ಬಿಗ್ ಬಿಲಿಯನ್ ಸೇಲ್ ನಲ್ಲಿ ನವೀಕರಿಸಿದ ಐಫೋನ್ ಅನ್ನು ಹೊಸತೆಂದು ಮಾರಾಟ ಮಾಡಿದ ಫ್ಲಿಪ್ಕಾರ್ಟ್

By Tejaswini P G

  ಬಹು ನಿರೀಕ್ಷಿತ ಫ್ಲಿಪ್ಕಾರ್ಟ್ ಬಿಗ್ ಶಾಪಿಂಗ್ ಡೇಸ್ ಸೇಲ್ ಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಈ ಸಂದರ್ಭದಲ್ಲಿ ಗ್ರಾಹಕರೊಬ್ಬರು ಫ್ಲಿಪ್ಕಾರ್ಟ್ ವಿರುದ್ಧ ದೂರು ದಾಖಲಿಸಿದ್ದು ಎಲ್ಲರ ದೃಷ್ಟಿ ಈಗ ಫ್ಲಿಪ್ಕಾರ್ಟ್ ನತ್ತ ಹರಿದಿದೆ. ಕೆಲ ತಿಂಗಳ ಹಿಂದೆ ಗುರ್ಗಾಂವ್ ನ ತಬ್ರೇಜ್ ಆಲಂ ಎನ್ನುವ ವ್ಯಕ್ತಿಯೊಬ್ಬರು ಫ್ಲಿಪ್ಕಾರ್ಟ್ ನಿಂದ ಹೊಸ ಐಫೋನ್ 6S ಅನ್ನು ಖರೀದಿಸಿದ್ದು, ಅದು ಅಸಲಿಗೆ ಹೊಸ ಫೋನ್ ಅಲ್ಲದೆ ನವೀಕರಿಸಿದ ಐಫೊನ್ ಆಗಿತ್ತೆಂದು ದಿ ಮೊಬೈಲ್ ಇಂಡಿಯನ್ ವರದಿ ಮಾಡಿದೆ.

  ಬಿಗ್ ಬಿಲಿಯನ್ ಸೇಲ್ ನಲ್ಲಿ ನವೀಕರಿಸಿದ ಐಫೋನ್ ಅನ್ನು ಹೊಸತೆಂದು ಮಾರಾಟ ಮಾಡಿದ

  ದಿ ಮೊಬೈಲ್ ಇಂಡಿಯನ್ ತನ್ನ ವರದಿಯಲ್ಲಿ ಆಲಂ ಅವರು ನಿಜವಾದ ಆಪಲ್ ಐಫೋನ್ 6S ಅನ್ನೇ ಖರೀದಿಸಿದ್ದು ಎಂದು ಖಚಿತ ಪಡಿಸಿದೆ. ಆ ಫೋನ್ ಅನ್ನು ಸೆಪ್ಟೆಂಬರ್ 2017ರಲ್ಲಿ ಫ್ಲಿಪ್ಕಾರ್ಟ್ ನ ಬಿಗ್ ಬಿಲಿಯನ್ ಡೇ ಸೇಲ್ ನಲ್ಲಿ ರೂ 26,784 ಕ್ಕೆ ಖರೀದಿಸಲಾಗಿತ್ತು. ಆ ಫೋನ್ ಅನ್ನು ನೋಡಿದರೆ ಅದು ನವೀಕರಿಸಿದ ಫೋನ್ ಎಂದು ಯಾರೂ ಹೇಳಲಾರರು. ಆದರೆ ಅದನ್ನು ಖರೀದಿಸಿದ ಕೆಲವು ತಿಂಗಳುಗಳ ನಂತರ ಐಫೋನ್ ನಲ್ಲಿ ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಯಿತಂತೆ.

  ಐಫೋನ್ ಖರೀದಿಸಿದ ಆಲಂ ಮೊದಲಿಗೆ ಜನವರಿಯಲ್ಲಿ ಬ್ಯಾಟರಿಗೆ ಸಂಬಂಧಿಸಿದಂತೆ ತೊಂದರೆ ಎದುರಿಸಬೇಕಾಯಿತು. ಬ್ಯಾಟರಿ ನಿರಂತರ ಖಾಲಿಯಾಗುತ್ತಿರುವುದನ್ನು ಅವರು ಗಮನಿಸಿದ್ದಾರೆ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೂ 5 ಘಂಟೆಗಳ ಬ್ಯಾಕಪ್ ನೀಡುತ್ತಿರಲಿಲ್ಲ. ಕ್ರಮೇಣ ಈ ಐಫೋನ್ ನ ಬ್ಯಾಟರಿ ಮಾತ್ರವಲ್ಲದೆ ಸ್ಪೀಕರ್ ಮತ್ತು ಮೈಕ್ರೋಫೋನ್ ಕೂಡ ಸರಿಯಾಗಿ ಕೆಲಸಮಾಡುತ್ತಿರಲಿಲ್ಲ.

  ತನ್ನ ಹೊಸ ಐಫೋನ್ ನಲ್ಲಿ ಇಷ್ಟೆಲ್ಲಾ ತೊಂದರೆಗಳನ್ನು ಗಮನಿಸಿದ ಆಲಂ ಸ್ಥಳೀಯ ಅಧಿಕೃತ ಆಪಲ್ ಸರ್ವೀಸ್ ಸೆಂಟರ್ ನಲ್ಲಿ ಅದನ್ನು ಪರೀಕ್ಷೆಗೊಳಪಡಿಸಲು ನಿರ್ಧರಿಸಿದರು. ಫ್ಲಿಪ್ಕಾರ್ಟ್ ನ ಇನ್ವಾಯ್ಸ್ ನ ಅನುಸಾರ ಐಫೋನ್ ಇನ್ನೂ ವ್ಯಾರೆಂಟಿ ಅಡಿಯಲ್ಲಿ ಇದ್ದ ಕಾರಣ ಅವರು ಈ ನಿರ್ಧಾರವನ್ನು ತೆಗೆದುಕೊಂಡರು.

  ಇದಕ್ಕಾಗಿ ಆಪಲ್ ಇಂಡಿಯಾ ವೆಬ್ಸೈಟ್ ಗೆ ಭೇಟಿ ನೀಡಿದ ಆಲಂ ಅವರು ಸಮೀಪದ ಅಧಿಕೃತ ಆಪಲ್ ಸರ್ವೀಸ್ ಸೆಂಟರ್ ಅನ್ನು ಹುಡುಕಿದರು. ಆ ಪ್ರಕಾರವಾಗಿ ಗುರ್ಗಾಂವ್ ನ ಟ್ರೆಸರ್ ಸಿಸ್ಟಮ್ಸ್ ಗೆ ಭೇಟಿ ನೀಡಿದ ಆಲಂ ತಮ್ಮ ಮೊಬೈಲ್ ಅನ್ನು ಪರಿಶೀಲಿಸುವಂತೆ ಅವರನ್ನು ಕೇಳಿಕೊಂಡಿದ್ದಾರೆ. ಈ ಸಾಧನವನ್ನು ಪರಿಶೀಲಿಸಿದ ಟ್ರೆಸರ್ ಸಿಸ್ಟಮ್ಸ್ ಈ ಐಫೋನ್ 6S ಅನ್ನು ಬೆಂಗಳೂರಿನ ಆಪಲ್ ಸರ್ವೀಸ್ ಸೆಂಟರ್ ಗೆ ಕಳುಹಿಸಲು ನಿರ್ಧರಿಸಿದರು.

  ನಾಲ್ಕು ದಿನಗಳ ನಂತರ ಆಲಂ ಅನ್ನು ಸಂಪರ್ಕಿಸಿದ ಟ್ರೆಸರ್ ಸಿಸ್ಟಮ್ಸ್ ಆ ಸಾಧನ ವ್ಯಾರೆಂಟಿಗೆ ಅರ್ಹವಾಗಿಲ್ಲದ ಕಾರಣ ಆ ಸಾಧನವನ್ನು ಸರಿಪಡಿಸಲು ಸರ್ವೀಸ್ ಮೊತ್ತ ಪಾವತಿಸಬೇಕಾಗಿ ತಿಳಿಸಿದರು.

