ವಿದೇಶಿ ಫೇಸ್‌ಬುಕ್ ಗೆಳೆಯನನ್ನು ನಂಬಿ 20 ಲಕ್ಷ ಕಳೆದುಕೊಂಡ ದಾವಣಗೆರೆ ಮಹಿಳೆ!!

|

ದುಬಾರಿ ಉಡುಗೊರೆ ಆಸೆ ತೋರಿಸಿ ಮೂಲಕ ವಂಚಿಸಿರುವ ಹಲವು ಘಟನೆಗಳು ವರದಿಯಾಗುತ್ತಿದ್ದರೂ ಸಹ ಕೆಲವರು ಬುದ್ದಿಕಲಿಯುತ್ತಿಲ್ಲ. ಇತ್ತೀಚಿಗೆ ದಾವಣಗೆರೆಯಲ್ಲಿ ಇಂತಹುದೇ ಒಂದು ಘಟನೆ ವರದಿಯಾಗಿದ್ದು, ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ವ್ಯಕ್ತಿಯೋರ್ವ ನಗರದ ಮಹಿಳೆಗೆ 20 ಲಕ್ಷ ರೂ. ವಂಚಿಸಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

ದಾವಣಗೆರೆ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ನಗರದಲ್ಲಿ ಬ್ಯೂಟಿಪಾರ್ಲರ್ ನಡೆಸುತ್ತಿರುವ ಮಹಿಳೆಯೊರ್ವರು ಹೀಗೆಯೇ ಮೋಸ ಹೋಗಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ವ್ಯಕ್ತಿ ವಿದೇಶಿ ಕರೆನ್ಸಿ ಮತ್ತು ದುಬಾರಿ ಉಡುಗೊರೆ ಆಸೆ ತೋರಿಸಿ 20 ಲಕ್ಷ 65 ಸಾವಿರ ರೂ. ವಂಚಿಸಿರುವ ಬಗ್ಗೆ ಅವರು ದೂರು ದಾಖಲಿಸಿದ್ದಾರೆ.

ವಿದೇಶಿ ಫೇಸ್‌ಬುಕ್ ಗೆಳೆಯನನ್ನು ನಂಬಿ 20 ಲಕ್ಷ ಕಳೆದುಕೊಂಡ ದಾವಣಗೆರೆ ಮಹಿಳೆ!!

ಘಟನೆಗೆ ಬರುವುದಾದರೆ, ವಿದೇಶಿಗ ಸ್ಟೀವನ್ ಕ್ಲೈಮೆಂಟ್ ಎಂಬವನು ಫೇಸ್‌ಬುಕ್‌ನ ಮೆಸೆಂಜರ್‌ನಲ್ಲಿ ಹಾಯ್‌ ಎಂದು ಮೆಸೆಜ್ ಮಾಡಿದ್ದಾನೆ. ಇದಕ್ಕೆ ಮಹಿಳೆ ಪ್ರತಿಕ್ರಿಯಿಸಿದ್ದಾರೆ. ಇದಾದ ನಂತರ ಪರಿಚಯ ಸ್ನೇಹಕ್ಕೆ ತಿರುಗಿ ಮೋಸ ಹೋಗ ಘಟನೆ ನಡೆದಿದೆ. ಹಾಗಾದರೆ, ಮಹಿಳೆ 20 ಲಕ್ಷ ರೂ. ವಂಚಿನೆಗೊಳಲಾಗಿರುವ ಸಂಪೂರ್ಣ ಕಥೆ ಏನೆಂಬುದನ್ನು ಮುಂದೆ ಓದಿ ತಿಳಿಯಿರಿ.

ವಿದೇಶಿಗನ ಗೆಳತನ ತಂತು ಕುತ್ತು!

ವಿದೇಶಿಗನ ಗೆಳತನ ತಂತು ಕುತ್ತು!

ಮೊದಲೇ ಹೇಳಿದಂತೆ ಫೇಸ್‌ಬುಕ್‌ನ ಮೆಸೆಂಜರ್‌ನಲ್ಲಿ ವಿದೇಶಿಗನ ಸ್ಟೀವನ್ ಕ್ಲೈಮೆಂಟ್ ಎಂಬವನು ಹಾಯ್‌ ಎಂದು ಮಹಿಳೆಯರಿಗೆ ಮೆಸೇಜ್ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯ ಪೋನ್‌ ನಂಬರ್‌ ಪಡೆದ ಆತ ತಾನು ಲಂಡನ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿರುವುದು ಎಂದು ಹೇಳಿದ್ದಾರೆ. ಅದು ಫೇಕ್ ಅಕೌಂಟ್ ಸಹ ಆಗಿರಬಹುದು ಎಂದು ಯೋಚಿಸದ ಮಹಿಳೆ ನಂಬಿದ್ದಾರೆ.

ಹಣಸಹಿತ ಗಿಫ್ಟ್ ಕಳಿಸಿದ!

ಹಣಸಹಿತ ಗಿಫ್ಟ್ ಕಳಿಸಿದ!

ಮಹಿಳೆಯ ಖಾಸಾಗಿ ನಂಬರ್ ಅನ್ನು ಸಹ ಪಡೆದ ಆತ ದಿನದಿಂದ ದಿನಕ್ಕೆ ಆಕೆಯ ಹತ್ತಿರ ಸಲುಗೆಯನ್ನು ಬೆಳೆಸಿಕೊಂಡಿದ್ದಾರೆ. ನಿನಗಾಗಿ ನಾನು ಏನಾದರೂ ಗಿಫ್ಟ್ ಕಳುಹಿಸುವೆ ಎಂದು ಹೇಳಿ ಆಕೆಗೆ ಹೇಳಿದ್ದಾನೆ. ಶಿಘ್ರವೇ ಬೆಲೆಬಾಳುವ ಗಿಫ್ಟ್ ಐಟಂ ಒಂದನ್ನು ಪಾರ್ಸಲ್ ಮೂಲಕ ಕಳುಹಿಸುವೆ. ಅದರಲ್ಲಿ ಹಣಸಹಿತ ಗಿಫ್ಟ್ ಇರುತ್ತದೆ ಎಂದು ಮಹಿಳೆಗೆ ಹೇಳಿ ಆತ ನಂಬಿಸಿದ್ದಾನೆ.

ನಂತರ ರಿಟಾ ಎಂಟ್ರಿ!

ನಂತರ ರಿಟಾ ಎಂಟ್ರಿ!

ಆತ ಹೀಗೆ ಹೇಳಿದ ಎರಡು ದಿನಗಳಲ್ಲಿ ಇದಕ್ಕೆ ರಿಟಾ ಎಂಬ ವಿದೇಶಿ ಮಹಿಳೆ ಎಂಟ್ರಿಯಾಗಿದ್ದಾಳೆ. ನಗರದ ಮಹಿಳೆಗೆ ಪೋನ್‌ ಮಾಡಿದ ಆಕೆ ತಾನು ಡೆಲ್ಲಿ ಏರ್ಪೋಟ್‌ನಿಂದ ಕಾಲ್‌ ಮಾಡುತ್ತಿದ್ದು, ಸ್ಟೀವನ್ ಕ್ಲೈಮೆಂಟ್ ಒಂದು ಗಿಫ್ಟ್ ಕಳುಹಿಸಿದ್ದಾರೆ. ಗಿಫ್ಟ್ ವಿದೇಶದಿಂದ ಬಂದಿರುವುದರಿಂದ ಅದನ್ನು ಬಿಡಿಸಲು 28,700 ರೂ. ಪಾವತಿಸಲು ಫೋನ್ ಮಾಡಿ ತಿಳಿಸಿದ್ದಾಳೆ.

ಆರಂಭದಲ್ಲಿ ಮಹಿಳೆ ನಂಬಿಲ್ಲ.

ಆರಂಭದಲ್ಲಿ ಮಹಿಳೆ ನಂಬಿಲ್ಲ.

ರಿಟಾ ಎಂಬ ವಿದೇಶಿ ಮಹಿಳೆ ಫೋನ್ ಮಾಡಿ 28,700 ರೂ. ಪಾವತಿಸಲು ಫೋನ್ ಮಾಡಿ ಕೇಳಿದಾಗ ಈ ಮಹಿಳೆ ಮೊದಲು ನಂಬಿಲ್ಲ. ಆದರೆ, ರಿಟಾ ಪದೆ ಪದೇ ಪೋನ್‌ ಮಾಡಿ ನಂಬಿಸಿದ್ದಾಳೆ. ಜೊತೆಗೆ ಈಕೆ ಸ್ಟೀವನ್‌ ಕ್ಲೈಮೆಂಟ್‌ಗೆ ಪೋನ್‌ ಮಾಡಿದಾಗ ನಾನೇ ಪರ್ಸನಲ್ಲಾಗಿ ಬಂದು ದುಬಾರಿ ಗೀಫ್ಟ್‌ನ್ನು ಬಿಡಿಸಿಕೊಡುತ್ತೆನೆಂದು ಹೇಳಿ ನಂಬಿಸಿದ್ದಾನೆ.

ವಂಚನೆ ಜಾಲದಲ್ಲಿ ಮಹಿಳೆ!

ವಂಚನೆ ಜಾಲದಲ್ಲಿ ಮಹಿಳೆ!

ಹೀಗೆ ವಂಚನೆ ಜಾಲಕ್ಕೆ ಬಿದ್ದ ಮಹಿಳೆ 10ಕ್ಕೂ ಹೆಚ್ಚು ಬಾರಿ ಸುಮಾರು 20.65 ಲಕ್ಷ ರೂ.ಗಳನ್ನು ಚೆಕ್‌ ಮುಖಾಂತರ ಬೇರೆ ಬೇರೆ ಅಕೌಂಟ್‌ಗಳಿಗೆ ಎಸ್‌ಬಿಐನಿಂದ ಹಣ ಹಾಕಿರುವುದಾಗಿ ಹೇಳಿದ್ದಾರೆ. ಇಂಡಿಯನ್‌ ಕರೆನ್ಸಿಗೆ ಹಣ ಪರಿವರ್ತಿಸಲು ಹಾಗೂ ಟ್ಯಾಕ್ಸ್‌, ಜಿಎಸ್‌ಟಿ ಇತ್ಯಾದಿ ಖರ್ಚುಗಳನ್ನು ಭರಿಸಲು ಹಣ ಬೇಕು ಎಂದು ಒಟ್ಟು 20.65 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ.

ಈಗ ದೂರು ದಾಖಲು!

ಈಗ ದೂರು ದಾಖಲು!

ಫೇಸ್‌ಬುಕ್ ಗೆಳೆಯ ವಿದೇಶಿಗ ಸ್ಟೀವನ್ ಕ್ಲೈಮೆಂಟ್‌ನಿಂದ ಹಣ ವಾಪಸ್ ಬರುತ್ತದೆ ಎಂದು ಮಹಿಳೆ ಸಾಲ ಮಾಡಿ ಹಣವನ್ನು ವಂಚಕರಿಗೆ ನೀಡಿದ್ದಾಲೆ. ಆದರೆ, ಮತ್ತಷ್ಟು ಹಣ ಪೀಕರು ಅವರು ಪ್ರಯತ್ನ ನಡೆಸಿದ್ದರಿಂದ ತಾನು ಮೋಸಹೋಗಿರುವುದು ಮಹಿಳೆಗೆ ಖಾತ್ರಿಯಾಗಿದೆ. ನಂತರ ಪೊಲೀಸ್ ಠಾಣೆಗೆ ತೆರಳಿ ತಾನು ವಂಚನೆಗೊಳಗಾದ ಬಗ್ಗೆ ಮಹಿಳೆ ದೂರು ನೀಡಿದ್ದಾರೆ.

Best Mobiles in India

English summary
The victim lost her entire life's savings in the fraud. Elderly woman duped of Rs20 lakh in scam by Facebook 'friend' to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X