ಡಿಸೆಂಬರ್ 1 ರಿಂದ ಫ್ಲಿಪ್ ಕಾರ್ಟ್ ಬಿಗ್ ಶಾಪಿಂಗ್ ಡೇ ಸೇಲ್- ಭರ್ಜರಿ ರಿಯಾಯಿತಿಗಳ ಸುರಿಮಳೆ

By Gizbot Bureau
|

ಫ್ಲಿಪ್ ಕಾರ್ಟಿನ ಬಿಗ್ ಶಾಪಿಂಗ್ ಡೇ ಸೇಲ್ ಮತ್ತೆ ಆರಂಭವಾಗುತ್ತಿದ್ದು ಸ್ಮಾರ್ಟ್ ಫೋನ್ ಗಳು, ಟಿವಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಮನೆ ಬಳಕೆ ವಸ್ತುಗಳು ಸೇರಿದಂತೆ ಹಲವು ವಸ್ತುಗಳಿಗೆ ಭರ್ಜರಿ ರಿಯಾಯಿತಿಯನ್ನು ಈ ಮಾರಾಟದಲ್ಲಿ ನೀಡಲಾಗುತ್ತದೆ. ಈ ಸೇಲ್ ಡಿಸೆಂಬರ್ 1 ರಿಂದ ಡಿಸೆಂಬರ್ 5 ರ ವರೆಗೆ ನಡೆಯಲಿದೆ. ಪ್ರೈಮ್ ಸದಸ್ಯರಿಗೆ ನವೆಂಬರ್ 30 ರ ರಾತ್ರಿ 8ಘಂಟೆ ಯಿಂದಲೇ ಸೇಲ್ ಗೆ ಪ್ರವೇಶಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಈ ಮಾರಾಟದ ಸಮಯದಲ್ಲಿ ಕೆಲವು ಹೊಸ ವಸ್ತುಗಳ ಬಿಡುಗಡೆಯೂ ಕೂಡ ನಡೆಯಲಿದೆ.

ಹೆಚ್ ಡಿಎಫ್ ಸಿ

ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ಬಳಸಿದರೆ ಕ್ಯಾಷ್ ಬ್ಯಾಕ್,ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಅನಿಯಮಿತ ಕ್ಯಾಷ್ ಬ್ಯಾಕ್, ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚುವರಿ ರಿಯಾಯಿತಿ ಎಕ್ಸ್ ಚೇಂಜ್ ಆಫರ್ ಗಳು ಸೇರಿದಂತೆ ಹತ್ತುಹಲವು ಆಫರ್ ಗಳು ಈ ಸೇಲ್ ನಲ್ಲಿ ಲಭ್ಯವಿದೆ.

ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳಿಗೆ ಆಫರ್

ಮೊಬೈಲ್ ಮತ್ತು ಟ್ಯಾಬ್ಲೆಟ್ ಗಳಿಗೆ ಆಫರ್

ಹಲವಾರು ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನ್ ಗಳನ್ನು ಗ್ರಾಹಕರು ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ, ಕಾರ್ಡ್ ಲೆಸ್ ಕ್ರೆಡಿಟ್, ಮತ್ತು ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿಸಬಹುದಾಗಿದೆ.ಸ್ಯಾಮ್ ಸಂಗ್ ,ಆಪಲ್ ಸೇರಿದಂತೆ ಹಲವು ಬ್ರ್ಯಾಂಡ್ ಗಳ ಪ್ರೊಡಕ್ಟ್ ಗಳನ್ನು ನೀವಿಲ್ಲಿ ಖರೀದಿಸಬಹುದು.

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ 75% ದ ವರೆಗೆ ರಿಯಾಯಿತಿ

ಟಿವಿ ಮತ್ತು ಅಪ್ಲಯನ್ಸಸ್ ಗಳಿಗೆ 75% ದ ವರೆಗೆ ರಿಯಾಯಿತಿ

ಗ್ರಾಹಕರು ಟಿವಿ ಮತ್ತು ಅಪ್ಲಯನ್ಸಸ್ ಗಳನ್ನು 75% ದ ವರೆಗಿನ ರಿಯಾಯಿತಿಯಲ್ಲಿ ಖರೀದಿಸಬಹುದು.ಈ ಪ್ರೊಡಕ್ಟ್ ಗಳು ನೋ ಕಾಸ್ಟ್ ಇಎಂಐ ಆಯ್ಕೆ,ಕಂಪ್ಲೀಟ್ ಮೊಬೈಲ್ ಪ್ರೊಟೆಕ್ಷನ್ ಪ್ಲಾನ್ ಮತ್ತು ಓಪನ್ ಬಾಕ್ಸ್ ನಲ್ಲಿ ಡೆಲಿವರಿ ಮಾಡುವ ವ್ಯವಸ್ಥೆಯ ಮೂಲಕ ನಿಖರವಾದ ಪ್ರೊಡಕ್ಟ್ ನ್ನೇ ಡೆಲಿವರಿ ಮಾಡಲಾಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳುವುದಕ್ಕೆ ಇದರಲ್ಲಿ ಅವಕಾಶ ನೀಡಲಾಗುತ್ತದೆ.

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ

ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಸರೀಸ್ ಗಳಿಗೆ 80% ದ ವರೆಗೆ ರಿಯಾಯಿತಿ

ಹಲವು ಎಲೆಕ್ಟ್ರಾನಿಕ್ ಮತ್ತು ಆಕ್ಸಸರೀಸ್ ಗಳನ್ನು ನೀವು 80%ದ ವರೆಗಿನ ರಿಯಾಯಿತಿ ಬೆಲೆಯಲ್ಲಿ ಖರೀದಿಸುವುದಕ್ಕೆ ಅವಕಾಶವಿದೆ. ಪ್ರೈಸ್ ಕ್ಯಾಷ್ ಮತ್ತು ರಶ್ ಹವರ್ ಡೀಲ್ ಗಳಲ್ಲಿ ಈ ಪ್ರೊಡಕ್ಟ್ ಗಳನ್ನು ವಿಭಾಗಿಸಲಾಗಿದೆ. ಹೆಚ್ ಡಿಎಫ್ ಸಿ ಬ್ಯಾಂಕಿನ ಕಾರ್ಡ್ ನಲ್ಲಿ 10% ಇನ್ಸೆಂಟ್ ರಿಯಾಯಿತಿ ಮತ್ತು ಇಎಂಐ ಟ್ರಾನ್ಸ್ಯಾಕ್ಷನ್ ಕೂಡ ಲಭ್ಯವಿದೆ.

ಫ್ಯಾಷನ್ ಪ್ರೊಡಕ್ಟ್ ಗಳಿಗೆ 50 ರಿಂದ 80% ರಿಯಾಯಿತಿ

ಫ್ಯಾಷನ್ ಪ್ರೊಡಕ್ಟ್ ಗಳಿಗೆ 50 ರಿಂದ 80% ರಿಯಾಯಿತಿ

50% ರಿಂದ 80% ರಿಯಾಯಿತಿಯನ್ನು ಫ್ಯಾಷನ್ ಪ್ರೊಡಕ್ಟ್ ಗಳಿಗೆ ಪಡೆದುಕೊಳ್ಳಬಹುದು. 1000 ಕ್ಕೂ ಅಧಿಕ ಬ್ರ್ಯಾಂಡಿನ ವಸ್ತುಗಳಿಗೆ ರಿಯಾಯಿತಿ ಇದೆ. ವಸ್ತುಗಳನ್ನು ಖರೀದಿಸಿದ ನಂತರ ನಿಮಗೆ ಇಷ್ಟವಾಗಿಲ್ಲ ಅಂದರೆ ಅದನ್ನು ರಿಟರ್ನ್ ಮಾಡುವುದಕ್ಕೆ30 ದಿನಗಳ ಕಾಲಾವಕಾಶ ಇದೆ.

Rs. 99 ರಿಂದ ಆರಂಭ: ಬ್ಯೂಟಿ, ಆಟದ ವಸ್ತುಗಳು, ಮಗುವಿನ ವಸ್ತುಗಳು ಮತ್ತು ಇತ್ಯಾದಿ

Rs. 99 ರಿಂದ ಆರಂಭ: ಬ್ಯೂಟಿ, ಆಟದ ವಸ್ತುಗಳು, ಮಗುವಿನ ವಸ್ತುಗಳು ಮತ್ತು ಇತ್ಯಾದಿ

ಬ್ಯೂಟಿ ಪ್ರೊಡಕ್ಟ್ ಗಳು ಸೇರಿದಂತೆ ಆಟದ ವಸ್ತುಗಳು, ಮಗುವಿನ ವಸ್ತುಗಳು ಸೇರಿದಂತೆ ಹಲವು ಪ್ರೊಡಕ್ಟ್ ಗಳ ಆರಂಭಿಕ ಬೆಲೆ ಕೇವಲ 99 ರುಪಾಯಿಗಳಾಗಿರುತ್ತದೆ. ಈ ಕೆಟಗರಿಯಲ್ಲಿ ಸುಮಾರು 5 ಲಕ್ಷಕ್ಕೂ + ಅಧಿಕ ವಸ್ತುಗಳಿದ್ದು 1000 ಕ್ಕೂ ಅಧಿಕ ಬ್ರ್ಯಾಂಡ್ ನ ವಸ್ತುಗಳನ್ನು ಫ್ಲಿಪ್ ಕಾರ್ಟ್ ನಲ್ಲಿ ಮಾರಾಟ ಮಾಡಲಾಗುತ್ತದೆ.

ಮನೆಬಳಕೆ ವಸ್ತುಗಳು ಮತ್ತು ಪೀಠೋಪಕರಣಗಳಿಗೆ 80% ದ ವರೆಗೆ ರಿಯಾಯಿತಿ

ಮನೆಬಳಕೆ ವಸ್ತುಗಳು ಮತ್ತು ಪೀಠೋಪಕರಣಗಳಿಗೆ 80% ದ ವರೆಗೆ ರಿಯಾಯಿತಿ

ಮನೆ ಮತ್ತು ಮನೆಯ ಪೀಠೋಪಕರಣಗಳನ್ನು ಖರೀದಿದಾರರು 80% ದ ವರೆಗಿನ ರಿಯಾಯಿತಿಯಲ್ಲಿ ಖರೀದಿಸಬಹುದು. ಡಬಲ್ ಬೆಡ್ ಗಳು, ಬ್ರ್ಯಾಂಡೆಡೆ ಬ್ಲಾಂಕೆಟ್ ಗಳು, ದಿಂಬುಗಳು, ಇತ್ಯಾದಿ ಹಲವು ವಸ್ತುಗಳು ಈ ಡೀಲ್ ನ ಅಡಿಯಲ್ಲಿ ಲಭ್ಯವಾಗುತ್ತದೆ.

ಫ್ಲಿಪ್ ಕಾರ್ಟ್ ಬ್ರ್ಯಾಂಡ್ ಗೆ 80% ರಿಯಾಯಿತಿ

ಫ್ಲಿಪ್ ಕಾರ್ಟ್ ಬ್ರ್ಯಾಂಡ್ ಗೆ 80% ರಿಯಾಯಿತಿ

ಕೆಲವು ಫ್ಲಿಪ್ ಕಾರ್ಟ್ ಬ್ರ್ಯಾಂಡಿನ ವಸ್ತುಗಳಿಗೆ 80% ದ ವರೆಗೆ ರಿಯಾಯಿತಿ ಸಿಗುತ್ತದೆ. ಸೂಪರ್ ಸ್ಟೋರೇಜ್ ಬೆಡ್ ಫ್ಲಿಪ್ ಕಾರ್ಟ್ ನದ್ದು 7,499 ರುಪಾಯಿ ಬೆಲೆಗೆ ಸಿಗುತ್ತದೆ, ಮನೆ ಬಳಕೆ ವಸ್ತುಗಳು 79 ರುಪಾಯಿ ಬೆಲೆಗೆ ಆರಂಭವಾಗುತ್ತದೆ. ಪವರ್ ಬ್ಯಾಂಕ್ ಗಳಿಗೆ 299 ರುಪಾಯಿ ಯಿಂದ ಆರಂಭಿಕ ಬೆಲೆ ಇದೆ. ಹೀಗೆ ಹಲವು ಡೀಲ್ ಗಳು ಈ ಕೆಟಗರಿಯಲ್ಲಿ ಸಿಗುತ್ತದೆ.

ಕೋಂಬೋ ಡೀಲ್ಸ್

ಕೋಂಬೋ ಡೀಲ್ಸ್

ಕೋಂಬೋ ಡೀಲ್ಸ್ ನ ಅಡಿಯಲ್ಲಿ ನೀವು 3 ಪ್ರೊಡಕ್ಟ್ ಗಳನ್ನು ಖರೀದಿಸಿದರೆ ಹೆಚ್ಚುವರಿಯಾಗಿ 10% ರಿಯಾಯಿತಿ ಸಿಗುತ್ತದೆ.4 ಪ್ರೊಡಕ್ಟ್ ಗಳನ್ನು ಖರೀದಿಸಿದರೆ 15% ರಿಯಾಯಿತಿ ಲಭ್ಯ. ಕೋಂಬೋ ಪ್ರೊಡಕ್ಟ್ ಗಳಿಗೆ 90% ದ ವರೆಗೆ ರಿಯಾಯಿತಿ ಇದೆ.

Most Read Articles
Best Mobiles in India

English summary
Flipkart's “Big Shopping Days” sales are back with rejuvenating deals on smartphones, electronics, TVs, home appliances, and more. The sales are scheduled to run from December 1st till December 5th 2019.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X