ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ಮೆಟಿರಿಯಲ್ ಥೀಮ್ ಬಿಡುಗೆಗೊಳಿಸಿದ ಜಿಮೇಲ್

By Gizbot Bureau
|

ಸರ್ಚಿಂಗ್ ದೈತ್ಯ ಗೂಗಲ್ ಅಂತಿಮವಾಗಿ ಹೊಸ ಮೆಟಿರಿಯಲ್ ಥೀಮ್ ನ್ನು ಜಿಮೇಲ್ ಆಪ್ ಗಾಗಿ ಬಿಡುಗಡೆಗೊಳಿಸುತ್ತಿದೆ. ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಇದು ಲಭ್ಯವಿರುತ್ತದೆ ಮತ್ತು ಇದು ಈ ಹಿಂದಿನ ಥೀಮ್ ಗಿಂತ ಹೆಚ್ಚು ಬ್ರೈಟ್ ಆಗಿಯೂ ಮತ್ತು ಹೆಚ್ಚು ಕ್ಲೀನ್ ಆಗಿಯೂ ಇದೆ.

ಇಮೇಲ್ ಗೆ ಹೊಸ ಲುಕ್

ಇಮೇಲ್ ಗೆ ಹೊಸ ಲುಕ್

ಆಂಡ್ರಾಯ್ಡ್ ಬಳಕೆದಾರರು ಜಿಮೇಲ್ ಆಪ್ ನ್ನು ತೆರೆದಾಗ, ಅವರಿಗೆ ನಿಮ್ಮ ಇಮೇಲ್ ಹೊಸ ಲುಕ್ ನೊಂದಿಗೆ ಸಿದ್ಧವಿದೆ ಎಂಬ ಆಮಂತ್ರಣದ ಮೆಸೇಜ್ ವೊಂದು ಕಾಣಿಸುತ್ತದೆ.

ಬಳಕೆದಾರರಿಗೆ ಮೂರು ಆಯ್ಕೆ:

ಬಳಕೆದಾರರಿಗೆ ಮೂರು ಆಯ್ಕೆ:

ಅದರಲ್ಲಿ ಬಳಕೆದಾರರಿಗೆ ಮೂರು ಆಯ್ಕೆಗಳಿದ್ದು ಒಂದನ್ನು ಸೆಲೆಕ್ಟ್ ಮಾಡಲು ತಿಳಿಸಲಾಗುತ್ತದೆ - ಡೀಫಾಲ್ಟ್, ಕಂಫರ್ಟೇಬಲ್ ಮತ್ತು ಕಾಂಪ್ಯಾಕ್ಟ್.

ಅವರು ಆಯ್ಕೆ ಮಾಡಿದ ಆಧಾರದಲ್ಲಿ ಅವರು ಅದನ್ನು ನೋಡಬಹುದು. ಬಳಕೆದಾರರು ಭವಿಷ್ಯದಲ್ಲಿ ಜನರಲ್ ಆಪ್ ಗೆ ತೆರಳಿ ಬೇಕಿದ್ದರೆ ಈ ಸೆಟ್ಟಿಂಗ್ಸ್ ನ್ನು ಬದಲಾಯಿಸಿಕೊಳ್ಳಲು ಅವಕಾಶವಿರುತ್ತದೆ.

ಹೊಸ ಥೀಮ್ ನಲ್ಲಿ ಹೊಸ ಫೀಚರ್:

ಹೊಸ ಥೀಮ್ ನಲ್ಲಿ ಹೊಸ ಫೀಚರ್:

ಹೊಸ ಮೆಟೀರಿಯಲ್ ಡಿಸೈನ್ ಹೊಸ ಫಾಂಟ್ಸ್, ಮೇಲ್ ಬರೆಯುವುದಕ್ಕಾಗಿ ಕೆಲವು ಕಲರ್ ಫುಲ್ ಶಾರ್ಟ್ ಕಟ್, ರಿಡಿಸೈನ್ ಮಾಡಲಾಗಿರುವ ಮೆನು ಆಯ್ಕೆ ಮತ್ತು ಒಂದು ಡಿವೈಸ್ ನಲ್ಲಿ ಸೇರಿಸಲಾಗಿರುವ ವಿಭಿನ್ನ ಜಿಮೇಲ್ ಅಕೌಂಟ್ ಗಳಿಗೆ ಸ್ವಿಚ್ ಆಗುವುದಕ್ಕೆ ಹೊಸ ಮಾರ್ಗ ಸೇರಿದಂತೆ ಹಲವು ವಿಭಿನ್ನ ಅವಕಾಶಗಳನ್ನು ಹೊಂದಿರುತ್ತದೆ.

ಹಲವು ಜಿಮೇಲ್ ಅಕೌಂಟ್ ಗಳಿಗೆ ಸ್ವಿಚ್ ಆಗುವುದು ಸುಲಭ:

ಹಲವು ಜಿಮೇಲ್ ಅಕೌಂಟ್ ಗಳಿಗೆ ಸ್ವಿಚ್ ಆಗುವುದು ಸುಲಭ:

ಜಿಮೇಲ್ ಅಕೌಂಟ್ ಗಳಿಗೆ ಸ್ವಿಚ್ ಆಗುವುದಕ್ಕಾಗಿ ಬಳಕೆದಾರರು ಅವರ ಪ್ರೊಫೈಲ್ ಪಿಕ್ಚರ್ ಮೇಲ್ ಟ್ಯಾಪ್ ಮಾಡಬೇಕು. ಅದು ಮೇಲ್ಬಾಗದ ಬದಹದಿಯಲ್ಲಿರುತ್ತದೆ.ಈ ಹಿಂದೆ ಸ್ಕ್ರೀನಿನ ಎಡಭಾಗದಲ್ಲಿದ್ದ ಹ್ಯಾಮ್ ಬರ್ಗರ್ ಬಟನ್ ನ್ನು ಕ್ಲಿಕ್ಕಿಸಬೇಕಿತ್ತು ಮತ್ತು ಅವರ ಪ್ರೊಫೈಲ್ ಪಿಕ್ಚರ್ ಪಡೆದು ನಂತರ ಸ್ವಿಚ್ ಆಗಬೇಕಿತ್ತು. ಆದರೆ ಇದೀಗ ಇದು ಸುಲಭವಾಗಿದೆ.

ಅನುಮಾನಾಸ್ಪದ ಇಮೇಲ್ ಗಳ ವಾರ್ನಿಂಗ್:

ಅನುಮಾನಾಸ್ಪದ ಇಮೇಲ್ ಗಳ ವಾರ್ನಿಂಗ್:

ಇದರ ಜೊತೆಗೆ ಇಮೇಲ್ ಐಡಿಗೆ ಎಂಟರ್ ಆಗದೆಯೂ ಕೂಡ ಮೇಲ್ ನಲ್ಲಿ ಅಟ್ಯಾಚ್ ಆಗಿರುವ ಅಟ್ಯಾಚ್ ಮೆಂಟ್ ನ್ನು ಆಕ್ಸಿಸ್ ಮಾಡುವುದಕ್ಕೆ ಅವಕಾಶವಿರುತ್ತದೆ. ಇನ್ ಬಾಕ್ಸ್ ಗೆ ಅನುಮಾನಾಸ್ಪದ ಮೇಲ್ ಬಂದಾಗ ಕೂಡಲೇ ವಾರ್ನಿಂಗ್ ಬರುತ್ತದೆ. ಹೊಸ ಥೀಮ್ ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದು ಐಓಎಸ್ ಬಳಕೆದಾರರಿಗೂ ಕೂಡ ಕೆಲವೇ ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

100 ಮಿಲಿಯನ್ ಸ್ಪ್ಯಾಮ್ ಮೇಲ್ ಗಳಿಗೆ ತಡೆ:

ಈ ಹಿಂದೆ, ಸ್ಪ್ಯಾಮ್ ಅನ್ನು ಫಿಲ್ಟರ್ ಮಾಡುವುದಕ್ಕಾಗಿ ಗೂಗಲ್ ಇನ್-ಹೌಸ್ ಮಷೀನ್ ಗಳನ್ನು ಸಹಾಯಕ್ಕೆ ಪಡೆಯುತ್ತಿದೆ ಎಂದು ಹೇಳಲಾಗಿತ್ತು. ಅದಕ್ಕೆ ಟೆನ್ಸರ್ ಫ್ಲೋ ಎಂದು ಕರೆಯಲಾಗಿತ್ತು. ಈ ಟೂಲ್ ಹೆಚ್ಚುವರಿ ಸ್ಪ್ಯಾಮ್ ಮೆಸೇಜ್ ಗಳನ್ನು ಫಿಲ್ಟರ್ ಮಾಡುವುದಕ್ಕೆ ಜಿಮೇಲ್ ಬಳಕೆದಾರರಿಗೆ ಸಹಾಯಕವಾಗಿತ್ತು. ಕಂಪೆನಿ ಕಳೆದ ತಿಂಗಳು ಹೊಸ ಫಿಲ್ಮರ್ಸ್ ನ್ನು ಆರಂಭಿಸಿದೆ ಮತ್ತು ಸುಮಾರು 100 ಮಿಲಿಯನ್ ಸ್ಪ್ಯಾಮ್ ಮೆಸೇಜ್ ಗಳನ್ನು ಪ್ರತಿದಿನ ಬ್ಲಾಕ್ ಮಾಡುವುದಕ್ಕೆ ಇದರಿಂದ ಸಾಧ್ಯವಾಗಿದೆ ಎಂದು ತಿಳಿಸಿದೆ.

Best Mobiles in India

English summary
Gmail starts rolling out new material theme for Android users

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X