ಫೇಸ್‌ಬುಕ್‌ ಸಿಇಒ ಜುಕರ್‌ಬರ್ಗ್‌ ಸ್ಥಾನಕ್ಕೆ ಬಂದಿದೆ ಕುತ್ತು..!

|

ಸಾಲು ಸಾಲ ಹಗರಣಗಳಿಂದ ಜರ್ಜರಿತವಾಗಿರುವ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ಗೆ ಮತ್ತೊಂದು ತಲೆನೋವು ಶುರುವಾಗಿದ್ದು, ಫೇಸ್‌ಬುಕ್‌ ಚೇರ್‌ಮನ್‌ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆಯಿದೆ. ಹೌದು, ಹಗರಣಗಳು ಮತ್ತು ಆಡಳಿತದ ಸಮಸ್ಯೆಗಳಿಂದ ಬೇಸತ್ತಿರುವ ಷೇರುದಾರರು ಚೇರ್‌ಮನ್ ಸ್ಥಾನದಿಂದ ಮಾರ್ಕ್‌ ಜುಕರ್‌ಬರ್ಗ್‌ನ್ನು ಕೆಳಗಿಳಿಸಲು ಸಿದ್ಧತೆ ನಡೆಸಿದ್ದಾರೆ.

ಫೇಸ್‌ಬುಕ್‌ ಸಿಇಒ ಜುಕರ್‌ಬರ್ಗ್‌ ಸ್ಥಾನಕ್ಕೆ ಬಂದಿದೆ ಕುತ್ತು..!

ಹೌದು, ಫೇಸ್‌ಬುಕ್‌ನಲ್ಲಿ ಷೇರುಗಳನ್ನು ಹೊಂದಿರುವ ಯುಎಸ್‌ನ ಪ್ರಮುಖ ಸಾರ್ವಜನಿಕ ನಿಧಿಗಳು ಬುಧವಾರ ಪ್ರೊಪೊಸಲ್‌ ಸಲ್ಲಿಸಿದ್ದು, CEO ಮಾರ್ಕ್‌ ಜುಕರ್‌ಬರ್ಗ್‌ನ್ನು ಚೇರ್‌ಮನ್‌ ಸ್ಥಾನದಿಂದ ಕೆಳಗಿಳಿಸುವ ನಿರ್ಧಾರಕ್ಕೆ ಬಂದಿವೆ. ಇದಕ್ಕೆ ಪ್ರಮುಖ ಕಾರಣ ಎಂದರೆ ಫೇಸ್‌ಬುಕ್‌ನ ಸಾಲು ಸಾಲು ಹಗರಣಗಳಿಂದ ಬೇಸತ್ತಿರುವ ಷೇರುದಾರರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಯಾರಿಂದ ಪ್ರಸ್ತಾಪ..?

ಯಾರಿಂದ ಪ್ರಸ್ತಾಪ..?

ಇಲಿನಾಯ್ಸ್‌, ರೋಡ್ ಐಲ್ಯಾಂಡ್ ಮತ್ತು ಪೆನ್ಸಿಲ್ವೇನಿಯಾ ಮತ್ತು ನ್ಯೂಯಾರ್ಕ್ ಸಿಟಿ ಕಂಟ್ರೋಲರ್ ಸ್ಕಾಟ್ ಸ್ಟ್ರಿಂಜರ್‌ ರಾಜ್ಯ ಖಜಾಂಚಿಗಳು ಸಹ ಪ್ರಸ್ತಾಪ ಸಲ್ಲಿಸಿದ್ದಾರೆ. ಈ ಖಜಾಂಚಿಗಳು ಪಿಂಚಣಿ ನಿಧಿಗಳು ಸೇರಿದಂತೆ ಹಣವನ್ನು ಮೇಲ್ವಿಚಾರಣೆ ಮಾಡುತ್ತಾರೆ. ಮತ್ತು ಟ್ರಿಲ್ಲಿಯಮ್ ಆಸ್ತಿ ನಿರ್ವಹಣೆಯ ಮೂಲ ಫೈಲರ್‌ ಆಗಿ ಕಾರ್ಯನಿರ್ವಹಿಸುತ್ತಾರೆ.

2017ರಲ್ಲೂ ಆಗಿತ್ತು..!

2017ರಲ್ಲೂ ಆಗಿತ್ತು..!

ಈಗ ಆಗಿರುವ ಪ್ರಸ್ತಾಪದಂತೆ ಷೇರುದಾರರು 2017ರಲ್ಲಿ ಪ್ರತ್ಯೇಕ ಚೇರ್‌ಮನ್‌ಗೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಆದರೆ, ಆ ಪ್ರಸ್ತಾಪವು ಮಾರ್ಕ್‌ ಜುಕರ್‌ಬರ್ಗ್‌ ಕಂಪನಿಯಲ್ಲಿ ಹೆಚ್ಚಿನ ನಿಯಂತ್ರಣ ಹೊಂದಿದ್ದರಿಂದ ಸೋತಿತು. ಈಗ ನೀಡಿರುವ ಪ್ರಸ್ತಾಪದಲ್ಲಿನ ನಾಲ್ಕು ಸಾರ್ವಜನಿಕ ಷೇರುಗಳಲ್ಲಿ ಮೂರು ಸಾರ್ವಜನಿಕ ಷೇರುಗಳ ನಿಧಿಗಳು 2017ರಲ್ಲಿ ಪ್ರತ್ಯೇಕ ಚೇರ್‌ಮನ್‌ ಪ್ರಸ್ತಾಪಕ್ಕೆ ಬೆಂಬಲಿಸಿದ್ದವು.

ಮತ್ತೆ ಯಾಕೆ ಬಂತು ಪ್ರಸ್ತಾಪ..?

ಮತ್ತೆ ಯಾಕೆ ಬಂತು ಪ್ರಸ್ತಾಪ..?

ಇತ್ತೀಚಿನ ಪ್ರಸ್ತಾವನೆಯು ಫೇಸ್‌ಬುಕ್‌ನ ಹಲವು ಸಮಸ್ಯೆಗಳಿಗೆ ಗಮನ ಸೆಳೆಯುವ ಮಾರ್ಗವಾಗಿದೆ ಮತ್ತು ಅವುಗಳನ್ನು ಹೇಗೆ ಪರಿಹರಿಸಬಹುದೆಂಬುದಕ್ಕೆ ಉತ್ತರ ಪಡೆಯಲು ನೀಡಲಾಗಿದೆ ಎಂದು ರೋಡ್ ಐಲ್ಯಾಂಡ್ನ ರಾಜ್ಯ ಖಜಾಂಚಿ ಸೇಥ್ ಮ್ಯಾಗಜೀನರ್ ಹೇಳಿದ್ದಾರೆ. ಇದು ವಾರ್ಷಿಕ ಸಭೆಯಲ್ಲಿ ಮಾತನಾಡಲು ಅವಕಾಶ ಸೃಷ್ಟಿಸುತ್ತದೆ ಮತ್ತು ಇಂದಿನಿಂದ ನಾವು ಸಾರ್ವಜನಿಕ ನ್ಯಾಯಾಲಯದಲ್ಲಿರುತ್ತೇವೆ ಎಂದು ಅವರು ಹೇಳಿದ್ದಾರೆ.

ಮುಂದಿನ ವರ್ಷ ಸಭೆ

ಮುಂದಿನ ವರ್ಷ ಸಭೆ

ಮೇ 2019ರಲ್ಲಿ ಫೇಸ್‌ಬುಕ್‌ನ ವಾರ್ಷಿಕ ಷೇರುದಾರರ ಸಭೆ ನಡೆಯಲಿದ್ದು, ಪ್ರಸ್ತುತ ಪ್ರಸ್ತಾವನೆಯನ್ನು ಅಲ್ಲಿ ಷೇರುದಾರರ ಮುಂದೆ ತರಲು ಉದ್ದೇಶಿಸಲಾಗಿದೆ. ಕಂಪನಿಯ ಮೇಲ್ವಿಚಾರಣೆಯ ಸುಧಾರಣೆ ಹಾಗೂ ಇತರೆ ಕಂಪನಿಗಳಲ್ಲಿರುವಂತೆ ಪ್ರತ್ಯೇಕ ಸ್ವತಂತ್ರ ಚೇರ್‌ಮನ್‌ ಮಂಡಳಿಯನ್ನು ರಚಿಸಬೇಕೆಂದು ಪ್ರಸ್ತಾಪಿಸಲಾಗಿದೆ.

ವಿವಾದಗಳಿಂದ ನಂಬಿಕೆ ಕಳೆದುಕೊಂಡ ಎಫ್‌ಬಿ

ವಿವಾದಗಳಿಂದ ನಂಬಿಕೆ ಕಳೆದುಕೊಂಡ ಎಫ್‌ಬಿ

ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣ ಆಗಿರುವ ಫೇಸ್‌ಬುಕ್‌ ಇತ್ತೀಚೆಗೆ ಹಲವು ವಿವಾದಗಳಿಂದ ಜನರಲ್ಲಿನ ನಂಬಿಕೆಯನ್ನು ಕಳೆದುಕೊಂಡಿತು. ಇದರಲ್ಲಿ ಪ್ರಮುಖವಾದವುಗಳೆಂದರೆ, ಅನಧಿಕೃತವಾಗಿ ಬಳಕೆದಾರರ ಮಾಹಿತಿ ಹಂಚಿಕೆ, ನಕಲಿ ಸುದ್ದಿಗಳ ಪ್ರಸಾರ ಮತ್ತು ಯುಎಸ್‌ ಚುನಾವಣೆಗಳಲ್ಲಿ ವಿದೇಶಿ ಮಧ್ಯಸ್ಥಿಕೆಗಳು ಸೇರಿವೆ. ಸ್ವತಂತ್ರ ಚೇರ್‌ಮನ್‌ ಮಂಡಳಿ ಕಂಪನಿಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೆ ಎನ್ನುವುದಿಲ್ಲ. ಆದರೆ, ಒಂದಿಷ್ಟು ಸಮಸ್ಯೆಗಳನ್ನು ನಿಯಂತ್ರಿಸಬಹುದು ಮತ್ತು ಷೇರು ಬೆಲೆ ಇಳಿಕೆಯಾಗುವುದನ್ನು ತಡೆಯಬಹುದು ಎಂದು ಇಲಿನಾಯ್ಸ್‌ ರಾಜ್ಯ ಖಜಾಂಚಿ ಮೈಕೆಲ್ ಫ್ರೆರಿಚ್ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಭೆ

ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಭೆ

2017ರಲ್ಲಿ ಬಾಹ್ಯ ಹೂಡಿಕೆದಾರರ ಬಹುಮತೆ ನಿರ್ಣಾಯಕವಾಯಿತು. ಮ್ಯಾಗಜೀನರ್‌ ಮತ್ತು ಫ್ರೆರಿಚ್‌ ಹೊಸ ಪ್ರಸ್ತಾಪಕ್ಕೆ ಬೆಂಬಲ ಪಡೆಯಲು ಮುಂದಿನ ತಿಂಗಳು ದೊಡ್ಡ ಫೇಸ್‌ಬುಕ್‌ ಹೂಡಿಕೆದಾರರ ಜತೆ ಸಭೆ ನಡೆಸಿ ಮಾತನಾಡಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಸ್ವೀಕೃತಿಯಾದರೆ ಏನಾಗುತ್ತೇ..?

ಸ್ವೀಕೃತಿಯಾದರೆ ಏನಾಗುತ್ತೇ..?

ಸದ್ಯ ಫೇಸ್‌ಬುಕ್‌ ಸಿಇಒ ಮತ್ತು ಚೇರ್‌ಮನ್‌ ಎರಡು ಹುದ್ದೆಗಳನ್ನು ಮಾರ್ಕ್‌ ಜುಕರ್‌ಬರ್ಗ್‌ ಹೊಂದಿದೆ. ಇದರಿಂದ ಫೇಸ್‌ಬುಕ್‌ನಲ್ಲಿ ಪ್ರತ್ಯೇಕ ಚೇರ್‌ಮನ್‌ ಮಂಡಳಿ ಸೃಷ್ಟಿಯಾಗಿ ಸ್ವತಂತ್ರ ಚೇರ್‌ಮನ್‌ ನೇಮಕಗೊಳ್ಳುತ್ತಾರೆ. ಪ್ರಸ್ತಾಪ ಸ್ವೀಕೃತಿಯಾಗಿ ಅನುಮೋದನೆಗೊಂಡರೆ ಫೇಸ್‌ಬುಕ್‌ನ ಆಡಳಿತ ಎರಡು ಕಡೆಯಿಂದ ನಿರ್ವಹಿಸಲ್ಪಡುತ್ತದೆ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಿಇಒ ಜತೆ ಚೇರ್‌ಮನ್‌ ಕೂಡ ಮುಖ್ಯವಾಗುತ್ತಾರೆ.

Best Mobiles in India

English summary
Facebook shareholders propose removing Mark Zuckerberg as CEO. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X