ಫೇಸ್‌ಬುಕ್‌ ನಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಟಿಕ್‌ಟಾಕ್‌ ಮಾದರಿಯ ಫೀಚರ್ಸ್‌ ಬಿಡುಗಡೆ !

|

ಜನಪ್ರಿಯ ಸೊಶೀಯಲ್‌ ಮಿಡಿಯಾ ಫೇಸ್‌ಬುಕ್ ಭಾರತದಲ್ಲಿ ಬ್ಯಾನ್‌ ಆಗಿರುವ ಹಾಗೂ ಜಾಗತಿಕವಾಗಿ ಜನಪ್ರಿಯತೆ ಪಡೆದುಕೊಂಡಿರುವ ಟಿಕ್‌ಟಾಕ್‌ಗೆ ಪ್ರತಿಸ್ಪರ್ಧಿಯಾಗಿ ಹೊಸ ಅಪ್ಲಿಕೇಶನ್‌ ಫೀಚರ್ಸ್‌ ಒಂದನ್ನ ಪರಿಚಯಿಸಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಇತರ 50 ಕ್ಕೂ ಹೆಚ್ಚು ದೇಶಗಳಲ್ಲಿ ಈ ಸೇವೆಯನ್ನ ಪ್ರಾರಂಬಿಸಿದ್ದು, ರೀಲ್ಸ್ ಎಂಬ ಹೊಸ ಕಿರು-ರೂಪದ ವೀಡಿಯೊ ಸೇವೆಯನ್ನು ತನ್ನ ಜನಪ್ರಿಯ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್‌ನಲ್ಲಿ ಪರಿಚಯಿಸಿದೆ. ಸದ್ಯ ಚೀನಾದ ಬೈಟ್ ಡ್ಯಾನ್ಸ್‌ನಿಂದ ಟಿಕ್‌ಟಾಕ್‌ನ ಯುಎಸ್ ಆವೃತ್ತಿಯನ್ನು ಮೈಕ್ರೋಸಾಫ್ಟ್ ಪಡೆದುಕೊಳ್ಳಲು ಸಿದ್ದತೆ ನಡೆಸಿದೆ ಎಂದು ತಿಳಿದ ಕೆಲವೇ ದಿನಗಳಲ್ಲಿ ಫೇಸ್‌ಬುಕ್‌ ಈ ಸೇವೆಯನ್ನು ಪರಿಚಯಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಇನ್ಸಟಾಗ್ರಾಮ್‌ನಲ್ಲಿ ರೀಲ್ಸ್‌ ಎಂಬ ಕಿರು ವಿಡಿಯೋ ಕ್ರಿಯೆಟ್‌ ಮಾಡಬಲ್ಲ ಪ್ಲಾಟ್‌ಫಾರ್ಮ್‌ ಅನ್ನು ಪರಿಚಯಿಸಿರೋದು ನಿಮಗೆಲ್ಲಾ ತಿಳಿದೆ ಇದೆ. ಸದ್ಯ ಈ ಫೀಚರ್ಸ್‌ ಅನ್ನು ಇದೀಗ ಯುಎಸ್‌ ಸೇರಿದಂತೆ 50 ಕ್ಕೂ ಹೆಚ್ಚು ದೇಶದಗಳಲ್ಲಿ ಪರಿಚಯಿಸಿದೆ. ಇದರಲ್ಲಿ ಟಿಕ್‌ಟಾಕ್‌ನಂತೆಯೇ, ರೀಲ್ಸ್ ಬಳಕೆದಾರರು ಕಿರು ಮೊಬೈಲ್ ಸ್ನೇಹಿ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು, ನಂತರ ಮ್ಯೂಸಿಕ್‌ ಲೈಬ್ರರಿಯಿಂದ ವಿಶೇಷ ಸಾಂಗ್ಸ್‌ ಟ್ರ್ಯಾಕ್‌ಗಳನ್ನು ಸೇರಿಸಬಹುದಾಗಿದೆ.

