TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಕಾರ್ಡ್‌ಲೆಸ್ ಕ್ರೆಡಿಟ್ ಹಣಕಾಸು ಆಯ್ಕೆ ನೀಡಿದ ಫ್ಲಿಪ್‌ಕಾರ್ಟ್..!
ಫ್ಲಿಪ್ ಕಾರ್ಟ್ ಹೊಸದೊಂದು ಪೇಮೆಂಟ್ ಆಯ್ಕೆಯನ್ನು ಪ್ರಕಟಿಸಿದ್ದು ಅದನ್ನು ಕಾರ್ಡ್ ಲೆಸ್ ಕ್ರೆಡಿಟ್ ಎಂದು ಹೆಸರಿಸಿದೆ. ಅಮೇಜಾನ್ ಇಂಡಿಯಾ ತನ್ನದೇ ಅಮೇಜಾನ್ ಪೇ ಇಎಂಐ ಕ್ರೆಡಿಟ್ ಆಯ್ಕೆಯನ್ನು ಬಿಡುಗಡೆಗೊಳಿಸಿರುವಂತೆ ಇದೂ ಕೂಡ ಆಗಿದೆ.
ಫ್ಲಿಪ್ ಕಾರ್ಟ್ ನ ಈ ಹೊಸ ಫೈನಾನ್ಸಿಂಗ್ ಆಯ್ಕೆಯು 60,000 ರುಪಾಯಿವರೆಗಿನ ಇನ್ ಸ್ಟೆಂಟ್ ಕ್ರೆಡಿಟ್ ಆಯ್ಕೆಯನ್ನು ನೀಡುತ್ತದೆ ಮತ್ತು ಇದು ಕಂಪೆನಿಯ ಫಿನ್ ಟೆಕ್ ಜರ್ನಿಯ ಮುಂದುವರಿದ ಭಾಗ ಎಂದು ಹೇಳಲಾಗಿದೆ. ಈ ಫಿನ್ ಟೆಕ್ ಜರ್ನಿಯ ಪೇ ಲೇಟರ್ ವೈಶಿಷ್ಟ್ಯತೆಯು ಈ ವರ್ಷದ ಜನವರಿಯಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಪ್ರಾರಂಭಿಸಲಾಗಿತ್ತು.
ರಿಯಲ್ ಟೈಮ್ ಕ್ರೆಡಿಟ್ ಅಕ್ಸೆಸ್
ಇತ್ತೀಚೆಗೆ ಫ್ಲಿಪ್ ಕಾರ್ಟ್ ತನ್ನ ಹೆಚ್ಚಿನ ಸ್ಟೇಕ್ ಗಳನ್ನು ಯುಎಸ್ ನ ವಾಲ್ ಮಾರ್ಟ್ ಗೆ ಮಾರಾಟ ಮಾಡಿದೆ ಮತ್ತು ಈ ಕಾರ್ಡ್ ಲೆಸ್ ಕ್ರೆಡಿಟ್ ಸಿಸ್ಟಮ್ ನ ಪ್ರಮುಖ ಉದ್ದೇಶ ರಿಯಲ್ ಟೈಮ್ ನಲ್ಲಿ ಕ್ರೆಡಿಟ್ ಆಕ್ಸಿಸ್ ನ್ನು ಹೆಚ್ಚಿಸುವುದು ಮತ್ತು ಅಪ್ಲಿಕೇಷನ್ ಪ್ರೊಸೆಸ್ ನ್ನು ಇನ್ನಷ್ಟು ಸರಳಗೊಳಿಸುವುದಾಗಿದೆ ಎಂದು ಫ್ಲಿಪ್ ಕಾರ್ಟ್ ತಿಳಿಸಿದೆ.
ಕಾರ್ಡ್ ಲೆಸ್ ಕ್ರೆಡಿಟ್ ನ ಉದ್ದೇಶ:
ಸುಮಾರು 45 ಮಿಲಿಯನ್ ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಕ್ರೆಡಿಟ್ ಆಕ್ಸಿಸ್ ಇಲ್ಲ ಹಾಗಾಗಿ ಮಿಡಲ್ ಕ್ಲಾಸ್ ಕಸ್ಟಮರ್ ಗೆ ಇದು ಹೆಚ್ಚಿನ ನೆರವನ್ನು ನೀಡುತ್ತದೆ. ಅವರು ಮೊಬೈಲ್ ಖರೀದಿಸುವುದಾದರೆ ಕ್ರೆಡಿಟ್ ಕಾರ್ಡ್ ಅಥವಾ ಕ್ರೆಡಿಟ್ ಲಿಮಿಟ್ ಇಲ್ಲದೆ ಇದ್ದರೂ ಕೂಡ ಫ್ಲಿಪ್ ಕಾರ್ಟ್ ನ ಈ ಸೇವೆಯಿಂದ ಮೊಬೈಲ್ ಖರೀದಿ ಮಾಡಲು ಅವಕಾಶವಿರುತ್ತದೆ. ಗ್ರಾಹಕರ ಶಾಪಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ಕೈಗೆಟುಕುವ ಬೆಲೆಯಲ್ಲಿ ದೊರಕುವಂತೆ ಮಾಡಲು ಈ ಸರಳ ಮತ್ತು ಪಾರದರ್ಶಕವಾಗಿರುವ ಶಾಪಿಂಗ್ ಆಕ್ಸಿಸ್ ಹೆಚ್ಚು ನೆರವನ್ನು ನೀಡುತ್ತದೆ ಎಂದು ಕಂಪೆನಿಯು ಅಭಿಪ್ರಾಯ ಪಡುತ್ತದೆ.
ನಿಮಿಷದಲ್ಲಿ 60 ಸಾವಿರ ರೂ. ಕ್ರೆಡಿಟ್
ಫ್ಲಿಪ್ ಕಾರ್ಟ್ ಹೇಳುವಂತೆ ಇನ್ಸ್ಟೆಂಟ್ ಕ್ರೆಡಿಟ್ ಲೈನ್ ಅಪ್ 60,000 ರುಪಾಯಿಗಳವರೆಗಿನ ಟ್ರಾನ್ಸ್ಯಾಕ್ಷನ್ ಗೆ 60 ಸೆಕೆಂಡ್ ಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದೆ ಮತ್ತು ಕ್ರೆಡಿಟ್ ಅವಾರ್ಡ್ ಮೊತ್ತವು ಫ್ಲಿಪ್ ಕಾರ್ಟ್ ನಲ್ಲಿನ ಗ್ರಾಹಕರ ವರ್ತನೆಯನ್ನು ಅವಲಂಬಿಸಿರುತ್ತದೆ.
ಎರಡು ರೀತಿಯ ಆಯ್ಕೆಗಳು
ಚೆಕ್ ಔಟ್ ನ ಸಂದರ್ಬದಲ್ಲಿ ಗ್ರಾಹಕರಿಗೆ ಎರಡು ರೀತಿಯ ಪ್ರಮೋಷನ್ ಗಳು ಲಭ್ಯವಾಗುತ್ತದೆ. ಒಂದು ಪೇ ಲೇಟರ್ ನೆಕ್ಸ್ಟ್ ಮಂತ್ ಅಂದರೆ ಮುಂದಿನ ತಿಂಗಳೇ ಸಂಪೂರ್ಣ ಮೊತ್ತವನ್ನು ಪಾವತಿ ಮಾಡುವುದು ಅಥವಾ ಇಎಂಐಗಳು ಅಂದರೆ 3 ರಿಂದ 12 ತಿಂಗಳವರೆಗಿನ ಕಂತಿನ ರೂಪದ ಪಾವತಿ. 2000 ದ ಒಳಗಿನ ಮೊತ್ತದ ಆಯ್ಕೆಯಾದರೆ ಗ್ರಾಹಕರು ಓಟಿಪಿ ಇಲ್ಲದೇ ಈ ಅವಕಾಶವನ್ನು ಪಡೆದುಕೊಳ್ಳಬಹುದು. ಮೊದಲಿಗೆ ಆಯ್ಕೆ ಮಾಡುವವರು ತಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲವೇ ನೆಟ್ ಬ್ಯಾಂಕಿಂಗ್ ಬಳಸಿ ಪಾವತಿ ಮಾಡಬೇಕಾಗುತ್ತದೆ. ಒಟ್ಟಾರೆ ಈ ಹೊಸ ಸೇವೆಯು ಅದೆಷ್ಟು ಗ್ರಾಹಕರಿಗೆ ಇಷ್ಟವಾಗುತ್ತದೆ ಎಂಬುದನ್ನು ಕಾದುನೋಡಬೇಕು.