ಏನಿದು ಫ್ಲಿಪ್‌ವರ್ಸ್‌ ವರ್ಚುವಲ್‌ ಶಾಪಿಂಗ್‌? ಇದರ ಉಪಯೋಗ ಏನು?

|

ಇತ್ತೀಚಿನ ದಿನಗಳಲ್ಲಿ ವರ್ಚುವಲ್‌ ಜಗತ್ತಿನ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಇದೀಗ ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ತನ್ನ ಬಳಕೆದಾರರಿಗೆ ವರ್ಚುವಲ್‌ ಶಾಪಿಂಗ್‌ ಅನುಭವ ನೀಡಲು ಮುಂದಾಗಿದೆ. ಇದಕ್ಕಾಗಿ ಫ್ಲಿಪ್‌ಕಾರ್ಟ್‌ ತನ್ನ ಆಂಡ್ರಾಯ್ಡ್‌ ಅಪ್ಲಿಕೇಶನ್‌ನಲ್ಲಿ ಇಂದಿನಿಂದ ಫ್ಲಿಪ್‌ವರ್ಸ್‌ ಎನ್ನುವ ವರ್ಚುವಲ್‌ ಶಾಪಿಂಗ್‌ ಸೈಟ್‌ ಪ್ರಾರಂಭಿಸಿದೆ. ಇದು ಈ ವಾರದ ಅಂತ್ಯದವರೆಗೆ ಲೈವ್‌ ಆಗಿರಲಿದೆ. ಇನ್ನು ಈ ಫ್ಲಿಪ್‌ವರ್ಸ್‌ ಮೂಲಕ ಗ್ರಾಹಕರು 3D-ಶೈಲಿಯ ಸೆಟ್ಟಿಂಗ್‌ನಲ್ಲಿ ಆಯ್ಡ್‌ ಬ್ರ್ಯಾಂಡ್‌ಗಳ ಜೊತೆಗೆ ಮೆಟಾವರ್ಸ್‌ ಮಾದರಿಯ ಅನುಭವವನ್ನು ಪಡೆಯಬಹುದಾಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಫ್ಲಿಪ್‌ವರ್ಸ್‌ ವರ್ಚುವಲ್‌ ಶಾಪಿಂಗ್‌ ಮಾದರಿಯನ್ನು ಪ್ರಾರಂಭಿಸಿದೆ. ಇದರಲ್ಲಿ ಬಳಕೆದಾರರು ಆಯ್ದ ಬ್ರ್ಯಾಂಡ್‌ಗಳೊಂದಿಗೆ ಸಂವಹನ ನಡೆಸಲು 'ಮೆಟಾವರ್ಸ್' ಶೈಲಿಯ ಅನುಭವದ ಮೂಲಕ ಪ್ರವೇಶಿಸಬಹುದು. ಇದಕ್ಕಾಗಿ ಫ್ಲಿಪ್‌ಕಾರ್ಟ್ eDAO- ಪಾಲಿಗಾನ್-ಇನ್‌ಕ್ಯುಬೇಟೆಡ್ ಸಂಸ್ಥೆ ಮತ್ತು ಗಾರ್ಡಿಯನ್‌ಲಿಂಕ್‌ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ವರ್ಚುವಲ್‌ ಸೈಟ್‌ ಫ್ಲಿಪ್‌ವರ್ಸ್‌ನಲ್ಲಿ ಶಾಪಿಂಗ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌ ಫ್ಲಿಪ್‌ವರ್ಸ್‌ ವರ್ಚುವಲ್‌ ಶಾಪಿಂಗ್‌ ಸೈಟ್‌ ಸಾಕಷ್ಟು ಗಮನಸೆಳೆದಿದೆ. ಇದು ಶಾಪಿಂಗ್‌ ಪ್ರಿಯರಿಗೆ ತ್ರಿಡಿ ಅನುಭವವನ್ನು ನೀಡಲಿದ್ದು, ಮೆಟಾವರ್ಸ್‌ ಶೈಲಿಯ ಇಂಟರ್‌ ಆಕ್ಟ್‌ ಅನ್ನು ಇದರಲ್ಲಿ ನಡೆಸಬಹುದಾಗಿದೆ. ಇದನ್ನು ಫ್ಲಿಪ್‌ಕಾರ್ಟ್‌ನ ಆಂಡ್ರಾಯ್ಡ್‌ ಅಪ್ಲಿಕೇಶನ್‌ನ ಫೈರ್‌ ಡ್ರಾಪ್ಸ್‌ ವಿಭಾಗದಲ್ಲಿ ಲಭ್ಯವಾಗಲಿದೆ. ಫ್ಲಿಪ್‌ವರ್ಸ್‌ನ ಪ್ರಾರಂಭ ಭವಿಷ್ಯದಲ್ಲಿ ವರ್ಚುವಲ್‌ ಜಗತ್ತಿನ ಶಾಪಿಂಗ್‌ ಹೇಗಿರಲಿದೆ ಎನ್ನುವ ಅನುಭವ ನೀಡಲಿದೆ. ಇದು ಇ-ಕಾಮರ್ಸ್‌ನಂತಹ ನವೀನ ಉದ್ಯಮಗಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಅನ್ನೊದನ್ನ ತಿಳಯಲು ಅನುವು ಮಾಡಿಕೊಡಲಿದೆ.

ಫ್ಲಿಪ್‌ವರ್ಸ್ ಎಂದರೇನು?

ಫ್ಲಿಪ್‌ವರ್ಸ್ ಎಂದರೇನು?

ಫ್ಲಿಪ್‌ವರ್ಸ್‌ ನಲ್ಲಿ ಬಳಕೆದಾರರು ತಮ್ಮದೇ ಆದ ಅವತಾರಗಳನ್ನು ಕ್ರಿಯೆಟ್‌ ಮಾಡಬಹುದು. ತಮ್ಮ ಅವತಾರ್‌ಗಳ ಮೂಲಕ ವರ್ಚುವಲ್‌ ಆಗಿ ಶಾಪಿಂಗ್‌ ಮಾಡಬಹುದಾಗಿದೆ. ಇದರಲ್ಲಿ ನಿಮ್ಮ ಆಯ್ಕೆಯ ಹಲವು ಬ್ರ್ಯಾಂಡ್‌ಗಳ ಜೊತೆ ಇಂಟರ್‌ ಆಕ್ಟ್‌ ಮಾಡಲು ಸಾಧ್ಯವಾಗಲಿದೆ. ಇದರಲ್ಲಿ ಭಾಗವಹಿಸುವ ಬಳಕೆದಾರರು ಡಿಜಿಟಲ್‌ ಸ್ಟೋರೇಜ್‌ನಲ್ಲಿ ತಾವು ಖರೀದಿಸಿದ ಬ್ರ್ಯಾಂಡ್‌ಗಳನ್ನು ಸ್ಟೋರ್‌ ಮಾಡಬಹುದು. ಇನ್ನು ಫ್ಲಿಪ್‌ವರ್ಸ್‌ ಯಾವುದೇ ಮೊಬೈಲ್ ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಕ್ಲೌಡ್ ಮೂಲಕ ವರ್ಚುವಲ್ 3D ಅನುಭವವನ್ನು ನೀಡಲಿದೆ ಮತ್ತು ಸ್ಟ್ರೀಮ್ ಮಾಡಬಹುದಾಗಿದೆ.

ವರ್ಚುವಲ್

ಇದು 3D-ಸಕ್ರಿಯಗೊಳಿಸಿದ ವರ್ಚುವಲ್ ಜಗತ್ತು ಆಗಿದ್ದು, ನಿಮಗೆ ಹೊಸ ಅನುಭವ ನೀಡಲಿದೆ. ಇದನ್ನು ನೀವು ಯಾವುದೇ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಮಾಡಲು eDAO ನಂತಹ ಪಾಲುದಾರರೊಂದಿಗೆ ಫ್ಲಿಪ್‌ಕಾರ್ಟ್‌ ಕೆಲಸ ಮಾಡಿದೆ. ವರ್ಚುವಲ್ ಜಗತ್ತಿನಲ್ಲಿ ತಮ್ಮದೇ ಆದ ವರ್ಚುವಲ್ ಎಕ್ಸ್‌ಪಿರಿಯನ್ಸ್‌ ಸೆಟ್‌ ಮಾಡುವ ಬ್ರ್ಯಾಂಡ್‌ಗಳು, ಬಳಕೆದಾರರಿಗೆ ಹೊಸ ಅನುಭವ ನೀಡಲಿವೆ. ಫ್ಲಿಪ್‌ವರ್ಸ್ ಅನುಭವಕ್ಕಾಗಿ ಫ್ಲಿಪ್‌ಕಾರ್ಟ್ ಸುಮಾರು 15 ಪ್ಲಸ್ ಬ್ರ್ಯಾಂಡ್‌ಗಳೊಂದಿಗೆ ಪಾಲುದಾರಿಕೆ ಹೊಂದಿದೆ. ಇದರಲ್ಲಿ ಪೂಮಾ, ನಾಯ್ಸ್, ನಿವಿಯಾ, ಲವಿ, ಟೋಕಿಯೊ ಟಾಕೀಸ್ ನಂತಹ ಪ್ರಮುಖ ಬ್ರ್ಯಾಂಡ್‌ಗಳು ಸೇರಿವೆ.

ಮೆಟಾವರ್ಸ್‌

ಇನ್ನು ಫ್ಲಿಪ್‌ವರ್ಸ್‌ನ ಕಲ್ಪನೆಯು ಮೆಟಾವರ್ಸ್‌ ಜಗತ್ತಿನ ಅನುಭವ ನೀಡುವ ಪ್ರಯತ್ನವಾಗಿದೆ. ಇದು ಬಳಕೆದಾರರಿಗೆ ಹೆಚ್ಚು 3D ಶೈಲಿಯ ಅನುಭವದಲ್ಲಿ ಶಾಪಿಂಗ್ ಮಾಡಲು ಅವಕಾಶ ನೀಡುತ್ತದೆ. ಅಲ್ಲದೆ ಇದರಿಂದ ಗ್ರಾಹಕರ ಪ್ರತಿಕ್ರಿಯೆಯನ್ನು ಅಳೆಯಬಹುದು ಎಂದು ಫ್ಲಿಪ್‌ಕಾರ್ಟ್‌ ಹೇಳಿಕೊಂಡಿದೆ. ಇನ್ನು ಫ್ಲಿಪ್‌ವರ್ಸ್‌ ಸೈಟ್‌ ಅನ್ನು ಫ್ಲಿಪ್‌ಕಾರ್ಟ್‌ ಅಪ್ಲಿಕೇಶನ್‌ನಲ್ಲಿ ಶಾಶ್ವತವಾಗಿ ಇರಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಸದ್ಯಕ್ಕೆ ಬಳಕೆದಾರರು ತಮ್ಮ ಇತರ ಕ್ರಿಪ್ಟೋ ವ್ಯಾಲೆಟ್‌ಗಳ ಮೂಲಕ ಇದನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಇದರ ಮೂಲಕ ಉದ್ದೇಶ 'ಗೇಮಿಫೈಡ್' ಅನುಭವದಲ್ಲಿ ಬಳಕೆದಾರರು ಎಷ್ಟು ಸಮಯದವರೆಗೆ ಎಂಗೇಜ್‌ ಆಗಿರುತ್ತಾರೆ ಎಂದು ಅಳೆಯುವುದಕ್ಕಾಗಿ ಫ್ಲಿಪ್‌ಕಾರ್ಟ್‌ ಈ ಮಾದರಿಯನ್ನು ಅನುಸರಿಸಿದೆ ಎಂದು ಹೇಳಲಾಗಿದೆ.

Best Mobiles in India

Read more about:
English summary
Flipkart Flipverse virtual shopping experience launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X