Subscribe to Gizbot

ಇಂದಿನಿಂದ ಫ್ಲಿಪ್‌ಕಾರ್ಟ್ 'ಡ್ರೀಮ್ ಸ್ಮಾರ್ಟ್‌ಫೋನ್ ಸೇಲ್' ಆರಂಭ!..ಭಾರಿ ಆಫರ್ಸ್!!

Written By:

ಇನ್ನೇನು ಕೆಲವೇ ದಿವಸಗಳಲ್ಲಿ ಜಿಎಸ್‌ಟಿ ಎಫೆಕ್ಟ್ ಭಾರತೀಯರ ಮೇಲೆ ಪರಿಣಾಮ ಬೀರುವುದಂತ ಸತ್ಯ. ಆದರೆ, ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್‌ ಶಾಪಿಂಗ್ ಜಾಲತಾಣಗಳಿಗೆ ಜಿಎಸ್‌ಟಿ ಎಫೆಕ್ಟ್ ಈಗಲೇ ತಟ್ಟುತ್ತಿದೆ.! ಹಾಗಾಗಿಯೇ, ಇಂದಿನಿಂದ ಎರಡು ದಿವಸಗಳ ಕಾಲ ಫ್ಲಿಪ್‌ಕಾರ್ಟ್ ಗ್ರಾಹಕರಿಗೆ ಹೊಸದೊಂದು ಡ್ರೀಮ್ ಆಫರ್ ಬಿಡುಗಡೆ ಮಾಡಿದೆ.!!

ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಬೆಲೆ ಜಿಎಸ್‌ಟಿಯಿಂದಾಗಿ ಭಾರಿ ಹೆಚ್ಚಳವಾಗುವ ಸಂಭವವಿದ್ದು, ಅದಕ್ಕಾಗಿ ಮೊಬೈಲ್ ಕಂಪೆನಿಗಳು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡುತ್ತಿವೆ. ಸರ್ಕಾರಕ್ಕೆ ತೆರಿಗೆ ಹಣ ಕಟ್ಟುವುದಕ್ಕಿಂತ ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ಸ್ಮಾರ್ಟ್‌ಫೋನ್ ಮಾರಾಟ ಮಾಡಿ ಬ್ಯುಸಿನೆಸ್ ಹೆಚ್ಚಿಸಿಕೊಳ್ಳಲು ಮೊಬೈಲ್ ಕಂಪೆನಿಗಳು ಮುಂದೆ ಬಂದಿವೆ.!!

ಹಾಗಾದರೆ, ಫ್ಲಿಪ್‌ಕಾರ್ಟ್‌ ನೀಡಿರುವ ಆಫರ್ ಯಾವುದು? ಯಾವ ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ಲಭ್ಯವಿದೆ? ಖರೀದಿಸಲು ಸೂಕ್ತ ಸಮಯವೇ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲಿಪ್‌ಕಾರ್ಟ್ ಡ್ರೀಮ್ ಸ್ಮಾರ್ಟ್‌ಫೋನ್ ಸೇಲ್!!

ಫ್ಲಿಪ್‌ಕಾರ್ಟ್ ಡ್ರೀಮ್ ಸ್ಮಾರ್ಟ್‌ಫೋನ್ ಸೇಲ್!!

ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಬೆಲೆ ಜಿಎಸ್‌ಟಿಯಿಂದಾಗಿ ಭಾರಿ ಹೆಚ್ಚಳವಾಗುವ ಸಂಭವವಿದೆ ಹಾಗಾಗಿ, ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ಸ್ ನಿಡಿದ್ದು. 20ನೇ ತಾರೀಖಿನಿಂದ 22 ನೇ ತಾರೀಖಿನವರೆಗೂ 'ಫ್ಲಿಪ್‌ಕಾರ್ಟ್ ಡ್ರೀಮ್ ಸ್ಮಾರ್ಟ್‌ಫೋನ್ ಸೇಲ್' ಆಯೋಜನೆಯಾಗಿದೆ.!!

ಎಷ್ಟೆಷ್ಟು ಡಿಸ್ಕೌಂಟ್ಸ್?

ಎಷ್ಟೆಷ್ಟು ಡಿಸ್ಕೌಂಟ್ಸ್?

ಆಪಲ್ ಐಫೋನ್ , ಗೂಗಲ್ ಪಿಕ್ಸೆಲ್ ಮತ್ತು ಮೊಟೊ ಬ್ರಾಂಡ್‌ನ ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಡಿಸ್ಕೌಂಟ್ ನೀಡಿದ್ದು, ಪ್ರತಿಯೊಂದು ಸ್ಮಾರ್ಟ್‌ಫೋನ್‌ ಮೇಲೂ 30 ಪರ್ಸೆಂಟ್‌ಗಿಂತಲೂ ಹೆಚ್ಚು ಡಿಸ್ಕೌಂಟ್‌ನೀಡಲಾಗಿದೆ.! ಹೆಚ್ಚು ಎಂದರೆ 30,000 ರೂಪಾಯಿಗಳ ವರೆಗೂ ಡಿಸ್ಕೌಂಟ್ ನೀಡಲಾಗಿದೆ.!!

ಫೋನ್ ಖರೀದಿಸಲು ಸೂಕ್ತ ಸಮಯವೇ?

ಫೋನ್ ಖರೀದಿಸಲು ಸೂಕ್ತ ಸಮಯವೇ?

ನೀವು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸವುದಾದರೆ ಫ್ಲಿಪ್‌ಕಾರ್ಟ್ ಡ್ರೀಮ್ ಸ್ಮಾರ್ಟ್‌ಫೋನ್ ಸೇಲ್ ಒಂದು ಉತ್ತಮ ಆಫರ್ ಆಗಿದೆ ಎನ್ನಬಹುದು.ಜಿಎಸ್‌ಟಿ ಜಾರಿಯಾದ ನಂತರ ಸ್ಮಾರ್ಟ್‌ಫೋನ್‌ ಬೆಲೆ ಭಾರಿ ಹೆಚ್ಚಳವಾಗುವ ಸಾಧ್ಯತೆ ಇದೆ.!!

EMIನಲ್ಲಿ ಸೇಲ್!!

EMIನಲ್ಲಿ ಸೇಲ್!!

ಫ್ಲಿಪ್‌ಕಾರ್ಟ್ 'ಡ್ರೀಮ್ ಸ್ಮಾರ್ಟ್‌ಫೋನ್ ಸೇಲ್' ಮೂಲಕ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್ ಮಾತ್ರ ನೀಡಿಲ್ಲ, ಬದಲಾಗಿ ಅತ್ಯುತ್ತಮ EMI ಆಫರ್ ಸಹ ನೀಡಿದೆ. ಕೆಲವೊಂದು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಕೇವಲ 2000 ರೂ. ಡೌನ್‌ ಪೇಮೆಂಟ್ ಮಾಡಿ ಖರೀದಿಸಬಹುದಾಗಿದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here is everything that Flipkart is giving under the Dream Phone sale.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot