ಭಾರತೀಯ ಫೇಸ್‌ಬುಕ್‌ಗೆ ಹೊಸ ಸಾರಥಿ..! ಅಜಿತ್‌ ಮೋಹನ್‌ ನೂತನ ಎಂಡಿ

|

ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಆಡಳಿತದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಮುಂದಾಗಿದೆ. ಭಾರತದಲ್ಲಿ ಫೇಸ್‌ಬುಕ್‌ ಇನ್ನಷ್ಟು ಜನಸ್ನೇಹಿಯಾಗಲು ಮತ್ತು ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೊಸ ವ್ಯವಸ್ಥಾಪಕ ನಿರ್ದೇಶಕ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಿದ್ದು, 2015 ಅಕ್ಟೋಬರ್‌ ನಂತರ ಭಾರತದಲ್ಲಿ ಮುಖ್ಯಸ್ಥರಿಲ್ಲದೇ ಕಾರ್ಯನಿರ್ವಹಿಸುವುತ್ತಿದ್ದ ಫೇಸ್‌ಬುಕ್ ಹೊಸ ಸಾರಥಿಯನ್ನು ನೇಮಿಸಿಕೊಂಡಿದೆ.

ಭಾರತೀಯ ಫೇಸ್‌ಬುಕ್‌ಗೆ ಹೊಸ ಸಾರಥಿ..! ಅಜಿತ್‌ ಮೋಹನ್‌ ನೂತನ ಎಂಡಿ

ಹೌದು, ಸ್ಟಾರ್‌ ಇಂಡಿಯಾ ಮಾಲೀಕತ್ವದ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್‌ ವೇದಿಕೆ ಹಾಟ್‌ಸ್ಟಾರ್‌ನ ಪ್ರಸ್ತುತ ಸಿಇಒ ಆಗಿರುವ ಅಜಿತ್‌ ಮೋಹನ್‌ ಅವರನ್ನು ‌ಫೇಸ್‌ಬುಕ್‌ ಭಾರತಕ್ಕೆ ಹೊಸ ಎಂಡಿ ಮತ್ತು ಉಪಾಧ್ಯಕ್ಷರನ್ನಾಗಿ ನೇಮಿಸಿಕೊಂಡಿದೆ. ಇದಲ್ಲದೇ ಫ್ಲಿಪ್‌ಕಾರ್ಟ್‌ ಕೂಡ ತನ್ನ ಸಮೂಹದ ಸಿಇಒವನ್ನು ಕೂಡ ಬದಲಾಯಿಸುತ್ತಿದ್ದು, ಬಿನ್ನಿ ಬನ್ಸಾಲ್‌ ಸ್ಥಾನಕ್ಕೆ ಹೊಸ ಹೆಸರು ಯಾವುದು ಎಂಬುದನ್ನು ಟೆಕ್‌ ಲೋಕ ಕಾತುರದಿಂದ ಕಾಯುತ್ತಿದೆ. ಹಾಗಿದ್ದರೆ ಎರಡು ಟೆಕ್‌ ಕಂಪನಿಗಳಲ್ಲಿ ಏನೇನು ಬೆಳವಣಿಗೆಯಾಗುತ್ತಿದೆ ಎಂಬುದನ್ನು ಮುಂದೆ ನೋಡಿ.

ಜನೇವರಿಯಿಂದ ಕಾರ್ಯಾರಂಭ

ಜನೇವರಿಯಿಂದ ಕಾರ್ಯಾರಂಭ

ಫೇಸ್‌ಬುಕ್‌ ಭಾರತದ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಆಯ್ಕೆಯಾಗಿರುವ ಅಜಿತ್‌ ಮೋಹನ್‌ ಮುಂದಿನ ವರ್ಷದ ಜನೇವರಿಯಿಂದ ಫೇಸ್‌ಬುಕ್‌ನಲ್ಲಿ ಕಾರ್ಯಾರಂಭ ಮಾಡಲಿದ್ದಾರೆ. ಭಾರತದಲ್ಲಿ ಫೇಸ್‌ಬುಕ್‌ನ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಹೊಸದಾಗಿ ಸೃಷ್ಟಿಸಲಾಗಿರುವ ಎಂಡಿ ಹುದ್ದೆಗೆ ಮೋಹನ್ ನೇಮಕವಾಗಿದ್ದಾರೆ.

ಭಾರತದಲ್ಲಿ ಇನ್ನಷ್ಟು ಪ್ರಭಲವಾಗಲು ಕಾರ್ಯತಂತ್ರ

ಭಾರತದಲ್ಲಿ ಇನ್ನಷ್ಟು ಪ್ರಭಲವಾಗಲು ಕಾರ್ಯತಂತ್ರ

ಫೇಸ್‌ಬುಕ್‌ಗೆ ಭಾರತ ದೊಡ್ಡ ಮಾರುಕಟ್ಟೆಯಾಗಿದ್ದು, ಇಲ್ಲಿನ ಆಗು-ಹೋಗುಗಳು ಫೇಸ್‌ಬುಕ್‌ಗೆ ನೇರ ಪರಿಣಾಮವನ್ನು ಬೀರುತ್ತವೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಭಾರತದಲ್ಲಿ ಪ್ರಭಲ ಪಡಿಸಲು ಹೊಸ ಕಾರ್ಯತಂತ್ರ ಎಣೆದಿದ್ದು, ಅದರ ಮೊದಲ ಅಂಶವಾಗಿ ಹೊಸ ಎಂಡಿಯನ್ನು ನೇಮಕ ಮಾಡಿರುವುದು. ಇದರಿಂದ ಫೇಸ್‌ಬುಕ್‌ ತನ್ನ ಕಾರ್ಯತಂತ್ರಗಳನ್ನು ಬಲಪಡಿಸಿಕೊಳ್ಳುವುದಲ್ಲದೇ, ಜನರು, ಉದ್ಯಮಗಳು ಹಾಗೂ ಸರ್ಕಾರದ ಜತೆ ಉತ್ತಮ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂಬುದು ಫೇಸ್‌ಬುಕ್‌ನ ಚಿಂತನೆ.

ಅಜಿತ್‌ಗೆ ಸಂತಸ

ಅಜಿತ್‌ಗೆ ಸಂತಸ

ಫೇಸ್‌ಬುಕ್‌ ಭಾರತದ ಹೊಸ ಎಂಡಿಯಾಗಿ ಆಯ್ಕೆಯಾಗಿರುವ ಅಜಿತ್‌ ಮೋಹನ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಫೇಸ್‌ಬುಕ್‌ ನೀಡಿರುವ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಸಂತಸವಾಗುತ್ತಿದೆ. ಭಾರತದಲ್ಲಿಫೇಸ್‌ಬುಕ್‌ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ನನ್ನ ಮುಖ್ಯ ಗುರಿ ಆಗಿದೆ ಎಂದು ತಮ್ಮ ಖುಷಿ ಹಂಚಿಕೊಂಡಿದ್ದಾರೆ.

ಎರಡು ದಶಕದ ಅನುಭವ

ಎರಡು ದಶಕದ ಅನುಭವ

ಫೇಸ್‌ಬುಕ್‌ ಭಾರತದ ಹೊಸ ಎಂಡಿ ಆಗಿ ನೇಮಕಗೊಂಡಿರುವ ಅಜಿತ್‌ ಮೋಹನ್‌ ತಮ್ಮ 20 ವರ್ಷದ ಅನುಭವವನ್ನು ಫೇಸ್‌ಬುಕ್‌ನಲ್ಲಿ ಧಾರೆ ಎರೆಯಲಿದ್ದಾರೆ. ಸ್ಟಾರ್‌ ಇಂಡಿಯಾ, McKinsey and Co.ನಲ್ಲಿ ಸೇವೆ ಸಲ್ಲಿಸಿರುವ ಇವರು Arthur D.Little ಎಂಬ ಮ್ಯಾನೆಜ್‌ಮೆಂಟ್‌ ಕನ್ಸಲ್ಟಿಂಗ್‌ ಉದ್ಯಮದಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ 21st Century Fox Mediaದ ಸ್ಟಾರ್‌ ಇಂಡಿಯಾ ಒಡೆತನದಲ್ಲಿರುವ ಆನ್‌ಲೈನ್‌ ವಿಡಿಯೋ ಸ್ಟ್ರೀಮಿಂಗ್‌ ವೇದಿಕೆ ಹಾಟ್‌ಸ್ಟಾರ್‌ನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದು, ಜನೇವರಿಯಲ್ಲಿ ಫೇಸ್‌ಬುಕ್‌ ಭಾರತದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.

2015ರ ನಂತರ ಸಾರಥಿಯೇ ಇದ್ದಿಲ್ಲ

2015ರ ನಂತರ ಸಾರಥಿಯೇ ಇದ್ದಿಲ್ಲ

ಅಕ್ಟೋಬರ್ 2015ರಲ್ಲಿ ಅಂದಿನ ಫೇಸ್‌ಬುಕ್‌ ಭಾರತದ ಎಂಡಿ ಉಮಾಂಗ್‌ ಬೇಡಿ ನೇಮಕವಾದ ಕೇವಲ 15 ತಿಂಗಳಿನಲ್ಲಿಯೇ ರಾಜೀನಾಮೆ ಕೊಟ್ಟು ಫೇಸ್‌ಬುಕ್‌ನಿಂದ ಹೊರನಡೆದ ನಂತರ ಭಾರತದಲ್ಲಿ ಫೇಸ್‌ಬುಕ್‌ನ ಮುಖ್ಯಸ್ಥರ ಹುದ್ದೆ ಖಾಲಿ ಇತ್ತು. ಆದ್ದರಿಂದ ಫೇಸ್‌ಬುಕ್‌ ಭಾರತ ಹಾಗೂ ದಕ್ಷಿಣ ಏಷ್ಯಾದ ನಿರ್ದೇಶಕ ಸಂದೀಪ್‌ ಭೂಷಣ್‌ ಹಂಗಾಮಿ ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಭಾರತ ಪ್ರಮುಖ ರಾಷ್ಟ್ರ

ಭಾರತ ಪ್ರಮುಖ ರಾಷ್ಟ್ರ

ಫೇಸ್‌ಬುಕ್‌ಗೆ ಭಾರತ ಪ್ರಮುಖವಾದ ರಾಷ್ಟ್ರವಾಗಿದ್ದು, ಈ ಮೂಲಕ ಜನರನ್ನು ಒಟ್ಟಾಗಿ ಕರೆದುಕೊಂಡು ಸಮುದಾಯವನ್ನು ಅಭಿವೃದ್ಧಿಪಡಿಸಲು ಮುಂದಾಗುತ್ತೇವೆ. ಅದಕ್ಕಾಗಿ ಅಜಿತ್‌ ತಮ್ಮ ಅನುಭವವನ್ನು ವಿನಿಯೋಗಿಸುತ್ತಾರೆ. ಭಾರತದಲ್ಲಿ ಫೇಸ್‌ಬುಕ್‌ ಸಕಾರಾತ್ಮಕ ಪರಿಣಾಮವನ್ನು ಸಮುದಾಯಗಳು, ಸಂಸ್ಥೆಗಳು, ಉದ್ಯಮಗಳು ಹಾಗೂ ಸರ್ಕಾರದ ಮೇಲೆ ಉಂಟು ಮಾಡುತ್ತೇವೆ ಎಂದು ಫೇಸ್‌ಬುಕ್‌ನ ಬ್ಯುಸಿನೆಸ್‌ ಮತ್ತು ಮಾರುಕಟ್ಟೆ ಪಾಲುದಾರಿಕೆಯ ಉಪಾಧ್ಯಕ್ಷರಾದ ಡೇವಿಡ್‌ ಫೀಶ್ಕರ್ ಹೇಳಿದ್ದಾರೆ.

ವಾಟ್ಸ್‌ಆಪ್‌ ಮತ್ತು ಇನ್‌ಸ್ಟಾಗ್ರಾಂಗೆ ಇಲ್ಲ

ವಾಟ್ಸ್‌ಆಪ್‌ ಮತ್ತು ಇನ್‌ಸ್ಟಾಗ್ರಾಂಗೆ ಇಲ್ಲ

ಹೊಸ ಎಂಡಿ ಅಜಿತ್ ಮೋಹನ್‌ ಕೇವಲ ಫೇಸ್‌ಬುಕ್‌ಗೆ ಕಾರ್ಯನಿರ್ವಹಿಸಲಿದ್ದು, ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್‌ಆಪ್‌ ಮತ್ತು ಇನ್‌ಸ್ಟಾಗ್ರಾಂನ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಎರಡು ಪ್ಲಾಟ್‌ಫಾರ್ಮ್‌ಗಳು ಪ್ರಸ್ತುತ ಭಾರತದಲ್ಲಿ ಮುಖ್ಯಸ್ಥರನ್ನು ಹೊಂದಿಲ್ಲ. ಆದರೆ, ವಾಟ್ಸ್‌ಆಪ್‌ ಕೋಮಲ್‌ ಲಹಿರಿ ಎನ್ನುವವರನ್ನು ದೂರು ಅಧಿಕಾರಿಯನ್ನಾಗಿ ನೇಮಕ ಮಾಡಿಕೊಂಡಿದ್ದು, ವಾಟ್ಸ್‌ಆಪ್‌ನಲ್ಲಿ ಬದಲಾವಣೆಗಳನ್ನು ಕಾಣಬಹುದು.

ನಂಬಿಕೆ ಹೆಚ್ಚಿಸಿಕೊಳ್ಳಲು ಉತ್ತಮ ಅಸ್ತ್ರ

ನಂಬಿಕೆ ಹೆಚ್ಚಿಸಿಕೊಳ್ಳಲು ಉತ್ತಮ ಅಸ್ತ್ರ

ಇತ್ತೀಚೆಗೆ ತಾನೇ ಕೆಂಬ್ರಿಡ್ಜ್‌ ಅನಾಲಿಟಿಕಾ ಡೇಟಾ ಸೋರಿಕೆ ಪ್ರಕರಣದಲ್ಲಿ ಜನರ ನಂಬಿಕೆ ಕಳೆದುಕೊಂಡಿದ್ದ ಫೇಸ್‌ಬುಕ್‌ ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ತಯಾರಾಗುತ್ತಿದೆ. ಸುಳ್ಳು ಸುದ್ದಿ ಮತ್ತೀತರ ಅಪಾಯಕಾರಿ ಅಂಶಗಳ ವಿರುದ್ಧ ಗಂಭೀರ ಹೋರಾಟ ನಡೆಸಿರುವ ಫೇಸ್‌ಬುಕ್‌ ಈಗ ಭಾರತೀಯರನ್ನೇ ಭಾರತದ ಮುಖ್ಯಸ್ಥರನ್ನಾಗಿ ನೇಮಕ ಮಾಡಿ, ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಜನರ ನಂಬಿಕೆಯನ್ನು ಉತ್ತಮಗೊಳಿಸಿಕೊಳ್ಳುತ್ತಿದೆ.

ಫ್ಲಿಪ್‌ಕಾರ್ಟ್‌ನಲ್ಲೂ ಬದಲಾವಣೆ

ಫ್ಲಿಪ್‌ಕಾರ್ಟ್‌ನಲ್ಲೂ ಬದಲಾವಣೆ

ವಾಲ್‌ಮಾರ್ಟ್‌ ನಿಯಂತ್ರಣದಲ್ಲಿರುವ ಫ್ಲಿಪ್‌ಕಾರ್ಟ್‌ನಲ್ಲಿಯೂ ಸಹ ಬಹಳಷ್ಟು ಬದಲಾವಣೆಗಳಾಗುತ್ತಿದ್ದು, ಫ್ಲಿಪ್‌ಕಾರ್ಟ್‌ ಸಮೂಹದ ಸಿಇಒ ಬಿನ್ನಿ ಬನ್ಸಾಲ್‌ ಸ್ಥಾನಕ್ಕೆ ಹೊಸ ಮುಖ ಬರುವ ಸಾಧ್ಯತೆಯಿದೆ. ಕಂಪನಿ ಬೋರ್ಡ್‌ನಲ್ಲಾದ ಬದಲಾವಣೆಗಳಿಂದ ಮೇ ನಂತರ ಫ್ಲಿಪ್‌ಕಾರ್ಟ್‌ ಚೇರ್‌ಮನ್‌ ಸಚಿನ್‌ ಬನ್ಸಾಲ್‌ ಹುದ್ದೆ ತೊರೆದಿದ್ದು, ಈಗ ಬಿನ್ಜಿ ಬಿನ್ಸಾಲ್ ಸಿಇಒದಿಂದ ಫ್ಲಿಪ್‌ಕಾರ್ಟ್‌ ಸಮೂಹದ ಚೇರ್‌ಮನ್‌ ಆಗಲಿದ್ದು, ಬಿನ್ನಿ ಜಾಗಕ್ಕೆ ಪ್ರಸ್ತುತ ಫ್ಲಿಪ್‌ಕಾರ್ಟ್‌ನ ಸಿಇಒ ಕಲ್ಯಾಣ್‌ ಕೃಷ್ಣಮೂರ್ತಿ ನೇಮಕಗೊಳ್ಳಲಿದ್ದಾರೆ.

Most Read Articles
Best Mobiles in India

English summary
Facebook Names Hotstar CEO Ajit Mohan as Managing Director of India Operations. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more