ಟಿವಿ ಚಾನಲ್ ನಲ್ಲಿ ಮಾತ್ರವಲ್ಲ ಫೇಸ್ ಬುಕ್ ನಲ್ಲೂ ಬರಲಿದೆ ಬ್ರೇಕಿಂಗ್ ನ್ಯೂಸ್

By Gizbot Bureau
|

ಹಲವಾರು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಫೇಸ್ ಬುಕ್ ನಂಬರ್ 1 ಸ್ಥಾನದಲ್ಲೇ ಇದೆ ಅಂದ್ರೆ ಅದಕ್ಕೆ ಕಾರಣ ಕಾಲಕ್ಕೆ ತಕ್ಕಂತೆ, ಅಗತ್ಯಕ್ಕೆ ತಕ್ಕಂತೆ ಫೇಸ್ ಬುಕ್ ಅಪ್ ಡೇಟ್ ಆಗುತ್ತಿರುವುದು. ಈಗಲೂ ಫೇಸ್ ಬುಕ್ ಹಲವು ವೈಶಿಷ್ಟ್ಯಗಳನ್ನು ಹೊಂದಲು ಬಯಸುತ್ತಿದೆ ಯಾವುದೇ ವೈಶಿಷ್ಟ್ಯತೆ ಫೇಸ್ ಬುಕ್ ನ ಹೆಸರಿಗೆ ಕಳಂಕ ತರುತ್ತಿದೆಯಾದರೆ ಅಥವಾ ತೊಂದರೆಯಾಗುತ್ತಿದೆಯಾದರೆ ಅದನ್ನು ಫೇಸ್ ಬುಕ್ ಕೂಡಲೇ ವಿಮರ್ಷೆಗೆ ಒಳಪಡಿಸುತ್ತೆ ಮತ್ತು ಸರಿಪಡಿಸಲು ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೆ. ಇಂತಹದ್ದೇ ಒಂದು ಕೆಲಸಕ್ಕೆ ಫೇಸ್ ಬುಕ್ ಈಗ ಕೈ ಹಾಕಿದೆ ಎಂದು ಹೇಳಬಹುದು. ಹೌದು , ನಾಲ್ಕು ವರ್ಷಗಳ ನಂತರ ಫೇಸ್ ಬುಕ್ ತನ್ನ" TRENDING" ನ್ಯೂಸ್ ಸೆಕ್ಷನ್ ನ್ನು ತೆಗೆದು ಹಾಕುತ್ತಿದೆ ಎಂಬ ಮಾಹಿತಿಯನ್ನು ಕಂಪೆನಿ ಎಕ್ಸಿಕ್ಯೂಟೀವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಟಿವಿ ಚಾನಲ್ ನಲ್ಲಿ ಮಾತ್ರವಲ್ಲ ಫೇಸ್ ಬುಕ್ ನಲ್ಲೂ ಬರಲಿದೆ ಬ್ರೇಕಿಂಗ್ ನ್ಯೂಸ್

ಈ ಟೂಲ್ ಔಟ್ ಡೇಟೆಡ್ ಆಗಿದೆ ಮತ್ತು ಅಷ್ಟೇನು ಜನಪ್ರೀಯತೆ ಗಳಿಸಲಿಲ್ಲ. ಟ್ರೆಂಡಿಂಗ್ ಸೆಕ್ಷನ್ ನಿಂದ ಪ್ರಯೋಜನವಾಗಿದ್ದಕ್ಕಿಂತ ಹೆಚ್ಚು ತೊಂದರೆಗಳೇ ಆಗಿವೆ. ಸುಳ್ಳು ಸುದ್ದಿಗಳ ಪ್ರಚಾರ, ರಾಜಕೀಯ ಸ್ಥಿತ್ಯಂತರ ಇತ್ಯಾದಿಗಳನ್ನು ತಹಬದಿಯಲ್ಲಿಟ್ಟು ಕೊಳ್ಳಲು ಸಾಧ್ಯವಾಗದೆ, ಇದು ಪ್ರಾಪಂಚಿಕವಾಗಿ ಒಂದಷ್ಟು ತೊಡರುಗಳಿಗೆ ಎಡರು ಮಾಡಿಕೊಟ್ಟಿದೆ.

2014 ರಲ್ಲಿ ಫೇಸ್ ಬುಕ್ ಟ್ರೆಂಡಿಂಗ್ ಸೆಕ್ಷನ್ ನ್ನು ಬಿಡುಗಡೆಗೊಳಿಸಿ ಪ್ರಮುಖ ಕೆಲವು ಸುದ್ದಿಗಳ ಮುಖ್ಯಾಂಶಗಳನ್ನು ಪ್ರಕಟ ಪಡಿಸಿತ್ತು ಮತ್ತು ತುಂಬಾ ಮಹತ್ವದ ಸುದ್ಧಿಗಳನ್ನು ಕ್ಷಣಮಾತ್ರದಲ್ಲಿ ನೇರವಾಗಿ ಬಳಕೆದಾರರಿಗೆ ತಲುಪಿಸಲು ಇದು ನೆರವಾಗುತ್ತೆ ಎಂದು ಭಾವಿಸಲಾಗಿತ್ತು. ಮತ್ತು ಕಳೆದ ವರ್ಷ ಫೇಸ್ ಬುಕ್ ನ ಸಿಇಓ ಮಾರ್ಕ್ ಜ್ಯೂಕ್ ಬರ್ಗ್ ಈ ಆಯ್ಕೆಗೆ ಇನ್ನಷ್ಟು ಮಹತ್ವ ನೀಡಿ, ಬಳಕೆದಾರರು ತಮ್ಮ "ವಯಕ್ತಿಕ ಸುದ್ದಿಪತ್ರಿಕೆ"ಗಳನ್ನು ಅಂದರೆ "ಪರ್ಸನಲ್ ನ್ಯೂಸ್ ಪೇಪರ್ "ತಯಾರಿಸಲು ಅವಕಾಶವಾಗುವಂತೆ ಮಾಡಿದ್ದರು.

ಆದರೆ ಅದು ನಂತರದ ದಿನಗಳಲ್ಲಿ ಭಾರೀ ಅಪಪ್ರಚಾರಗಳಿಗೆ ಕಾರಣವಾಯ್ತು. ಅದರಲ್ಲೂ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಸಂದರ್ಬದಲ್ಲಂತೂ ಸಾಮಾಜಿಕ ಜಾಲತಾಣ ಇದನ್ನು ಫೇಕ್ ನ್ಯೂಸ್ ಗಳ ತವರುಮನೆಯಂತೆ ಮಾಡಿಕೊಂಡುಬಿಟ್ಟಿತ್ತು. ಅಷ್ಟೇ ಯಾಕೆ ಇದು ರಷ್ಯಾದಲ್ಲೂ ಮತ್ತೆ ಪುನರಾವರ್ತಿತವಾಯ್ತು., ನಂತರ ವರ್ಡ್ ಕಪ್, ರೂಬಿನ್ ವಿಲಿಯಮ್ಸ್ ಸಾವು, ಎಬೋಲಾ ಬಗೆಗಿನ ಟ್ರೆಂಡಿಂಗ್ ಸುದ್ದಿಗಳಾದವು ಮತ್ತು ಸತ್ಯಕ್ಕೆ ದೂರವಾದ ಮಾಹಿತಗಳನ್ನೇ ಹೆಚ್ಚು ಒಳಗೊಂಡಿದ್ದವು.

ಆದರೆ ಫೇಸ್ ಬುಕ್ ಈಗ ಈ ಆಯ್ಕೆಯನ್ನು ತೆಗೆದು ಹಾಕಿ ಹೊಸ ಆಯ್ಕೆಯನ್ನು ನೀಡುತ್ತಿದೆ . ಅದುವೇ "ಬ್ರೇಕಿಂಗ್ ನ್ಯೂಸ್". ಪ್ರತಿಯೊಂದು ಪ್ರಾದೇಶಿಕ ಸುದ್ದಿಗಳಿಗೂ ಮಹತ್ವ ನೀಡುವ ಉದ್ದೇಶವನ್ನು ಇದರಲ್ಲಿ ಹೊಂದಲಾಗಿದೆ. ಸುದ್ದಿಯನ್ನು ಪಬ್ಲಿಶ್ ಮಾಡುವ ಬಳಕೆದಾರರು ತಮ್ಮ ಸುದ್ದಿಯೇ ಭಿನ್ನವಾಗಿರುವಂತೆ ಪ್ರಕಟಿಸುವ ಆಯ್ಕೆ ಇದು.

ಟ್ರೆಂಡಿಂಗ್ ನಲ್ಲಿ ಯಾವ ಸುದ್ದಿ ಪ್ರಕಟವಾಗಬೇಕು ಎಂಬ ಬಗ್ಗೆ ವಿಶಾಲ ಆಲೋಚನೆ ಮತ್ತು ಧಿಡೀಡರೆ ನಿರ್ಧಾರ ಕೈಗೊಳ್ಳೋ ಸಾಮರ್ಥ್ಯವಿದ್ದಾಗ ಮಾತ್ರ ಯಾರಾದರೂ ವ್ಯಕ್ತಿ ಈ ವ್ಯವಸ್ಥೆಯಲ್ಲಿ ಆಟವಾಡುತ್ತಿದ್ದಾನಾ ಎಂದು ತಿಳಿಯರು ಸಾಧ್ಯ. ಹಾಗಾಗಿ ಟ್ರೆಂಡಿಂಗ್ ನ್ನು ತೆದೆದುಹಾಕುವುದೇ ಲೇಸು ಎಂದು ಮೇರಿಲ್ಯಾಂಡ್ ಯುನಿವರ್ಸಿಯ ಕಾನೂನು ಪ್ರೊಫೆಸರ್ ಆಗಿರುವ ಫ್ರಾಂಕ್ ಪಾಸ್ಕ್ವೇಲ್ ಅಭಿಪ್ರಾಯ ಪಟ್ಟಿದ್ದಾರೆ.

ಬ್ರೇಕಿಂಗ್ ನ್ಯೂಸ್ ಮತ್ತು ರಿಯಲ್ ಟೈಮ್ ನ್ಯೂಸ್ ಗಳಿಗೆ ಮಹತ್ವ ನೀಡುವ ವಿಚಾರದ ಬಗ್ಗೆ ಕಂಪೆನಿ ಇನ್ನೂ ಕೂಡ ಯೋಚಿಸುತ್ತಿದೆ.ಕಂಡಕಂಡವರೆಲ್ಲ ಸಿಕ್ಕಿಸಿಕ್ಕ ಸುದ್ದಿಗಳನ್ನು ಪ್ರಕಟಿಸಿದರೆ ಸರಿಯಾದ ಟ್ರ್ಯಾಕ್ ಇಟ್ಟುಕೊಳ್ಳಲು ಕಷ್ಟವಾಗುವ ಹಿನ್ನೆಲೆಯಲ್ಲಿ ಫೇಸ್ ಬುಕ್ ನಲ್ಲಿ ನ್ಯೂಸ್ ಗಳನ್ನು ಪಬ್ಲಿಶ್ ಮಾಡುವ ಅವಕಾಶವನ್ನು ಕೇವಲ ನ್ಯೂಸ್ ಸಂಸ್ಥೆಗಳಿಗೆ ಒದಗಿಸಲಿದೆ.

ಪ್ಯೂ ರೀಸರ್ಚ್ ಕೇಂದ್ರವೊಂದು ನಡೆಸಿದ ಸರ್ವೇಯ ಪ್ರಕಾರ ಅಮೇರಿಕಾದ 44 ಶೇಕಡಾ ಯುವಪೀಳಿಗೆ ಸುದ್ದಿಗಳನ್ನು ಫೇಸ್ ಬುಕ್ ನಿಂದಲ್ ತಿಳಿದುಕೊಳ್ಳುತ್ತಾರೆ.

2016 ರಲ್ಲೇ ಟ್ರೆಂಡಿಂಗ್ ಸೆಕ್ಷನ್ ಸಮಸ್ಯೆಯನ್ನು ಎದುರಿಸಿತ್ತು.ರಾಜಕೀಯ ಪಕ್ಷಪಾತ ಧೋರಣೆ ತೋರಲಾಗುತ್ತಿದೆ ಎಂಬ ಆರೋಪ ಬಂದಿತ್ತು. ಆ ನಿಟ್ಟಿನಲ್ಲಿ ಕಂಪೆನಿ ಸಿಇಓ ಜ್ಯೂಕ್ ಬರ್ಗ್ ಮೇಲ್ಪಟ್ಟದ ನಾಯಕರುಗಳನ್ನು ಭೇಟಿ ಮಾಡಿ ಹಾನಿಯನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದರು. ಆದರೆ ಎರಡು ವರ್ಷಗಳ ನಂತರವೂ ಕೂಡ ಫೇಸ್ ಬುಕ್ ಗೆ ಟ್ರೆಂಡಿಂಗ್ ಸೆಕ್ಷನ್ ಬಗ್ಗೆ ಇರುವ ಅಭಿಪ್ರಾಯವನ್ನು ಬದಲಿಸಲಾಗುತ್ತಿಲ್ಲ. ಈಗಲೂ ಇದರ ಬಗ್ಗೆ ಕೆಲವು ಅಪವಾದಗಳಿವೆ.ಇದನ್ನು ಸರಿಪಡಿಸುವ ನಿಟ್ಟಿನಲ್ಲಿ 2016 ರಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೂ ಸೇರದ ಒಂದಷ್ಟು ಜನರ ಗ್ರೂಪ್ ತಯಾರಿಸಿ ಟ್ರೆಂಡಿಂಗ್ ಟಾಪಿಕ್ ಗಳ ಬಗ್ಗೆ ಕೆಲಸ ನಿರ್ವಹಿಸುವಂತೆ ಮಾಡಲಾಗಿತ್ತು. ಆದರೂ ಸಮಸ್ಯೆಗೆ ಮುಕ್ತಿ ಸಿಗಲಿಲ್ಲ.2017 ರಲ್ಲಿ ಮತ್ತೊಮ್ಮೆ ಇದರ ಪರಿಹಾರಕ್ಕೆ ಹೊಸ ಪ್ರಯತ್ನಗಳನ್ನು ಮಾಡಿತ್ತು. ನ್ಯೂಸ್ ಪಬ್ಲಿಷರ್ ಗಳಿಂದಲೇ ಪ್ರಕಟಗೊಂಡ ಸುದ್ದಿಗಳನ್ನು ಇದಕ್ಕೆ ಸೇರಿಸಲಾಯಿತು.ಆದರೆ ಕೇವಲಒಂದು ಸಂಸ್ಥೆಯಿಂದ ಪಬ್ಲಿಶ್ ಆದ ಸುದ್ದಿಗಳು ಸುಳ್ಳು ಸುದ್ದಿಯೂ ಆಗಿರಬಹುದು. ಒಟ್ಟಾರೆಯಾಗಿ ಫೇಸ್ಬುಕ್ ಈ ತಲೆನೋವಿನಿಂದ ಹೊರಬರಲು ಪ್ರಯತ್ನಿಸಿರುವಂತೆ ಕಾಣುತ್ತಿದೆ. ಈ ಸಮಸ್ಯೆಯನ್ನುಪರಿಹರಿಸುವುದಕ್ಕೇ ವೆಚ್ಚ ಮಾಡುವುದು ಕಂಪೆನಿಗೆ ಲಾಭದಾಯಕವಾಗಿ ಕಾಣುತ್ತಿಲ್ಲ. ಹಾಗಾಗಿ ನಮ್ಮ ಇನ್ವೆಸ್ಟರ್ಸ್ ಬೇರೆ ಕಡೆಯಲ್ಲಿ ಇನ್ನು ಉತ್ತಮವಾಗಿ ಇನ್ವೆಸ್ಟ್ ಮಾಡುವುದೇ ಸರಿ ಎಂದು ಹೇಳಿದ್ದಾರೆ ಫೇಸ್ ಬುಕ್ ನ ಅಧಿಕಾರಿ ಹಾರ್ಡಿಮನ್.

ಇನ್ನು ಮುಂದೆ ಬರುವ ಹೊಸ ಯೋಜನೆಯು ಕೆಲವು ನಿಧಾನಗತಿಯ ಹಂತಗಳನ್ನು ಅನುಸರಿಸಲಿದ್ದು, ಸುದ್ದಿಗಾರರಿಗೆ, ಸಂಪಾದಕರಿಗೆ ಹೆಚ್ಚಿನ ಕೆಲಸ ನೀಡುವ ಸಾಧ್ಯತೆ ಇದೆ. ಮಾಧ್ಯಮದ ನಿರ್ಧಾರಗಳು ಇಲ್ಲಿ ಪ್ರಕಟಗೊಳ್ಳಲಿದೆ.

ಒನ್ ಪ್ಲಸ್ 6ನಲ್ಲಿ ನಾಚ್ ನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಗೊತ್ತಾ?ಒನ್ ಪ್ಲಸ್ 6ನಲ್ಲಿ ನಾಚ್ ನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಗೊತ್ತಾ?

ಬ್ರೇಕಿಂಗ್ ನ್ಯೂಸ್ ಲೇಬಲ್ ನ್ನು ಫೇಸ್ ಬುಕ್ 80 ನ್ಯೂಸ್ ಪಬ್ಲಿಷರ್ಸ್ ಗೆ ಒದಗಿಸಿ ವಿಶ್ವದಾದ್ಯಂತ ಒದಗಿಸಿ ಪರೀಕ್ಷೆಗೆ ಒಳಪಡಿಸಲಿದೆ. ಈಗ ಇದ್ದ ಟ್ರೆಂಡಿಂಗ್ ಗಿಂತ ಬ್ರೇಕಿಂಗ್ ನ್ಯೂಸ್ ನ ಹೊರನೋಟ ಭಿನ್ನವಾಗಿರುತ್ತಂತೆ. ಹೇಗೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ.

ಸ್ಥಳೀಯ ಪಬ್ಲಿಷರ್ ಗಳು, ಅಧಿಕಾರಿಗಳು ಮತ್ತು ಸಂಸ್ಥೆಗಳಿಗೂ ಬ್ರೇಕಿಂಗ್ ನ್ಯೂಸ್ ಹಾಕಲು ಅವಕಾಶವಿದ್ದು, "ಟುಡೇ ಇನ್" ಎಂಬ ವೈಶಿಷ್ಟ್ಯದಲ್ಲಿ ಇದನ್ನು ಅಳವಡಿಸಲಾಗುತ್ತಂತೆ. ಯು ಎಸ್ 30 ಮಾರುಕಟ್ಟೆಗಳಲ್ಲಿ ಇದನ್ನು ಪರೀಕ್ಷೆಗೆ ಒಳಪಡಿಸಲಾಗುತ್ತೆ ಎಂದು ತಿಳಿಸಲಾಗಿದೆ. ಆ ಮೂಲಕ ಸ್ಥಳೀಯ ಪತ್ರಿಕೋದ್ಯಮಿಗಳಿಗೂ ಅವಕಾಶ ನೀಡಲಾಗುತ್ತೆ.

How to Send Message to Multiple Contacts on WhatsApp - GIZBOT KANNADA

ಯಾವುದಕ್ಕೂ ಈ ವೈಶಿಷ್ಟ್ಯದ ಬಗ್ಗೆ ಸಂಪೂರ್ಣ ವಿವರ ತಿಳಿಯಲು ಇನ್ನೂ ಸ್ವಲ್ಪ ದಿನ ಕಾಯಬೇಕಿದೆ.

Best Mobiles in India

Read more about:
English summary
Facebook removes Trending section to curb fake news

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X