TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಫೇಸ್ ಬುಕ್ ನಂತಹ ಸಾಮಾಜಿಕ ಜಾಲತಾಣಗಳಿಂದ ಬಹಳಷ್ಟು ಜನ ತೊಂದರೆಗೀಡಾಗಿದ್ದು ಇದೆ. ಅಷ್ಟೇ ಪ್ರಮಾಣದಲ್ಲಿ ಸಮಾಜದಲ್ಲಿ ಬದಲಾವಣೆ ತರುವುದಕ್ಕೆ ಮತ್ತು ಹೋರಾಟಗಳಿಗೆ ಬಹುದೊಡ್ಡ ಅಸ್ತ್ರ ನೀಡಿರುವುದು ಈ ಸಾಮಾಜಿಕ ಜಾಲತಾಣಗಳೇ. ವೇಗವಾಗಿ ಜಗತ್ತಿನ ಮೂಲೆ ಮೂಲೆಗೂ ತಲುಪುವ ಮಾಹಿತಿಯಿಂದ ಸಮಾಜದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿರುವುದು ಖಂಡಿತ.
ಈ ಮಾಹಿತಿ ತಂತ್ರಜ್ಞಾನದ ವಿಚಿತ್ರಗಳು ನಿಮಗೆ ಗೊತ್ತಿರಲಿಕ್ಕಿಲ್ಲ..!
ಈಗ ಇಂತದ್ದೆ ಒಂದು ಘಟನೆ ವರದಿಯಾಗಿದ್ದು, ಮೆಡಿಕಲ್ ಕಿಡ್ನಾಪಿಂಗ್ ಎಂಬ ಹೊಸ ಪದದೊಂದಿಗೆ ಒಂದು ಸುದ್ದಿ ವೈರಲ್ ಆಗಿದೆ. ಅಟ್ಲಾಂಟಾದಲ್ಲಿ ವಾಸವಿರುವ ಭಾರತ ಮೂಲದ ಮಹಿಳೆ ಫೇಸ್ ಬುಕ್ ನಲ್ಲಿ ವಿಷಯ ಒಂದನ್ನು ಪೋಸ್ಟ್ ಮಾಡಿದ್ದು, ವೈದ್ಯಕೀಯ ಕ್ಷೇತ್ರದ ಕರಾಳ ಮುಖ ಮತ್ತು ಧನದಾಹಿ ನೀತಿಯನ್ನು ಸಾಕ್ಷಿ ಸಮೇತ ಜಗತ್ತಿನ ಮುಂದಿಟ್ಟಿದ್ದಾಳೆ.
ಪಾರುಲ್ ಭಾಸಿನ್ ವರ್ಮಾ ಎಂಬಾಕೆ ತನ್ನ ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿರುವಂತೆ "ನನ್ನ ಕುಟುಂಬ ಭಾರತದಲ್ಲಿ ಮೆಡಿಕಲ್ ಕಿಡ್ನಾಪಿಂಗ್ ಅನುಭವಿಸಿರುವ ಕಥೆಯನ್ನು ಹೇಳುತ್ತೇನೆ. ನನ್ನ ತಾಯಿ 100ಕ್ಕಿಂತ ಹೆಚ್ಚು ದಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸೇರಿಸಿದ್ದೇವು. ಈ ಸಮಯದಲ್ಲಿ ಸಿಕಂದ್ರಾಬಾದ್ನ ಯಶೋಧಾ ಆಸ್ಪತ್ರೆ ಮತ್ತು ನವದೆಹಲಿಯ ಬಿಎಲ್ ಕಪೂರ್ ಆಸ್ಪತ್ರೆ ದಿನಕ್ಕೆ 1ಲಕ್ಷ ರೂ.ಯಂತೆ ಒಟ್ಟು 1.2 ಕೋಟಿ ರೂ.ಬಿಲ್ ಮಾಡಿವೆ. ಆದರೂ ನನ್ನ ತಾಯಿ ಬಹು ಅಂಗಾಂಗ ವೈಫಲ್ಯದಿಂದ ತೀರಿಕೊಂಡರು" ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಸಾರ್ವಜನಿಕರ ಮುಂದೆ ಬರುವುದು ಬಿಟ್ಟರೆ ನನಗೆ ಬೇರೆ ದಾರಿ ಇದ್ದಿಲ್ಲ, ಈ ಮಾಹಿತಿಯಿಂದ ಆ ಧನದಾಹಿ ಆಸ್ಪತ್ರೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ, ಸಮಾಜದಲ್ಲಿರುವ ಬೇರೆ ಜನಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿರುವ ಪಾರುಲ್ ತನ್ನ ಟೈಮ್ ಲೈನ್ ನಲ್ಲಿ 4 ತಿಂಗಳು ಅನುಭವಿಸಿದ ಯಾತನೆಯನ್ನು ಹಂಚಿಕೊಂಡಿದ್ದಾಳೆ.
ಅದಲ್ಲದೇ, ಹಲವು ಬಿಲ್ ಗಳನ್ನು ಪೋಸ್ಟ್ ಮಾಡಿದ್ದು, ಆಸ್ಪತ್ರೆಗಳು ಚಿಕಿತ್ಸೆಗೆ ತೆಗೆದುಕೊಂಡ ವೆಚ್ಚವನ್ನು ತಿಳಿಸಿದ್ದಾಳೆ. ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ 50 ಸಾವಿರಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿದ್ದು, ಎಲ್ಲ ಕಡೆಯೂ ಮುಟ್ಟಿದೆ.
ಮೊದಲನೆಯದಾಗಿ ನನ್ನ ಉದ್ದೇಶ ಹಣವಲ್ಲ, ಇದರಿಂದ ನನ್ನ ತಾಯಿ ವಾಪಸ್ ಬರುವುದಿಲ್ಲ. ಆದರೆ, ನನ್ನ ನಂಬಿಕೆ ಏನೆಂದರೆ ಇದರಿಂದ ಸಮಾಜದಲ್ಲಿ ಏನಾದರೂ ಬದಲಾವಣೆ ಆಗಬಹುದು ಎಂದಷ್ಟೇ, ಕೇವಲ ನಮಗೆ ಗೊತ್ತು ಯಾವ ರೀತಿ ದೌರ್ಜನ್ಯಕ್ಕೊಳಗಾಗಿದ್ದೇವೆ ಎಂದು ಪಾರುಲ್ ಹೇಳಿದ್ದಾರೆ.
ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಎರಡು ಆಸ್ಪತ್ರೆಗಳು ನಾವು ಯಾವುದೇ ಹೆಚ್ಚುವರಿ ಚಾರ್ಜ್ ಮಾಡಿಲ್ಲ, ನಿಯಮಬದ್ಧವಾಗಿವೆ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದಾರೆ ಎಂದು ಸಮರ್ಥಿಸಿಕೊಂಡಿವೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಸರ್ಕಾರದ ಮೇಲಿನ ಒತ್ತಡ ಹೆಚ್ಚುತ್ತಿದೆ.