ಗೂಗಲ್‌ ಸಂಸ್ಥೆಯಿಂದ ಗೂಗಲ್‌ ಆಕ್ಷನ್‌ ಬ್ಲಾಕ್‌ ಅಪ್ಲಿಕೇಶನ್‌ ಲಾಂಚ್‌!

|

ಇಂದು ಏನೇ ಮಾಹಿತಿ ಬೇಕಿದ್ದರೂ ಮೊದಲು ಕೇಳಿ ಬರುವ ಹೆಸರೇ ಗೂಗಲ್‌. ಅಷ್ಟರ ಮಟ್ಟಿಗೆ ಜನಮಾನಸದಲ್ಲಿ ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತಳವೂರಿದೆ. ಇನ್ನು ಗೂಗಲ್ ಕೂಡ ಕಾಲಕಾಲಕ್ಕೆ ತಕ್ಕಂತೆ ತನ್ನ ಬಳಕೆದಾರರಿಗೆ ಉತ್ತಮ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ವಿಶ್ವ Accessibility ಜಾಗೃತಿ ದಿನಾಚರಣೆಯ ಪ್ರಯುಕ್ತ ಹೊಸ ಮಾದರಿಯ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ.

ಗೂಗಲ್‌

ಹೌದು, ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ವಿಶ್ವ ಪ್ರವೇಶಿಸುವಿಕೆ(Accessibility) ಜಾಗೃತಿ ದಿನಾಚರಣೆಯ ಪ್ರಯುಕ್ತ ಆಂಡ್ರಾಯ್ಡ್ ಡಿವೈಸ್‌ಗಳಿಗಾಗಿ ಆಕ್ಷನ್ ಬ್ಲಾಕ್‌ಗಳ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಅಲ್ಲದೆ ಲೈವ್ ಟ್ರಾನ್ಸ್‌ಸ್ಕ್ರಿಪ್ಟ್ ಮತ್ತು ಸೌಂಡ್ ಆಂಪ್ಲಿಫಯರ್ ಅಪ್ಲಿಕೇಶನ್‌ಗಳಲ್ಲಿ ಹೊಸ ಮಾದರಿಯ ಫೀಚರ್ಸ್‌ ಅನ್ನು ಸಹ ಸೇರಿಸಿದೆ. ಅಷ್ಟಕ್ಕೂ ಈ ಅಪ್ಲಿಕೇಶನ್‌ಗಳ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಆಕ್ಷನ್‌ ಬ್ಲಾಕ್ಸ್

ಅಂತರರಾಷ್ಟ್ರೀಯ Accessibility ದಿನದ ಪ್ರಯುಕ್ತ ಗೂಗಲ್‌ ಹೊಸ ಹೆಜ್ಜೆಯನ್ನ ಇಟ್ಟಿದೆ. ಅಂಗವೈಕಲ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಕ್ಕೆ ಗೂಗಲ್‌ ಕೈ ಹಾಕಿದೆ. ಇದೇ ಕಾರಣಕ್ಕಾಗಿ ಗೂಗಲ್‌ ಆಕ್ಷನ್‌ ಬ್ಲಾಕ್ಸ್‌ ಅಪ್ಲಿಕೇಶನ್‌ಗಳನ್ನ ಪರಿಚಯಿಸಿದೆ. ಇನ್ನು ಈ ಅಪ್ಲಿಕೇಶನ್‌ಗಳು ಕೇವಲ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಮಾತ್ರ ಲಭ್ಯವಿದ್ದು, ಯಾವುದೇ ಮಾದರಿಯ ಅಂಗವೈಕಲ್ಯದ ಬಗ್ಗೆ ಜನರಲ್ಲಿ ಜಾಗೃತಿ ಮುಡಿಸುವ ಕಾರ್ಯವನ್ನ ಮಾಡಲಿವೆ. ಅಲ್ಲದೆ ಈ ಅಪ್ಲಿಕೇಶನ್‌ಗಳನ್ನ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ನಲ್ಲಿ ಶಾರ್ಟ್‌ಕರ್ಟ್‌ ಮಾದರಿಯಲ್ಲಿ ಕಾನ್ಫಿಗರ್ ಮಾಡಬಹುದಾಗಿದೆ.

