ಮತ್ತೇ ಹ್ಯಾಕ್ ಆಯ್ತು ಫೇಸ್‌ಬುಕ್: ಡಿಲೀಟ್ ಮಾಡುವುದೇ ಬೆಟರ್...!

|

ಕಳೆದ ಕೆಲ ತಿಂಗಳ ಹಿಂದೆ ಜಾಗತಿಕವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಫೇಸ್‌ಬುಕ್ ಬಳಕೆದಾರರ ಮಾಹಿತಿ ದುರ್ಬಳಕೆಯ ವಿಚಾರವು ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ದೊಡ್ಡ ಮಟ್ಟದಲ್ಲಿ ಫೇಸ್‌ಬುಕ್ ಬಳಕೆದಾರರ ಮಾಹಿತಿಯೂ ಲೀಕ್ ಆಗಿರುವ ಪ್ರಕರಣವೊಂದು ವರದಿಯಾಗಿದೆ.

ಮತ್ತೇ ಹ್ಯಾಕ್ ಆಯ್ತು ಫೇಸ್‌ಬುಕ್: ಡಿಲೀಟ್ ಮಾಡುವುದೇ ಬೆಟರ್...!

ಈ ಹಿಂದೆ ಬೇರೆ ಬೇರೆ ಆಪ್‌ ಗಳ ಮೂಲಕ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಖದೀಯುತ್ತಿದ್ದ ಪ್ರಕರಣವು ವರದಿಯಾಗಿತ್ತು. ಆದರೆ ಈ ಬಾರಿ ಬೇರೊಂದು ಮಾದರಿಯಲ್ಲಿ ಫೇಸ್‌ಬುಕ್ ಖಾತೆಗಳ್ನು ಹ್ಯಾಕ್ ಮಾಡಲಾಗಿದೆ. ಸುಮಾರು 50 ಮಿಲಿಯನ್​ಗೂ ಹೆಚ್ಚು ಖಾತೆಗಳ ಮಾಹಿತಿಯೂ ಲೀಕ್ ಆಗಿದೆ ಎಂದು ಫೇಸ್‌ಬುಕ್ ಅಧಿಕೃತವಾಗಿ ಮಾಹಿತಿಯನ್ನು ನೀಡಿದೆ.

ಹೆಚ್ಚು ಸೇಫ್ ಅಲ್ಲ:

ಹೆಚ್ಚು ಸೇಫ್ ಅಲ್ಲ:

ಹ್ಯಾಕರ್ಸ್‌ಗಳು ಫೇಸ್‌ಬುಕ್ ಹ್ಯಾಕ್ ಮಾಡಲು ಹೊಸ ಮಾದರಿಯ ದಾರಿಗಳನ್ನು ಕಂಡು ಕೊಳ್ಳುತ್ತಿದೆ. ಮಾಹಿತಿಯೇ ಈ ಶತಮಾನದ ಆಸ್ತಿ ಎನ್ನುವುದನ್ನು ಕಂಡುಕೊಂಡಿರುವ ಹ್ಯಾಕರ್ಸ್‌ ಬಳಕೆದಾರರ ಮಾಹಿತಿಯನ್ನು ಹ್ಯಾಕ್ ಮಾಡಿ ಪಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ನಿಮ್ಮ ಫೇಸ್‌ಬುಕ್ ಹೆಚ್ಚು ಸೇಫ್ ಅಲ್ಲ ಎನ್ನಬಹುದಾಗಿದೆ.

ಫೇಸ್‌ಬುಕ್‌ ನೀಡಿದೆ ಅವಕಾಶ:

ಫೇಸ್‌ಬುಕ್‌ ನೀಡಿದೆ ಅವಕಾಶ:

ಫೇಸ್‌ಬುಕ್ ತನ್ನ ಬಳಕೆದಾರರಿಗೆ ನೀಡಿರುವ ಆಯ್ಕೆಯನ್ನು ಹ್ಯಾಕರ್ಸ್‌ಗಳು ತಮ್ಮ ಲಾಭಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿರುವ View As ಆಯ್ಕೆ ಮೂಲಕ ಬಳಕೆದಾರರ ಖಾತೆಗಳನ್ನು ಹ್ಯಾಕ್​​ ಮಾಡಬಹುದು ಎನ್ನಲಾಗಿದೆ. ಇದರ ಮೂಲಕ ಹ್ಯಾಕರ್ಸ್‌ಗಳಿಗೆ ​ ಡೇಟಾ ಕದಿಯಲು ಇದೇ ಸಹಾಯವಾಗುತ್ತಿದೆ ಎಂದು ಫೇಸ್‌ಬುಕ್ ಹೇಳಿದೆ.

50 ಮಿಲಿಯನ್​​ ಖಾತೆ ಹ್ಯಾಕ್:

50 ಮಿಲಿಯನ್​​ ಖಾತೆ ಹ್ಯಾಕ್:

ಫೇಸ್‌ಬುಕ್ ನಲ್ಲಿ ಸುಮಾರು 90 ಮಿಲಿಯನ್​ಗೂ ಹೆಚ್ಚು ಮಂದಿ ಫೇಸ್‌ಬುಕ್‌ ಖಾತೆಯಲ್ಲಿ View As ಆಯ್ಕೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಸುಮಾರು 50 ಮಿಲಿಯನ್ ಮಂದಿ ಖಾತೆ ಹ್ಯಾಕ್ ಆಗಿದೆ ಎನ್ನಲಾಗಿದೆ.

ನೀವೇ ಪರೀಕ್ಷಿಸಿಕೊಳ್ಳಿ:

ನೀವೇ ಪರೀಕ್ಷಿಸಿಕೊಳ್ಳಿ:

ಈ ಹಿನ್ನಲೆಯಲ್ಲಿ ನಿಮ್ಮ ಫೇಸ್‌ಬುಕ್‌ ಸೇಫ್ ಆಗಿದೆಯೇ ಇಲ್ಲವೇ ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಿ ಎಂದು ಮಾಹಿತಿಯನ್ನು ನೀಡಿರುವ ಫೇಸ್‌ಬುಕ್, ಕಾಲ-ಕಾಲಕ್ಕೆ ನಿಮ್ಮ ಪಾಸ್‌ವರ್ಡ್‌ಗಳನ್ನು ಬದಲಾಯಿಸಿಕೊಂಡು ಸುರಕ್ಷತೆಯನ್ನು ನೀವೇ ಹೆಚ್ಚಿಸಿಕೊಳ್ಳಿ ಎಂದು ಕರೆಯನ್ನು ನೀಡಿದೆ.

ಹೆಚ್ಚಿನ ಡಿವೈಸ್‌ನಲ್ಲಿ ಬಳಕೆ ಮಾಡಬೇಡಿ:

ಹೆಚ್ಚಿನ ಡಿವೈಸ್‌ನಲ್ಲಿ ಬಳಕೆ ಮಾಡಬೇಡಿ:

ಇದಲ್ಲದೇ ನಿಮ್ಮ ಫೇಸ್‌ಬುಕ್ ತನ್ನ ಬಳಕೆದಾರರಿಗೆ, ತಮ್ಮ ಖಾತೆಗಳನ್ನು ಹೆಚ್ಚಿನ ಡಿವೈಸ್‌ಗಳಲ್ಲಿ ಬಳಕೆ ಮಾಡಬೇಡಿ ಎಂದು ಮನವಿಯನ್ನು ಮಾಡಿದ್ದು, ಬೇರೆ ಬೇರೆ ಕಡೆಯಲ್ಲಿ ಪೇಸ್‌ಬುಕ್ ಖಾತೆಯನ್ನು ಒಪನ್ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ಇಂದ ಇರುವಂತೆ ತಿಳಿಸಿದೆ.

Best Mobiles in India

English summary
Facebook Says Security Breach Allowed Hackers to Control Accounts of 50 Million Users, to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X