ಫೇಸ್‌ಬುಕ್‌

ಸದ್ಯ ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್‌ ಆಗಿದ್ದೆ ತಡ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಅನ್ನು ಫೇಸ್‌ಬುಕ್‌ ಪರಿಚಯಿಸಿತ್ತು. ಇದೀಗ ಇದು ಜಾಗತಿಕವಾಗಿ ಪರಿಚಿತವಾಗ್ತಿದೆ. ಅಲ್ಲದೆ ಇಂತಹದೊಂದು ಕಿರು ವಿಡಿಯೋ ಪ್ಲಾಟ್‌ಫಾರ್ಮ್‌ ಅನ್ನು ಸ್ವತಂತ್ರವಾಗಿ ಪರಿಚಯಿಸಲು ಫೇಸ್‌ಬುಕ್‌ ಸಿದ್ದತೆ ನಡೆಸಿದೆ ಎನ್ನುವ ಮಾಹಿತಿ ಕೂಡ ಇದೆ. ಇದಲ್ಲದೆ ಬಳಕೆದಾರರು ರೀಲ್ಸ್ ಮೂಲಕ ಹಣ ಸಂಪಾದಿಸಲು ಜಾಹೀರಾತು ಅಥವಾ ಇತರ ಮಾರ್ಗಗಳನ್ನು ನೀಡಲು ಇನ್‌ಸ್ಟಾಗ್ರಾಮ್ ಇನ್ನೂ ಪ್ಲ್ಯಾನ್‌ ಮಾಡಿಲ್ಲ ಎನ್ನುವ ವರದಿ ಕೂಡ ಆಗಿದೆ.

ಫೇಸ್‌ಬುಕ್‌

ಇದಲ್ಲದೆ ಫೇಸ್‌ಬುಕ್‌ ಟಿಕ್‌ಟಾಕ್‌ ಪ್ರತಿರೂಪವನ್ನೇ ನಕಲು ಮಾಡಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ ಆದರೂ ಫೇಸ್‌ಬುಕ್‌ ಹೊಸ ಫೀಚರ್ಸ್‌ಗಳತ್ತ ಗಮನ ಹರಿಸುತ್ತಿದೆ. ಅಲ್ಲದೆ ಟಿಕ್‌ಟಾಕ್‌ ಜನಪ್ರಿಯತೆಯನ್ನೇ ಆಧಾರವಾಗಿಟಗಟುಕೊಂಡು ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುವತ್ತ ಫೇಸ್‌ಬುಕ್‌ ಸಿದ್ದತೆ ನಡೆಸಿದೆ. ಇನ್ನು ಈ ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಹೊಸ ವೀಡಿಯೋಗಳನ್ನ ಕ್ರಿಯೆಟ್‌ ಮಾಬಹುದಾಗಿದೆ ಅಲ್ಲದೆ. ಸಕ್ರಿಯ ಬಳಕೆದಾರರು ಫೊಸ್ಟ್‌ಗಳಿಗೆ ಹಣ ನಿಡುವ ಯೋಚನೆಯನ್ನು ಸಹ ಫೇಸ್‌ಬುಕ್‌ ಮಾಡಿದೆ ಎನ್ನುವ ಮಾತಿದೆ.

ಇನ್‌ಸ್ಟಾಗ್ರಾಮ್‌

ಅಲ್ಲದೆ ಟಿಕ್‌ಟಾಕ್‌ ನ ಯುಎಸ್‌ ಆವೃತ್ತಿಯನ್ನ ಮೈಕ್ರೋಸಾಪ್ಟ್‌ ಕೊಂಡುಕೊಳ್ಳುವ ಉತ್ಸಾಹವನ್ನು ತೋರಿತ್ತು. ಆದರೆ ಸದ್ಯ ಇದು ಇನ್ನು ಕೂಡ ಅಂತಿಮವಾಗಿಲ್ಲ. ಇದೇ ಸಂದರ್ಭದಲ್ಲಿ ಫೇಸ್‌ಬುಕ್‌ ತನ್ನ ಇನ್‌ಸ್ಟಾಗ್ರಾಮ್‌ ರೀಲ್ಸ್‌ ಫ್ಲಾಟ್‌ಫಾರ್ಮ್‌ ಅನ್ನು ಎಲ್ಲರಿಗೂ ಪರಿಚಯಿಸುವುದಕ್ಕೆ ಮುಂದಾಗಿದೆ. ಅಷ್ಟೇ ಅಲ್ಲ ಟಿಕ್‌ಟಾಕ್‌ ಗಿಂತ ಭಿನ್ನವಾಗಿ ಕಾಣಿಸಿಕೊಳ್ಳುವ ಪ್ರಯತ್ನವನ್ನ ಮಾಡಿದೆ. ಈ ಮೂಲಕ ಬಳಕೆದಾರರ ನೆಚ್ಚಿನ ಪ್ಲಾಟ್‌ಫಾರ್ಮ್‌ ಆಗಿ ಗುರುತಿಸಿಕೊಳ್ಳುವ ಕಾರ್ಯಕ್ಕೆ ಸಿದ್ದತೆ ನಡೆಸಿದೆ.

Best Mobiles in India

English summary
The launch of Reels escalates a bruising fight between Facebook and TikTok, with each casting the other as a threat.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X