲ್ಲಿ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈಗಾಗಲೇ ವರ್ಕ್‌ ಫ್ರಮ್‌ ಹೋಮ್‌ ನಿರ್ವಹಿಸುತ್ತಿರುವ ಉದ್ಯೋಗಿಗಳು ವೀಡಿಯೋ ಕಾಲ್‌ಗಳ ಮೊರ ಹೋಗುತ್ತಿದ್ದಾರೆ. ಇದನ್ನೇ ಗುರಿಯಾಗಿರಿಸಿಕೊಂಡು ಈ ಫೀಚರ್ಸ್ ಅನ್ನು ಪರಿಚಯಿಸಲಾಗಿದೆ. ಈ ಫೀಚರ್ಸ್‌ ಉದ್ಯೋಗಿಗಳು ವೀಡಿಯೋ ಮೂಲಕ ಮೀಟಿಂಗ್‌ ಮಾಡುವುದಕ್ಕೆ ಅನುವು ಮಾಡಿಕೊಡಲಿದ್ದು, ಏಕಕಾಲದಲ್ಲಿ 50 ಜನರ ವೀಡಿಯೋ ಕರೆಗಳನ್ನ ಬೆಂಬಲಿಸಲಿದೆ.

ಫೇಸ್‌ಬುಕ್‌

ಸದ್ಯ ಫೇಸ್‌ಬುಕ್‌ ಮೆಸೆಂಜರ್‌ ಪರಿಚಯಿಸಿರುವ ಮೆಸೆಂಜರ್‌ ರೂಮ್‌ ವೀಡಿಯೋ ಫೀಚರ್ಸ್‌ ಏಕಕಾಲದಲ್ಲಿ 50 ಜನರ ವೀಡಿಯೋ ಕರೆಗಳನ್ನ ಬೆಂಬಲಿಸಲಿದೆ. ಈಗಾಗಲೇ ಕರೋನವೈರಸ್ ಬಿಕ್ಕಟ್ಟಿನಿಂದ ಜನರು ಮನೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಜೂಮ್‌ ಆಪ್‌ ಮೂಲಕ ವೀಡಿಯೋ ಕರೆಗಳಿಗೆ ಮೊರೆ ಹೋಗಿದ್ದಾರೆ. ಆದರೆ ಜೂಮ್‌ ಆಪ್‌ನಂತಹ ಆಪ್‌ಗಳು ಜನಪ್ರಿಯತೆಯನ್ನ ಗಮನಿಸಿರೋ ಫೇಸ್‌ಬುಕ್‌ ಮೆಸೆಂಜರ್ ರೂಮ್ಸ್ ಅನ್ನು ಬಿಡುಗಡೆ ಮಾಡಿದೆ. ಇದು ಫೇಸ್‌ಬುಕ್ ಮೆಸೆಂಜರ್‌ನ ವೀಡಿಯೊ ಕರೆ ಮಾಡುವ ಫೀಚರ್ಸ್‌ನ ವಿಸ್ತರಿತ ಆವೃತ್ತಿಯಾಗಿದೆ.

ಮೆಸೆಂಜರ್‌ನಲ್ಲಿನ

ಆದರೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿನ ವೀಡಿಯೊ ಕರೆಗಳು ಕೇವಲ ಬಳಕೆದಾರರ ವಿಷಯದಲ್ಲಿ ಸೀಮಿತವಾಗಿತ್ತು ಮತ್ತು ಎಲ್ಲರಿಗೂ ಫೇಸ್‌ಬುಕ್ ಖಾತೆಯ ಅಗತ್ಯವಿತ್ತು. ಆದರೆ ಮೆಸೆಂಜರ್ ರೂಮ್‌ ವೀಡಿಯೋ ಫೀಚರ್ಸ್‌ನಲ್ಲಿ ವೀಡಿಯೋ ಮೀಟಿಂಗ್‌ನಲ್ಲಿ ಸೇರಬಹುದಾದ ಜನರ ಮೇಲಿನ ಮಿತಿಯನ್ನು 50 ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೆ, ಫೇಸ್‌ಬುಕ್ ಖಾತೆ ಇಲ್ಲದವರು ಸಹ ಇದನ್ನ ಬಳಸಬಹುದಾಗಿದೆ. ಮೆಸೆಂಜರ್ ರೂಮ್‌ನಲ್ಲಿ ಭಾಗವಹಿಸುವ ವ್ಯಕ್ತಿಗೆ ಕೇಲವ ಲಿಂಕ್‌ ಅನ್ನು ಕಳಿಸಿದರೆ ಸಾಕು ಆತ ಫೇಸ್‌ಬುಕ್‌ ಖಾತೆ ಇಲ್ಲದೆ ಹೋದರು ಇದರಲ್ಲಿ ಭಾಗವಹಿಸಬಹುದಾಗಿದೆ.

ಬಹುದೊಡ್ಡ

ಇನ್ನು ಈ ಫೀಚರ್ಸ್‌ನ ಬಹುದೊಡ್ಡ ವಿಶೇಷತೆ ಅಂದರೆ ಮೆಸೆಂಜರ್ ರೂಮ್‌ನಿಂದ ಮಾಡಿದ ವೀಡಿಯೊ ಕರೆಗಳಿಗೆ ಯಾವುದೇ ಸಮಯ ಮಿತಿ ಇರುವುದಿಲ್ಲ. ಮೆಸೆಂಜರ್ ಅಪ್ಲಿಕೇಶನ್ ಬಳಸಿ ಬಳಕೆದಾರರು ಮೆಸೆಂಜರ್ ಕೋಣೆಗೆ ಸೇರಬಹುದು. ಇದಲ್ಲದೆ ಮೆಸೆಂಜರ್‌ ರೂಮ್‌ ನಿಂದ ವೀಡಿಯೋ ಕಾಲ್‌ ಮಾಡುವ ಮೂಲ ಬಳಕೆದಾರರ ಇದರ ಮೇಲಿನ ನಿಯಂತ್ರಣವನ್ನ ಹೊಮದಿರುತ್ತಾನೆ. ಅಲ್ಲದೆ ಈ ವೀಡಿಯೋ ಕರೆಯನ್ನ ನೋಡಬಹುದು ಮತ್ತು ಸೇರಬಹುದು ಎಂಬುದನ್ನು ಆಯ್ಕೆ ಮಾಡಬಹುದು. ಅವನು ಬಯಸಿದ ಯಾವುದೇ ಸಮಯದಲ್ಲಿ ವೀಡಿಯೋ ಕಾಲ್‌ ನಿಂದ ಜನರನ್ನು ಹೊರಹಾಕಬಹುದು. ಮೆಸೆಂಜರ್‌ ರೂಮ್‌ ಪ್ರವೇಶಿಸುವ ಜನರನ್ನು ನಿರ್ಬಂಧಿಸಲು ಲಾಕ್ ಮಾಡಬಹುದು. ಸದ್ಯ ಎಲ್ಲೆಡೆ ಗ್ರೂಪ್‌ ವೀಡಿಯೋ ಕಾಲ್‌ಗೆ ಭಾರಿ ಬೇಡಿಕೆ ಇರೊದ್ರಿಂದ ಇದನ್ನ ಬಳಸಿಕೊಳ್ಳುವುದಕ್ಕೆ ಫೆಸ್‌ಬುಕ್‌ ಮುಂದಾಗಿದೆ.

Best Mobiles in India

English summary
Facebook has released it's own answer to video call apps like Zoom called Facebook Messenger Rooms.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X