Subscribe to Gizbot

ಅಮೆಜಾನ್‌ ಹಿಂದಿಕ್ಕಿದ ಫ್ಲಿಪ್‌ಕಾರ್ಟ್‌ಗೆ ಗ್ರಾಹಕರಿಂದ ನಂ.1 ಪಟ್ಟ..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಆನ್‌ಲೈನ್‌ ಶಾಪಿಂಗ್‌ ತಾಣಗಳು ಸಾಕಷ್ಟು ಸದ್ದು ಮಾಡುತ್ತಿದ್ದು, ಅದರಲ್ಲಿಯೂ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳು ತಮ್ಮದೇ ಅಭಿಮಾನಿಗಳ ಬಳಗವನ್ನು ಹೊಂದಿರುವುದಲ್ಲದೇ ಒಂದಕ್ಕೊಂದು ಸಾಕಷ್ಟು ಸ್ಪರ್ಧೆಯನ್ನು ನೀಡುತ್ತಿವೆ. ಇದೇ ಸಂದರ್ಭದಲ್ಲಿ ಮಾಹಿತಿಯೊಂದು ಹೊರಬಂದಿದ್ದು, ಕೆಲವು ವಿಷಯದಲ್ಲಿ ಫ್ಲಿಪ್‌ಕಾರ್ಟ್‌ ಅಮೆಜಾನ್‌ ಅನ್ನು ಹಿಂದಿಕ್ಕಿದೆ.

ಅಮೆಜಾನ್‌ ಹಿಂದಿಕ್ಕಿದ ಫ್ಲಿಪ್‌ಕಾರ್ಟ್‌ಗೆ ಗ್ರಾಹಕರಿಂದ ನಂ.1 ಪಟ್ಟ..!

ಓದಿರಿ: ದಿನಕ್ಕೆ 1GB ಸಾಲುತ್ತಿಲ್ಲವೇ? ಏರ್‌ಟೆಲ್‌ ಹಾಗೂ ಜಿಯೋದಿಂದ ಪ್ರತಿನಿತ್ಯ 3.5 GB ಡೇಟಾ: ಪಡೆಯವುದು ಹೇಗೆ?

ಮಾರುಕಟ್ಟೆಯಲ್ಲಿ ಗ್ರಾಹಕರ ನಂಬಿಕೆಯನ್ನು ಗಳಿಸುವಲ್ಲಿ ಗ್ಲೋಬಲ್ ಮಾರುಕಟ್ಟೆ ನಾಯಕ ಅಮೆಜಾನ್ ಅನ್ನು ಹಿಂದಿಕ್ಕಿರುವ ಭಾರತೀಯ ಮೂಲದ ಫ್ಲಿಪ್‌ಕಾರ್ಟ್ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದ್ದು, ಗ್ರಾಹಕರ ನಂಬಿಕೆ ಪಾತ್ರವಾದ ಜಾಲತಾಣ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಈ ಪಟ್ಟವನ್ನು ನೀಡಿರುವುದು ಗ್ರಾಹಕರೇ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಮೀಕ್ಷೆಯಲ್ಲಿ ಬಹಿರಂಗ:

ಸಮೀಕ್ಷೆಯಲ್ಲಿ ಬಹಿರಂಗ:

ಆನ್‌ಲೈನ್‌ ಶಾಪಿಂಗ್ ತಾಣಗಳ ಬಗ್ಗೆ ಸೇವೆಗಳನ್ನು ನೀಡುತ್ತಿರುವ ಕಂಪನಿಗಳ ಕುರಿತು ಸರ್ವೆಯನ್ನು ನಡೆಸಿರುವ ರೆಡ್‌ಶಿರ್ ಸಂಸ್ಥೆ, ಮೂರು ವಿಭಾಗದಲ್ಲಿ ಸರ್ವೆ ನಡೆಸಿದ್ದು, ಗ್ರಾಹಕರ ನಂಬಿಕೆ ಪಾತ್ರವಾದ ಬ್ರಾಂಡ್, ಉತ್ತಮ ಮೌಲ್ಯ ಮತ್ತು ಖರೀದಿಯ ಅನುಭವವನ್ನು ನೋಡಿಕೊಂಡು ಅಂಕಗಳನ್ನು ನೀಡಿದೆ.

ಫ್ಲಿಪ್‌ಕಾರ್ಟ್‌ಗೆ ಮೊದಲ ಸ್ಥಾನ:

ಫ್ಲಿಪ್‌ಕಾರ್ಟ್‌ಗೆ ಮೊದಲ ಸ್ಥಾನ:

ಒಟ್ಟು 30 ನಗರಗಳಲ್ಲಿ ವಿವಿಧ ವರ್ಗದ ನಾಗರೀಕರನ್ನು ಸಮೀಕೆಯಲ್ಲಿ ಭಾಗಿ ಮಾಡಿಕೊಂಡ ರೆಡ್‌ಶಿರ್ ಸಂಸ್ಥೆ, ವಿವಿಧ ಹಂತದಲ್ಲಿ ಸಮೀಕ್ಷೆಯನ್ನು ನಡೆಸಿದೆ. ಇದರಲ್ಲಿ ಫ್ಲಿಪ್‌ಕಾರ್ಟ್‌ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಇದಾದ ನಂತರದಲ್ಲಿ ಅಮೆಜಾನ್, ಸ್ನಾಪ್‌ ಡೀಲ್, ಪೇಟಿಎಂ, ಸ್ನಾಪ್‌ಕ್ಲೂಸ್ ಮತ್ತು ಇಬೇ ತಾಣಗಳು ಕಾಣಿಸಿಕೊಂಡಿದೆ.

ಆದರೆ ಈ ಬಗ್ಗೆ ಅಮೆಜಾನ್ ತಕರಾರು;

ಆದರೆ ಈ ಬಗ್ಗೆ ಅಮೆಜಾನ್ ತಕರಾರು;

ಆದರೆ ರೆಡ್‌ಶಿರ್ ಸಂಸ್ಥೆ ಮಾಡಿರುವ ಸಮೀಕ್ಷೆಯ ಬಗ್ಗೆ ಅಮೆಜಾನ್ ತಕರಾರು ತೆಗೆದಿದೆ ಎನ್ನಲಾಗಿದೆ. ಸಮೀಕ್ಷೆಯ ಹೆಸರಿನಲ್ಲಿ ತನಗೇ ಬೇಕಾದ ಹಾಗೆ ಮಾಹಿತಿಯನ್ನು ನೀಡಿದೆ ಎನ್ನಲಾಗಿದೆ. ಇದು ನಮ್ಮ ಬ್ರಾಂಡ್ ಮೌಲ್ಯವನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ ಎಂದು ದೂರಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart more 'trusted' than Amazon. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot