ಈ ಬ್ಲ್ಯಾಕ್ ಫ್ರೈಡೇ ಸೇಲ್ ಮಿಸ್‌ ಮಾಡ್ಕೋಬೇಡಿ; ಸ್ಮಾರ್ಟ್‌ವಾಚ್‌ಗಳಿಗೆ ಭರ್ಜರಿ ಡಿಸ್ಕೌಂಟ್‌!

|

ಗಾರ್ಮಿನ್ ಕಂಪೆನಿಯು ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ ಜಾಗತಿಕವಾಗಿ ತನ್ನದೇ ಆದ ಶೈಲಿ ಹಾಗೂ ಫೀಚರ್ಸ್‌ ಅನುಸರಿಸಿಕೊಂಡು ಬರುತ್ತಿದೆ. ಅದರಲ್ಲೂ ಪ್ರಮುಖವಾಗಿ ಈ ಕಂಪೆನಿಯ ವಾಚ್‌ಗಳು ಹಾರ್ಟ್‌ರೇಟ್‌ ಟ್ರ್ಯಾಕಿಂಗ್‌, ಸ್ಪೋರ್ಟ್ಸ್‌, ಸ್ವಿಮ್ಮಿಂಗ್‌, ಮ್ಯೂಸಿಕ್‌ ಸೇರಿದಂತೆ ಇನ್ನಿತರೆ ಫೀಚರ್ಸ್‌ಗೆ ಹೆಚ್ಚಿನ ಮಹತ್ವ ನೀಡುತ್ತದೆ. ಈ ವಾಚ್‌ಗಳ ಈ ಸರಣಿಯಲ್ಲಿ ಈಗ ಗಾರ್ಮಿನ್‌ ಮತ್ತೆ ಹಲವು ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ಗಳನ್ನು ಭಾರತದಲ್ಲಿ ಅದರಲ್ಲೂ ಆಫರ್‌ ಬೆಲೆಯಲ್ಲಿ ಪರಿಚಯಿಸಲು ಮುಂದಾಗಿದೆ.

ಪ್ರೀಮಿಯಂ

ಹೌದು, ಪ್ರೀಮಿಯಂ ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ ತಯಾರಿಕ ಕಂಪೆನಿಗಳಲ್ಲಿ ಇದೂ ಸಹ ಪ್ರಮುಖವಾಗಿದ್ದು, ಇದೀಗ ತನ್ನ ವಿಶೇಷ ಆಫರ್‌ ಥ್ಯಾಂಕ್ಸ್‌ ಗಿವಿಂಗ್‌ ಮತ್ತು ಬ್ಲ್ಯಾಕ್‌ ಫ್ರೈಡೇ ಮೂಲಕ ಭಾರತಕ್ಕೂ ಪರಿಚಯಿಸಿದೆ. ಈ ಬ್ಲ್ಯಾಕ್‌ ಫ್ರೈಡೇ ಸೇಲ್‌ ನವೆಂಬರ್ 25 ರಂದು ಯುಎಸ್‌ನಲ್ಲಿ ಜರುಗಲಿದ್ದು, ಈ ಸೇಲ್‌ಗೂ ಮುನ್ನವೇ ಒಂದು ದಿನವನ್ನು 'ಥ್ಯಾಂಕ್ಸ್ ಗಿವಿಂಗ್' ಎಂದು ಆಚರಿಸಲಾಗುತ್ತದೆ. ಈ ಎರಡೂ ದಿನದಲ್ಲಿ ಗಾರ್ಮಿನ್ ತನ್ನ ಉತ್ಪನ್ನಗಳ ಮೇಲೆ ಭರ್ಜರಿ ಆಫರ್‌ ಘೋಷಣೆ ಮಾಡಿದೆ.

ಭಾರತದಲ್ಲೂ ಇದೆ ಈ ಪದ್ಧತಿ

ಭಾರತದಲ್ಲೂ ಇದೆ ಈ ಪದ್ಧತಿ

ಅರೇ.. ಈ ಬ್ಲ್ಯಾಕ್ ಫ್ರೈಡೇ ವಿದೇಶಕ್ಕೆ ಮಾತ್ರ ಸೀಮಿತವೇ?, ನಮ್ಮಲ್ಲಿ ಇಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮನೆ ಮಾಡಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಭಾರತದಲ್ಲೂ ಕೂಡ ಕೆಲವು ಪ್ರಮುಖ ಬ್ರ್ಯಾಂಡ್‌ಗಳು ಈ ಸೇಲ್‌ ಅನ್ನು ನಡೆಸಿಕೊಂಡು ಬರುತ್ತಿದೆ. ಅದರಂತೆ ಇದೀಗ ಗಾರ್ಮಿನ್‌ ಭಾರತದಲ್ಲಿ ತನ್ನ ಸ್ಮಾರ್ಟ್‌ವಾಚ್‌ಗಳ ಮೇಲೆ ಅಧಿಕ ಆಫರ್‌ ನೀಡಲು ಮುಂದಾಗಿದ್ದು, ಅದರಲ್ಲೂ ಔಟ್‌ಡೋರ್‌ ಸ್ಮಾರ್ಟ್ ವಾಚ್‌ಗಳು, ಗಾಲ್ಫ್ ವಾಚ್‌ಗಳು ಮತ್ತು ಜಿಪಿಎಸ್ ಬೈಕ್ ಕಂಪ್ಯೂಟರ್‌ಗಳ ಮೇಲೆ ಆಕರ್ಷಕ ರಿಯಾಯಿತಿ ನೀಡುತ್ತಿದೆ.

ಈ ಆಫರ್‌ ಭಾರತದಲ್ಲಿ ಯಾವಾಗ ಲಭ್ಯ?

ಈ ಆಫರ್‌ ಭಾರತದಲ್ಲಿ ಯಾವಾಗ ಲಭ್ಯ?

ಈ ಆಫರ್‌ನಲ್ಲಿ ಗಾರ್ಮಿನ್ ಇಂಡಿಯಾ ಫೆನಿಕ್ಸ್ 7, ಫೆನಿಕ್ಸ್ ​​7X, ಎಪಿಕ್ಸ್‌ ಜೆನ್‌2, ಇನ್‌ಸ್ಟಿಂಕ್ಟ್(Approach) S ಸೋಲಾರ್, ಇನ್‌ಸ್ಟಿಂಕ್ಟ್ 2, ಅಪ್ರೋಚ್ S12 ಮತ್ತು ಎಡ್ಜ್‌ 830, ಎಡ್ಜ್‌ 530 ಡಿವೈಸ್‌ಗಳ ಮೇಲೆ ಬರೋಬ್ಬರಿ 11,500 ರೂ. ವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಭಾರತದಲ್ಲಿ ಗಾರ್ಮಿನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ನವೆಂಬರ್ 11 ರಿಂದ ನವೆಂಬರ್ 30 ರವರೆಗೆ ಈ ಆಫರ್‌ ಮಾನ್ಯವಾಗಿರುತ್ತವೆ. ಅದರಂತೆ ಯಾವ ಡಿವೈಸ್‌ ಏನೆಲ್ಲಾ ಫೀಚರ್ಸ್‌ ಪಡೆದಿದೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಯಾವ ಆವೃತ್ತಿಗೆ ಎಷ್ಟು ರಿಯಾಯಿತಿ

ಯಾವ ಆವೃತ್ತಿಗೆ ಎಷ್ಟು ರಿಯಾಯಿತಿ

ಗಾರ್ಮಿನ್‌ನ ಫೆನಿಕ್ಸ್7, 7X, ಎಪಿಕ್ಸ್‌ ಜೆನ್‌ 2 ಸರಣಿಯ ಡಿವೈಸ್‌ಗಳಲ್ಲಿ ಭಾರೀ ಆಫರ್ ಲಬ್ಯವಾಗಲಿದೆ. ಈ ಡಿವೈಸ್‌ಗಳನ್ನು ಖರೀದಿ ಮಾಡಲು ಮುಂದಾದರೆ ನೀವು ಬರೋಬ್ಬರಿ 11,500 ರೂ.ವರೆಗೆ ರಿಯಾಯಿತಿ ಪಡೆಯಬಹುದು ಹಾಗೆಯೇ ಇನ್‌ಸ್ಟಿಂಕ್ಟ್ ಸರಣಿಯ ಡಿವೈಸ್‌ಗಳ ಮೇಲೆ 6,000ರೂ. ವರೆಗೆ ರಿಯಾಯಿತಿ ಮತ್ತು ಗಾಲ್ಫ್ ವಾಚ್‌ಗಳಿಗೆ 5,500 ರೂ. ವರೆಗೆ ರಿಯಾಯಿತಿ ಸಿಗಲಿದೆ.

ವಾಚ್‌ಗಳ ಪ್ರಮುಖ ಫೀಚರ್ಸ್‌ ಏನು?

ವಾಚ್‌ಗಳ ಪ್ರಮುಖ ಫೀಚರ್ಸ್‌ ಏನು?

ಫೆನಿಕ್ಸ್7 ಮತ್ತು 7X ಸರಣಿ ವಾಚ್‌ಗಳು ಹೆಚ್ಚು ಸಮಯ ಬಾಳಿಕೆ ಬರುವ ಬ್ಯಾಟರಿಯಿಂದ ಪ್ಯಾಕ್‌ ಆಗಿವೆ. ಅದರಲ್ಲೂ ಸೌರಶಕ್ತಿ ಚಾಲಿತ ಬ್ಯಾಟರಿ ಆಯ್ಕೆ ಇರುವುದು ವಿಶೇಷ. ಫೆನಿಕ್ಸ್ ​​7X ಅಲ್ಟ್ರಾಟ್ರಾಕ್ ಮೋಡ್ ಆಯ್ಕೆಯಲ್ಲಿ ನೀವು 24 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆಯಬಹುದು. ಹಾಗೆಯೇ ಸ್ಮಾರ್ಟ್‌ವಾಚ್ ಮೋಡ್‌ನಲ್ಲಿ 37 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ. ಜೊತೆಗೆ ಇನ್‌ಬಿಲ್ಟ್‌ ಫ್ಲ್ಯಾಶ್‌‌ಲೈಟ್‌ ಆಯ್ಕೆ ಪಡೆದುಕೊಂಡಿದ್ದು, ಒರಟಾದ ನೋಟವನ್ನು ಈ ವಾಚ್‌ಗಳು ಹೊಂದಿವೆ.

ಎಪಿಕ್ಸ್

ಗಾರ್ಮಿನ್ ಎಪಿಕ್ಸ್ ಜೆನ್‌2 ಸ್ಮಾರ್ಟ್‌ವಾಚ್ ಎಲ್ಲಾ ಸಮಯದಲ್ಲೂ ನಿಮ್ಮ ಆರೋಗ್ಯ ಮೇಲ್ವಿಚಾರಣಾ ಮಾಡಲಿದೆ. ಈ ವಾಚ್‌ 1.3 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಪಲ್ಸ್ ಆಕ್ಸ್ ಸೆನ್ಸರ್‌, ಹೃದಯ ಬಡಿತದ ಮೇಲ್ವಿಚಾರಣೆ, ಉಸಿರಾಟದ ಟ್ರ್ಯಾಕಿಂಗ್, ಒತ್ತಡದ ಟ್ರ್ಯಾಕಿಂಗ್, ನಿದ್ರೆಯ ಸ್ಕೋರ್ ಹಾಗೂ ಸುಧಾರಿತ ನಿದ್ರೆಯ ಮಾನಿಟರಿಂಗ್ ಮಾಡಲಿದೆ. ಜೊತೆಗೆ ಈ ವಾಚ್‌ ಜಿಪಿಎಸ್‌ ಮೋಡ್‌ನಲ್ಲಿ 16 ದಿನಗಳು ಕೆಲಸ ಮಾಡಿದರೆ ಸಾಮಾನ್ಯ ಮೋಡ್‌ನಲ್ಲಿ 42 ಗಂಟೆಗಳವರೆಗೆ ಬಳಕೆಗೆ ಬರುತ್ತದೆ. ಪ್ರಮುಖ ವಿಷಯ ಎಂದರೆ ಗಾರ್ಮಿನ್ ಕಂಪೆನಿ ಕೆಲವು ದಿನಗಳ ಹಿಂದೆ ಭಾರತದಲ್ಲಿ ಗಾರ್ಮಿನ್ ವೇಣು Sq 2 ಆವೃತ್ತಿಯ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿತ್ತು.

Best Mobiles in India

English summary
Garmin company is following its own style and features globally in the smartwatch segment. Now it is planning to introduce its Black Friday sale in India as well.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X