ಹೊಸ ಆಪರೇಟಿಂಗ್‌ ಸಿಸ್ಟಂ ಆವಿಷ್ಕಾರಕ್ಕೆ ಮುಂದಾದ ಫೇಸ್‌ಬುಕ್‌!

|

ಸಾಮಾಜಿಕ ಜಾಲತಾಣದ ದೈತ್ಯ ಫೇಸ್‌ಬುಕ್‌ ಮತ್ತೊಂದು ಆವಿಷ್ಕಾರಕ್ಕೆ ಮುಂದಾಗಿದೆ. ಗೂಗಲ್‌ ಅಂಡ್ರಾಯ್ಡ್‌ಅವಲಂಬನೆಗೆ ಬದಲಾಗಿ ತನ್ನದೇ ಆದ ಆಪರೇಟಿಂಗ್ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ದಿ ವರ್ಜ್ ನೀಡಿರುವ ಮಾಹಿತಿ ಪ್ರಕಾರ, ಈ ಹಿಂದೆ ವಿಂಡೋಸ್ ಎನ್‌ಟಿ ಆಪರೇಟಿಂಗ್ ಸಿಸ್ಟಮ್ ಅನ್ನು ರಚಿಸಿದ್ದ ಮಾಜಿ ಮೈಕ್ರೋಸಾಫ್ಟ್ ಅಧಿಕಾರಿ ಮಾರ್ಕ್ ಲುಕೊವ್ಸ್ಕಿ (Lucovsky) ಈ ಅಭಿವೃದ್ಧಿ ಕಾರ್ಯದ ನೇತೃತ್ವ ವಹಿಸಿದ್ದಾರೆ ಎನ್ನಲಾಗಿದೆ.

ಹೌದು

ಹೌದು, ಸಾಮಾಜಿಕ ಜಾಲತಾಣವಾದ ಫೆಸ್‌ಬುಕ್‌ ಇಷ್ಟು ದಿನ ತನ್ನ ಬಳಕೆದಾರರ ಗೌಪ್ಯ ಮಾಹಿತಿ ಸೋರಿಕೆ, ದತ್ತಾಂಶ ಸೋರಿಕೆಯಂತಹ ಆರೋಪಗಳ ಎದುರಿಸುತ್ತಿದೆಯಾದರೂ ತನ್ನ ಜನಪ್ರಿಯತೆಯನ್ನೇನೂ ಕಳೆದುಕೊಂಡಿಲ್ಲ. ಬದಲಿಗೆ ಈಗಲೂ ಕೂಡ ಅತಿ ಹೆಚ್ಚು ಬಳಕೆದಾರರನ್ನ ಹೊಂದಿರುವ ಸೋಶಿಯಲ್‌ ಮೀಡಿಯಾ ಆಪ್ಲಕೇಶನ್‌ ಆಗಿದೆ. ಸಧ್ಯ ಇಷ್ಟು ದಿನ ಗೂಗಲ್‌ನ ಆಂಡ್ರಾಯ್ಡ್‌ ಸಹಾಯದಿಂದ ಕಾರ್ಯನಿರ್ವಹಿಸುತ್ತಿದ್ದ ಫೇಸ್‌ಬುಕ್‌ ಇದೀಗ ತನ್ನದೇ ಆದ ಆಪರೇಟಿಂಗ್‌ ಸಿಸ್ಟಂ ಅಭಿವೃದ್ದಿ ಪಡಿಸೋಕೆ ಮುಂದಾಗಿದೆ. ಈ ಮೂಲಕ ಗೂಗಲ್‌ ಮೇಲಿನ ಅತಿಯಾದ ಅವಲಂಬನೆಯನ್ನ ತಪ್ಪಿಸಿಕೊಳ್ಳೊದಕ್ಕೆ ಫೇಸ್‌ಬುಕ್‌ ಮುಂದಾಗಿದೆ ಎನ್ನಲಾಗಿದೆ.

ಫೇಸ್‌ಬುಕ್

ಪ್ರಸ್ತುತ ಫೇಸ್‌ಬುಕ್ ಗೂಗಲ್‌ನ ಆಂಡ್ರಾಯ್ಡ್‌ ಮೂಲಕ ಕಾರ್ಯನಿರ್ವಹಣೆ ಮಾಡೋದಕ್ಕೆ ಸಾಧ್ಯವಾಗ್ತಿದೆ. ಇದಕ್ಕಾಗಿ ಗೂಗಲ್‌ನ ಆಂಡ್ರಾಯ್ಡ್‌ನ ಜೊತೆ ಫೇಸ್‌ಬುಕ್‌ನ ಆಕ್ಯುಲಸ್ ಮತ್ತು ಪೋರ್ಟಲ್ ಎಂಬ ಸಾಧನಗಳನ್ನ ಕನೆಕ್ಟ್‌ ಮಾಡಲಾಗಿದೆ. ಇದೀಗ ಫೇಸ್‌ಬುಕ್‌ ಹೊಸ ಆಪರೇಟಿಂಗ್‌ ಸಿಸ್ಟಂ ಅಭಿವೃದ್ದಿ ಪಡಿಸಿದ ನಂತರ ಗೂಗಲ್‌ ಅಂಡ್ರಾಯ್ಡ್‌ ಬದಲಿಗೆ ಬರುವ ಹೊಸ ಆಪರೇಟಿಂಗ್‌ ಸಿಸ್ಟಂನಲ್ಲಿ ಆಕ್ಯುಲಸ್ ಮತ್ತು ಪೋರ್ಟಲ್ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗ್ತಿದೆ.

ಹೊಸ

ಇನ್ನು ಫೇಸ್‌ಬುಕ್‌ ತನ್ನ ಹೊಸ ಆಪರೇಟಿಂಗ್ ಸಿಸ್ಟಂನೊಂದಿಗೆ ತನ್ನ ವಿಆರ್ ಮತ್ತು ಸ್ಮಾರ್ಟ್ ಸಾಧನಗಳನ್ನ ಬದಲಾಯಿಸಲು ಚಿಂತನೆ ನಡೆಸಿದೆ ಎಂದು ಎಆರ್ ಮತ್ತು ವಿಆರ್ ಮುಖ್ಯಸ್ಥರಲ್ಲಿ ಒಬ್ಬರಾದ ಫಿಕಸ್ ಕಿರ್ಕ್‌ಪ್ಯಾಟ್ರಿಕ್ ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಫೇಸ್‌ಬುಕ್‌ ಭವಿಷ್ಯದಲ್ಲಿ ಗೂಗಲ್‌ನ ಸಾಫ್ಟ್‌ವೇರ್ ಅನ್ನು ಅವಲಂಬಿಸಬೇಕಾಗಿಲ್ಲ, ಮುಂದೆ ಫೇಸ್‌ಬುಕ್‌ ಸಂಪೂರ್ಣವಾಗಿ ಗೂಗಲ್‌ ನಿಯಂತ್ರಣದಿಂದ ಪ್ರತ್ಯೇಕವಾಗಲಿದೆ.

ಆಕ್ಯುಲಸ್

ಸದ್ಯ ಆಕ್ಯುಲಸ್ ಮತ್ತು ಪೋರ್ಟಲ್ ಸಾಧನಗಳ ಜೊತೆಗೆ, ಫೇಸ್‌ಬುಕ್ ಕಾರ್ಯನಿರ್ವಹಿಸಲು ಫೇಸ್‌ಬುಕ್‌ ಎಆರ್ ಗ್ಲಾಸ್‌ ಸಾಧನವನ್ನ ಅಭಿವೃದ್ದಿ ಪಡಿಸುತ್ತಿದ್ದು ಇದಕ್ಕೆ "ಓರಿಯನ್" ಎಂಬ ಸಂಕೇತನಾಮ ನೀಡಲಾಗಿದೆ. ಈ ಗ್ಲಾಸ್‌ 2023 ರ ವೇಳಗೆ ಬರುವ ಸಾದ್ಯತೆ ಇದ್ದು ಇದು ಇಂಟರ್‌ಫೇಸ್‌ನಲ್ಲಿ ಸಹ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಲಾಗಿದೆ. ಅಲ್ಲದೆ ಇದು ಫೇಸ್‌ಬುಕ್‌ ಬಳಕೆದಾರರಿಗೆ ತಮ್ಮ ಆಲೋಚನೆಗಳೊಂದಿಗೆ ಅವುಗಳನ್ನು ನಿಯಂತ್ರಿಸಲು ಸಹ ಅನುವು ಮಾಡಿಕೊಡುತ್ತದೆ.

ಓಎಸ್

ಹಾಗಂತ ಫೇಸ್‌ಬುಕ್ ತನ್ನದೇ ಆದ ಓಎಸ್ ಅನ್ನು ಅಭಿವೃದ್ಧಿಪಡಿಸುವ ಪ್ರಯತ್ನ ಇದೇ ಮೊದಲೇನು ಅಲ್ಲ ಈ ಹಿಂದೆಯೂ ಸಹ ಇಂತಹದ್ದೆ ಒಂದು ಪ್ರಯತ್ನವನ್ನ 2013 ರಲ್ಲಿಯೇ ಫೇಸ್‌ಬುಕ್‌ ಮಾಡಿತ್ತು. ಅಂದು ಫೇಸ್‌ಬುಕ್‌ ರೂಪಿಸಿದ್ದ ಆಂಡ್ರಾಯ್ಡ್ನ ಫೋರ್ಕ್ಡ ಸಿಸ್ಟ್ಂ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಅಲ್ಲದೇ ಇದನ್ನ ಉತ್ತಮ ರೀತಿಯಲ್ಲಿ ಸ್ವೀಕರಿಸಲು ಸ್ವತಃ ಫೇಸ್‌ಬುಕ್‌ ಗೂ ಕೂಡ ಸಾಧ್ಯವಾಗಲಿಲ್ಲ. ಇದೆಲ್ಲದರ ನಡುವೆ ಫೇಸ್‌ಬುಕ್‌ ಮತ್ತೇ ತನ್ನದೇ ಹೊಸ ಆಪರೇಟಿಂಗ್‌ ಸಿಸ್ಟಂ ಮಾಡಲು ಹೊರಟ್ಟಿದ್ದು ಯಶಸ್ವಿ ಯಾಗಲಿದೆಯಾ ಅನ್ನೊದನ್ನ ಕಾದು ನೋಡಬೇಕಿದೆ.

Most Read Articles
Best Mobiles in India

Read more about:
English summary
While the report provides a limited amount of information about how Facebook plans to use the new operating system, it does point out that currently Facebook’s Oculus and Portal devices run on a modified version of Android. This leads us to believe that with its new operating system the company plans to replace Android on its VR and smart devices. And one of Facebook’s AR and VR heads, Ficus Kirkpatrick, mirrors this sentiment. According to Kirkpatrick, “it’s possible” that Facebook’s future hardware won’t need to rely on Google’s software which could possibly remove Google’s control over the company’s hardware.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X