COVID 19:ಅಗತ್ಯ ಮಾಹಿತಿಗಾಗಿ ಈ ಐದು ಅಪ್ಲಿಕೇಶಗಳು ಹೊಂದಿರುವುದು ಸೂಕ್ತ!

|

ಪ್ರಸ್ತುತ ದಿನಗಳಲ್ಲಿ ಕೋವಿಡ್‌-19 ಎರಡನೇ ಅಲೆ ಭಾರತದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಮಯದಲ್ಲಿ ಹಲವು ವಲಯಗಳು ಸರ್ಕಾರದ ಜೊತೆಗೆ ನಿಂತಿವೆ. ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡುವ ಕೆಲಸದಲ್ಲಿ ನಿರತವಾಗಿವೆ. ಬಹಳಷ್ಟು ಜನರು ಲಸಿಕೆ ಮಾಹಿತಿ, ಆಸ್ಪತ್ರೆಯ ಹಾಸಿಗೆಗಳು, ಆಮ್ಲಜನಕ ಸಾಂದ್ರಕಗಳು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಅಗತ್ಯ ಮಾಹಿತಿಗೆ ಸರ್ಚ್‌ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅಗತ್ಯ ಮಾಹಿತಿ ನೀಡಲು ಹಲವು ಅಪ್ಲಿಕೇಶನ್‌ಗಳು ಸಹಾಯ ಮಾಡುತ್ತಿವೆ.

ಅಪ್ಲಿಕೇಶನ್‌ಗಳು

ಹೌದು, ಕೋವಿಡ್‌ 2 ಅಲೆಯ ಸಂದರ್ಭದಲ್ಲಿ ಜನರಿಗೆ ಅಗತ್ಯ ಮಾಹಿತಿ ನೀಡಲು ಹಲವು ಅಪ್ಲಿಕೇಶನ್‌ಗಳು ಸಹಾಯಕವಾಗಿವೆ. ಈ ಸಾಂಕ್ರಾಮಿಕ ಸಮಯದಲ್ಲಿ ಅವರಿಗೆ ಸಹಾಯ ಮಾಡಲು ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಕೂಡ ಸಹಾಯ ಹಸ್ತ ಚಾಚಿವೆ. ಇದಕ್ಕಾಗಿಯೇ ಹೊಸ ಫೀಚರ್ಸ್‌ಗಳನ್ನು ಸಹ ಪರಿಚಯಿಸಿವೆ. ಹಾಗಾದ್ರೆ ಕೊರೊನಾ ಎರಡನೇ ಅಲೆ ವ್ಯಾಪಕವಾಗಿರುವ ಈ ಸನ್ನಿವೇಶದಲ್ಲಿ ಅಗತ್ಯವಿರುವ ಯಾವುದೇ ಸಂಪನ್ಮೂಲಗಳನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಡೌನ್‌ಲೋಡ್ ಮಾಡಬಹುದಾದ ಪ್ರಮುಖ ಐದು ಅಪ್ಲಿಕೇಶನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೋವಿನ್

ಕೋವಿನ್

COVID-19 ವೈರಸ್ ವಿರುದ್ಧ ಕೋವಿನ್‌ ವ್ಯಾಕ್ಸಿನ್‌ ಪಡೆಯಲು ಜನರು ಲಸಿಕೆ ಸ್ಲಾಟ್‌ಗಳಿಗೆ ನೋಂದಾಯಿಸಲು ಭಾರತ ಸರ್ಕಾರವು ಬಿಡುಗಡೆ ಮಾಡಿದ ಪೋರ್ಟಲ್‌ ಇದಾಗಿದೆ. ವ್ಯಾಕ್ಸಿನೇಷನ್ ಸ್ಲಾಟ್‌ಗಾಗಿ ನೋಂದಾಯಿಸಲು ಬಳಕೆದಾರರಿಗೆ ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ. ಇದು ವ್ಯಾಕ್ಸಿನೇಷನ್ ವೇಳಾಪಟ್ಟಿಯನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಬಳಕೆದಾರರ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಸಹ ಡೌನ್‌ಲೋಡ್‌ ಮಾಡಲು ಅವಕಾಶ ನೀಡಲಿದೆ.

ಆರೋಗ್ಯಾ ಸೇತು

ಆರೋಗ್ಯಾ ಸೇತು

ಕೊರೊನಾ ಅಲೆ ಭಾರತದಲ್ಲಿ ಶುರುವಾದಾಗಲೇ ಭಾರತ ಸರ್ಕಾರ ಈ ಅಪ್ಲಿಕೇಶನ್‌ ಅನ್ನು ಪರಿಚಯಿಸಿತ್ತು. ಇದು ಕೊರೋನಾ ಸೋಂಕಿತರ ಸಂಪರ್ಕದ ಪತ್ತೆಹಚ್ಚುವಿಕೆ ಮಾಡಲಿದೆ. ಇದು ರೋಗಲಕ್ಷಣಗಳಿಗೆ ಸ್ವಯಂ ಮೌಲ್ಯಮಾಪನ ಮಾಡಲು, ಸಂಪರ್ಕಗಳನ್ನು ಪತ್ತೆಹಚ್ಚಲು ಮತ್ತು ನೀವು ಸುರಕ್ಷಿತವಾಗಿದ್ದೀರಾ ಎಂದು ನೋಡಲು ಮತ್ತು ಹತ್ತಿರದ ಸೋಂಕಿತ ವಲಯಗಳ ಜನರಿಗೆ ಎಚ್ಚರಿಕೆ ನೀಡುತ್ತದೆ. ಅಲ್ಲದೆ ಲಸಿಕೆ ಬಗ್ಗೆ ಕೂಡ ಅಗತ್ಯ ಮಾಹಿತಿ ನೀಡಲಿದೆ. ಸರ್ಕಾರದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳಲು ಬಟನ್, COVID-19 ಸಹಾಯವಾಣಿಗೆ ತ್ವರಿತ ಡಯಲ್ ಬಟನ್ ಮತ್ತು ಇನ್ನಿತರ ಫೀಚರ್ಸ್‌ಗಳನ್ನು ಸಹ ಈ ಅಪ್ಲಿಕೇಶನ್ ಹೊಂದಿದೆ.

ಟ್ವಿಟರ್

ಟ್ವಿಟರ್

ಜನರಿಗೆ ಅಗತ್ಯವಿರುವ ಸಂಪನ್ಮೂಲಗಳ ಅಗತ್ಯಗಳನ್ನು ಪಡೆದುಕೊಳ್ಳಲು ಹೆಚ್ಚಿನ ಜನರು ಟ್ವಿಟ್ಟರ್ ಅನ್ನು ಬಳಸುತ್ತಿದ್ದಾರೆ. ಹೀಗಾಗಿ ಅಗತ್ಯವಿರುವವರಿಗೆ ಸಾಧ್ಯವಾದಷ್ಟು ಬೇಗ ಸಂಪನ್ಮೂಲಗಳನ್ನು ಹುಡುಕಲು ಸಹಾಯ ಮಾಡುವುದಕ್ಕಾಗಿ ಟ್ವೀಟರ್‌ ಹೊಸ ಫೀಚರ್ಸ್‌ ಅನ್ನು ಸಹ ಪರಿಚಯಿಸಿದೆ. ಇದಲ್ಲದೆ, ಟ್ವಿಟರ್ ಜನರಿಗೆ ಬೆಡ್‌, ಆಸ್ಪತ್ರೆಗಳ ಮಾಹಿತಿಯನ್ನು ನೀಡಲಿದೆ. ಅಲ್ಲದೆ ಹಳೆಯ ಮಾಹಿತಿಯನ್ನು ತೆಗೆದುಹಾಕಿ ಹೊಸ ಮಾಹಿತಿಯನ್ನು ಅಪ್ಡೇಟ್‌ ಮಾಡಲಿದೆ. ಅಲ್ಲದೆ ನಕಲಿ ಸುದ್ದಿಗಳನ್ನು ನಿಗ್ರಹಿಸಲು ಇದು ಉಪಕ್ರಮಗಳನ್ನು ಕೈಗೊಂಡಿದೆ ಮತ್ತು ಜನರಿಗೆ ನಿಖರವಾದ ಮಾಹಿತಿಯನ್ನು ಒದಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

Paytm

Paytm

ಇತ್ತೀಚಿನ ದಿನಗಳಲ್ಲಿ ನೀವು ಹತ್ತಿರದ ಲಸಿಕೆ ಕೇಂದ್ರವನ್ನು ಹುಡಕಲು ಪ್ರಯತ್ನಿಸಿದರೆ ಪೇಟಿಎಂ ನಿಮಗೆ ಸಹಾಯಕ್ಕೆ ಬರಲಿದೆ. Paytm ಕೋವಿನ್ ಪೋರ್ಟಲ್ ಅನ್ನು ನಿಯಮಿತವಾಗಿ ಪಿಂಗ್ ಮಾಡುವ ಸಾಧನವನ್ನು ಅಭಿವೃದ್ಧಿಪಡಿಸಿದೆ. ಇದು ನಿಮ್ಮ ಪ್ರದೇಶದಲ್ಲಿ ಸ್ಲಾಟ್ ಲಭ್ಯವಿದ್ದರೆ ನಿಮಗೆ ತಿಳಿಸುತ್ತದೆ.

ಪಬ್ಲಿಕ್‌ ಅಪ್ಲಿಕೇಶನ್

ಪಬ್ಲಿಕ್‌ ಅಪ್ಲಿಕೇಶನ್

COVID- ಆರೈಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳು, ವ್ಯಾಕ್ಸಿನೇಷನ್, ವೈದ್ಯಕೀಯ ಸರಬರಾಜು, ಲಾಕ್‌ಡೌನ್ ನಿಯಮಗಳು, ಅಗತ್ಯ ವಸ್ತುಗಳ ಲಭ್ಯತೆ ಮತ್ತು ಹೆಚ್ಚಿನ ಪರಿಶೀಲಿಸಿದ ಮಾಹಿತಿಯನ್ನು ತಿಳಿಯಲು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಆರೋಗ್ಯ ವೃತ್ತಿಪರರು ಮತ್ತು ಹೆಚ್ಚಿನವರು ಪಬ್ಲಿಕ್‌ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ.

Best Mobiles in India

Read more about:
English summary
Five must have apps to get all the information about COVID 19 second wave in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X