ಬಳಕೆದಾರರು ಟ್ವಿಟರ್‌ಗೆ ಗುಡ್‌ ಬೈ ಹೇಳ್ತಾರಾ?..ಟ್ವಿಟರ್‌ಗೆ ಪರ್ಯಾಯ ಆಪ್‌ಗಳ ಲಿಸ್ಟ್‌ ಇಲ್ಲಿದೆ!

|

ಇತ್ತೀಚಿಗೆ ಟೆಸ್ಲಾ ಕಂಪನಿಯ ಸಿಇಓ ಎಲಾನ್‌ ಮಸ್ಕ್‌ (Elon Musk) ಟ್ವಿಟರ್ ಖರೀದಿಸಿದ್ದು, ಹಲವು ಬದಲಾವಣೆಗಳಿಗೆ ಮುನ್ನುಡಿ ಬರೆದಿದ್ದಾರೆ. ಎಲಾನ್‌ ಮಸ್ಕ್‌ ಟ್ವಿಟರ್ ಪ್ಲಾಟ್‌ಫಾರ್ಮ್‌ಗೆ ಕೆಲವು ಬದಲಾವಣೆಗಳನ್ನು ತರಲು ಈಗಾಗಲೇ ಪ್ರಾರಂಭಿಸಿದೆ. ಬದಲಾವಣೆಯ ಆರಂಭವಾಗಿ ಟ್ವಿಟರ್ ಬ್ಲೂ ಟಿಕ್‌ಗೆ (Twitter Blue twitter tick) ಶುಲ್ಕ ವಿಧಿಸಿದ್ದು, ಇದು ಬಳಕೆದಾರರಲ್ಲಿ ಅಚ್ಚರಿ ಮೂಡಿಸಿದೆ. ಇಂತಹ ಕೆಲವು ಬದಲಾವಣೆಗಳು ಬಳಕೆದಾರರಿಗೆ ಟ್ವಿಟರ್‌ಗೆ ಪರ್ಯಾಯ ಆಯ್ಕೆಗಳತ್ತ ನೋಡುವಂತೆ ಮಾಡಿದೆ.

ಮೈಕ್ರೋಬ್ಲಾಗಿಂಗ್

ಹೌದು, ಜನಪ್ರಿಯ ಮೈಕ್ರೋಬ್ಲಾಗಿಂಗ್ ತಾಣ ಎನಿಸಿಕೊಂಡಿರುವ ಟ್ವಿಟರ್ (Twitter) ಈಗ ಮುನ್ನೆಲೆಯ ಸುದ್ದಿಯಲ್ಲಿದೆ. ಟ್ವಿಟರ್‌ ಪ್ಲಾಟ್‌ಫಾರ್ಮ್ನ ಇತ್ತೀಚಿಗಿನ ಕೆಲವು ಬದಲಾವಣೆಗಳು, ಬಳಕೆದಾರರಲ್ಲಿ ಟ್ವಿಟರ್‌ ಅಪ್ಲಿಕೇಶನ್ ಗೆ ಪರ್ಯಾಯವಾದ ಪ್ಲಾಟ್‌ಫಾರ್ಮ್ ಗಳತ್ತ ವಾಲುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಟ್ವಿಟರ್ ಹೋಲುವ ಇತರೆ ಕೆಲವು ಅಪ್ಲಿಕೇಶನ್ ಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಹಾಗಾದರೆ ಈ ಲೇಖನದಲ್ಲಿ ಟ್ವಿಟರ್‌ ಆಪ್‌ಗೆ ಪರ್ಯಾಯವಾಗಿರುವ ಕೆಲವು ಅತ್ಯುತ್ತಮ ಆಪ್ಸ್‌ಗಳ ಬಗ್ಗೆ ತಿಳಿಯೋಣ ಬನ್ನಿರಿ.

