ಹೊಸ ಸಿಮ್‌ ಕಾರ್ಡ್‌ಗೆ ಬೆರಳಚ್ಚು ಕಡ್ಡಾಯ?

Posted By:

ವೋಟರ್‌ ಐಡಿ,ಕಾಲೇಜ್‌ ಐಡಿಗಳನ್ನು ನೀಡಿ ಸಿಮ್‌ ಕಾರ್ಡ್‌ ಪಡೆಯವ ಕಾಲ ಮುಗಿಯಿತು. ಇನ್ನೂ ಮುಂದೆ ನೀವು ಬೆರಳಚ್ಚು (ಫಿಂಗರ್ ಪ್ರಿಂಟ್ಸ್) ನೀಡಿ ಹೊಸ ಸಿಮ್‌ ಕಾರ್ಡ್ ಪಡೆಯುವ ಕಾಲ ಬಂದರೂ ಆಶ್ಚರ್ಯವಿಲ್ಲ.

ನಕಲಿ ದಾಖಲೆ ಪತ್ರಗಳನ್ನು ನೀಡಿ ಸಿಮ್‌ ಕಾರ್ಡ್ ಪಡೆಯುವ ನಕಲಿ ಜನರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆ ಬಳಕೆದಾರ ಬೆರಳಚ್ಚನ್ನು ಪಡೆಯಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ದೂರ ಸಂಪರ್ಕ ಇಲಾಖೆಗೆ ಪತ್ರ ಬರೆದಿದ್ದು ಹೊಸ ಸಿಮ್ ಕಾರ್ಡ್ ಪಡೆಯುವ ಸಂದರ್ಭದಲ್ಲಿ ಬಳಕೆದಾರರು ಕಡ್ಡಾಯವಾಗಿ ಬೆರಳಚ್ಚನ್ನು ನೀಡಿ ಸಿಮ್‌ ಪಡೆಯುವಂತೆ ಹೊಸ ನಿಯಮ ರೂಪಿಸಿ ಎಂದು ಸೂಚಿಸಿದೆ.

ಹೊಸ ಸಿಮ್‌ ಕಾರ್ಡ್‌ಗೆ ಬೆರಳಚ್ಚು ಕಡ್ಡಾಯ?

ಯಾಕೆ ಈ ನಿಯಮ?

ಇತ್ತೀಚೆಗೆ ದೇಶದಲ್ಲಿ ಸಂಭವಿಸಿದ ಭಯೋತ್ಪಾದಕ ಘಟನೆಗಳಲ್ಲಿ ಅನೇಕ ಉಗ್ರರು ಬೇರೊಬ್ಬರ ಹೆಸರಿನಲ್ಲಿ ಸಿಮ್ ಕಾರ್ಡ್ ಕಳುಹಿಸಿ ದೇಶ-ವಿದೇಶಗಳಿಗೆ ಕರೆ ಮಾಡಿದ್ದರು. ಮುಂಬೈ ಮೇಲೆ ನಡೆದ ದಾಳಿ, ದೆಹಲಿ, ಹೈದರಾಬಾದ್ ಸೇರಿದಂತೆ ದೇಶದ ಇತರೆ ಭಾಗಗಳಲ್ಲಿ ಸಂಭವಿಸಿದ ಸ್ಫೋಟಗಳಲ್ಲಿ ಉಗ್ರರು ಬೇರೆ ಬೇರೆ ಹೆಸರಿನಲ್ಲಿ ಸಿಮ್ ಕಾರ್ಡ್ ಗಳನ್ನು ಖರೀದಿಸಿ ಬಳಸಿಕೊಂಡಿದ್ದರು.

ನಕಲಿ ಸಿಮ್‌ ಗ್ರಾಹಕರಿಂದಾಗಿ ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚಲು ತನಿಖಾಧಿಕಾರಿಗಗಳು ಬಹಳ ಶ್ರಮಪಟ್ಟಿದ್ದರು. ಹೀಗಾಗಿ ಇನ್ನು ಮುಂದೆ ಈ ರೀತಿ ಸಮಸ್ಯೆ ಸೃಷ್ಟಿಯಾಗದಂತೆ ಕೇಂದ್ರ ಗೃಹ ಇಲಾಖೆ ಬೆರಳಚ್ಚನ್ನು ನೀಡಿ ಸಿಮ್‌ ಪಡೆಯುವ ಹೊಸ ನಿಮಯ ತರಲು ಮುಂದಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot