ಮುಂದಿನ ವರ್ಷದಿಂದ ಸ್ಥಗಿತವಾಗಲಿದೆ ಗೂಗಲ್‌ ಆಂಡ್ರಾಯ್ಡ್‌ ಥಿಂಗ್ಸ್‌!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ಮುಂದಿನ ವರ್ಷದ ಆರಂಭದಿಂದ IOT ಪ್ರಾಡಕ್ಟ್‌‌ಗಳಿಗಾಗಿ ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ ಥಿಂಗ್ಸ್‌ಗೆ ವಿದಾಯ ಹೇಳುವುದಾಗಿ ಘೋಷಿಸಿದೆ. ಡೆವಲಪರ್‌ಗಳಿಗಾಗಿ ಗೂಗಲ್ ತನ್ನ FAQ ಪುಟದ ಮೂಲಕ ಅಧಿಕೃತವಾಗಿ ಈ ನಿರ್ಧಾರ ತೆಗೆದುಕೊಂಡಿದೆ. FAQ ಪೇಜ್‌ನಲ್ಲಿ ಕಂಪನಿಯು ವಾಣಿಜ್ಯೇತರ ಬಳಕೆಗಾಗಿ ನಾವು ಆಂಡ್ರಾಯ್ಡ್ ಥಿಂಗ್ಸ್ ಕನ್ಸೋಲ್ ಅನ್ನು ತಿರಸ್ಕರಿಸುತ್ತಿದ್ದೇವೆ ಎಂದು ಬರೆಯಲಾಗಿದೆ.

ಗೂಗಲ್‌

ಹೌದು, ಗೂಗಲ್‌ IOT ಪ್ರಾಡಕ್ಟ್‌ಗಳಿಗಾಗಿ ಆಂಡ್ರಾಯ್ಡ್‌ ಆಧಾರಿತ ಆಪರೇಟಿಂಗ್‌ ಸಿಸ್ಟಮ್‌ ಆಂಡ್ರಾಯ್ಡ್‌ ಥಿಂಗ್ಸ್‌ಗೆ ವಿದಾಯ ಹೇಳುವುದಾಗಿ ಘೋಷಿಸಿದೆ. ಡಿವೈಸ್‌ಗಳನ್ನು ನಿರ್ವಹಿಸಲು ಬಳಸಲಾಗುವ ಆಂಡ್ರಾಯ್ಡ್ ಥಿಂಗ್ಸ್ ಡ್ಯಾಶ್‌ಬೋರ್ಡ್ 2021 ರ ಜನವರಿ 5 ರಂದು ಹೊಸ ಡಿವೈಸ್‌ಗಳು ಮತ್ತು ಯೋಜನೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸುತ್ತದೆ ಎಂದು ಸೂಚಿಸಲಾಗಿದೆ. ಆದಾಗ್ಯೂ, ಡೆವಲಪರ್‌ಗಳು 2022 ರ ಜನವರಿ 5 ರವರೆಗೆ ಅಸ್ತಿತ್ವದಲ್ಲಿರುವ ನಿಯೋಜನೆಗಳನ್ನು ನವೀಕರಿಸುವುದನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಅಷ್ಟಕ್ಕೂ ಗೂಗಲ್‌ ಈ ನಿರ್ಧಾರ ತೆಗೆದುಕೊಂಡಿರುವುದು ಏಕೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌

ಗೂಗಲ್‌ ಸದ್ಯ ಐಒಟಿ ಪ್ರಾಡಕ್ಟ್‌ಗಳಿಗಾಗಿ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಆಂಡ್ರಾಯ್ಡ್‌ ಥಿಂಗ್ಸ್‌ ಅನ್ನು ನಿರ್ದಿಷ್ಟ ದಿನಾಂಕದ ನಂತರ, ವಾಣಿಜ್ಯೇತರ ಬಳಕೆಗಾಗಿ ಕನ್ಸೋಲ್ ಅನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಮುಂದಾಗಿದೆ. ಈ ಮೂಲಕ ಬಿಲ್ಡ್ ಕಾನ್ಫಿಗರೇಶನ್‌ಗಳು ಮತ್ತು ಫ್ಯಾಕ್ಟರಿ ಇಮೇಜಸ್‌ ಸೇರಿದಂತೆ ಎಲ್ಲಾ ಪ್ರಾಜೆಕ್ಟ್ ಡೇಟಾವನ್ನು ಶಾಶ್ವತವಾಗಿ ಅಳಿಸಲಾಗುತ್ತದೆ ಎನ್ನಲಾಗಿದೆ. ಇನ್ನು ಆಂಡ್ರಾಯ್ಡ್ ಥಿಂಗ್ಸ್ ಅನ್ನು ಚಲಾಯಿಸಬಹುದಾದ ಏಕೈಕ ಉತ್ಪನ್ನಗಳಾದ NXP, ಕ್ವಾಲ್ಕಾಮ್ ಮತ್ತು ಮೀಡಿಯಾಟೆಕ್‌ನಂತಹ ಮಾರಾಟಗಾರರಿಂದ ವಾಣಿಜ್ಯ ಹಾರ್ಡ್‌ವೇರ್ ಸೋಮ್‌ಗಳಲ್ಲಿ (ಸಿಸ್ಟಮ್-ಆನ್-ಮಾಡ್ಯೂಲ್‌ಗಳು) ನಿರ್ಮಿಸಲ್ಪಟ್ಟಿದೆ.

