TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಅಮೆಜಾನ್‌ಗೆ ಫ್ಲಿಪ್‌ಕಾರ್ಟ್‌ನಿಂದ ತಿರುಗೇಟು..! ಕಾರ್ಡ್‌ಲೆಸ್ ಕ್ರೆಡಿಟ್ ಆರಂಭ..! ಬಳಕೆ ಹೇಗೆ..?
ಕೆಲವು ದಿನಗಳ ಹಿಂದಷ್ಟೇ ಅಮೆಜಾನ್ ಇಂಡಿಯಾ ಅಮೆಜಾನ್ ಪೇ ಇಎಂಐ ಮೂಲಕ ಹಣಕಾಸು ಆಯ್ಕೆ ನೀಡಿತ್ತು. ಇದಕ್ಕೆ ಸ್ಪರ್ಧೆಯೊಡ್ಡಲು ಜಾಗತಿಕ ರಿಟೇಲ್ ದಿಗ್ಗಜ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಹೊಸ ಯೋಜನೆಯನ್ನು ರೂಪಿಸಿದ್ದು, ತನ್ನ ಗ್ರಾಹಕರಿಗೆ ಕಾರ್ಡ್‌ಲೆಸ್ ಕ್ರೆಡಿಟ್ ಆಯ್ಕೆಯನ್ನು ನೀಡುವ ಮೂಲಕ ಭಾರತದ ಇ-ಕಾಮರ್ಸ್ ಉದ್ಯಮವನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸಿದೆ.
ಹೌದು, ಅಮೆಜಾನ್‌ಗೆ ಭಾರೀ ಸ್ಪರ್ಧೆ ನೀಡುತ್ತಿರುವ ಫ್ಲಿಪ್‌ಕಾರ್ಟ್ ಹಲವು ಯೋಜನೆಗಳನ್ನು ನೇರವಾಗಿಯೇ ಅಮೆಜಾನ್ ವಿರುದ್ಧ ಕೈಗೆತ್ತಿಕೊಂಡು ಗ್ರಾಹಕರನ್ನು ಸೆಳೆಯುತ್ತಿದೆ. ಈಗ 60,00 ರೂ.ವರೆಗೂ ಇನ್‌ಸ್ಟಾಂಟ್ ಕ್ರೆಡಿಟ್ ಮೂಲಕ ಹಣಕಾಸಿನ ಆಫರ್ ನೀಡಿದೆ. ಜನೇವರಿಯಲ್ಲಿ ಅಮೆಜಾನ್ ಪೇ ಪ್ರಾರಂಭವಾದ ಮೇಲೆ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಇನ್‌ಸ್ಟಾಂಟ್ ಕ್ರೆಡಿಟ್ ಫೀಚರ್‌ನ್ನು ತರುವ ಪ್ರಯತ್ನ ಪಟ್ಟು ಯಶಸ್ವಿಯಾಗಿದೆ.
ಇದರ ಮೂಲಕ ಅಮೆಜಾನ್‌ಗೆ ಬಿಗ್ ಶಾಕ್ ನೀಡಿದೆ. ಆಗಿದ್ರೆ ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್ ಏನೆಲ್ಲಾ ಫೀಚರ್ ಹೊಂದಿದೆ..? ಯಾರಿಗೆ ಈ ಸೌಲಭ್ಯ ಲಭ್ಯ..? ಹೇಗೆ ಕಾರ್ಡ್‌ಲೆಸ್ ಕ್ರೆಡಿಟ್ ಪಡೆಯಬೇಕು ಎನ್ನುವುದನ್ನು ಮುಂದೆ ನೋಡಿ..
ಎಲ್ಲರಿಗೂ ಲಭ್ಯವಿಲ್ಲ..!
ಆರಂಭದಲ್ಲಿ ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್ ಫೀಚರ್ ಎಲ್ಲರಿಗೂ ಲಭ್ಯವಿಲ್ಲ. ಈ ಆಯ್ಕೆಯಿಂದ 45 ಲಕ್ಷ ಗ್ರಾಹಕರನ್ನು ಫ್ಲಿಪ್‌ಕಾರ್ಟ್ ಹೊರಗಡೆ ಇಟ್ಟಿದೆ. ಫಿನ್‌ಟೆಕ್ ಫ್ಲಿಪ್‌ಕಾರ್ಟ್‌ನ ಹಿರಿಯ ಉಪಾಧ್ಯಕ್ಷ ಹಾಗೂ ಮುಖ್ಯಸ್ಥರಾದ ರವಿ ಗರ್ಕಿಪತಿ ಹೇಳುವಂತೆ, ಕಾರ್ಡ್‌ಲೆಸ್ ಕ್ರೆಡಿಟ್ ಆಯ್ಕೆ ಹೊಂದದವರು ಅರ್ಹತೆ ಹೊಂದಿಲ್ಲವೆಂದು ನಾವು ತಿಳಿದಿಲ್ಲ. ಗ್ರಾಹಕರ ಪೈಕಿ, ಖರೀದಿಯ ಸಾಮರ್ಥ್ಯದಲ್ಲಿ ಅಂತರ ಇರಬಹುದು. ಆದರೆ, ಅವರು ಹೊಂದಲು ಬಯಸುವ ಮಹತ್ವಾಕಾಂಕ್ಷೆ ಮತ್ತು ಗುಣಮಟ್ಟದಲ್ಲಿ ಅಂತರ ಇರಬಾರದು. ಎಂದು ಈ ಸವಾಲನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಧ್ಯಮ ವರ್ಗದ ಮೊಬೈಲ್ ಸಕ್ರಿಯರಿಗೆ ಲಭ್ಯ
ಕಾರ್ಡ್‌ಲೆಸ್ ಕ್ರೆಡಿಟ್ ಫೀಚರ್‌ನ್ನು ಸಂಭಾವ್ಯ ಗ್ರಾಹಕರಿಗೆ ನೀಡುತ್ತಿದ್ದು, ಮಧ್ಯಮ ವರ್ಗದ ಸಕ್ರಿಯ ಮೊಬೈಲ್ ಬಳಕೆದಾರರಿಗೆ ಕಾರ್ಡ್‌ಲೆಸ್ ಕ್ರೆಡಿಟ್ ನೀಡುವ ಮೂಲಕ ಅವರ ಶಾಪಿಂಗ್ ನಡವಳಿಕೆ ಅರ್ಥ ಮಾಡಿಕೊಳ್ಳಲು ಮತ್ತು ಕ್ರೆಡಿಟ್ ನೀಡುವುದನ್ನು ಪಾರದರ್ಶಕವಾಗಿ ಮಾಡುತ್ತಿದ್ದು, ಕೈಗೆಟಕುವ ದರದಲ್ಲಿ ಅವರಿಗೆ ಶಾಪಿಂಗ್ ಅನುಭವ ನೀಡಲು ಉತ್ಸುಕರಾಗಿದ್ದೇವೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.
60 ಸೆಕೆಂಡ್‌ಗಳಲ್ಲಿ 60 ಸಾವಿರ ಕ್ರೆಡಿಟ್
ಫ್ಲಿಪ್‌ಕಾರ್ಟ್ ಹೇಳಿರುವಂತೆ ಕೇವಲ 60 ಸೆಕೆಂಡ್‌ಗಳಲ್ಲಿ 60 ಸಾವಿರ ಇನ್‌ಸ್ಟಾಂಟ್ ಕ್ರೆಡಿಟ್ ಆಗುತ್ತದೆಯಂತೆ. ಗ್ರಾಹಕರ ವರ್ತನೆಯನ್ನು ಆಧರಿಸಿ ಫ್ಲಿಪ್‌ಕಾರ್ಟ್ ಹಣದ ಪ್ರಮಾಣ ನಿರ್ಧರಿಸಿ ಜಮೆ ಮಾಡುತ್ತದೆ. ಆಧಾರ್ ಮತ್ತು PAN ಮೂಲಕ ರಿಜಿಸ್ಟರ್ ಮಾಡಿಕೊಂಡು ಕ್ರೆಡಿಟ್ ಪಡೆಯಬೇಕು.
ಹೇಗೆ ಬಳಕೆ..?
ನೀವು ಉತ್ಪನ್ನ ಖರೀದಿಸಿ ಚೆಕ್‌ಔಟ್ ಮಾಡುವ ಸಂದರ್ಭದಲ್ಲಿ Pay Later next month ಅಥವಾ 3 ರಿಂದ 12 ತಿಂಗಳುಗಳ EMI ಆಯ್ಕೆ ಲಭ್ಯವಾಗುತ್ತದೆ. ಬೇಕಾದ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬಹುದು. 2000 ರೂ.ಗಿಂತ ಕಡಿಮೆ ಮೌಲ್ಯದ ಉತ್ಪನ್ನಗಳನ್ನು ಖರೀದಿಸುವಾಗ OTP ಇಲ್ಲದೆಯೂ ಖರೀದಿಸಬಹುದು. ಡೆಬಿಟ್ ಕಾರ್ಡ್ ಆಥವಾ ನೆಟ್ ಬ್ಯಾಂಕಿಂಗ್ ಮೂಲಕವು ಹಣ ಪಾವತಿಸಬಹುದು.
ಅಪ್ಲೇ ಮಾಡುವುದು ಹೇಗೆ..?
1.ಫ್ಲಿಪ್‌ಕಾರ್ಟ್‌ನ ಕಾರ್ಡ್‌ಲೆಸ್ ಕ್ರೆಡಿಟ್‌ಗೆ ಫ್ಲಿಪ್‌ಕಾರ್ಟ್‌ನ ಆಂಡ್ರಾಯ್ಡ್ ಆಪ್‌ನಲ್ಲಿ ಮಾತ್ರ ಅಪ್ಲೇ ಮಾಡಬೇಕಾಗುತ್ತದೆ.
2.
ಮೊದಲು ನಿಮ್ಮ ಮೊಬೈಲ್‌ನಲ್ಲಿರುವ ಫ್ಲಿಪ್‌ಕಾರ್ಟ್ ಆಪ್‌ನಲ್ಲಿ ಮೈ ಅಕೌಂಟ್ ಆಯ್ಕೆಗೆ ಹೋಗಿ.
3.
ನಂತರ ಅಲ್ಲಿ ನಿಮಗೆ ಕಾರ್ಡ್‌ಲೆಸ್ ಕ್ರೆಡಿಟ್ ಆಯ್ಕೆ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿ. (ಎಲ್ಲಾ ಗ್ರಾಹಕರಿಗೂ ಈ ಫೀಚರ್ ಸದ್ಯಕ್ಕೆ ಲಭ್ಯವಿಲ್ಲ)
4.
ಕಾರ್ಡ್‌ಲೆಸ್ ಕ್ರೆಡಿಟ್ ಆಯ್ಕೆ ಕ್ಲಿಕ್ ಮಾಡಿದ ನಂತರ Apply Now ಎನ್ನುವ ಆಯ್ಕೆ ಬರುತ್ತದೆ ಅದನ್ನು ಕ್ಲಿಕ್ ಮಾಡಿ.
5.
ನಂತರ PAN ಹಾಗೂ ಆಧಾರ್ ವಿವರಗಳನ್ನು ನಮೂದಿಸಿ, ಕಂಟಿನ್ಯೂ ಆಯ್ಕೆಯನ್ನು ಕ್ಲಿಕ್ ಮಾಡಿ, ಆಧಾರ್ OTPಯನ್ನು ಪರಿಶೀಲಿಸಿ.
6.
ಆಧಾರ್ OTPಯನ್ನು ಪರಿಶೀಲಿ, ಅಪ್ಲಿಕೇಷನ್ ರಿವ್ಯೂವ್ ಮಾಡಿ.
7.
ನಿಮ್ಮ ವಿವರಗಳನ್ನು ನಮೂದಿಸಿದ ಮೇಲೆ ನಿಮ್ಮ ಗ್ರಾಹಕ ನಡವಳಿಕೆಯನ್ನು ಆಧರಿಸಿ 60 ಸಾವಿರ ರೂ. ಅಥವಾ ಅದರೊಳಗೆ ಇಂತಿಷ್ಟು ಪ್ರಮಾಣದ ಹಣವನ್ನು ನಿಮ್ಮ ಕಾರ್ಡ್‌ಲೆಸ್ ಕ್ರೆಡಿಟ್ ಆಯ್ಕೆಗೆ ಜಮಾ ಮಾಡಲಾಗುತ್ತದೆ.
ಅಮೆಜಾನ್ vs ಫ್ಲಿಪ್‌ಕಾರ್ಟ್
ಅಮೆಜಾನ್ ವಿರುದ್ಧವಾಗಿ ಫ್ಲಿಪ್‌ಕಾರ್ಟ್ ಅನೇಕ ಸಾಮ್ಯತೆ ಹೊಂದುವ ಯೋಜನೆಗಳನ್ನು ಆರಂಭಿಸಿದೆ. ಅಮೆಜಾನ್ ಪ್ರೈಮ್‌ಗೆ ಫ್ಲಿಪ್‌ಕಾರ್ಟ್ ಪ್ಲಸ್, ಅಮೆಜಾನ್ ಪೇ EMIಗೆ ಫ್ಲಿಪ್‌ಕಾರ್ಟ್ ಕಾರ್ಡ್‌ಲೆಸ್ ಕ್ರೆಡಿಟ್, ಅಮೆಜಾನ್ ಪ್ರೈಮ್ ವಿಡಿಯೋಗೆ ಹಾಟ್‌ಸ್ಟಾರ್ ಜತೆಗೂಡಿ ವಿಡಿಯೋ ಪ್ಲಾಟ್‌ಫಾರ್ಮ್ ಆರಂಭಿಸುವ ಯೋಚನೆಯಲ್ಲಿ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಮಾಡುತ್ತಿದೆ.