Just In
- 28 min ago ಬಿಡುಗಡೆಗೂ ಮುನ್ನವೇ ಮೊಟೊರೊಲಾ ಎಡ್ಜ್ 50 ಪ್ರೊ ಫೀಚರ್ಸ್ ಬಹಿರಂಗ: ಏನೆಲ್ಲಾ ನಿರೀಕ್ಷೆ
- 30 min ago Realme: 128 GB ಸ್ಟೋರೇಜ್ ಆಯ್ಕೆಯ ಈ ರಿಯಲ್ಮಿಯ ಫೋನ್ಗೆ ಭಾರೀ ಡಿಸ್ಕೌಂಟ್! 108MP ಮುಖ್ಯ ಕ್ಯಾಮೆರಾ...
- 1 hr ago ನಾಳೆ ರಿಯಲ್ಮಿ ನಾರ್ಜೋ 70 ಪ್ರೊ 5G ಸ್ಮಾರ್ಟ್ಫೋನ್ ಲಾಂಚ್!..ನಿರೀಕ್ಷೆ ಏನು?
- 1 hr ago Mivi ಸಂಸ್ಥೆಯಿಂದ ಹೊಸ ಇಯರ್ಬಡ್ಸ್ ಲಾಂಚ್!..ಇದರ ಸ್ಟೈಲ್ಗೆ ಫಿದಾ ಆಗ್ತೀರಾ!
Don't Miss
- Lifestyle ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು
- News Lok Sabha Election 2024: ಕೋಟೆನಾಡು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಮಗ್ರ ಪರಿಚಯ
- Automobiles ಈ ತಿಂಗಳಲ್ಲಿ ಕೈಗೆಟಕುವ ಬೆಲೆಯ ಎಸ್ಯುವಿಗಳು: ಮಿಸ್ ಮಾಡಬೇಡಿ, ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
- Movies Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್ನಲ್ಲಿ ಗಳಿಸಿದ್ದೆಷ್ಟು?
- Sports RCB Unbox Event: ಚಿನ್ನಸ್ವಾಮಿಯಲ್ಲಿ ಅನ್ಬಾಕ್ಸ್ ಈವೆಂಟ್ ಅಲಂಕರಿಸಲಿದ್ದಾರೆ ಆರ್ಸಿಬಿ ಮಹಾಲಕ್ಷ್ಮಿಯರು
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫ್ಲಿಪ್ಕಾರ್ಟ್ ಸಮೂಹದಿಂದ ಹೊರಬಂದ 'ಸಚಿನ್ ಬನ್ಸಾಲ್' ಮಾಡಿದ್ದೇನು ಗೊತ್ತಾ?
ಇತ್ತೀಚಿಗಷ್ಟೇ 699 ಕೋಟಿಯಷ್ಟು ಭಾರೀ ತೆರಿಗೆ ಪಾವತಿಸುವ ಮೂಲಕ ಗಮನಸೆಳೆದಿದ್ದ ಫ್ಲಿಪ್ಕಾರ್ಟ್ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್, ಇದೀಗ ಆಪ್ ಆಧಾರಿತ ಟ್ಯಾಕ್ಸಿ ಸಂಸ್ಥೆ ಓಲಾದಲ್ಲಿ ಹೂಡಿಕೆ ಮಾಡಿರುವ ವಿಷಯ ತಿಳಿದುಬಂದಿದೆ. ಸಚಿನ್ ಬನ್ಸಾಲ್ ಅವರು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ಈ ವಿಶೇಷ ಮಾಹಿತಿ ಬಹಿರಂಗವಾಗಿದೆ.
ಅಮೆರಿಕದ ರಿಟೇಲ್ ದಿಗ್ಗಜ ವಾಲ್ಮಾರ್ಟ್, ಫ್ಲಿಪ್ಕಾರ್ಟ್ ಅನ್ನು ಸ್ವಾಧೀನಪಡಿಸಿದ ನಂತರ ಸಚಿನ್ ಬನ್ಸಾಲ್ ಕಂಪನಿಯಿಂದ ನಿರ್ಗಮಿಸಿದ್ದರು. ಇದಾದ ನಂತರ ಭಾರತದ ಜನಪ್ರಿಯ ಆಪ್ ಆಧಾರಿತ ಟ್ಯಾಕ್ಸಿ ಸೇವೆಯಾದ ಓಲಾ ಸಂಸ್ಥೆಯಲ್ಲಿ ಬನ್ಸಾಲ್ ಅವರು 150 ಕೋಟಿ ರೂ.ಹೂಡಿಕೆ ಮಾಡಿದ್ದಾರೆ ಎಂಬುದು ಅವರು ಸಚಿವಾಲಯಕ್ಕೆ ಸಲ್ಲಿಸಿದ ದಾಖಲೆಗಳಲ್ಲಿ ತಿಳಿದುಬಂದಿದೆ.
70,588 ಸಂಪೂರ್ಣ ಮತ್ತು ಕಡ್ಡಾಯವಾಗಿ ಬದಲಿಸಬಲ್ಲ ರೂ. 10ರ ಮುಖಬೆಲೆಯು ಶೇರುಗಳನ್ನು ಅವರು ಖರೀದಿಸಿದ್ದಾರೆ ಎಂದು ದಾಖಲೆಗಳಲ್ಲಿ ಬಹಿರಂಗವಾಗಿದೆ. ಮತ್ತೊಂದು ಖಚಿತ ಮೂಲಗಳ ಪ್ರಕಾರ ಸಚಿನ್ ಬನ್ಸಾಲ್ ಅವರು ಒಲಾದಲ್ಲಿ ಒಟ್ಟು 650 ಕೋಟಿ ರೂ.ಹೂಡಿಕೆ ಮಾಡುವ ನಿರೀಕ್ಷೆ ಇದ್ದು, ಮೊದಲ ಹಂತದಲ್ಲಿ 150 ಕೋಟಿ ರೂ.ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.
ತನ್ನದೇ ಫ್ಲಿಪ್ಕಾರ್ಟ್ ಸಮೂಹದಿಂದ ಹೊರಬಂದಿದ್ದ ಸಚಿನ್ ಬನ್ಸಾಲ್ ಅವರು ಮುಂದೇನು ಮಾಡುತ್ತಾರೆ ಎಂಬುದು ಇಲ್ಲಿಯವರೆಗೂ ಪ್ರಶ್ನೆಯಾಗಿ ಉಳಿದಿತ್ತು. ಆದರೆ, ಇದೀಗ ಮೊದಲ ಹೆಜ್ಜೆಯಾಗಿ ಸಚಿನ್ ಬನ್ಸಾಲ್ ಅವರು ಒಲಾದಲ್ಲಿ ಹೂಡಿಕೆ ಮಾಡಿದ್ದಾರೆ. ಇದೇ ರೀತಿಯಲ್ಲಿ ಹಲವಾರು ಭಾರತೀಯ ಕಂಪೆನಿಗಳಲ್ಲಿ ಅವರು ಹೂಡಿಕೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜಾಗತಿಕ ಪ್ರತಿಸ್ಪರ್ಧಿ ಉಬರ್ ಜೊತೆ ಭಾರತದಲ್ಲಿ ಆಕ್ರಮಣಕಾರಿಯಾಗಿ ಪೈಪೋಟಿ ನಿಡುತ್ತಿರುವ ಓಲಾಗೆ ಈ ಸಮಯದಲ್ಲಿ ಸಚಿನ್ ಬನ್ಸಾಲ್ ಅವರ ಹೂಡಿಕೆ ಬಲತಂದಿದೆ. ವಿಶ್ವದಾದ್ಯಂತ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿರುವ ಬೆಂಗಳೂರು ಮೂಲದ ಓಲಾ ಹೂಡಿಕೆದಾರರ ಅನ್ವೇಷಣೆಯಲ್ಲಿರುವ ಸಂದರ್ಭದಲ್ಲಿಯೇ ಬನ್ಸಾಲ್ ಅವರು ಹೂಡಿಕೆ ಮಾಡುತ್ತಿದ್ದಾರೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999