ಗೂಗಲ್

ಇನ್ನು ಗೂಗಲ್ ಆಂಡ್ರಾಯ್ಡ್ ಥಿಂಗ್ಸ್ ಅನ್ನು 2016 ರಲ್ಲಿ ಬ್ರಿಲ್ಲೊ ಹೆಸರಿನಲ್ಲಿ ಪ್ರಾರಂಭಿಸಿತು. ಇದು ಸ್ಮಾರ್ಟ್ ಹೋಮ್ ಉತ್ಪನ್ನಗಳು, ಸಂವೇದಕಗಳು ಮತ್ತು ಹೆಚ್ಚಿನವುಗಳಿಗಾಗಿ ಆಂಡ್ರಾಯ್ಡ್‌ನ ಟೋನ್-ಡೌನ್ ರೂಪಾಂತರವಾಗಿ ಬಂದಿದೆ. ಆದಾಗ್ಯೂ, ಇದು 2018 ರಲ್ಲಿ ಕೆಲವು ಐಒಟಿ ಉತ್ಪನ್ನಗಳಲ್ಲಿ ಮಾತ್ರ ಬಳಸಲು ಪ್ರಾರಂಭಿಸಿತು. ಇದನ್ನು ಅನುಸರಿಸಿ, 2019 ರಲ್ಲಿ, ಗೂಗಲ್ ಸ್ಮಾರ್ಟ್ ಸ್ಪೀಕರ್ ಮತ್ತು ಸ್ಮಾರ್ಟ್ ಡಿಸ್ಪ್ಲೇಗಳ ಮೇಲೆ ನಿರ್ದಿಷ್ಟವಾಗಿ ಗಮನಹರಿಸಲು ಆಂಡ್ರಾಯ್ಡ್ ಥಿಂಗ್ಸ್ ಅನ್ನು ಮರುಪ್ರಾರಂಭಿಸುವುದಾಗಿ ಘೋಷಿಸಿತು. ಸದ್ಯ ಇದೀಗ ತನ್ನ ಆಂಡ್ರಾಯ್ಡ್‌ ಥಿಂಗ್ಸ್‌ ಅನ್ನು ಸ್ಥಗಿತಗೊಳಿಸಲು ಮುಂದಾಗಿದೆ.

Google

ಇದಲ್ಲದೆ ನಿಯಮಿತ ನವೀಕರಣಗಳು ಮತ್ತು Google ನ ಕ್ಲೌಡ್ ಪ್ಲಾಟ್‌ಫಾರ್ಮ್‌ಗೆ ಸುಲಭ ಪ್ರವೇಶದೊಂದಿಗೆ ಆಂಡ್ರಾಯ್ಡ್ ಥಿಂಗ್ಸ್ ಹೆಚ್ಚಿನ ಐಒಟಿ ಸಾಧನಗಳನ್ನು ತಲುಪಬೇಕಿತ್ತು. ಆದರೆ ಗೂಗಲ್‌ ಮೂಲತಃ ಇಂಟರ್‌ನೆಟ್-ಆಫ್-ಥಿಂಗ್ಸ್ ಓಎಸ್ ಅನ್ನು ರಚಿಸಲು ಬಯಸಿದೆ, ಇದು ಪ್ಲಾಟ್‌ಫಾರ್ಮ್ ಅನ್ನು ನಿರ್ವಹಿಸುವ "ಹೆವಿ ಲಿಫ್ಟಿಂಗ್" ಅನ್ನು ನಿಭಾಯಿಸುತ್ತದೆ ಇದರಿಂದ ಡೆವಲಪರ್‌ಗಳು ಇದರ ಕಡೆ ಗಮನ ಹರಿಸಬಹುದು. ಆದಾಗ್ಯೂ, ಎಲ್ಲಾ ನವೀಕರಣಗಳಿಗೆ ಬದಲಾಗಿ, ಅದನ್ನು ಉಳಿಸಿಕೊಳ್ಳಬಹುದಾ? ಇಲ್ಲವಾ ಅನ್ನೊದನ್ನ ಕಾದು ನೋಡಬೇಕಿದೆ.

Most Read Articles
Best Mobiles in India

English summary
Google has announced that it will bid goodbye to Android Things, its Android-based operating system for IoT (Internet of Things) products, starting earlier next year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X