  ಮರುದಿನ ಆಲಂ ಅವರಿಗೆ ಫೋನ್ ಅನ್ನು ಹಿಂದಿರುಗಿಸಲಾಯಿತು. ಆ ಫೋನ್ ನೊಂದಿಗೆ ನೀಡಲಾಗಿದ್ದ ಸರ್ವೀಸ್ ರಿಪೋರ್ಟ್ ನಲ್ಲಿ "ಡಿವೈಸ್ ಈಸ್ ಬಿಯಾಂಡ್ ಇಕನಾಮಿಕಲ್ ರಿಪೇರ್" ಎಂದು ಬರೆಯಲಾಗಿತ್ತು. ಅಷ್ಟೇ ಅಲ್ಲದೆ ಐಫೋನ್ ನ ನಿಜವಾದ ಬೆಲೆಯನ್ನು ಪೂರ್ತಿ ಪಾವತಿಸಿದರೆ ಮಾತ್ರ ಆಪಲ್ ಆ ಫೋನ್ ಅನ್ನು ಸರ್ವೀಸ್ ಮಾಡುತ್ತದೆ ಎಂದು ರಿಪೋರ್ಟ್ ನಲ್ಲಿ ತಿಳಿಸಲಾಗಿತ್ತು.

  ಗೂಗಲ್‌ನ ಈ ಅತ್ಯುತ್ತಮ 5 ಸೇವೆಗಳನ್ನು ನೀವು ಬಳಸದೇ ಇರಬಹುದು!!

  ಈ ಕುರಿತು ಆಲಂ ಅವರು ಆಪಲ್ ನೊಂದಿಗೆ ದೂರು ದಾಖಲಿಸಿದರೂ ಆಪಲ್ ನ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ಗಳು ಕೂಡ ಯಾವುದೇ ಸಹಾಯ ಮಾಡಲಿಲ್ಲ. ಈ ಮಧ್ಯೆ ಫ್ಲಿಪ್ಕಾರ್ಟ್ ನ ಕಸ್ಟಮರ್ ಸಪೋರ್ಟ್ ಆಲಂ ಅವರು ಅನಧಿಕೃತ ಆಪಲ್ ಸರ್ವೀಸ್ ಸೆಂಟರ್ ಗೆ ಹೋದರೆಂದು ಅವರ ಮೇಲೆಯೇ ಗೂಬೆ ಕೂರಿಸುತ್ತಿದೆ.

  ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ
  ನಂತರ ಫ್ಲಿಪ್ಕಾರ್ಟ್ ಆಲಂ ಅವರನ್ನು ಸಂಪರ್ಕಿಸಿ ದೋಷಪೂರಿತ ಐಫೋನ್ ಗೆ ಬದಲಿ ಫೋನ್ ನೀಡುವುದಾಗಿ ತಿಳಿಸಿತ್ತು. ಫ್ಲಿಪ್ಕಾರ್ಟ್ ಆಲಂ ಅವರಿಂದ ಆ ಸಾಧನವನ್ನು ಪಡೆದ ಮರುದಿವಸವೇ ಬದಲಿ ಫೋನ್ ನೀಡುವುದಾಗಿ ತಿಳಿಸಿತ್ತು. ಆದರೆ ಇನ್ನೂ ಆ ದಿನ ಬಂದೇ ಇಲ್ಲ. ಫ್ಲಿಪ್ಕಾರ್ಟ್ ಈಗ ಬದಲೀ ಫೋನ್ ನೀಡಲು ನಿರಾಕರಿಸುತ್ತಿದೆ. ಆಲಂ ಗೆ ಇಂದಿನವರೆಗೂ ಬದಲೀ ಫೋನ್ ದೊರಕಿಲ್ಲ!

  Read more about:
  English summary
  Ahead of Big Shopping Days sales, Flipkart finds itself under the radar after a buyer registered a complaint against the e-commerce company. The device was bought during the Flipkart's Big Billion Day Sale back in September 2017 at a price point of Rs 26,784. The actual problem started taking place after few months.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more