Google

ಇನ್ನು ಈ ಅಪ್ಲಿಕೇಶನ್‌ Google ಆಕ್ಷನ್ ಅನ್ನು ನಿರ್ಬಂಧಿಸುವ ಅಪ್ಲಿಕೇಶನ್ ಆಗಿದೆ. ಅಲ್ಲದೆ ಆಕ್ಷನ್ ಬ್ಲಾಕ್ ಎನ್ನುವುದು ಪಿಕ್ಟೋಗ್ರಾಮ್ನ ಸಂಯೋಜನೆಯಿಂದ ಉಂಟಾಗುವ ಒಂದು ರೀತಿಯ ವಿಜೆಟ್ ಆಗಿದ್ದು ಅದು ಗೂಗಲ್ ಅಸಿಸ್ಟೆಂಟ್‌ನಿಂದ ಕಾರ್ಯಗತಗೊಳ್ಳುತ್ತದೆ ಎನ್ನಲಾಗ್ತಿದೆ. ಇನ್ನು ಈ ಆಕ್ಷನ್‌ ಬ್ಲಾಕ್‌ ಅಪ್ಲಿಕೇಶನ್‌ ಗೂಗಲ್‌ ಅಸಿಸ್ಟೆಂಟ್‌ ಆಜ್ಞೆ ಮೂಲಕ ಕಾರ್ಯನಿರ್ವಹಿಸಲಿದೆ. ಇದರ ಮೂಲಕ ಯಾವುದೇ ಒಂದು ಚಿತ್ರವನ್ನು ಗುರುತಿಸುವುದು, ಆಯ್ಕೆ ಮಾಡುವುದು, ಅದಕ್ಕೊಂದು ಹೆಸರನ್ನು ನೀಡುವುದು. ನಂತರ ಬ್ಲಾಕ್ ಅನ್ನು ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇಯನ್ನ ಸಂಯೋಜಿಸುತ್ತದೆ. ಮತ್ತೇ ಈ ಬ್ಲಾಕ್‌ ಅನ್ನು ಆಕ್ಟಿವ್‌ ಮಾಡಲು ಬಳಕೆದಾರರು ಸ್ಕ್ರೀನ್‌ನಲ್ಲಿ ಅದರ ಮೇಲೆ ಮತ್ತೆ ಟಚ್‌ ಮಾಡಿದರೆ ಸಾಕಾಗಿದೆ. ಇನ್ನು ಇದರ ನಡುವೆ ಆಕ್ಷನ್ ಬ್ಲಾಕ್‌ಗಳ ಬಿಡುಗಡೆಯ ಜೊತೆಗೆ, ಕಂಪನಿಯು ತನ್ನ ಲೈವ್ ಟ್ರಾನ್ಸ್‌ಸ್ಕ್ರಿಪ್ಟ್ ಅಪ್ಲಿಕೇಶನ್‌ಗೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಸಹ ಸೇರಿಸಿದೆ.

ಅಪ್ಲಿಕೇಶನ್

ಇನ್ನು ಈ ಆಪ್ಲಿಕೇಶನ್‌ಗಳ ಹಾಗೂ ಲೈವ್‌ ಟ್ರಾನ್ಸ್‌ಸ್ಕ್ರಿಪ್ಟ್‌ ಶ್ರವಣ ಸಮಸ್ಯೆಗಳಿರುವ ಜನರನ್ನು ಗುರಿಯಾಗಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಇದು ಸಂಭಾಷಣೆಯ ನೈಜ-ಸಮಯದ ಪ್ರತಿಗಳನ್ನು ನೀಡುತ್ತದೆ. ಯಾರಾದರೂ ಬಳಕೆದಾರರನ್ನು ಸ್ವತಃ ಪ್ರಸ್ತಾಪಿಸಿದಾಗ ಅಪ್ಲಿಕೇಶನ್ ಕಂಪಿಸುವ ಕಾರ್ಯವನ್ನು ಒಳಗೊಂಡಿದೆ. ಇನ್ನು ಗೂಗಲ್‌ ಕಂಪನಿಯು ತನ್ನ ಸೌಂಡ್ ಆಂಪ್ಲಿಫಯರ್ ಅಪ್ಲಿಕೇಶನ್ ಅನ್ನು ಸಹ ಅಪ್ಡೇಟ್‌ ಮಾಡಿದೆ. ಇದು ತನ್ನ ಎಕೋ ಸಿಸ್ಟಂ ಸೌಂಡ್‌ ಅನ್ನು ಜಾಸ್ತಿ ಮಾಡಿದೆ. ಇದು ಈಗ ಬ್ಲೂಟೂತ್ ಹೆಡ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳುವಂತೆ ವಿನ್ಯಾಸ ಮಾಡಲಾಗಿದೆ. ಅಲ್ಲದೆ ಪಿಕ್ಸೆಲ್ ಫೋನ್‌ಗಳಲ್ಲಿ, ಆಡಿಯೊ ಸಿಸ್ಟಂ ಅನ್ನು ಸಹ ಹೆಚ್ಚಿಸುವ ಅವಕಾಶವನ್ನು ನೀಡಿದೆ.

Best Mobiles in India

English summary
Google has launched the Action Blocks app, with task shortcuts to improve accessibility features.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X