ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಆಫರ್ ಗಳು: ಮೊಬೈಲ್ ಆಫರ್ ಗಳ ವೇಳಾಪಟ್ಟಿ

By Gizbot Bureau
|

ಪ್ರತಿ ವರ್ಷವೂ ಕೂಡ ಬಿಗ್ ಬಿಲಿಯನ್ ಡೇ ಸೇಲ್ ನ್ನು ಫ್ಲಿಪ್ ಕಾರ್ಟ್ ನಲ್ಲಿ ಆಯೋಜಿಸಲಾಗುತ್ತದೆ. ಸ್ಮಾರ್ಟ್ ಫೋನ್ ಗಳು, ಗೆಡ್ಜೆಟ್ ಗಳು, ಟಿವಿಗಳು, ಆಕ್ಸಸರೀಸ್ ಗಳು ಮತ್ತು ಇತರೆ ಪ್ರೊಡಕ್ಟ್ ಗಳಿಗೆ ಈ ಸೇಲ್ ನಲ್ಲಿ ಭರ್ಜರಿ ಆಫರ್ ನೀಡಲಾಗುತ್ತದೆ. ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 26 ರ ವರೆಗೆ ಈ ಬಾರಿಯ ಸೇಲ್ ನಡೆಯುತ್ತಿದೆ. ಹ್ಯಾಂಡ್ ಸೆಟ್ ಗಳಿಗೆ ಈ ಬಾರಿ ಭರ್ಜರಿ ಆಫರ್ ನ್ನು ಆನ್ ಲೈನ್ ರೀಟೈಲರ್ ಫ್ಲಿಪ್ ಕಾರ್ಟ್ ನೀಡುತ್ತಿದೆ.

ನೋ ಕಾಸ್ಟ್ ಇಎಂಐ

ನೋ ಕಾಸ್ಟ್ ಇಎಂಐ ಆಯ್ಕೆಗಳು, ಹೆಚ್ಚುವರಿ ರಿಯಾಯಿತಿಗಳು, ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಅನಿಯಮಿತ 5% ರಿಯಾಯಿತಿ, ಹೆಚ್ ಡಿಎಫ್ ಸಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 5% ಕ್ಯಾಷ್ ಬ್ಯಾಕ್, ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ಫ್ಲೈಟ್ ಬುಕ್ಕಿಂಗ್ ಮಾಡಿದವರಿಗೆ 10% ರಿಯಾಯಿತಿ, ವಾರೆಂಟಿ ಸೇವೆಗಳು, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ಬಳಸಿದರೆ 5% ರಿಯಾಯಿತಿ ಇತ್ಯಾದಿ ಹಲವು ಆಫರ್ ಗಳು ಈ ಸೇಲ್ ನಲ್ಲಿ ಲಭ್ಯವಿದೆ.

ಶುಕ್ರವಾರ ಸೆಪ್ಟೆಂಬರ್ 20

ಶುಕ್ರವಾರ ಸೆಪ್ಟೆಂಬರ್ 20

ಈ ದಿನದಂದು ಉತ್ತಮ ಮಾರಾಟ ಕಂಡಿರುವ ಕೆಲವು ಸ್ಮಾರ್ಟ್ ಫೋನ್ ಗಳಿಗೆ ಆಫರ್ ಗಳಿವೆ. ಕೆಲವು ಫ್ಲ್ಯಾಗ್ ಶಿಪ್ ಡಿವೈಸ್ ಗಳನ್ನು ಅತೀ ಕಡಿಮೆ ಬೆಲೆಯಲ್ಲಿ ನೀವು ಖರೀದಿಸಬಹುದು.

ಸೆಪ್ಟೆಂಬರ್ 21, ಗುರುವಾರ

ಸೆಪ್ಟೆಂಬರ್ 21, ಗುರುವಾರ

ಹಲವು ಇನ್ಫೈನಿಕ್ಸ್ ಫೋನ್ ಗಳಿಗೆ ಟಾಪ್ ಡೀಲ್ ಗಳು ಮತ್ತು ರಿಯಾಯಿತಿಗಳು ಸೆಪ್ಟೆಂಬರ್ 21 ರಂದು ರಿವೀಲ್ ಆಗುತ್ತದೆ. ಜೇಬು ಸ್ನೇಹಿ ಬೆಲೆಯಲ್ಲಿ ಈ ಫೋನ್ ಗಳು ಈ ದಿನದಂದು ಖರೀದಿಗೆ ಲಭ್ಯವಾಗುತ್ತದೆ.

ಸೆಪ್ಟೆಂಬರ್ 22, ಭಾನುವಾರ

ಸೆಪ್ಟೆಂಬರ್ 22, ಭಾನುವಾರ

ಈ ದಿನದಂದು ಕೆಲವು ಸ್ಯಾಮ್ ಸಂಗ್ ಡಿವೈಸ್ ಗಳ ಬಗ್ಗೆ ನಿಮಗೆ ಐಡಿಯಾ ಸಿಗುತ್ತದೆ. ಅತ್ಯುತ್ತಮ ಆಫರ್ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಮೋಟೋ ಮತ್ತು ಲೆನೊವಾ ಫೋನ್ ಗಳಿಗೆ ಅತೀ ದೊಡ್ಡ ಡೀಲ್ ಗಳು ಸಿಗುವ ಸಾಧ್ಯತೆ ಇದೆ. ಗೂಗಲ್ ಪಿಕ್ಸಲ್ ಫೋನ್ ಗಳಿಗೂ ಕೂಡ ಬ್ಲಾಕ್ ಬಸ್ಟರ್ ಆಫರ್ ಸಿಗಲಿದೆ.

ಸೆಪ್ಟೆಂಬರ್ 23, ಸೋಮವಾರ

ಸೆಪ್ಟೆಂಬರ್ 23, ಸೋಮವಾರ

ಬಳಕೆದಾರರಿಗೆ ಎಲ್ಲಾ ಡಿವೈಸ್ ಗಳಿಗೆ ಅಂದರೆ ಕೆಲವು ಫೀಚರ್ ಫೋನ್ ಗಳು 7,000 ರುಪಾಯಿ ಬೆಲೆಯೊಳಗೆ ಸಿಗುವ ಸಾಧ್ಯತೆ ಇದೆ. ಈ ವಿವರಣೆಗಳು ಖಂಡಿತವಾಗಲೂ ಉತ್ತಮ ಆಫರ್ ನ್ನು ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರ ಕೈಗೆಟುಕುವಂತೆ ಮಾಡುವುದರಲ್ಲಿ ಆಶ್ಚರ್ಯವಿಲ್ಲ.

ಸೆಪ್ಟೆಂಬರ್ 24, ಮಂಗಳವಾರ

ಸೆಪ್ಟೆಂಬರ್ 24, ಮಂಗಳವಾರ

ಎಲ್ಲಾ ನಿಮ್ಮ ಟಾಪ್ ಬೆಲೆಯ ಕ್ಯಾಮರಾ ಫೋನ್ ಗಳು ಅತ್ಯಂತ ದೊಡ್ಡ ಡೀಲ್ ನಲ್ಲಿ ಸಿಗಲಿದೆ. ಕೆಲವು ಶಿಯೋಮಿ ಡಿವೈಸ್ ಗಳು ಆಕರ್ಷಕ ಆಫರ್ ನಲ್ಲಿ ನೀಡಲಾಗುತ್ತದೆ. ಕೆಲವು ರಿಯಲ್ ಮಿ ಫೋನ್ ಗಳಿಗೂ ಕೂಡ ನೀವು ಅತ್ಯುತ್ತಮ ಆಫರ್ ನ್ನು ಈ ದಿನದಂದು ಪಡೆಯಬಹುದು.

ಸೆಪ್ಟೆಂಬರ್ 25, ಬುಧವಾರ

ಸೆಪ್ಟೆಂಬರ್ 25, ಬುಧವಾರ

ನಿಮ್ಮ ನೆಚ್ಚಿನ ಫೋನ್ ಬ್ರ್ಯಾಂಡ್ ಓಪ್ಪೋ, ವಿವೋ ಗಳನ್ನು ನೀವು ನಿರೀಕ್ಷೆ ಮಾಡದ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ಸ್ಯಾಮ್ ಸಂಗ್ ಫೋನ್ ಗಳು ಕೂಡ ಅತ್ಯಂತ ಬೆಸ್ಟ್ ಬೆಲೆಯಲ್ಲಿ ಕೈಗೆಟುಕುತ್ತದೆ.

ಸೆಪ್ಟೆಂಬರ್ 26, ಗುರುವಾರ

ಸೆಪ್ಟೆಂಬರ್ 26, ಗುರುವಾರ

ನಿಮ್ಮ ನೆಚ್ಚಿನ ಫೋನ್ ಬ್ರ್ಯಾಂಡ್ ವಿವೋ ಮತ್ತು ಓಪ್ಪೋಗಳ ಆಫರ್ ಗಳು ಮುಂದುವರಿಯಲಿದ್ದು, ಸ್ಯಾಮ್ ಸಂಗ್ ಫೋನ್ ಗಳು ಕೂಡ ಬೆಸ್ಟ್ ಆಫರ್ ನಲ್ಲಿ ಲಭ್ಯವಾಗುತ್ತದೆ. ಒಟ್ಟಿನಲ್ಲಿ ಪ್ರತಿ ದಿನವೂ ಕೂಡ ಸ್ಮಾರ್ಟ್ ಫೋನ್ ಗಳ ಖರೀದಿಯ ಭರಾಟೆ ಜೋರಾಗಿರುವುದು ಗ್ಯಾರೆಂಟಿ. ಯಾಕೆಂದರೆ ಬಳಕೆದಾರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಗಳು ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಅತ್ಯುತ್ತಮ ಆಫರ್ ನ್ನು ಫ್ಲಿಪ್ ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ನೀಡಲಾಗುತ್ತಿದೆ.

ನೀವೂ ಕೂಡ ಪೋನ್ ಖರೀದಿಸುವ ಪ್ಲ್ಯಾನ್ ಮಾಡಿದ್ದರೆ ಮತ್ತ್ಯಾಕೆ ತಡ ಮಾಡ್ತೀರಾ? ಈಗಲೇ ಫ್ಲಿಪ್ ಕಾರ್ಟ್ ಗೆ ಲಾಗಿನ್ ಆಗಿ ಆಫರ್ ನ್ನು ಪರೀಕ್ಷೆ ಮಾಡಿ.

Best Mobiles in India

English summary
Flipkart's Big Billion days come with offers on scheduled days. Starting from September 20 until September 26, the online retailer provides a briefing of deals on the handsets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X