Subscribe to Gizbot

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೋ ಮಾರುಕಟ್ಟೆಯಲ್ಲಿ ಲಭ್ಯ: ಬೆಲೆ ಎಷ್ಟು?

Written By: Lekhaka

ಕಳೆದ ಜೂನ್ ತಿಂಗಳಲ್ಲಿ ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೋ ಮತ್ತು ಸ್ಯಾಮ್ ಸಂಗ್ J7 ಮ್ಯಾಕ್ಸ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿ, ರೂ. 20,900 ಮತ್ತು ರೂ. 17,900ಕ್ಕೆ ನೀಡಲು ಮುಂದಾಗಿತ್ತು.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೋ ಮಾರುಕಟ್ಟೆಯಲ್ಲಿ ಲಭ್ಯ: ಬೆಲೆ ಎಷ್ಟು?

ಬಿಡುಗಡೆಯಾಗದ ಕೆಲವೇ ದಿನಗಲ್ಲಿ ಗ್ಯಾಲೆಕ್ಸಿ J7 ಮ್ಯಾಕ್ಸ್ ಭಾರತದಲ್ಲಿ ಲಭ್ಯವಿತ್ತು. ಆದರೆ ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೋ ಸದ್ಯ ರಿಲೀಸ್ ಆಗಿದೆ. ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೋ ಸ್ಮಾರ್ಟ್ ಪೋನ್, ಈ ಹಿಂದಿನ ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ನಲ್ಲಿದ್ದ ಆಯ್ಕೆಗಳನ್ನು ಹೊಂದಿದ್ದು, ಸ್ಯಾಮ್ ಸಂಗ್ ಪೇ ಆಯ್ಕೆಯನ್ನು ಒಳಗೊಂಡಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೋ ರೂ. 20,900ಕ್ಕೆ ಲಾಂಚ್ ಆಗಿದ್ದು, ಅಮೆಜಾನ್ ನಲ್ಲಿ ಲಭ್ಯವಿದೆ. ಸ್ಯಾಮ್ ಸಂಗ್ ವೆಬ್ ಸೈಟಿನಲ್ಲಿ ಈ ಫೋನ್ ಔಟ್ ಆಪ್ ಸ್ಟಾಕ್ ಆಗಿದ್ದು, ಅಮೆಜಾನ್ ನಲ್ಲಿ ಗೋಲ್ಡ್ ಕಲರ್ ಲಭ್ಯವಿದೆ. ಇದರ ಬೆಲೆ ಹೆಚ್ಚಾಗಿದೆ. ಬ್ಲಾಕ್ ಆವೃತ್ತಿಯೂ ಎಂದು ಬಿಡುಗಡೆಯಾಗಲಿದೆ ಎನ್ನುವುದು ತಿಳಿದಿಲ್ಲ.

ರೆಡ್‌ಮಿ ನೋಟ್ 4 ಫ್ಲಾಷ್ ಸೇಲ್: ಕೇವಲ ರೂ.999 ಮಾತ್ರ.!!

ಸ್ಯಾಮ್ ಸಂಗ್ ಗ್ಯಾಲೆಕ್ಸಿ J7 ಪ್ರೋ 5.5 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, FHD ಗುಣಮಟ್ಟದ್ದಾಗಿದೆ. ಇದರೊಂದಿಗೆ ಏಕ್ಸೋನಸ್ ಪ್ರೋಸೆಸರ್ ಇದರಲ್ಲಿದ್ದು, 3GB RAM ಮತ್ತು 64 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಆಂಡ್ರಾಯ್ಡ್ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ.

4G LTE ಸಪೋರ್ಟ್ ಮಾಡುವ ಈ ಪೋನ್ 13 MP ಸೆಲ್ಫಿ ಕ್ಯಾಮೆರಾ ಮತ್ತು 13 MP ಹಿಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ ನಾವು 3600mAh ಬ್ಯಾಟರಿಯನ್ನು ಕಾಣಬಹುದಾಗಿದೆ.

Read more about:
English summary
Galaxy J7 goes on sale via online.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot