ಫ್ಲಿಪ್‌ಕಾರ್ಟ್‌ ತೆಕ್ಕೆಗೆ ಜಾರಿದ ವಾಲ್ಮಾರ್ಟ್ ಇಂಡಿಯಾ ಬ್ಯುಸಿನೆಸ್‌!

|

ಜನಪ್ರಿಯ ಇ-ಕಾಮರ್ಸ್‌ ತಾಣಗಳಲ್ಲಿ ಒಂದಾದ ಫ್ಲಿಪ್ಕಾರ್ಟ್ ಗ್ರೂಪ್ ಹೋಲ್‌ಸೇಲ್‌ ಮಾರಾಟಕ್ಕೆ ಹೆಸರುವಾಸಿಯಾದ ವಾಲ್ಮಾರ್ಟ್ ಇಂಡಿಯಾ ಬ್ಯುಸಿನೆಸ್‌ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಣೆ ಮಾಡಿದೆ. ಭಾರತದಲ್ಲಿ ಉತ್ತಮ ಬೆಲೆ ಮಳಿಗೆಗಳನ್ನು ನಿರ್ವಹಿಸುತ್ತಿರುವ ವಾಲ್‌ಮಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ 100% ಆಸಕ್ತಿಯನ್ನು ಹೊಂದಿದ್ದೇವೆ ಎಂದು ಫ್ಲಿಪ್‌ಕಾರ್ಟ್‌ ಕಂಪನಿ ತಿಳಿಸಿದೆ. ಈ ಮೂಲಕ ವಾಲ್ಮಾರ್ಟ್ ಇಂಡಿಯಾದ ಎಲ್ಲಾ ಉದ್ಯೋಗಿಗಳು ಫ್ಲಿಪ್‌ಕಾರ್ಟ್ ಗ್ರೂಪ್‌ಗೆ ಸೇರ್ಪಡೆಗೊಳ್ಳಲಿದ್ದು, ಮುಂದಿನ ವರ್ಷದಲ್ಲಿ ಹೋಮ್ ಆಫೀಸ್ ಟೀಂಗಳು ಸಂಯೋಜನೆಗೊಳ್ಳಲಿವೆ ಎಂದು ಹೇಳಲಾಗ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಗ್ರೂಪ್‌ ತನ್ನ ತೆಕ್ಕೆಗೆ ವಾಲ್ಮಾರ್ಟ್ ಇಂಡಿಯಾ ಬ್ಯುಸಿನೆಸ್‌ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಭಾರತದಲ್ಲಿ ಹೋಲ್‌ಸೇಲ್‌ ವ್ಯಾಪಾರದಲ್ಲಿ ಮತ್ತೊಂದು ಹೊಸ ಹೆಜ್ಜೆಯನ್ನು ಫ್ಲಿಪ್‌ಕಾರ್ಟ್‌ ಇಟ್ಟಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಬೆಸ್ಟ್ ಪ್ರೈಸ್ ಮಳಿಗೆಗಳ ಮೂಲಕ ತಮ್ಮ 1.5 ಮಳಿಗೆಗಳ 28 ಮಳಿಗೆಗಳು ಮತ್ತು ಇ-ಕಾಮರ್ಸ್ ಕಾರ್ಯಾಚರಣೆಗಳ ಮೂಲಕ ತಮ್ಮ 1.5 ಮಿಲಿಯನ್ ಸದಸ್ಯರಿಗೆ ಸೇವೆ ಸಲ್ಲಿಸುತ್ತಲೇ ಇರುತ್ತವೆ ಎಂದು ಫ್ಲಿಪ್‌ಕಾರ್ಟ್‌ ಹೇಳಿದೆ.

ಫ್ಲಿಪ್‌ಕಾರ್ಟ್‌

ಇದಲ್ಲದೆ ಫ್ಲಿಪ್‌ಕಾರ್ಟ್‌ ವಾಲ್‌ಮಾರ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಅನ್ನು 100% ಸ್ವಾದಿನ ಪಡಿಸಿಕೊಳ್ಳುವುದರ ಮೂಲಕ ಸಗಟು ವ್ಯಾಪಾರ ವಲಯದಲ್ಲಿ ಉತ್ತಮ ಹೆಜ್ಜೆಯನ್ನು ಹಾಕಿದೆ. ಅಲ್ಲದೆ ವಾಲ್ಮಾರ್ಟ್ ಸಮೂಹವನ್ನು ಸ್ವಾಧೀನಪಡಿಸಿಕೊಳ್ಳುವುದರ ಹೊರತಾಗಿ, ಫ್ಲಿಪ್ಕಾರ್ಟ್ ಫ್ಲಿಪ್ಕಾರ್ಟ್ ಹೋಲ್‌ಸೇಲ್‌ ಅನ್ನು ಸಹ ಘೋಷಣೆ ಮಾಡಿದೆ. ಫ್ಲಿಪ್‌ಕಾರ್ಟ್ ಸಗಟು ಇ-ಚಿಲ್ಲರೆ ವ್ಯಾಪಾರಿಗಳ ತಾಂತ್ರಿಕ ಸಾಮರ್ಥ್ಯಗಳು ಮತ್ತು ದೇಶಾದ್ಯಂತ ಕಿರಾನಾ ಮತ್ತು ಮಧ್ಯಮ ಮತ್ತು ಸಣ್ಣ ಉದ್ಯಮಗಳನ್ನು ತಲುಪಲು ವಿಶಾಲ ಪೂರೈಕೆ ಸರಪಳಿ ಮೂಲಸೌಕರ್ಯವನ್ನು ನಿಯಂತ್ರಿಸುತ್ತದೆ ಎಂದು ಕಂಪನಿ ಹೇಳಿದೆ.

ವಾಲ್‌ಮಾರ್ಟ್‌

ವಾಲ್‌ಮಾರ್ಟ್‌ ಇಂಡಿಯಾವನ್ನು ಸ್ವಾಧೀನ ಪಡಿಸಿಕೊಂಡ ನಂತರ ಫ್ಲಿಪ್‌ಕಾರ್ಟ್‌ ತನ್ನ ಹೊಸ ಸಗಟು ಮಳಿಗೆಗಳನ್ನ ಪ್ರಾರಂಭಿಸಲಿದೆ. ಇದರ ಮೂಲಕ ಕಿರಾನಾ ಅಂಗಟಿಗಳ ಥರ ಕಾರ್ಯನಿರ್ವಹಿಸುವ ಪ್ಲ್ಯಾನ್‌ ರೂಪಿಸಿಕೊಂಡಿದೆ. ಜೊತೆಗೆ ಎಂಎಸ್‌ಎಂಇಗಳಿಗೆ ಸುಲಭವಾದ ಕ್ರೆಡಿಟ್ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ಉಪಕ್ರಮಗಳ ಮೂಲಕ ಎಂಟ್ರಿ ನೀಡಲು ಅವಕಾಶ ನೀಡಿದೆ. ಈ ಮೂಲಕ ಯಾವುದೇ ಪ್ರಾಡಕ್ಟ್‌ಗಳ ಪರಿಮಾಣವನ್ನು ಅಳೆಯಲು ಮತ್ತು ಲಾಭದಾಯಕವಾಗಲು ಸಹಾಯ ಮಾಡುತ್ತದೆ.

ಫ್ಲಿಪ್ಕಾರ್ಟ್

ಇದಲ್ಲದೆ ಕಿರಾಣಿ ಮತ್ತು ಫ್ಯಾಷನ್ ವಿಭಾಗಗಳಿಗೆ ಫ್ಲಿಪ್ಕಾರ್ಟ್ ಹೋಲ್‌ಸೇಲ್‌ ತನ್ನ ಸೇವೆಗಳನ್ನು 2020 ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಿದೆ ಎನ್ನಲಾಗ್ತಿದೆ. ಇದರ ನೇತೃತ್ವವನ್ನು ಫ್ಲಿಪ್‌ಕಾರ್ಟ್ ನ ಆದರ್ಶ್ ಮೆನನ್ ವಹಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಸದ್ಯ ಇ-ಕಾಮರ್ಸ್‌ ತಾಣಗಳ ಜನಪ್ರಿಯತೆಯ ನಡುವೆ ಹೋಲ್‌ಸೇಲ್‌ ಮಳಿಗೆಗಳ ಮೂಲಕ ಎಲ್ಲಾ ವರ್ಗದ ಗ್ರಾಹಕರನ್ನು ತಲುಪುವ ಪ್ಲ್ಯಾನ್‌ ಅನ್ನು ಫ್ಲಿಪ್‌ಕಾರ್ಟ್‌ ರೂಪಿಸಿಕೊಂಡಿದೆ ಎಂದು ಹೇಳಲಾಗ್ತಿದೆ.

Best Mobiles in India

English summary
Flipkart has acquired 100% interest in Walmart India Private Limited, which operates the Best Price stores in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X