ಕೂ ಆಪ್‌ (Koo)

ಕೂ ಆಪ್‌ (Koo)

ಕೂ ಆಪ್ ಬಹು-ಭಾಷಾ, ಮೈಕ್ರೋ-ಬ್ಲಾಗಿಂಗ್ ವೇದಿಕೆ ಆಗಿದ್ದು, ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ. ಅವುಗಳು ಕ್ರಮವಾಗಿ ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಮತ್ತು ಇಂಗ್ಲಿಷ್ ಆಗಿವೆ. ಇನ್ನು ಕೂ ಅಪ್ಲಿಕೇಶನ್ ಬಳಕೆದಾರರಿಗೆ ತಮ್ಮ ವಿಚಾರ, ಆಲೋಚನೆ ಅವರ ಮಾತೃ ಭಾಷೆಯಲ್ಲಿಯೇ ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡುತ್ತದೆ. ಕೂ ಅಪ್ಲಿಕೇಶನ್ 45 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದಿದ್ದು, ರಾಜಕೀಯ, ಕ್ರೀಡೆ, ಮಾಧ್ಯಮ, ಮನರಂಜನೆ, ಆಧ್ಯಾತ್ಮಿಕತೆ ಮತ್ತು ಕಲೆ ಮತ್ತು ಸಂಸ್ಕೃತಿ ಸೇರಿದಂತೆ 7000 ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಿತ್ರಸೇತು (MitraSetu)

ಮಿತ್ರಸೇತು (MitraSetu)

ಮಿತ್ರಸೇತು ಆಪ್‌ ಸಹ ಒಂದು ಅತ್ಯುತ್ತಮ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಆಗಿದ್ದು, ಅದು ಬಳಕೆದಾರರಿಗೆ ಫೋಟೊಗಳು, ಸ್ಟಿಕ್ಕರ್‌ಗಳು, ವೀಡಿಯೊಗಳು ಮತ್ತು ಡಾಕ್ಯುಮೆಂಟ್ ಫೈಲ್‌ಗಳನ್ನು ಪೋಸ್ಟ್ ಮಾಡಲು ಹಾಗೂ ಶೇರ್ ಮಾಡಲು ಪೂರಕವಾಗಿದೆ. ಹಾಗೆಯೇ ಈ ಆಪ್‌ ಇತರ ಬಳಕೆದಾರರ ಫೀಡ್‌ಗಳು, ಲೈಕ್ಸ್‌, ಕಾಮೆಂಟ್‌ಗಳೊಂದಿಗೆ ಸಂವಹನ ನಡೆಸಲು ಅನುಮತಿಸುತ್ತದೆ. ಇದಲ್ಲದೆ ಇದ್ರಲ್ಲಿ ಪೋಸ್ಟ್‌ಗಳು, ಪೇಜ್‌ಗಳು, ಪೋಸ್ಟ್-ಮಲ್ಟಿಮೀಡಿಯಾ ಫೈಲ್‌ಗಳನ್ನು ಸೇರಿಸುವುದು, ಗುಂಪುಗಳನ್ನು ರಚಿಸುವುದು, ಸ್ನೇಹಿತರು ಮತ್ತು ಕಾಂಟ್ಯಾಕ್ಟ್‌ ಸೇರಿಸುವುದು ಇಂತಹ ಹಲವು ಆಕರ್ಷಕ ಆಯ್ಕೆಗಳನ್ನು ನೀಡುತ್ತದೆ.

ಟ್ರೈಬಲ್ (Tribel)

ಟ್ರೈಬಲ್ (Tribel)

ಟ್ರೈಬಲ್ Tribel ಆಪ್‌ ಸಹ ಟ್ವಿಟರ್ ಗೆ ಅತ್ಯುತ್ತಮ ಪರ್ಯಾಯ ಎನಿಸಿದೆ. ಈ ಅಪ್ಲಿಕೇಶನ್ ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್ ಆಗಿದೆ. ಇದು ಒಂದು ಅಥವಾ ಹೆಚ್ಚಿನ ವಿಷಯಗಳನ್ನು ಆಯ್ಕೆ ಮಾಡುವ ಮೂಲಕ ಸುದ್ದಿ ಫೀಡ್‌ಗಳನ್ನು ಕಸ್ಟಮೈಸ್ ಮಾಡುವ ಸಾಮರ್ಥ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಹಾಗೆಯೇ ಕ್ರೀಡೆ, ರಾಜಕೀಯ ಅಥವಾ ಫ್ಯಾಷನ್‌ನಂತಹ ನಿಮ್ಮ ಯಾವುದೇ ನೆಚ್ಚಿನ ವಿಭಾಗಗಳಲ್ಲಿ ಸ್ಟಾರ್ ಕೊಡುಗೆದಾರರನ್ನು ಸರ್ಚ್ ಮಾಡುತ್ತದೆ.

ಮಾಸ್ಟೋಡಾನ್ (Mastodon)

ಮಾಸ್ಟೋಡಾನ್ (Mastodon)

ಮಾಸ್ಟೋಡಾನ್ ಸಹ ಟ್ವಿಟರ್‌ ಆಪ್‌ಗೆ ಒಂದು ಪರ್ಯಾಯ ಆಪ್‌ ಎನಿಸಿದ್ದು, ಇದೊಂದು ಉಚಿತ ಸಾಫ್ಟ್‌ವೇರ್ ಆಗಿದೆ. ಇದ್ರಲ್ಲಿ ಬಳಕೆದಾರರು ತಮ್ಮದೇ ಆದ ಸಾಮಾಜಿಕ ನೆಟ್‌ವರ್ಕಿಂಗ್ ಸೈಟ್‌ಗಳನ್ನು ನಡೆಸಬಹುದಾಗಿದೆ. ಈ ಆಪ್‌ ಟ್ವಿಟರ್‌ ತರಹದ ಮೈಕ್ರೋಬ್ಲಾಗಿಂಗ್ ಆಯ್ಕೆಗಳನ್ನು ಬಳಕೆದಾರರಿಗೆ ಒದಗಿಸುತ್ತದೆ. ಅಲ್ಲದೇ ತನ್ನದೇ ಆದ ನೀತಿ ಸಂಹಿತೆ, ಸೇವಾ ನಿಯಮಗಳು, ಸೆಕ್ಯುರಿಟಿ ಸೆಟ್ಟಿಂಗ್‌ ಆಯ್ಕೆಗಳು ಮತ್ತು ಮಾಡರೇಶನ್ ಮಾರ್ಗಸೂಚಿಗಳನ್ನು ಹೊಂದಿದೆ.

ಟೂಟರ್ (Tooter)

ಟೂಟರ್ (Tooter)

ಟೂಟರ್ ಹೆಸರಿನ ಈ ಅಪ್ಲಿಕೇಶನ್ ಟ್ವಿಟರ್‌ಗೆ ಪರ್ಯಾಯ ಎನಿಸಿಕೊಂಡಿದೆ. ಟ್ವಿಟರ್‌ನಲ್ಲಿನ ಟ್ವೀಟ್ ತರಹ ಈ ಆಪ್‌ನಲ್ಲಿ ಟೂಟ್ಸ್ (Toots) ಹೆಸರಿನಲ್ಲಿ ಕಿರು ಮೆಸೆಜ್‌ಗಳನ್ನು ಪೋಸ್ಟ್ ಮಾಡಬಹುದಾಗಿದೆ. ಇನ್ನು ಈ ಆಪ್‌ ಟೆಕ್ಸ್ಟ್‌, ಫೋಟೊ, ವೀಡಿಯೊಗಳು ಸೇರಿದಂತೆ ಇತರೆ ಆಯ್ಕೆಗಳನ್ನು ಒಳಗೊಂಡಿರುತ್ತದೆ.

Best Mobiles in India

English summary
Few Twitter alternatives in India 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X