Subscribe to Gizbot

ಸ್ಯಾಮ್‌ಸಂಗ್ ಕಂಪೆನಿಗಿಲ್ಲ ಗ್ಯಾಲೆಕ್ಸಿ ನೋಟ್ 7 ಎಫೆಕ್ಟ್ !! ಏಕೆ ಗೊತ್ತಾ?

Written By:

ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಗ್ಯಾಲೆಕ್ಸಿ ನೋಟ್ 7 ಸ್ಮಾರ್ಟ್‌ಫೋನ್ ಪರಿಣಾಮಗಳ ಹೊರತಾಗಿಯೂ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ ಶೇ.30 ರಷ್ಟು ಲಾಭ ಬರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆಯಲ್ಲಿ ವಿಶ್ಲೇಷಿಸಲಾಗಿದೆ.!!

ಮಾರುಕಟ್ಟೆ ಅನ್ವೇಷಕ ಸಂಸ್ಥೆ ಫನ್‌ಗೈಡ್ ಪ್ರಕಾರ ಸ್ಯಾಮ್‌ಸಂಗ್ ಜನವರಿಯಿಂದ ಮಾರ್ಚ್ ತಿಂಗಳಲ್ಲಿ 7.5 ಬಿಲಿಯನ್ ನಷ್ಟು ಲಾಭ ಗಳಿಸುವ ಸಾಧ್ಯತೆ ಇದ್ದು, ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಶೇ.30.6 ರಷ್ಟು ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ ಎಂದು ವರದಿ ನಿಡಿದೆ.

ಸ್ಯಾಮ್‌ಸಂಗ್ ಕಂಪೆನಿಗಿಲ್ಲ ಗ್ಯಾಲೆಕ್ಸಿ ನೋಟ್ 7 ಎಫೆಕ್ಟ್ !! ಏಕೆ ಗೊತ್ತಾ?

ಜಿಯೋ ನೀಡಿದ ಸೇವೆ ಉಚಿತವಲ್ಲ!!..ಮೂಗಿನ ಮೇಲಿದ್ದ ಬೆಣ್ಣೆ ಬಾಯಿಗೆ ಹಾಕಿದ ಅಂಬಾನಿ!!!

ಈ ಮೂರು ತಿಂಗಳ ಅವಧಿಯಲ್ಲಿ 5 ಟ್ರಿಲಿಯನ್ ವನ್( ದಕ್ಷಿಣ ಕೊರಿಯಾದ ಕರೆನ್ಸಿ) ಯನ್ನು ದಾಟಲಿದೆ ಎಂದು ಫನ್ ಗೈಡ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಕಂಪ್ಯೂಟರ್ ಮೆಮೊರಿ ಚಿಪ್ ವಿಶ್ವದ ಅತಿ ದೊಡ್ಡ ಉತ್ಪಾದಕ ಸಂಸ್ಥೆ ಸ್ಯಾಮ್‌ಸಂಗ್ ತನ್ನ ಬ್ರಾಂಡ್ ವ್ಯಾಲ್ಯೂವನ್ನು ಉಳಿಸಿಕೊಂಡಿದೆ.

ಸ್ಯಾಮ್‌ಸಂಗ್ ಕಂಪೆನಿಗಿಲ್ಲ ಗ್ಯಾಲೆಕ್ಸಿ ನೋಟ್ 7 ಎಫೆಕ್ಟ್ !! ಏಕೆ ಗೊತ್ತಾ?

ಬ್ಯಾಟರಿ ಸ್ಪೋಟದಂತಹ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಗ್ಯಾಲೆಕ್ಸಿ ನೋಟ್ 7 ಸ್ಮಾರ್ಟ್‌ಫೋನ್‌ನಿಂದ ಸ್ಯಾಮ್‌ಸಂಗ್ ಕಂಪೆನಿ ಬ್ರಾಂಡ್‌ ಮೌಲ್ಯ ಕಡಿಮೆಯಾಗಲಿದೆ ಮತ್ತು ಇದರಿಂದ ಸ್ಯಾಮ್‌ಸಂಗ್ ಕಂಪೆನಿ ನಷ್ಟ ಅನುಭವಿಸಲಿದೆ ಎನ್ನುವ ವರದಿಯೊಂದು ಈ ಮೊದಲು ಬಿಡುಗಡೆಯಾಗಿತ್ತು.!

English summary
Samsung set for best quarterly profit. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot