ಫೇಸ್‌ಬುಕ್ ಒಡೆಯನ ಸಂಬಳ ಆಶ್ಚರ್ಯವಾಗಿದೆ!..ವೆಚ್ಚ ಕೇಳಿ ತಲೆತಿರುಗುತ್ತದೆ!!

|

ಕಳೆದ ವರ್ಷ ಫೇಸ್‌ಬುಕ್ ಮಾಲಿಕ ಪಡೆದ ಸಂಬಳ ಮತ್ತು ಅವರ ಭದ್ರತೆಗಾಗಿ ವಿನಿಯೋಗಿಸಿರುವ ಹಣದ ಮೊತ್ತವನ್ನು ಸಂಸ್ಥೆ ಬಹಿರಂಗಪಡಿಸಿದ್ದು, ವಿಶ್ವದ ಅತ್ಯಂತ ದೊಡ್ಡ ಜಾಲತಾಣ ಸಂಸ್ಥೆ ಫೇಸ್‌ಬುಕ್ ಒಡೆಯ 'ಮಾರ್ಕ್ ಜುಕರ್‌ಬರ್ಗ್' ಅವರು ಪಡೆಯುತ್ತಿರುವ ಸಂಬಳ ಎಷ್ಟು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದಕ್ಕಿಂತಲೂ ಜುಕರ್‌ಬರ್ಗ್ ಭದ್ರತೆಗಾಗಿ ಫೇಸ್‌ಬುಕ್ ಸಂಸ್ಥೆ ವೆಚ್ಚ ಮಾಡುತ್ತಿರುವ ಹಣದ ಮೊತ್ತ ಕೇಳಿದರೆ ಖಂಡಿತಾ ಹೆಚ್ಚು ತಲೆತಿರುಗುತ್ತದೆ.

ಹೌದು, ಕಳೆದ ವರ್ಷ ಫೇಸ್‌ಬುಕ್ ಮಾಲಿಕ ಪಡೆದ ಸಂಬಳ ಮತ್ತು ಅವರ ಭದ್ರತೆಗಾಗಿ ವಿನಿಯೋಗಿಸಿರುವ ಹಣದ ಮೊತ್ತ ಇದೀಗ ರಿವೀಲ್ ಆಗಿದ್ದು, ಜುಕರ್‌ಬರ್ಗ್ ಮೂಲವೇತನವಾಗಿ ಕಳೆದ ಮೂರು ವರ್ಷಗಳಿಂದ 1 ಡಾಲರ್ ಮಾತ್ರ ಪಡೆಯುತ್ತಿದ್ದಾರೆ.! ಆದರೆ, ಮಾರ್ಕ್ ಜುಕರ್‌ಬರ್ಗ್ ಭದ್ರತೆಗಾಗಿ ಸಂಸ್ಥೆ ಕಳೆದ ವರ್ಷ 22.6 ಮಿಲಿಯನ್ ಡಾಲರ್ ವೆಚ್ಚ ಮಾಡಿದೆ. ಅದರಲ್ಲಿ ಬಹುಪಾಲು ಮೊತ್ತ ವೈಯಕ್ತಿಕ ಭದ್ರತೆಗೆ ತಗಲುತ್ತಿದೆ ಎಂದು ಸಂಸ್ಥೆಯ ದಾಖಲೆಗಳು ಹೇಳುತ್ತಿವೆ.

 ಫೇಸ್‌ಬುಕ್ ಒಡೆಯನ ಸಂಬಳ ಆಶ್ಚರ್ಯವಾಗಿದೆ!..ವೆಚ್ಚ ಕೇಳಿ ತಲೆತಿರುಗುತ್ತದೆ!!

ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಸಂಬಳವನ್ನು ಪಡೆಯದೇ ಇದ್ದರೂ ಅವರ ಇತರ ವೆಚ್ಚ ನಿರ್ವಹಣೆಗಾಗಿ ಸಂಸ್ಥೆ ಭಾರೀ ವೆಚ್ಚ ಮಾಡುತ್ತಿದೆ. ಆದರೆ ಅವರ ಇತರ ವೆಚ್ಚ, ಭತ್ಯೆಗಳು ಎಲ್ಲವೂ ಸೇರಿ ಭಾರತದ ರೂಪಾಯಿಗಳಲ್ಲಿ ಅಂದಾಜು 156 ಕೋಟಿ ರೂ. ವ್ಯಯವಾಗುತ್ತಿದೆ. ಅದರಲ್ಲಿ ಬಹುಪಾಲು ಮೊತ್ತ ಅವರ ವೈಯಕ್ತಿಕ ಭದ್ರತೆಗೆ ತಗಲುತ್ತಿದ್ದರೆ, ಜುಕರ್‌ಬರ್ಗ್ ಭದ್ರತೆ ಮಾತ್ರವಲ್ಲದೆ, ಆತನ ಕುಟುಂಬದ ಭದ್ರತೆಯೂ ಆದ್ಯತೆಯ ಪಟ್ಟಿಯಲ್ಲಿದೆ ಎಂದು ತಿಳಿದುಬಂದಿದೆ.

ಫೇಸ್‌ಬುಕ್ ವ್ಯವಹಾರಗಳ ನಿರ್ವಹಣೆಯಲ್ಲಿ ಮಾರ್ಕ್ ಜುಕರ್‌ಬರ್ಗ್ ಅವರ ಪ್ರತಿನಡೆಯೂ ಅವರ ಆದ್ಯತೆ ಮೇರೆಗೆ ಷೇರುದಾರರ ತಂಡ ನಿರ್ವಹಣೆ ಮಾಡುತ್ತಿದೆ. ಕಳೆದೆರಡು ವರ್ಷಗಳಲ್ಲಿ ಸಂಸ್ಥೆ ಎದುರಿಸಬೇಕಾಗಿ ಬಂದಂತಹ ಸಮಸ್ಯೆಗಳಿಂದಾಗಿ ಫೇಸ್‌ಬುಕ್ ಸ್ವಲ್ಪ ಕನಲಿದಂತೆ ಕಂಡುಬಂದಿದೆ. ಇದೇ ಕಾರಣಕ್ಕೆ ಜುಕರ್‌ಬರ್ಗ್ ಓಡಾಟಕ್ಕೆ ಖಾಸಗಿ ಜೆಟ್ ವ್ಯವಸ್ಥೆಯಿದ್ದು, ಸಂಸ್ಥೆ ನೀಡುವ ಒಟ್ಟಾರೆ ಭದ್ರತಾ ಕಾರ್ಯಕ್ರಮದಲ್ಲಿ ಸೇರುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಫೇಸ್‌ಬುಕ್ ಒಡೆಯನ ಸಂಬಳ ಆಶ್ಚರ್ಯವಾಗಿದೆ!..ವೆಚ್ಚ ಕೇಳಿ ತಲೆತಿರುಗುತ್ತದೆ!!

ಅಮೆರಿಕ ಚುನಾವಣೆಯಲ್ಲಿ ರಷ್ಯಾದ ಫೇಸ್‌ಬುಕ್ ಕೈವಾಡ, ಹಲವು ಅಧಿಕಾರಿಗಳ ರಾಜೀನಾಮೆ, ಬಳಕೆದಾರರ ಮಾಹಿತಿ ಕದಿಯುವ ಆರೋಪ ಸಹಿತ ಫೇಸ್‌ಬುಕ್ ಹಲವು ಆರೋಪ ಎದುರಿಸುತ್ತಿದೆ. ಜತೆಗೆ ಜುಕರ್‌ಬರ್ಗ್ ಕೈಗೊಳ್ಳುವ ಕೆಲ ನಿರ್ಧಾರಕ್ಕೆ ನಿರ್ದೇಶಕರ ಮಂಡಳಿ ಅಸಾಮಾಧಾನವೂ ಸಹಿತ ಸಂಸ್ಥೆಗೆ ಕಳವಳ ತಂದಿದೆ. ಇದರಿಂದಾಗಿ ಸಿಇಒ ಮಾರ್ಕ್ ಜುಕರ್‌ಬರ್ಗ್‌ಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ ಎನ್ನಲಾಗಿದೆ.

ಓದಿರಿ: '996' ರೀತಿಯಲ್ಲಿ ದುಡಿಯಿರಿ ಎಂದ ಅಲಿಬಾಬಾ ಸಂಸ್ಥಾಪಕ 'ಜಾಕ್ ಮಾ'!..ಏನಿದು ವಿವಾದ?

Best Mobiles in India

English summary
Mark Zuckerberg has drawn a base salary of $1 for the past three years, and his "other" compensation was listed at $22.6 million, most of which was for his personal security. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X